Karnataka Rajyotsava: ನನ್ನೂರು ಕರ್ನಾಟಕದ ಮೊದಲ ರಾಜಧಾನಿ ಬನವಾಸಿ!
Team Udayavani, Nov 1, 2023, 10:30 AM IST
ಕರ್ನಾಟಕದ ಮೊದಲ ರಾಜಧಾನಿ ಎಂದೇ ಖ್ಯಾತವಾಗಿರುವ ಬನವಾಸಿ ನನ್ನೂರು. ಅಲ್ಲಿನ ಐತಿಹಾಸಿಕ ಸಂಗತಿಗಳು, ಕದಂಬರ ಆಳ್ವಿಕೆಯನ್ನು ನೆನಪಿಸಿಕೊಂಡರೆ ಮೈ ಜುಮ್ಮೆನಿಸುತ್ತದೆ. ಐತಿಹಾಸಿಕ ನೆಲವಾಗಿದ್ದರೂ ಆ ಊರಿನಲ್ಲಿ ಹೇಳಿಕೊಳ್ಳುವಂತಹ ಪ್ರಗತಿಯಾಗಿಲ್ಲ. ಕರ್ನಾಟಕ, ಕನ್ನಡ ಎಂದ ಕೂಡಲೇ ಮನಸ್ಸು ಪುಳಕಗೊಳ್ಳುತ್ತದೆ. ನಾನೀಗ ಮಹಾರಾಷ್ಟ್ರದಲ್ಲಿದ್ದರೂ, ಯಾರಾದರೂ ಕನ್ನಡಿಗರು ಕಂಡರೆ ಮೊದಲು ಹೋಗಿ ನಾನೇ ಮಾತನಾಡಿಸುತ್ತೇನೆ. ಹೇಗಿದ್ದೀರಿ..?, ಯಾವೂರು..?, ಇಲ್ಲಿ ಏನು ಮಾಡುತ್ತಿದ್ದೀರಿ..? ಎಂದು ಕುಶಲೋಪರಿ ವಿಚಾರಿಸುತ್ತೇನೆ. ಕನ್ನಡ ಅಥವಾ ಕನ್ನಡಿಗರು ಅಂದಕೂಡಲೇ ಸಹಜವಾಗಿಯೇ ಅಂತಹದ್ದೊಂದು ಆತ್ಮೀಯತೆ ತನ್ನಿಂತಾನೇ ನನ್ನೊಳಗೆ ಹುಟ್ಟಿ ಬರುತ್ತದೆ.
ಕರ್ನಾಟಕ, ಕರುನಾಡು ಎಂದು ಹೇಳಿದ ಕೂಡಲೇ ನನಗೆ ಮೊದಲು ನೆನಪಾಗುವುದು ಕಿತ್ತೂರು ರಾಣಿ ಚೆನ್ನಮ್ಮ. ಒಬ್ಬ ಸ್ತ್ರೀಯಾಗಿ ಆಕೆ ಬ್ರಿಟಿಷರ ವಿರುದ್ಧ ಹೋರಾಡಿದ್ದು, ನನಗೆ ಈಗಲೂ ಸ್ಫೂರ್ತಿ. ಹಾಗಾಗಿ ಇಂತಹ ಇತಿಹಾಸ ಪ್ರಸಿದ್ಧ ಹೋರಾಟಗಾರರ ಜೀವನವನ್ನು ಆಗಾಗ ಓದುತ್ತೇನೆ. ಇನ್ನು ಮುರುಡೇಶ್ವರ, ಗೋಕರ್ಣ, ಮೈಸೂರು ನನಗೆ ಕರ್ನಾಟಕದಲ್ಲಿ ಅತ್ಯಂತ ಪ್ರೀತಿಯ ಸ್ಥಳಗಳು. ಬೆಂಗಳೂರನ್ನು ಬೆಳಗಿದ ಕೆಂಪೇಗೌಡರು ಸದಾ ಸ್ಫೂರ್ತಿಯಾಗಿದ್ದಾರೆ. ನಾನೊಬ್ಬ ಕ್ರೀಡಾ ಕೋಚ್. ಕರ್ನಾಟಕದವನಾಗಿರುವುದರಿಂದ ಸಹಜವಾಗಿಯೇ ಕನ್ನಡಿಗ ಅಥ್ಲೀಟ್‌ಗಳನ್ನು ಬೆಳೆಸಬೇಕೆಂಬ ತಹತಹಿಕೆಯಿದೆ. ಅದಕ್ಕೆ ತಕ್ಕಂತೆ ಕನ್ನಡಿಗ ಕ್ರೀಡಾಪಟುಗಳಿಗೆ ಎಲ್ಲ ಪ್ರೋತ್ಸಾಹ ನೀಡುತ್ತಿದ್ದೇನೆ.
-ಕಾಶೀನಾಥ್ ನಾಯ್ಕ, ಅಂತಾರಾಷ್ಟ್ರೀಯ ಖ್ಯಾತಿಯ ಜಾವೆಲಿನ್ ಪಟು, ಅಥ್ಲೀಟ್ ಕೋಚ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.