ಕೋವಿಡ್‌ ಬಿಕ್ಕಟ್ಟಿನ ಸಮಯದಲ್ಲಿ ನಿಮ್ಮ ಹಣದ ನಿರ್ವಹಣೆ ಹೀಗಿರಲಿ


Team Udayavani, Oct 4, 2020, 6:21 AM IST

ಕೋವಿಡ್‌ ಬಿಕ್ಕಟ್ಟಿನ ಸಮಯದಲ್ಲಿ ನಿಮ್ಮ ಹಣದ ನಿರ್ವಹಣೆ ಹೀಗಿರಲಿ

ಸಾಂದರ್ಭಿಕ ಚಿತ್ರ

ಕೋವಿಡ್ ವೈರಸ್‌ ಸಾಂಕ್ರಾಮಿಕದಿಂದಾಗಿ ಜಾಗತಿಕ ಆರ್ಥಿಕತೆ ಬಿಕ್ಕಟ್ಟಿನಲ್ಲಿದ್ದು, ಇದರಿಂದಾಗಿ ಅನೇಕರಿಗೆ ಉದ್ಯೋಗ ಹಾಗೂ ಹಣಕಾಸಿನ ಬಗ್ಗೆ ಅಭದ್ರತೆ ಹೆಚ್ಚಾಗಿದೆ. ಸಂಕಷ್ಟದ ಈ ಸಮಯದಲ್ಲಿ, ಆರ್ಥಿಕ ಆತಂಕವೂ ಅಧಿಕವಾಗುತ್ತಿರು ವುದರಿಂದಾಗಿ ಹಣಕಾಸಿನ ನಿರ್ವಹಣೆಯ ವಿಚಾರದಲ್ಲಿ ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಲು ಅನೇಕರಿಗೆ ಕಷ್ಟವಾಗುತ್ತಿರಬಹುದು. ನಿಮ್ಮ ಆರ್ಥಿಕ ಭವಿಷ್ಯ ಭದ್ರವಾಗಿ ಇರಬೇಕು ಎಂದರೆ, ಹಣದ ವಿಚಾರದಲ್ಲಿ ಕೆಲವು ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸಬೇಕು ಮತ್ತು ಬುದ್ಧಿವಂತಿಕೆಯಿಂದ ಹಣಕಾಸು ನಿರ್ಧಾರಗಳನ್ನು ಮಾಡಬೇಕು.

ಈ ಆರ್ಥಿಕ ಬಿಕ್ಕಟ್ಟನ್ನು ವೈಯಕ್ತಿಕ ಮಟ್ಟದಲ್ಲಿ ಎದುರಿಸುವುದು ಹೇಗೆ? ಈ ನಿಟ್ಟಿನಲ್ಲಿ ಕೆಲವು ಸರಳ ಸಲಹೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಈ ಬಗ್ಗೆ ನೀವು ಈಗಾಗಲೇ ಯೋಚಿಸಿರಲೂ ಬಹುದು. ಆದರೂ, ಹಣಕಾಸು ನಿರ್ವಹಣೆಯ ಅನಿವಾರ್ಯ ವನ್ನು ಪದೇಪದೆ ಮನದಟ್ಟು ಮಾಡಿಕೊಂಡು ಮುನ್ನಡೆ ಯುವ ಅಗತ್ಯವಿರುವುದರಿಂದ, ಈ ನಿಟ್ಟಿನಲ್ಲಿ ಮತ್ತೂಮ್ಮೆ ಜಾಗೃತಿ ಮೂಡಿಸಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ ಅಲ್ಲವೇ?

ಆಪತ್ಕಾಲಕ್ಕೆ ಹಣವಿರಲಿ
ನೀವು ಹಣಕಾಸು ಸಮಸ್ಯೆಯನ್ನು ತೀವ್ರವಾಗಿ ಎದುರಿಸುತ್ತಿರಬಹುದು. ತತ್ಪರಿಣಾಮವಾಗಿ ನಿಮ್ಮ ಬಿಲ್‌ಗ‌ಳನ್ನು ಪಾವತಿಸಲು ಕಷ್ಟಪಡುತ್ತಿರ ಬಹುದು. ಈ ಕಾರಣಕ್ಕಾಗಿಯೇ, ನಿಮ್ಮ ಆಪತ್ಕಾಲೀನ ಹಣವನ್ನು ಹೆಚ್ಚಿಸಿಕೊಳ್ಳುವುದು ಅಗತ್ಯ. ಸರಳವಾಗಿ ಹೇಳಬೇ ಕೆಂದರೆ, ಮುಂದಿನ ಹಲವು ತಿಂಗಳುಗಳ ವರೆಗಾದರೂ ಸಾಕಾಗುವಷ್ಟು ಹಣವನ್ನು ಶೇಖರಿಸಿ ಇಡುವುದು ಎಂದರ್ಥ. ಆರ್ಥಿಕ ತಜ್ಞರ ಪ್ರಕಾರ, ನಮ್ಮ ಬಳಿ ಕನಿಷ್ಠ ಮೂರರಿಂದ ಆರು ತಿಂಗಳುಗಳವರೆ ಗಾದರೂ ದೈನಂದಿನ ಖರ್ಚಿಗೆ ಸಾಕಾಗುವಷ್ಟಾದರೂ ತುರ್ತು ಹಣ ಯಾವಾಗಲೂ ಇರಬೇಕು. ತುರ್ತು ಹಣವನ್ನು ಹೆಚ್ಚಿಸಿಕೊಳ್ಳಲು ಹಲವು ಮಾರ್ಗಗಳಿವೆ. ಉದಾಹರಣೆಗೆ, ನೀವೀಗ ಮನೆಯಿಂದ ಕೆಲಸ ಮಾಡುತ್ತಿದ್ದೀರಿ ಎಂದುಕೊಳ್ಳಿ. ಇದರಿಂದಾಗಿ ನೀವು ಕಚೇರಿಗೆ ಹೋಗುವಾಗ ಸಂಚಾರಕ್ಕೆ, ಊಟಕ್ಕೆ, ಇನ್ನೂ ಇತರ ವಿಷಯಗಳಿಗೆ ಖರ್ಚು ಮಾಡುತ್ತಿದ್ದ ಹಣ ಉಳಿತಾಯ ಆಗುತ್ತಿರುತ್ತದೆ. ಇದಕ್ಕೆಲ್ಲ ಎಷ್ಟು ಖರ್ಚಾಗುತ್ತಿತ್ತು ಅಂತ ಲೆಕ್ಕ ಹಾಕಿ. ಆ ಪ್ರಮಾಣದ ಹಣವನ್ನು ಒಂದೆಡೆ ಜಮಾ ಇಡಿ. ಈಗಂತೂ ಚಿತ್ರ ಮಂದಿರಗಳು, ಹೊಟೇಲ್‌ಗ‌ಳಿಗೂ ಯಾರೂ ಹೋಗುತ್ತಿಲ್ಲ ವಾದ್ದರಿಂದ, ಆ ಚಟುವಟಿಕೆ ಗಳಿಗೆಲ್ಲ ತಿಂಗಳಿಗೆ ಎಷ್ಟು ಖರ್ಚಾಗುತ್ತಿತ್ತು ಎನ್ನುವುದನ್ನು ಲೆಕ್ಕ ಹಾಕಿ, ತುರ್ತು ಫ‌ಂಡ್‌ನ‌ಲ್ಲಿ ಶೇಖರಿಸಿಡಿ.

ಮನೆ ಬಾಡಿಗೆ, ವಿದ್ಯುತ್‌, ಇಎಂಐಗೆ ಆದ್ಯತೆ
ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ತಿಂಗಳ ಅನಿವಾರ್ಯ ಬಿಲ್‌ಗ‌ಳಿಗೆ; ಅಂದರೆ ಬಾಡಿಗೆಗೆ, ಇಎಂಐಗಳಿಗೆ, ವಿದ್ಯುತ್‌ ಬಿಲ್‌ ಪಾವತಿಗೆ ಆದ್ಯತೆ ನೀಡಿ. ಮೊದಲೇ ಅದಕ್ಕಾಗಿ ಹಣ ಎತ್ತಿಟ್ಟುಕೊಳ್ಳಿ. ಇವೆಲ್ಲದರ ಹೊರತಾಗಿಯೂ ಅಗತ್ಯ ವಸ್ತುಗಳ ಖರೀದಿಗೆ ಖರ್ಚಂತೂ ಮಾಡಲೇಬೇಕಾ ಗುತ್ತದೆ. ಹೀಗಾಗಿ, ಆಹಾರ ಪದಾರ್ಥಗಳನ್ನು ಬಿಡಿಬಿಡಿಯಾಗಿ ಖರೀದಿಸದೇ, ಬಲ್ಕ್ ನಲ್ಲಿ (ಒಮ್ಮೆಗೇ ಹೆಚ್ಚಿನ ಪ್ರಮಾಣದಲ್ಲಿ ) ಖರೀದಿಸಿ. ಒಟ್ಟಿಗೇ ಖರೀದಿಸಿದಾಗ ಹಣ ಉಳಿತಾಯವಾಗುತ್ತದೆ. ಇನ್ನು ಆದಷ್ಟೂ ಕಡಿಮೆ ಹಣದಲ್ಲೇ ಹೆಚ್ಚಿನ ಪದಾರ್ಥಗಳನ್ನು ಕೊಂಡುಕೊಳ್ಳುವುದಕ್ಕೆ ಪ್ಲ್ರಾನ್‌ ಮಾಡಿ.

ನೌಕರಿ ಬಿಡುವ ಯೋಚನೆ ಬೇಡ
ಈ ಕೋವಿಡ್‌-19 ಬಿಕ್ಕಟ್ಟಿನಲ್ಲಿ ನಿಮ್ಮ ನೌಕರಿಯನ್ನು ಬದಲಿಸುವ ಅಥವಾ ಬಿಡುವ ಯೋಚನೆ ಬೇಡ. ಪ್ರಸಕ್ತ ಬಿಕ್ಕಟ್ಟು ಎಲ್ಲ ಕ್ಷೇತ್ರಗಳಲ್ಲೂ ಭಾರೀ ಪ್ರಮಾಣದ ಉದ್ಯೋಗ ಕಡಿತಕ್ಕೆ ಕಾರಣವಾಗಿದೆ. ಹೀಗಾಗಿ ಎಲ್ಲ ಕಂಪೆನಿಗಳೂ ತಮ್ಮ ನಿರ್ವಹಣ ಖರ್ಚನ್ನು ತಗ್ಗಿಸುವುದಕ್ಕಾಗಿ ಹೊಸ ಉದ್ಯೋಗಿಗಳನ್ನು ತೆಗೆದುಕೊಳ್ಳುತ್ತಿಲ್ಲ. ಈ ಕಾರಣಕ್ಕಾಗಿಯೇ ಉದ್ಯೋಗ ಬದಲಿಸುವ ಆಲೋಚನೆ ಇದ್ದರೆ, ಕೆಲವು ತಿಂಗಳುಗಳವರೆಗಾದರೂ ಸುಮ್ಮನೇ ಕಾಯಿರಿ. ಪರಿಸ್ಥಿತಿ ಸುಧಾರಿಸಿದ ಅನಂತರ ಉದ್ಯೋಗ ಬದಲಿಸಲು ಯೋಚಿಸಿ.

ಆರೋಗ್ಯ ವಿಮೆ ಇದೆಯೇ?
ಈ ಸಮಯದಲ್ಲಿ ಯಾರಿಗೆ ಬೇಕಾದರೂ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಆಸ್ಪತ್ರೆಗಳಿಗೆ ಅಡ್ಮಿಟ್‌ ಆದಮೇಲೆ ಒಂದು ನಿರ್ದಿಷ್ಟ ಮೊತ್ತದ ಹಣವನ್ನಂತೂ ನೀವು ತೆರಲೇ ಬೇಕಾಗುತ್ತದೆ. ಅದನ್ನು ನಿಮ್ಮ ಆಪತ್ಕಾಲೀನ ಹಣದಿಂದ ಖರ್ಚು ಮಾಡಬೇಕಾ ದಂಥ ಪರಿಸ್ಥಿತಿ ತಂದುಕೊಳ್ಳಬೇಡಿ. ಹೀಗಾಗಿ ನಿಮಗೆ, ನಿಮ್ಮ ಕುಟುಂಬಕ್ಕೆ ಆರೋಗ್ಯ ವಿಮೆ ಮಾಡಿಸಿಕೊಳ್ಳಿ. ಅಲ್ಲದೇ ಆ ವಿಮೆ ಪಾಲಿಸಿಯು ಚಿಕಿತ್ಸೆಯ ಬಹುತೇಕ ಖರ್ಚನ್ನು ಸರಿದೂಗಿಸುವಂತೆ ಇರಲಿ. ಅಂದರೆ ಅದರ ಕವರೇಜ್‌ ವ್ಯಾಪ್ತಿ ಅಧಿಕವಾಗಿ ಇರುವಂತೆ ನೋಡಿಕೊಳ್ಳಿ.

ಹೆಚ್ಚುವರಿ ಹಣ ಗಳಿಸಲು ಪ್ರಯತ್ನಿಸಿ
ನಿಮ್ಮ ಕೌಶಲಗಳೇನು? ಅದರಿಂದ ಹೆಚ್ಚುವರಿ ಹಣ ಗಳಿಸಲು ಸಾಧ್ಯವಿದೆಯೇ? ಎನ್ನುವುದನ್ನು ಪರೀಕ್ಷೆಗೊಡ್ಡಲು ಇದು ಒಳ್ಳೆಯ ಸಮಯ. ಪಾರ್ಟ್‌ ಟೈಮ್‌ ಕೆಲಸ ಸಿಕ್ಕರೆ ಮಾಡಿ ಅಥವಾ ಫ್ರೀಲ್ಯಾನ್ಸಿಂಗ್‌ ಕೆಲಸ ಹುಡುಕಿಕೊಳ್ಳಿ. ಅನಗತ್ಯ ವಸ್ತುಗಳು ಮನೆಯಲ್ಲಿದ್ದರೆ ಅವುಗಳನ್ನು ಮಾರಾಟ ಮಾಡಲು ಯೋಚಿಸಿ. ಇದರಿಂದಾಗಿ ನಿಮಗೆ ಬರುವ ಹಣದ ಪ್ರಮಾಣ ಚಿಕ್ಕದಿರಬಹುದು. ಆದರೆ ದಿನಗಳೆದಂತೆ ಈ ಚಿಕ್ಕ ಮೊತ್ತವೇ ಬಹಳ ಸಹಾಯಕ್ಕೆ ಬರುತ್ತದೆ. ಹಣಗಳಿಸುವಷ್ಟೇ ಮುಖ್ಯವಾಗಿ ಹಣದ ಉಳಿತಾಯಕ್ಕೆ ಆದ್ಯತೆ ನೀಡಿ. ನೀವು ನಿಮ್ಮ ಆದಾಯವನ್ನು ಮೊದಲು ಖರ್ಚು ಮಾಡಿ, ಉಳಿದ ಹಣವನ್ನು ಸೇವ್‌ ಮಾಡುತ್ತೀರೋ ಅಥವಾ ಮೊದಲೇ ಒಂದಷ್ಟು ಪ್ರಮಾಣದ ಹಣವನ್ನು ಉಳಿತಾಯ ಮಾಡಿ, ಆಮೇಲೆ ಉಳಿದದ್ದರಲ್ಲಿ ಖರ್ಚು ಮಾಡುತ್ತೀರೋ? ಎರಡನೇ ಮಾರ್ಗವೇ ಉತ್ತಮವಾದದ್ದು.

ಪ್ರಾಕ್ಟಿಕಲ್‌ ಆಗಿ ಯೋಚಿಸಿ
ಕೋವಿಡ್‌-19 ಬಿಕ್ಕಟ್ಟು ನಮ್ಮ ಆರ್ಥಿಕತೆ ಹಾಗೂ ಆರೋಗ್ಯ ವ್ಯವಸ್ಥೆ ಅಷ್ಟು ಸದೃಢವಲ್ಲ ಎನ್ನುವು ದನ್ನು ತೋರಿಸಿಕೊಟ್ಟಿದೆ. ಹೀಗಾಗಿ ವೈಯಕ್ತಿಕ ಹಣಕಾಸು ನಿರ್ವಹಣೆಗೆ ಆದ್ಯತೆ ಕೊಡಿ. ಭಾವನಾತ್ಮಕವಾಗಿ ಯೋಚಿಸದೇ, ಪ್ರಾಕ್ಟಿಕಲ್‌ ಆಗಿ ಯೋಚಿಸಿ. ಈ ಸಂದರ್ಭದಲ್ಲಿ ನೀವು ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದೀರೋ ಅವಲೋಕಿಸಿ. ನಿಮ್ಮ ಬಳಿ ಆಪತ್ಕಾಲೀನ ನಿಧಿ ಎಷ್ಟಿದೆ ಲೆಕ್ಕ ಹಾಕಿ. ನಿಮ್ಮ ಉದ್ಯೋಗ ನಿಜಕ್ಕೂ ಗಟ್ಟಿಯಾಗಿದೆಯೇ ಎನ್ನುವುದನ್ನು ಅರ್ಥಮಾಡಿಕೊಳ್ಳಿ. ಈ ಎಲ್ಲ ಸಮಸ್ಯೆಗಳಿಂದ ಹೊರಬರಲು ಇವತ್ತಿನಿಂದ ನೀವು ಇಡಬೇಕಾದ ಹೆಜ್ಜೆಗಳ ಬಗ್ಗೆ ಪ್ಲ್ರಾನ್‌ ಮಾಡಿ. ಎಲ್ಲವೂ ತನ್ನಿಂತಾನೇ ಸರಿಹೋಗುತ್ತದೆ ಎಂಬ ಅಸಡ್ಡೆ ಖಂಡಿತ ಬೇಡ. ನಾನು ಮೇಲೆ ಹೇಳಿರುವ ಅಂಶಗಳನ್ನು ಚಾಚೂತಪ್ಪದೇ ಪಾಲಿಸಿದರೆ, ಈ ಬಿಕ್ಕಟ್ಟಿನ ಸಮಯದಲ್ಲಿ ನಿಮ್ಮ ಆರ್ಥಿಕ ಆರೋಗ್ಯಕ್ಕೆ ಅಪಾರ ಹಾನಿಯಾಗುವುದನ್ನು ತಪ್ಪಿಸಬಹುದಾಗಿದೆ.
(ಲೇಖಕರು ಮನಿಟ್ಯಾಪ್‌.ಕಾಂನ ಸಹಸಂಸ್ಥಾಪಕರು)

ಕುನಾಲ್‌ ವರ್ಮಾ, ಯುವ ಉದ್ಯಮಿ

ಟಾಪ್ ನ್ಯೂಸ್

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

13-

Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Waqf Protest: People will overthrow the state government: Protest in Davangere

Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.