ನಾಟ್ಯಮಯೂರಿ ಕಾವ್ಯಶ್ರೀ ನಾಗರಾಜ್
Team Udayavani, Jul 24, 2021, 8:58 PM IST
ಗುರುಗಳ ಮಾರ್ಗದರ್ಶನ, ಪೋಷಕರ ಪ್ರೋತ್ಸಾಹ, ಪತಿಯ ಸಹಕಾರದಿಂದ ಭಾರತೀಯ ಶಾಸ್ತ್ರೀಯ ನೃತ್ಯಕಲೆಗಳನ್ನು ಕಲಿತು ದೂರದ ಕೆನಡಾದಲ್ಲಿ ಹಲವಾರು ಮಂದಿಗೆ ನೃತ್ಯದ ಸವಿಯನ್ನು ಉಣಿಸುತ್ತಿದ್ದಾರೆ ಕಾವ್ಯಶ್ರೀ ನಾಗರಾಜ್.
ಭರತನಾಟ್ಯ ಹಾಗೂ ಕಥಕ್ ನೃತ್ಯಗಳಲ್ಲಿ ಪಾರಂಗತರಾಗಿರುವ ಕಾವ್ಯಶ್ರೀ ನಾಗರಾಜ್ ಅವರದ್ದು ಕಲಾಭಿಮಾನದ ಮನೆತನ. ಮೂಲತಃ ಇವರು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟ ಊರಿನವರು. ಬಾಲ್ಯದಿಂದಲೂ ನಾಟ್ಯಶಾಸ್ತ್ರದ ಮೇಲೆ ಬಹಳ ಆಸಕ್ತಿ ಹಾಗೂ ಅಭಿಮಾನವಿದ್ದ ಇವರಿಗೆ ತಂದೆ ಟಿ.ಎನ್. ನಾಗರಾಜ್ ಹಾಗೂ ತಾಯಿ ಭಾಗ್ಯಲಕ್ಷಿ$¾à ಅವರ ಪ್ರೋತ್ಸಾಹವೂ ಸಿಕ್ಕಿತು. ಮದುವೆಯ ಅನಂತರ ಪತಿ ಶ್ರವಣ್ ಅವರ ಸಹಕಾರದಿಂದ ತಮ್ಮ ನೃತ್ಯಾಸಕ್ತಿಯನ್ನು ಹೆಚ್ಚಿಸುತ್ತಿದ್ದು, ಇತರರಿಗೆ ಹಂಚುವ ಮೂಲಕ ಭಾರತೀಯ ಶಾಸ್ತ್ರೀಯ ಕಲೆಗಳ ಪ್ರಚಾರವನ್ನು ಸದ್ದಿಲ್ಲದೆ ನಡೆಸುತ್ತಿದ್ದಾರೆ.
ಕಳೆದ 25 ವರ್ಷಗಳಿಂದ ನೃತ್ಯಾಭ್ಯಾಸವನ್ನು ನಡೆಸುತ್ತಿರುವ ಕಾವ್ಯಶ್ರೀ ಅವರು ಭರತನಾಟ್ಯವನ್ನು ಕರ್ನಾಟಕ ಕಲಾಶ್ರೀ ಗುರು ಡಾ| ಸುಪರ್ಣ ವೆಂಕಟೇಶ್, ಕಥಕ್ ನೃತ್ಯವನ್ನು ಕರ್ನಾಟಕ ಕಲಾಶ್ರೀ ಗುರು ಮೈಸೂರು ಬಿ. ನಾಗರಾಜ್ ಅವರಿಂದ ಅಭ್ಯಾಸ ಮಾಡಿದ್ದಾರೆ. ಡಾ| ಮಾಯಾ ರಾವ್ ಅವರ ಸಂಸ್ಥೆಯಲ್ಲಿ ನೃತ್ಯ ಸಂಯೋಜನೆ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವುದು ಮಾತ್ರವಲ್ಲ ಬೆಂಗಳೂರು ವಿಶ್ವವಿದ್ಯಾಲಯದಿಂದ ನೃತ್ಯದಲ್ಲಿ ಸ್ನಾತಕೋತ್ತರ ಪದವಿ (ಭರತನಾಟ್ಯ)ಯನ್ನು ಪ್ರಥಮ ಶ್ರೇಯಾಂಕದೊಂದಿಗೆ ಉತ್ತೀರ್ಣರಾಗಿ ಚಿನ್ನದ ಪದಕವನ್ನೂ ಪಡೆದಿ¨ªಾರೆ.
ನಂದಿಯ ಅತ್ಯಂತ ಪ್ರಸಿದ್ಧ ಮತ್ತು ಐತಿಹಾಸಿ ದೇವಾಲಯವಾದ ಭೋಗಾನಂದೀಶ್ವರದಲ್ಲಿ 2010ರ ನ. 24ರಂದು ರಂಗಪ್ರವೇಶ ಮಾಡಿರುವ ಕಾವ್ಯಶ್ರೀ ಅವರ ಶ್ರೇಷ್ಠ ನೃತ್ಯ ಪ್ರದರ್ಶನವನ್ನು ನೋಡಿ ಪ್ರೇಕ್ಷಕರೂ ಮಂತ್ರಮುಗ್ಧರಾಗಿದ್ದರು. 2016ರ ಅಕ್ಟೋಬರ್ 27ರಂದು ಗುರುಗಳಾದ ಮೈಸೂರು ಬಿ. ನಾಗರಾಜ್ ಅವರ ಮಾರ್ಗದರ್ಶನ ಮತ್ತು ತರಬೇತಿಯಡಿಯಲ್ಲಿ ಜೆಎಸ್‌ಎಸ್ ಸಭಾಂಗಣ, ಜಯನಗರ ಮತ್ತು ಬೆಂಗಳೂರಿನಲ್ಲಿ ತಮ್ಮ ಕಥಕ್ ರಂಗ¾ಂಚ್ ಅನ್ನೂ ಯಶಸ್ವಿಯಾಗಿ ಪ್ರವೇಶ ಮಾಡಿದ್ದಾರೆ.
ಹಲವು ಪ್ರಶಸ್ತಿ
ಕರ್ನಾಟಕ ಸರಕಾರ ಆಯೋಜಿಸುವ ಕನ್ನಡ ಸಾಹಿತ್ಯ ಸಮ್ಮೇಳನ, ಕಿತ್ತೂರು ಉತ್ಸವ, ಜಾನಪದ ಜಾತ್ರೆ, ಹಂಪಿ ಉತ್ಸವ, ವಿಶ್ವ ಕನ್ನಡ ಸಮ್ಮೇಳನ, ವಚನ ಸಾಹಿತ್ಯ ಸಮ್ಮೇಳನ… ಹೀಗೆ ವಿವಿಧ ಉತ್ಸವಗಳಲ್ಲಿ ಭಾಗವಹಿಸಿ ನಾಟ್ಯಶ್ರೀ, ಪ್ರತಿಭಾಶ್ರೀ, ಕರ್ನಾಟಕ ಶಿರೋಮಣಿ, ಮಹಿಳಾ ರತ್ನ, ಅರಳು ಮಲ್ಲಿಗೆ, ಕಲಾ ಪೋಷಕ ರತ್ನಾ, ನವ ಪಲ್ಲವಿ, ಕರ್ನಾಟಕ ಜ್ಯೋತಿ, ಭಾರತ-ಮಾತ, ನಾಟ್ಯ ಮಯೂರಿ, ಸಮಾಜ ರತ್ನ, ಶ್ರೀವರಿ ಕಲ್ಪಶ್ರೀ ನಾಟ್ಯಮಯೂರಿ… ಹೀಗೆ ಹಲವಾರು ಪದವಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 2017 ರಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯಕ್ಕೆ ನೀಡಿದ ಕೊಡುಗೆಗಾಗಿ ಇವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಸಾವಿರಕ್ಕೂ ಹೆಚ್ಚು ಪ್ರದರ್ಶನ
2015ರಲ್ಲಿ ಕಾವ್ಯಶ್ರೀ ಆರ್ಟ್ ಫೌಂಡೇಶನ್ (ಆರ್) ಎಂಬ ನೃತ್ಯ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದ ಅವರು, ಈಗಲೂ ಅನೇಕ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ತರಬೇತಿಯನ್ನು ನೀಡುತ್ತಿದ್ದಾರೆ. ಶಾಸ್ತ್ರೀಯ ನೃತ್ಯ ಕಲಿಯಲು ವಯಸ್ಸಿನ ಯಾವುದೇ ನಿರ್ಬಂಧವಿಲ್ಲ ಎಂದು ಸಾಬೀತುಪಡಿಸಲು ಅವರು ಹಿರಿಯ ನಾಗರಿಕರಿಗೆ ಭರತನಾಟ್ಯವನ್ನು ಕಲಿಸುತ್ತಿದ್ದಾರೆ. ಸುಮಾರು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವ ಕಾವ್ಯಶ್ರೀ ಅವರು, ಭಾರತದ ಪ್ರಮುಖ ನಗರಗಳೂ ಸೇರಿದಂತೆ ಸಿಂಗಾಪುರ, ಬಹ್ರೈನ್, ದುಬೈ, ಅಬುಧಾಬಿ, ನೇಪಾಳ ಮತ್ತು ಕೆನಡಾದ ಜನತೆಗೆ ಜಾನಪದ ಮತ್ತು ಧಾರ್ಮಿಕ ನೃತ್ಯ ಸಂಪ್ರದಾಯಗಳಲ್ಲಿ ಅವರ ನೃತ್ಯ ಪರಿಣತಿಯನ್ನು ಪ್ರದರ್ಶಿಸಿ¨ªಾರೆ. ಮಾತ್ರವಲ್ಲದೇ ಆರ್ಟಿಕ್ಯುಲೇಟ್ ಎಬಿಲಿಟಿ ಎಂಬ ಸಂಸ್ಥೆಯ ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳೊಂದಿಗೆ ಭಾರತವನ್ನು ಪ್ರತಿನಿಧಿಸುತ್ತ ಅಮೆರಿಕದಲ್ಲಿ 40ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ.
ಕೆನಡಾದಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ವಿದ್ಯಾರ್ಥಿಗಳೊಂದಿಗೆ ನೃತ್ಯ ಸಂಯೋಜನೆಯನ್ನು ಮಾಡಿ ಕನ್ನಡದ ಬಾವುಟವನ್ನು ಮುಗಿಲಲ್ಲಿ ಹಾರಿಸಿ ಸಂಭ್ರಮಿಸಿದ್ದ ಇವರು, ಆನಂದಮಯ ಈ ಜಗ ಹೃದಯ… ಎಂಬ ಹಾಡಿಗೆ ಬರಿಗಾಲಲ್ಲಿ ಹಿಮದಲ್ಲಿ ನೃತ್ಯ ಮಾಡಿ ಅನೇಕರ ಮನಗೆದ್ದಿದ್ದಾರೆ. ಇತ್ತೀಚೆಗೆ ರಾಮನವಮಿ ಪ್ರಯುಕ್ತ ಇಂಡೋ- ಕೆನಡಾ ವಿದ್ಯಾರ್ಥಿಗಳನ್ನು ಸೇರಿಸಿ ಕಥಕ್ ನೃತ್ಯವನ್ನೂ ಆಯೋಜಿಸಿದ್ದರು.
ಪ್ರಸ್ತುತ ಕಾವ್ಯಾಶ್ರೀ ಅವರು ಪತಿ ಹಾಗೂ ಎರಡು ವರ್ಷದ ಮಗ ಶೌರ್ಯನೊಂದಿಗೆ ಕೆನಡಾದ ಹ್ಯಾಲಿಫ್ಯಾಕ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ತಮ್ಮ ನೃತ್ಯ ಸಂಸ್ಥೆಯ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ. ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸುವ ಮೂಲಕ ಭಾರತದ ಹಾಗೂ ಕೆನಡಾದ ವಿದ್ಯಾರ್ಥಿಗಳಿಗೂ ನೃತ್ಯಭ್ಯಾಸವನ್ನು ಕಲಿಸುತ್ತಿದ್ದಾರೆ.
ಹ್ಯಾಲಿಫ್ಯಾಕ್ಸ್‌ನಲ್ಲಿ ಭರತನಾಟ್ಯ ನೃತ್ಯ ಪ್ರದರ್ಶನ ಮಾತ್ರವಲ್ಲ ಇತರರಿಗೆ ಕಲಿಸಲು ಸರಿಯಾದ ಅವಕಾಶ ಸಿಗುತ್ತಿಲ್ಲ. ಆದರೆ ಮಾನಸ್ಸಿದ್ದರೆ ಮಾರ್ಗವಿದೆ ಎನ್ನುವ ಹಾಗೆ ತಮ್ಮ ನೃತ್ಯ ಕಲಿಸುವ ಹಾಗೂ ಕಲಿಯುವ ಉತ್ಸಾಹವನ್ನು ಮುಂದರಿ ಸುತ್ತಿದ್ದಾರೆ ಕಾವ್ಯಶ್ರೀ ನಾಗರಾಜ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.