ಶ್ರೀಕೃಷ್ಣನ ಇತಿಹಾಸದ ಜಾಡು ಹಿಡಿದ ಕನ್ನಡಿಗ
Team Udayavani, Aug 20, 2022, 6:10 AM IST
ಶ್ರೀಕೃಷ್ಣಜನ್ಮಾಷ್ಟಮಿ- ಶ್ರೀಕೃಷ್ಣಲೀಲೋತ್ಸವದ ಕಾಲಘಟ್ಟದಲ್ಲಿ ಸುಮಾರು 5 ಸಾವಿರ ವರ್ಷಗಳ ಹಿಂದೆ ಶ್ರೀಕೃಷ್ಣ ವ್ಯಕ್ತಿಯಾಗಿ ಬದುಕಿದ್ದ ಎನ್ನುವುದಕ್ಕೆ ಐತಿಹಾಸಿಕ ಪುರಾವೆ ಒದಗಿಸಿದವರು ಶಿಕಾರಿಪುರ ರಂಗನಾಥ ರಾವ್ (ಎಸ್.ಆರ್. ರಾವ್, 1922-2013) ಎಂದು ಹೇಳಲು ಕನ್ನಡಿಗರು ಹೆಮ್ಮೆಪಟ್ಟುಕೊಳ್ಳಬೇಕು. ದ್ವಾರಕೆಯಿಂದ ಶ್ರೀಕೃಷ್ಣ ಉಡುಪಿಗೆ ಬಂದ, ಮಧ್ವಾಚಾರ್ಯರಿಗೆ ಸಿಕ್ಕಿ ನೆಲೆನಿಂತ ಎನ್ನುವ ನಂಬಿಕೆಗೂ ಇದು ಪೂರಕ.
ಡಾ| ಎಸ್.ಆರ್. ರಾವ್ ಸುದೀರ್ಘ ಕಾಲ ಭಾರತೀಯ ಪುರಾತಣ್ತೀ ಇಲಾಖೆಯಲ್ಲಿದ್ದು ಸಿಂಧೂ ನದಿಯ ನಾಗರಿಕತೆಗೆ ಸಂಬಂಧಿಸಿದ ಉತ್ಪನನಕ್ಕೆ ನೇತೃತ್ವ ನೀಡಿದವರು. ನಿವೃತ್ತಿಯ ಬಳಿಕ ದ್ವಾರಕೆಯ ಇರುವಿಕೆಯನ್ನು ಗುರುತಿಸಿದರು. ಇದು ಭಾರತದ ಮೊದಲ ಸಮುದ್ರೀಯ ಉತVನನ.
ಡಾ| ರಾವ್ ತಂಡ ದ್ವಾರಕಾಧೀಶ ದೇವಸ್ಥಾನದ ದುರಸ್ತಿ ಮಾಡುವಾಗ ಕೆಂಪು ಮೃತ್‌ಪಾತ್ರೆ (ಕ್ರಿ.ಪೂರ್ವ 15ನೆಯ ಶತಮಾನದ) – ಅದರ ಮೇಲೆ ಕಪ್ಪು ಬಣ್ಣದ ಚಿತ್ರ, ವಸತಿಗಳ ನೆಲ, ಮೊದಲ, ಎರಡನೆಯ ದೇವಸ್ಥಾನದ ನೆಲೆಗಟ್ಟು, ಜಗುಲಿ, ಪೂರ್ವ ಮಧ್ಯಕಾಲೀನ ಮೃತ್‌ಪಾತ್ರೆಗಳು ಸಿಕ್ಕಿದವು. ಸಮುದ್ರದಿಂದ ನಾಶವಾಯಿತೆಂದು ಸೂಚಿಸುವ ಪ್ರಾಚೀನ ಅವಶೇಷಗಳು ದೊರಕಿದ ಕಾರಣ ಕ್ರಿ.ಪೂ. 3500 ವರ್ಷಗಳ ಹಿಂದಿನ ಅವಶೇಷಗಳು ಸಮುದ್ರ ಸಂಶೋಧನೆಯಿಂದ ದೊರಕಬಹುದು ಎಂಬ ಆಶಾವಾದ ಸಂಶೋಧನೆಗೆ ಇಂಬುನೀಡಿತು.
ಆಗ ಸಾಗರ ಉತVನನ ಹೊಸತು. ಮುಳುಗುವ ತಜ್ಞರು, ಅತ್ಯಾಧುನಿಕ ನೌಕೆಗಳು, ಕೆಮರಾಗಳು ಇದ್ದಿರಲಿಲ್ಲ. ಗೋವಾದ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಓಶಿಯನೋಗ್ರಫಿ (ಎನ್‌ಐಒ) ನೆರವಿನಿಂದ 1981ರಿಂದ 1994ರ ವರೆಗೆ ಈ ಹೊಸ ಸವಾಲಿನ ಕೆಲಸ ಮಾಡಿದ ಡಾ| ರಾವ್ ಅವರಿಗೆ ಸಹಕಾರ ಕೊಟ್ಟವರು ಎನ್‌ಐಒ ನಿರ್ದೇಶಕ ಡಾ| ಎಸ್.ಝಡ್. ಖಾಸಿಂ.
ದ್ವಾರಕೆ ಗುಜರಾತ್‌ನ ಪಶ್ಚಿಮ, ಗೋಮತಿ ತೀರದಲ್ಲಿ ಇದೆ. ಜಾಮ್‌ನಗರ ಜಿಲ್ಲೆಯ ಓಖಾ ತಾಲೂಕಿನ ಸಣ್ಣ ಪಟ್ಟಣ. ಬೇಟ್‌ದ್ವಾರಕೆ ದ್ವೀಪದಲ್ಲಿ ಕಂಡುಬಂದ ಬೃಹದಾಕಾರದ ಕೋಟೆಯ ಗೋಡೆ 2 ಮೀ. ದಪ್ಪ, 558.3 ಮೀ. ಸುತ್ತಳತೆ ಯದ್ದಾಗಿದೆ. ಪ್ರಾಕೃತಿಕ ವಿಕೋಪದಿಂದ ಉಳಿದಿರುವುದು 1.5 ಮೀ., ಕೋಟೆಯ ಗೋಡೆಗಳು ಕ್ರಿ.ಪೂ. 16ನೆಯ ಶತಮಾನದ್ದು. ಮಡಕೆ ಕ್ರಿ.ಪೂ. 1528ಕ್ಕೆ ಸಂಬಂಧಿಸಿದವು. ಸಣ್ಣ ಕಲ್ಲುಗಳಿಂದ ಕಟ್ಟಲ್ಪಟ್ಟ ಗೋಡೆ ಅಲೆಗಳ ರಭಸದಿಂದ ನಾಶವಾಗಿ ನೀರಿನಲ್ಲಿ ಬಿದ್ದಿರುವುದನ್ನು ನೋಡಬಹುದು. ಪುರಾವೆಗಳಲ್ಲಿ ಮುದ್ರೆಗಳು ಬಹಳ ಮುಖ್ಯವಾದವು. ಇದು 18*20 ಮಿ.ಮೀ. ಅಳತೆಯ ಒಂದು ಶಂಖದಿಂದ ಮಾಡಿದ್ದಾಗಿದೆ. ಕ್ರಿ.ಪೂ. 18 ಅಥವಾ 17ನೆಯ ಶತಮಾನದ್ದಾಗಿದೆ. ಹೊಳಪಿನ ಕೆಂಪು ಬಣ್ಣದ ಪೀಠವಿದ್ದ ತಟ್ಟೆ, ಸಾದಾ ತಟ್ಟೆ, ರಂಧ್ರಗಳುಳ್ಳ ಜಾಡಿ, ಗಂಗಾಳ ಮೊದಲಾದವುಗಳ ಭಾಗಗಳು ದೊರೆತಿರುವುದರಿಂದ ಪ್ರಾಗೈತಿಹಾಸಿಕ ನಗರ ಕ್ರಿ.ಪೂ. 17-18ನೆಯ ಶತಮಾನದಷ್ಟು ಪುರಾತನವಾದ್ದೆಂದು ನಿಖರವಾಗಿ ಹೇಳಬಹುದು ಎಂದು ರಾವ್ ಉಲ್ಲೇಖಿಸಿದ್ದಾರೆ.
ನಾಗರಿಕತೆಯ ನಿರಂತರತೆ
ಕ್ರಿ.ಪೂ. 1800ರಿಂದ 500ರ ವರೆಗೆ ಭಾರತದ ಇತಿಹಾಸ ಕತ್ತಲೆಯಲ್ಲಿತ್ತು ಎಂದು ಪಾಶ್ಚಾತ್ಯ ಇತಿಹಾಸಕಾರರು ಹೇಳಿದ್ದರು. ಇದು ಹಾಗಲ್ಲ, ಮುಂದುವರಿದ ನಾಗರಿಕತೆ ಇತ್ತು ಎನ್ನುವುದು ಹರಪ್ಪ- ಮೊಹಂಜೊದಾರೋ ಉತVನನ, ದ್ವಾರಕೆಯ ಉತVನನದಿಂದ ಸಾಬೀತಾಗಿದೆ. ದ್ವಾರಕೆಯಲ್ಲಿ ಶ್ರೀಕೃಷ್ಣನ ಕಾಲದಲ್ಲಿ ನಿರ್ಮಿಸಿದ ಸಮುದ್ರ ತೀರದ ಬಂದರು ಜಗತ್ತಿನ ಮೊದಲ ಸಮುದ್ರತೀರದ, ಸಿಂಧೂತಟದ ಲೋಥಲ್‌ನಲ್ಲಿ ನಿರ್ಮಿಸಿದ್ದ ಬಂದರು ಜಗತ್ತಿನ ಮೊದಲ ಹಿನ್ನೀರ ಪ್ರದೇಶದ ಬಂದರು. ಸಿಂಧು ತೀರದ ನಾಗರಿಕತೆಯಿಂದ ಮಹಾಭಾರತದ ಕಾಲದ ವರೆಗೆ ಸಂಸ್ಕೃತ ಲಿಪಿ ಕಂಡುಬಂದಿದೆ. ಮಹಾಭಾರತದ ಕಾಲ ಎರಡನೆಯ ನಾಗರಿಕತೆಯಾಗಿದ್ದು ಕಂಚು, ತಾಮ್ರದ ಬಳಕೆ ಹೇರಳವಾಗಿತ್ತು. ಬೌದ್ಧರ ಕಾಲದ ನಲಂದ, ತಕ್ಷಶಿಲಾ ಕಾಲ ಘಟ್ಟದ ವರೆಗೆ ನಾಗರಿಕತೆ ಮುಂದುವರಿದಿತ್ತು ಎಂದು ಎಸ್.ಆರ್. ರಾವ್ ವಿಶ್ಲೇಷಿಸಿದ್ದರು.
ದ್ವಾರಕೆಯ ಪ್ರಾಚೀನ ವರ್ಣನೆ
ಶ್ರೀಕೃಷ್ಣನ ಅಂತಿಮ ಕಾಲಘಟ್ಟದಲ್ಲಿ ದ್ವಾರಕೆಯು ಸಮುದ್ರದಿಂದ ನಾಶವಾಯಿತೆಂದು ಮಹಾಭಾರತ, ಹರಿವಂಶ, ಭಾಗವತ, ವಿಷ್ಣು ಪುರಾಣ, ಸ್ಕಂದ ಮೊದಲಾದ ಪುರಾಣಗಳಲ್ಲಿ ಇದೆ. ಶ್ರೀಕೃಷ್ಣ ದ್ವಾರಕೆಯಲ್ಲಿ ಮೊದಲು ನಿರ್ಮಿಸಿದ್ದು ಈಗ ಬೇಟ್ ದ್ವಾರಕಾ ಎಂದು ಕರೆಯುವ ಕುಶಸ್ಥಲೀ. ಇದು ಸಮುದ್ರದ ಮಧ್ಯ, ಅಭೇದ್ಯವಾಗಿತ್ತೆಂದೂ, ಮಥುರೆಯಿಂದ ವಲಸೆ ಬಂದ ಯಾದವರ ಸಂಖ್ಯೆ ಹೆಚ್ಚಾದಂತೆ ಕುಶಸ್ಥಲಿಯಲ್ಲಿ ಸ್ಥಳಾವಕಾಶದ ಸಮಸ್ಯೆ ಇದಿರಾಗಿ ಕೃಷ್ಣನು ಎರಡನೆಯ ನಗರವನ್ನು ಭೂಭಾಗದಲ್ಲಿ, ಗೋಮತಿ ನದಿ ಮತ್ತು ಪಶ್ಚಿಮ ಸಮುದ್ರದ ಸಂಗಮ ಸ್ಥಳದಲ್ಲಿ ಕಟ್ಟಬೇಕೆಂದು ನಿರ್ಧರಿಸಿದನೆಂದು ಸ್ಕಂದ ಪುರಾಣ, ಹರಿವಂಶ, ಮಹಾಭಾರತ ತಿಳಿಸಿವೆ. ಇದನ್ನು ಈಗಿನ ವಿಸ್ತರಿತ ನವಮುಂಬಯಿ ಪ್ರದೇಶಕ್ಕೆ ಎಸ್.ಆರ್. ರಾವ್ ಹೋಲಿಸಿದ್ದಾರೆ. “8 ಯೋಜನ ಉದ್ದ, 6 ಯೋಜನ ಅಗಲದ ಗೋಡೆಗಳಿಂದ ಕೂಡಿದ ನಗರ ಇದಾಗಿತ್ತು. ಅತೀ ವಿಶಿಷ್ಟ ತಾಂತ್ರಿಕ ಕೌಶಲದ ಕಟ್ಟಡಗಳಿದ್ದವು. ವಿಸ್ತಾರ ರಸ್ತೆ, ವಸತಿ ಕಟ್ಟಡಗಳು, ಕೋಟೆ, ಸಮುದಾಯ ಭವನ, ನಗರದ ಮೂಲ ಸೌಕರ್ಯಗಳಿಂದ ಕೂಡಿತ್ತು. ಆರು ಶಿಲೆಯ ಬಂದರುಕಟ್ಟೆ ಮತ್ತು ಇದಕ್ಕೆ ತಾಗಿಕೊಂಡು ಆರು ಉಗ್ರಾಣಗಳಿದ್ದವು’ ಎನ್ನುತ್ತದೆ ಹರಿವಂಶ. ಮಹಾಭಾರತದ ಸಭಾಪರ್ವದಲ್ಲಿ ಯುಧಿಷ್ಠಿರ ರಾಜಸೂಯ ಯಾಗ ಮಾಡುವ ಸಂದರ್ಭ ಕೃಷ್ಣನಿಗೆ ಅಗ್ರಪೂಜೆ ಸಲ್ಲಿಸಿದಾಗ ಯುಧಿಷ್ಠಿರ ದ್ವಾರಕಾ ಪಟ್ಟಣದ ವರ್ಣನೆ ಮಾಡುತ್ತಾನೆ. ಜರಾಸಂಧನ ಜತೆ ಯುದ್ಧ ಮಾಡಿದ ಬಳಿಕ ಮಥುರೆಯಿಂದ ದ್ವಾರಕೆಗೆ ಸ್ಥಳಾಂತರವಾಗುವಾಗ ದ್ವಾರಕೆಗೆ ಪ್ರವೇಶ ಮಾಡುವವರು ಚಕ್ರಾಂಕಿತ ರಾಗಬೇಕೆಂದು (ಚಕ್ರಾಂಕಿತಾಃ ಪ್ರವೇಷ್ಟವ್ಯಾಃ ಯಾವದಾಗಮನಂ ಮಮ||) ಕೃಷ್ಣ ಆದೇಶ ಹೊರಡಿಸಿದ್ದ. ಇದುವೇ ಮುದ್ರೆ, ಲಾಂಛನ. ಘಟ್ಟದ ವರೆಗೆ ನಾಗರಿಕತೆ ಮುಂದುವರಿದಿತ್ತು ಎಂದು ಎಸ್.ಆರ್. ರಾವ್ ವಿಶ್ಲೇಷಿಸಿದ್ದರು.
ಪ್ರೊ| ಎಸ್.ಆರ್. ರಾವ್ ಕೇವಲ ಭೂಪುರಾತಣ್ತೀಜ್ಞರಲ್ಲದೆ ಸಮುದ್ರ ಪುರಾತಣ್ತೀ ಶಾಸ್ತ್ರದ ಸರ್ವಪ್ರಥಮಿಗರು. ಪುರಾಣಗಳ ಯಥಾರ್ಥತೆಯನ್ನು ಒರೆಗೆ ಹಚ್ಚಿ ವೈಜ್ಞಾನಿಕ ತಳಗಟ್ಟು ಹಾಕಿದರು. ಉತVನನದಲ್ಲಿದ್ದ ಗೋವಾದ ಎನ್‌ಐಒ ತಜ್ಞರ ಪ್ರಕಾರ ಸುಮಾರು 10 ಸಾವಿರ ವರ್ಷಗಳ ಹಿಂದೆ ಸಮುದ್ರ ಬಹಳ ಕೆಳಗೆ ಇತ್ತು. ಮೆಸೆಪೊಟೋಮಿಯಾದ ಮುದ್ರೆಗಳಿಗೆ ಹೋಲುವ ಮುದ್ರೆಗಳು ದ್ವಾರಕೆಯಲ್ಲಿ ಸಿಕ್ಕಿವೆ ಎನ್ನುವುದು ವಿಶೇಷ.
– ಕೆ. ಕೆ.ಮುಹಮ್ಮದ್,
ಪುರಾತಣ್ತೀ ಇಲಾಖೆಯ ನಿವೃತ್ತ ಅಧಿಕಾರಿ
-ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
MUST WATCH
ಹೊಸ ಸೇರ್ಪಡೆ
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.