Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

ಉದ್ಯೋಗ ಅರಸಿ ಬಂದ ಹೊರ ರಾಜ್ಯದವರಿಂದ ಕನ್ನಡ ಕಲಿಯಲು ಹಿಂದೇಟು... ಆಗಬೇಕಾದ್ದೇನು?

Team Udayavani, Nov 18, 2024, 6:55 AM IST

1-kanna

ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ವಲಸಿಗರು ಮತ್ತು ಸ್ಥಳೀಯರ ನಡುವಿನ ಸಂಘರ್ಷ ಇತ್ತೀಚಿಗೆ ಹೆಚ್ಚುತ್ತಿದೆ. ದೇಶದ ಎಲ್ಲ ಭಾಗದ ಜನರ‌ನ್ನು ಒಪ್ಪಿಕೊಂಡಿರುವ ಬೆಂಗಳೂರು ಹೇಗೆ ಬದಲಾಗುತ್ತಿದೆ? ಇತರೆ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಸ್ಥಳೀಯ ಮತ್ತು ವಲಸಿಗರ ನಡುವಿನ ತಾಕಲಾಟ, ನಗರದಲ್ಲಿ ಕನ್ನಡದ ಅಸ್ಮಿತೆ, ಆ ಕುರಿತ ಹೋರಾಟ, ಕಳೆದ 50 ವರ್ಷಗಳಲ್ಲಿ ಹೇಗೆ ಬೆಳೆದುಕೊಂಡು ಬಂದಿದೆ? “ವಲಸಿಗರು’ ಒಂದು ಸಮಸ್ಯೆ ಯಾಗಿಯೇ ಉಳಿದರೆ ಆಗ ಅವರು ಮತ್ತು ಸ್ಥಳೀಯರು ಯಾವ ರೀತಿಯ ಸವಾಲು ಗಳನ್ನು ಎದುರಿಸ ಬೇಕಾಗುತ್ತದೆ? ಅದಕ್ಕೆ ಪರಿಹಾರ ಏನು?- ಇವೆಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.

ಜಾಕ್ವೆಸ್‌ ರಿವೆಟ್‌ ಅವರ ನಿರ್ದೇಶನದ ‘Paris Belongs to Us’ (1961) ಚಿತ್ರ 1991ರ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರೆಟ್ರೋಸ್ಪೆಕ್ಟಿವ್‌ ವಿಭಾಗದಲ್ಲಿ ಪ್ರದರ್ಶನ ಕಂಡಿತ್ತು. ಆಗಷ್ಟೆ ಸುಚಿತ್ರ ಪಿಲಂ ಸೊಸೈಟಿಯ ಆಜೀವ ಸದಸ್ಯತ್ವ ಪಡೆದು ಬ್ಯಾಡ್ಜ್ ಗಳಿಸಿದ್ದ ನನಗೆ ಚಿತ್ರ ಅರ್ಥವಾಗಿರಲಿಲ್ಲ, ಆದರೂ ಪೂರ್ತಿ ನೋಡಿದ್ದೆ. ಶೀರ್ಷಿಕೆ ಆಕರ್ಷಕವಾಗಿತ್ತು. ಕಾವೇರಿ ವಿವಾದದ ಕಾವು ಏರಿದ್ದ ವರ್ಷ ಅದು. ಸಿನೆಮಾದಲ್ಲಿ ವಿಚಿತ್ರ ಅನ್ನಿಸಿದ್ದು ಏನೆಂದರೆ, ಅದರಲ್ಲಿ ಕೆಲವು ಮುಖ್ಯ ಪಾತ್ರಧಾರಿಗಳೆಲ್ಲರೂ ವಲಸಿಗರು. “ಪ್ಯಾರಿಸ್‌ ಬಿಲಾಂಗ್ಸ್ ಟು ಅಸ್‌’ ಎಂದು ಹೆಸರು ಇರಿಸಿದ್ದಾದರೂ ಯಾಕೆ ಎಂದು ಯೋಚಿಸಿ. ಮುಂದೆ ಎಂದೋ ಗೊತ್ತಾಯಿತು; ಅದು ವ್ಯಂಗ್ಯ ಎಂದು.

ಆದರೆ ವಲಸಿಗರು ಇಲ್ಲಿಯವರು ಆಗುವುದು ಹೇಗೆ? ಇಲ್ಲಿಯವರು ಎಂದರೆ ಯಾರು? ಇದು ಯಾಕೆ ನೆನಪಾಯಿತೆಂದರೆ ಇತ್ತೀಚೆಗೆ ಒಂದು ವಿಷಯ ಕುರಿತಂತೆ ವಿಚಾರ ಸಂಕಿರಣ ಆಯೋ ಜಿಸಬೇಕೆಂದು, ಅದರಲ್ಲಿ ನಾನು ಭಾಗವಹಿಸ ಬೇಕೆಂದು ಒಂದು ಸಂಘಟನೆ ಆಹ್ವಾನ ಕಳಿಸಿತ್ತು. ಚರ್ಚೆ ಆಗುವುದು ಮುಂದಿನ ತಿಂಗಳು, ಆದರೆ ಅದರಲ್ಲಿ ಯಾರ್ಯಾರು ಏನೇನು ಮಾತಾಡಬೇಕೆಂದು ತೀರ್ಮಾನಿಸಲು ಒಂದು ಪೂರ್ವಭಾವಿ ಮೀಟಿಂಗ್‌ ಆಗಲೇ ಝೂಮ್‌ ಕಾಲ್‌ ಮೂಲಕ ನಡೆದಿದೆ. ಚರ್ಚೆಯ ವಿಷಯ ಇದು: ಬೆಂಗಳೂರಿಗ ಎಂದರೆ ಯಾರು? (Who is a Bengalurean?) ಹೀಗೆ ಕರೆಸಿಕೊಳ್ಳಲು ಯಾರು ಅರ್ಹರು?

ನನಗೆ ಹೊಳೆದ ಉತ್ತರ ಇದು. ಯಾರು “ನಾನು ಬೆಂಗಳೂರಿಗ’ ಎನ್ನುತ್ತಾರೋ ಅವರು ಬೆಂಗಳೂರಿಗರು. ಯಾರ್ಯಾರು ಹೊರಗಿನವ ಎಂದು ಗುರುತಿಸಿಕೊಳ್ಳುತ್ತಾರೋ ಅವರು ಹೊರಗಿನವರೇ. ಇದು ಕೇವಲ ಬೇರೆ ರಾಜ್ಯಗಳಿಂದ ಬಂದಿರುವ ವಲಸಿಗರಿಗೆ ಮಾತ್ರವಲ್ಲ, ಅವರಂತೆಯೇ ಕರ್ನಾಟಕದ ಬೇರೆ ಜಿಲ್ಲೆಗಳಿಂದ ಉದ್ಯೋಗ ಹುಡುಕಿಕೊಂಡು ಬಂದು, ಬೆಂಗಳೂರಿನಲ್ಲಿ ವಾಸವಾಗಿರುವ ಜನಗಳಿಗೂ ಅನ್ವಯಿಸುತ್ತದೆ ಎನ್ನುವುದು ನನ್ನ ಅಭಿಪ್ರಾಯ.

ಎಲ್ಲರೂ ಎಲ್ಲಿಂದಲೋ ಬಂದವರೇ..!
ಹಾಗೆ ಬರುವುದು ತಪ್ಪಲ್ಲ. ಬಹುಪಾಲು ನಾವೆಲ್ಲರೂ ಎಂದೋ ಎಲ್ಲಿಂ ದಲೋ ಬಂದವರೇ. ಮಹಾನಗರ ಎಂದರೆ ಜನರು ಹೊರಗಿನಿಂದ ಬಂದು ಅದನ್ನು ನಿರ್ಮಿಸಿ, ಅದರಲ್ಲಿ ನೆಲಸಿ, ಸದಾ ಬೆಳೆಸುತ್ತಿರುವ ಜಾಗ. ಶತಮಾನಗಳು ಅಥವಾ ದಶಕಗಳ ಹಿಂದೆ ಬೇಸಾಯ ಅಥವಾ ತೋಟ ಗಾರಿಕೆ ಮಾಡಿಕೊಂಡು ಬದುಕಿದ ಸಮುದಾಯಗಳನ್ನು ಸ್ಥಳಾಂತರ ಗೊಳಿಸದೆ ಇದ್ದಿದ್ದರೆ ಈ ಬೆಂಗಳೂರು ನಗರ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ನಾವೆಲ್ಲರೂ ತುಂಬ ಹಿಂದೆಯೋ, ಮೊನ್ನೆಮೊನ್ನೆಯೋ ಇಲ್ಲಿಗೆ ಬಂದು ಬದುಕು ಕಟ್ಟಿಕೊಳ್ಳುತ್ತಿರುವವರೇ. ಅಂದಮೇಲೆ ‘Who is a Bengalurean?’ ಎಂಬ ಪ್ರಶ್ನೆ ಹೊಳೆಯುವುದು ಯಾರಿಗೆ?

ನನ್ನ ಅನುಮಾನ, ಅದು “ನಾನು ಪರಕೀಯ’ ಎನ್ನಿಸುವ ಮನೋಭಾವ ಉಳ್ಳವರಿಗೆ ಮಾತ್ರ. ಅಂತವರಲ್ಲಿ ತಮಗೆ “ಲೋಕಲ್‌’ ಅನ್ನಿಸುವ ನಮ್ಮಂಥವರನ್ನು ಕಂಡು ನಮ್ಮ ನುಡಿಯ ಮಾತನ್ನು ಕೇಳಿ, ನಾವು ಇವರಿಂದ ಬೇರೆಯಿರಬೇಕು ಅನ್ನಿಸಿ, ಬೇರೆ ರಾಜ್ಯಗಳಿಂದ ಬಂದವರು ಕನ್ನಡವೇ ಕೇಳಿಸದ ನಗರದ ಬಡಾವಣೆ ಗಳಲ್ಲಿ “ಎಚಠಿಛಿಛ ಇಟಞಞunಜಿಠಿಜಿಛಿs’ ಸ್ಥಾಪಿಸಿ  ಕೊಳ್ಳುವುದು ಒಂದು ಉಪಾಯ. ಇತರ ಜಿಲ್ಲೆಗಳಿಂದ ಬಂದಿರುವವರಿಗೆ ಹಬ್ಬದ ರಜ, ಚುನಾವಣೆ ಬಂದರೆ ಸಾಕು, ಒಮ್ಮೆಗೇ ಬಸ್‌, ರೈಲು ಗಳ ತುಂಬ ತಮ್ಮತಮ್ಮ ಊರಿಗೆ ಹೋಗಿ, ಒಂದೆರಡು ದಿನಗಳಾದರೂ ಅಲ್ಲಿಯ ಉಸಿರು ತುಂಬಿಸಿಕೊಂಡು ಹಿಂಬರುವ ಉತ್ಸಾಹ. ಅವರು “ಲೋಕಲ್‌’ ಆಗುವುದು ಹೇಗೆ?

ಹೊಸ ಸಮಸ್ಯೆ ಎದುರಾಗಬಹುದು

ಇದು ಬೆಂಗಳೂರಿಗೆ ಅಷ್ಟೇ ಅಲ್ಲ, ಭಾರತದ ಎಲ್ಲ ದೊಡ್ಡ ನಗರಗಳಿಗೂ ಅನ್ವಯ. ಮುಂದೆ ಕರ್ನಾಟಕದಲ್ಲೇ ಇತರ ನಗರಗಳಲ್ಲೂ ಈ ಪ್ರಶ್ನೆ ತಲೆಯೆತ್ತಬಹುದು. ಒಂದು ಸಮೀಕ್ಷೆಯ ಪ್ರಕಾರ (Multiple Indicator Survey & NSS Round 78, 2020&21) ಭಾರತದ ನಗರ ಪ್ರದೇಶಗಳಲ್ಲಿ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ವಲಸಿಗರದ್ದು. ಎಲ್ಲರೂ ಉದ್ಯೋಗ ಹುಡುಕಿಕೊಂಡು ಬಂದವರೇ. ಇಂಥವರನ್ನು ತಡೆಯುವುದಂತೂ ಸಾಧ್ಯವಿಲ್ಲ. ಆದರೆ, ಈಗಲೇ ಹೀಗೆ ಬೆಳೆದು ವಿಕಾರಗೊಂಡಿರುವ ನಮ್ಮ ಊರು ಮುಂದೆ ಬರುವ ಇನ್ನಷ್ಟು ವಲಸಿಗರನ್ನು ಜೀರ್ಣಿಸಿಕೊಳ್ಳುವುದು ಸಾಧ್ಯವೇ? ಅರಗಿಸಿಕೊಳ್ಳದಿದ್ದಲ್ಲಿ ಆಗಬಹುದಾದ ಅಪಾಯವನ್ನು ನಾವು ಹಿಂದೆ ಅನುಭವಿಸಿದ್ದೇವೆ.

ಅಂಥವುಗಳಲ್ಲಿ ಕೆಲವನ್ನು ನೆನಪಿಸಿಕೊಳ್ಳಬಹುದು. ಮುಂಗಾರು ಮಳೆಯ ಪ್ರಮಾಣ ಕಡಿಮೆಯಾದ ವರ್ಷಗಳಲ್ಲಿ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಮಂಡ್ಯ ಸುತ್ತಮುತ್ತಲಿನ ರೈತರು ಪ್ರತಿಭಟಿಸುವುದು ಗೊತ್ತು. ಆದರೆ 1991ರ 12-13 ಡಿಸೆಂಬರ್‌ನಲ್ಲಿ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ತಮಿಳು ವಿರೋಧಿ ಗುಂಪಿನಿಂದ ಪ್ರತಿಭಟನೆ ನಡೆದು ಹಿಂಸಾಚಾರದ ಸºರೂಪ ಪಡೆಯಿತು. ಪೊಲೀಸರು ಗುಂಡು ಹಾರಿಸಬೇಕಾಯಿತು. 16 ಜನ ಸತ್ತರು. ಹಿಂಸಾಚಾರದ ಪರಿಣಾಮವಾಗಿ ಲಕ್ಷಾಂತರ ಬಡ ತಮಿಳರು ಮನೆ ಆಸ್ತಿ ಮರೆತು ಊರು ಬಿಟ್ಟು ಓಡಿದರು.
ಸಂಶಯ ಬೆಳೆಯುವಲ್ಲಿ ಬ್ರಿಟಿಷರ ಕೊಡುಗೆ ಇದಕ್ಕೆ ಒಂದು ಹಿನ್ನೆಲೆಯಿದೆ. ಈಗ ತಮಿಳರ ಬಗ್ಗೆ ಅಂದು ನಗರದ ಕೆಲವು ಕನ್ನಡ ಸಂಘಟನೆಗಳಲ್ಲಿ ಇದ್ದ ಹಗೆತನ ಮಾಸಿದೆ. ಆದರೆ ನಗರದ ಕನ್ನಡ ಮತ್ತು ತಮಿಳು ಸಮುದಾಯಗಳ ನಡುವೆ ಪರಸ್ಪರ ಸಂಶಯ ಬೆಳೆಯುವಂತೆ ಮಾಡಿದ್ದು ಬ್ರಿಟಿಷರು. ಒಡೆಯರ ಸಂಸ್ಥಾನದ ಆಡಳಿತದಲ್ಲಿ ಘನವಾಗಿ ಸೇವೆ ಸಲ್ಲಿಸುತ್ತಿದ್ದ ತಮಿಳು ಮೂಲದ ಅಧಿಕಾರಿಗಳಿದ್ದರು. ಅವರ ಬಗ್ಗೆ ಗೌರವ ವಿಶ್ವಾಸಗಳನ್ನು ತಾಳಿದ್ದ ಜನತೆಯಲ್ಲಿ ಹಗೆತನಕ್ಕೆ ಅವಕಾಶವಿರಲಿಲ್ಲ. ಆದರೆ ಬೆಂಗಳೂರಿನಲ್ಲಿದ್ದ ತಮಿಳು ಸಮುದಾಯಗಳ ರಾಜನಿಷ್ಠೆಯ ಬಗ್ಗೆ ಬ್ರಿಟಿಷರು ತಲೆಕೆಡಸಿಕೊಂಡು, ತಾವು ಆಳುತ್ತಿದ್ದ ಬೆಂಗಳೂರು ಕಂಟೋನ್ಮೆಂಟ್‌ ಪ್ರದೇಶದಲ್ಲಿ ರಾಜ್ಯದ ಹೊರಗಿನ ತಮಿಳು ಮಾತನಾಡುವ ಜನರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು. ಕಂಟೋನ್ಮೆಂಟ್‌ ಪ್ರದೇಶದ ತಮಿಳರು ಮತ್ತು ಒಡೆಯರ ನಗರದ ಜನರ ನಡುವೆ ಹೆಚ್ಚು ಸಂಪರ್ಕವಿರದಂತೆ ಕಾಯ್ದುಕೊಂಡರು. ಕರ್ನಾಟಕದ ಏಕೀಕರಣದಿಂದ ಈ ಬಿರುಕು ಬೆಳೆಯುತ್ತಲೇ ಹೋಯಿತು. ಸಣ್ಣಸಣ್ಣ ಘಟನೆಗಳಿಂದ ಪ್ರಾರಂಭವಾಗಿ ಹಗೆತನಕ್ಕೆ ತಿರುಗಿ 1991 ಡಿಸೆಂಬರ್‌ನಲ್ಲಿ ಸ್ಫೋಟಿಸಿತು. ಅಂದು “ವಲಸಿಗ’ ಎನ್ನಿಸಿದ ತಮಿಳು ಜನ ಈ 30 ವರ್ಷಗಳಲ್ಲಿ ಬಂದಿರುವ ಹೊಸ ವಲಸಿಗರಿಗೆ ಈಗ “ಸ್ಥಳೀಯರಾಗಿ’ ಕಾಣಿಸುತ್ತಿದ್ದರೆ ಆಶ್ಚರ್ಯವಿಲ್ಲ.

ವಲಸಿಗರ ಅಸಹಕಾರದಿಂದಲೇ ಸಮಸ್ಯೆ…
ಈಗ ಕನ್ನಡ ಮರೆಯಾದ ನಗರ ಭಾಗಗಳಲ್ಲಿ ಅಪಾರ್ಟ್ ಮೆಂಟ್ ಗಳಲ್ಲಿ ನೆಲಸಿರುವ ವಲಸಿಗರು ಹಿಂದೆ ಬ್ರಿಟಿಷರು ತಂದಿಟ್ಟ ಬಡ ತಮಿಳು ಕೆಲಸಗಾರರಂತಲ್ಲ. ಏಕೀಕರಣದ ಅನಂತರದ ಎರಡು ಮೂರು ದಶಕಗಳಲ್ಲಿ ಕಲ್ಪಿಸಿ ಕೊಟ್ಟ ಪಬ್ಲಿಕ್‌ ಸೆಕ್ಟರ್‌ ರೈಲ್ವೇ ನೌಕರಿ ಅವಕಾಶಗಳನ್ನು ಗಿಟ್ಟಿಸಿಕೊಂಡ ಹೊಸತಲೆಮಾರಿನ ತಮಿಳರಂತೆಯೂ ಅಲ್ಲ. ಬೇರೆ ರಾಜ್ಯಗಳಿಂದ ಬಂದಿರುವ ಇಂದಿನ ವಲಸಿಗರು ಖಾಸಗಿ ಕ್ಷೇತ್ರದಲ್ಲಿ ಹೆಚ್ಚಿನ ಸಂಬಳ, ವರ್ಚಸ್ಸು ಗಳಿಸುವ ಉದ್ಯೋಗಗಳನ್ನು ಹಿಡಿದಿದ್ದಾರೆ. ಸಹಜವಾಗಿಯೇ ಕನ್ನಡಿಗ ಯುವಕ ಯುವತಿಯರಲ್ಲಿ ಅದರ ಬಗ್ಗೆ ಕೊರಗಿದೆ. ಅಪರೂಪದ ಕೆಲವರನ್ನು ಬಿಟ್ಟು ಹೊಸ ವಲಸಿಗರು ಕನ್ನಡ ಕಲಿಯಲು ಸಿದ್ಧರಿಲ್ಲ. ಅಲ್ಲದೆ ಕೇಂದ್ರ ಸರಕಾರದ ಅಡಿಯಲ್ಲಿ ಸೃಷ್ಟಿಯಾಗುವ ಉದ್ಯೋಗದ ಅವಕಾಶಗಳನ್ನು ಕನ್ನಡದ ಯುವ ಪ್ರತಿಭೆಗಳಿಗೆ ಕಷ್ಟಸಾಧ್ಯವಾಗುವಂತೆ ಪ್ರವೇಶ ಪ್ರಯತ್ನದಲ್ಲೇ ಅಡ್ಡಿಯಾಗುವ ಹಿಂದಿ ಹೇರಿಕೆಯಿಂದ ನೊಂದಿದ್ದಾರೆ. ತಮ್ಮ ಊರಿನಲ್ಲೇ ಕನ್ನಡವಿಲ್ಲದ, ಕನ್ನಡವನ್ನು ಅವಗಣಿಸುವ ನಿವಾಸಿಗಳ ರೀತಿಯಲ್ಲಿ ವಲಸಿಗರು ವರ್ತಿಸುತ್ತಿದ್ದಾರೆ ಎನ್ನಬಹುದಾದ ಭಾವನೆ ಈಗ ಬೆಳೆಯುತ್ತಿರುವುದು ಸತ್ಯ.

ಆಗಬೇಕಾದ್ದೇನು?
1ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ
ಉದ್ಯೋಗ ಅವಕಾಶಗಳನ್ನು ಕಡ್ಡಾಯವಾಗಿ ಮೀಸಲಿಡಲು ಕೇಂದ್ರ ಸರಕಾರ ಮತ್ತು
ರಾಜ್ಯ ಸರ್ಕಾರಗಳು ಮುಂದಾಗಬೇಕು.
2 ವಲಸಿಗರಾದರೂ ಸರಿ; ಕನ್ನಡ ಓದಲು, ಬರೆಯಲು, ಮಾತಾಡಲು ಬರಬೇಕು. ಅಂಥವರಿಗೆ ಮಾತ್ರ ಕರ್ನಾಟಕದಲ್ಲಿ ಉದ್ಯೋಗ ಎಂದು ನಿಯಮ ರೂಪಿಸಬೇಕು.
3 ಕೇಂದ್ರ ಸರಕಾರ ಸಂವಿಧಾನವನ್ನು ತಿದ್ದಿ (Art.343 – 351) ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕು.
4 ರಾಜ್ಯಗಳು ತಮ್ಮ ಪಾಡಿಗೆ ಆರ್ಥಿಕವಾಗಿ ಬೆಳಯಲು ಕೇಂದ್ರ ಸರಕಾರವು ಬಿಡಬೇಕು.
5 ರಾಜ್ಯ ಸರಕಾರ ಕರ್ನಾಟಕದ ಬೇರೆ ನಗರಪ್ರದೇಶಗಳನ್ನು ಬೆಳೆಸಲು ಮುಂದಾಗಬೇಕು. ಅವುಗಳಲ್ಲಿ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಬಂಡವಾಳ ಹೂಡಬೇಕು.

ಪ್ರಕಾಶ್‌ ಬೆಳವಾಡಿ ನಟ, ಚಿಂತಕ

ಟಾಪ್ ನ್ಯೂಸ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

11

Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.