ಭಾರತದ ಪ್ರಪ್ರಥಮ ಮಹಿಳಾ ವೈದ್ಯೆ ಎಂಬ ಹೆಗ್ಗಳಿಕೆಯ “ಆನಂದಿ ಬಾಯಿ ಜೋಶಿ”

ಅನಾರೋಗ್ಯದಿಂದ ಮಗು ಸಾವನ್ನಪ್ಪಿತ್ತು. ಇದೇ ಅವರ  ಜೀವನದ ಬಹು ಮುಖ್ಯ ಘಟ್ಟ. ಅಂದೇ ಆನಂದಿ ಅವರು ವೈದ್ಯೆ ಆಗುವ ಕನಸು ಕಂಡರು.

Team Udayavani, Jan 24, 2020, 12:41 PM IST

Anandi-bai-Joshi

ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿಓದುಗರ ಆಯ್ದ ಲೇಖನ ಇಲ್ಲಿದೆ…ನಮ್ಮ ದೇಶದಲ್ಲಿ ಹಲವಾರು ಮಹಿಳೆಯರು ಆದರ್ಶಪ್ರಾಯರಾಗಿದ್ದು, ಆ ಸಾಲಿಗೆ ಆನಂದಿ ಬಾಯಿ ಜೋಶಿ ಕೂಡಾ ಒಬ್ಬರಾಗಿದ್ದಾರೆ.

ಈಕೆ ಭಾರತದ ಪ್ರಪ್ರಥಮ ಮಹಿಳಾ ವೈದ್ಯೆ.31 ಮಾರ್ಚ್ 1865ರಲ್ಲಿ ಪೂನಾದಲ್ಲಿ ಜನಿಸಿದ ಆನಂದಿ ಅವರ ಬಾಲ್ಯದ ಹೆಸರು ಯಮುನಾ ಎಂದಾಗಿತ್ತು. ಒಂಬತ್ತನೇ ವಯಸ್ಸಿಗೆ ವಿವಾಹವಾದರು ಸಹ, ಪತಿ ಗೋಪಾಲ್ ರಾವ್ ಅವರ ಪ್ರೋತ್ಸಾಹದಿಂದ ಶಿಕ್ಷಣ ಪಡೆಯುವಂತಾಯಿತು.

ಶಾಲೆಗೆ ಹೋಗಲು ನಿರ್ಬಂಧ ಇದ್ದ ಕಾರಣ, ಪತಿಯೇ ಆಕೆಗೆ ಅಕ್ಷರ ಕಲಿಸುತ್ತಿದ್ದರು. ತಪ್ಪುಗಳಿಗೆ ಕಠಿಣ ಶಿಕ್ಷೆ ನೀಡುತ್ತಿದ್ದರಂತೆ. ಮೊದಲು ಆಸಕ್ತಿ ಇಲ್ಲದಿದ್ದ ಆನಂದಿ ಬಾಯಿ ನಂತರ ಓದಲು ಆಸಕ್ತಿ ವಹಿಸಿದರು. ಹದಿನಾಲ್ಕನೇ ವಯಸ್ಸಿಗೆ ಮಗುವಿಗೆ  ಜನ್ಮ ನೀಡಿದ್ದು, ಅನಾರೋಗ್ಯದಿಂದ ಮಗು ಸಾವನ್ನಪ್ಪಿತ್ತು. ಇದೇ ಅವರ  ಜೀವನದ ಬಹು ಮುಖ್ಯ ಘಟ್ಟ. ಅಂದೇ ಆನಂದಿ ಅವರು ವೈದ್ಯೆ ಆಗುವ ಕನಸು ಕಂಡರು.

ಪತಿ ಗೋಪಾಲ್ ರಾವ್ ಅಮೆರಿಕ ಮಿಷನರಿಗಳಿಗೆ ಪತ್ರ ಬರೆದು ಸಹಾಯ ಕೋರಿದರು. ಆದರೆ ಮನೆಯಲ್ಲಿ ತೀವ್ರ ಆಕ್ರೋಶ ಇತ್ತು. ಎಲ್ಲ ನೋವು ನುಂಗಿ ಅಮೆರಿಕದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು. ಭಾರತಕ್ಕೆ ವಾಪಸ್ಸಾದ ಬಳಿಕ ಕೆಲಸ ಲಭಿಸಿತ್ತಾದರು, ಅನಾರೋಗ್ಯದಿಂದ ಬೇಗನೆ ನಿಲ್ಲಿಸಿದರು. ತಮ್ಮ 22 ನೇ ವಯಸ್ಸಲ್ಲೇ ಮರಣವನ್ನಪ್ಪಿದ ಆನಂದಿ ಅವರ ಕೊಡುಗೆ ಎಂದೆಂದಿಗೂ ಅವಿಸ್ಮರಣೀಯವಾಗಿದೆ.

*ತೇಜಸ್ವಿನಿ ಆರ್. ಕೆ

ಎಸ್ ಡಿ ಎಂ, ಉಜಿರೆ

 

2) ಅಲ್ಪಾಯುಷದಲ್ಲೇ ಅರಳಿ ಹೋದ ಯಮುನೆ ಉರ್ಫ್ ಆನಂದಿಬಾಯಿ

“ಹೆಣ್ಣು ಪಂಜರದ ಗಿಳಿಯಲ್ಲ , ದೇಶ ಬದಲಿಸೋ ಶಕ್ತಿ”. ಇತಿಹಾಸದುದ್ದಕ್ಕೂ ಹೆಣ್ತನದ ಸಬಲೀಕರಣಕ್ಕಾಗಿ ಸಮಾಜದ ಎದುರಿಗೆ ನಿಂತ ಸಾಧಕಿಯರು ಸಿಗುತ್ತಾರೆ. ಅಂತವರಲ್ಲಿ ತನ್ನ ಅಲ್ಪಾಯುಷದಲ್ಲೇ ಅರಳಿ ಹೋದ ಯಮುನೆ ಉರ್ಫ್ ಆನಂದಿಬಾಯಿಯ ಕಥೆ ಇದು.

ಮರಾಠಿ ಸಂಪ್ರದಾಯಿಕ ಬ್ರಾಹ್ಮಣ ಕುಟುಂಬದಿ ಜನಿಸಿದ ಯಮುನ. ಬಾಲ್ಯ ಕಳೆವ ಮುಂಚೆಯೇ ಕರಿಮಣಿಗೆ ಕೊರಳು ಕೊಟ್ಟವಳು, ತನ್ನ ಒಂಬತ್ತನೇ ವಯಸ್ಸಿನಲ್ಲೇ ತನಗಿಂತ ಮೂರು ಪಟ್ಟು ಹಿರಿಯ ವಿಧುರ ಗೋಪಾಲ್ ಜೋಷಿಯ ವಿವಾಹವಾದವಳು. ಅವರು ಪತ್ನಿಯನ್ನು ತಾನು ಓದಿಸುತ್ತೇನೆಂಬ ವಿಚಿತ್ರ ಷರತ್ತಿನ ಮೇಲೆ ವಿವಾಹವಾಗಿದ್ದರು. ವಿವಾಹದ ನಂತರ ಯಮುನ ಆನಂದಿಯಾದಳು. ಗೋಪಾಲ್ ರಾವ್ ಓದಿಸುವ ಹಠ ನೆತ್ತಿಗೇರಿತು. ಆನಂದಿಗೆ ಬೀಳುತ್ತಿದ್ದ ಏಟು ಮನೆಗೆಲಸ ಮಾಡದಿದ್ದಕ್ಕಲ್ಲ ಓದದಿದ್ದಕ್ಕೆ. ತನ್ನ ತುಂಟ ವಯಸ್ಸಿನಲ್ಲೇ ಗರ್ಭಿಣಿಯಾದಳು. ಹದಿನಾಲ್ಕನೇ ವಯಸ್ಸಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಳು ಆನಂದಿ. ಆದರೆ ಮಗು ಬದುಕಿದ್ದು ಕೇವಲ ಹತ್ತು ದಿನ. ಆ ಮೆದು ದೇಹ-ಮನಸು ಆಗಲೇ ಮಾಗಿ ಹೋಯಿತೇನೋ. ಸಾಂಪ್ರದಾಯಿಕ ಸಮಾಜದಲ್ಲಿ ಪುರುಷ ವೈದ್ಯರಿಗೆ ತೋರಿಸಲಾಗದೆ ಹೆಣ್ಣು ಮಗಳಾಗಿ ತಾನು ಅನುಭವಿಸಿದ್ದ ಕಷ್ಟ ಮನವರಿಕೆ ಆಗಿತ್ತು ಅವಳಿಗೂ. ಅವಳಲ್ಲೂ ಓದುವ ಛಲ ಚುರುಕಾಯಿತು, ವೈದ್ಯಳಾಗುವ ಪಣತೊಟ್ಟಳು. ಪತಿಯ ತನ್ನ ಹಠಕ್ಕೆ ಸಾಥ್ ಸಿಕ್ಕಿತ್ತು. ದೇಹ ಸಹಕರಿಸದಿದ್ದರೂ ಮನಸ್ಸು ಕಲ್ಲಾಗಿತ್ತು ಹೊರಟೆ ಬಿಟ್ಟಳು ಸಾಗರಗಳ ದಾಟಿ, ಗಂಡು ಸಮಾಜದ ಧೃತಿಗೆಡಿಸಿ ಕಿವಿ ಕಿವುಡಾಯಿತು ಮಾತುಗಳಿಗೆ, ತಿಳಿದಿದ್ದಳು ಅವಳು ಬದುಕಿನ ದಾರಿಯ.

ಈ ಎಲ್ಲದರ ನಡುವೆ ವಯಸ್ಸಿನಲ್ಲಿ ಚಿಕ್ಕವಳಾಗಿದ್ದ ಅನಂದಿ, ಬದುಕಿನಲ್ಲಿ ದೂಡ್ಡವಳಾಗಿ ಬೆಳೆದಿದ್ದಳು. ಕಷ್ಟಗಳನ್ನೇ ಕರಗಿಸುವ ಕಲ್ಲಾದಳು. ವಿದೇಶದಲ್ಲಿ ದೃಢವಾಗಿ  ನಿಂತು ಡಿಗ್ರಿ ಹಾಗೂ ಎಂ.ಡಿ ಯನ್ನು ಪೂರೈಸಿದಳು. 1886ರಲ್ಲಿ ಭಾರತಕ್ಕೆ ಹಿಂತುರಿಗಿದಳು. ಅವಳಿಗೆ ಅಭೂತಪೂರ್ವವಾಗಿ ಸ್ವಾಗತ ಸಿಕ್ಕಿತು. ಈ ಖುಷಿ ಅರೆಗಳಿಗೆಯದ್ದಾಗಿತ್ತು ಚಳಿ ಹಾಗೂ ಆಹಾರಕ್ಕೆ ಒಗ್ಗದ ಅವಳ ದೇಹಕ್ಕೆ  ಅದಾಗಲೇ ಟಿ.ಬಿ ತಗುಲಿತ್ತು. ಕಾಲಡಿ ಹೂತಿದ್ದ ಸಮಾಜದ ಹುಳುಗಳು ದುರ್ಬಲವಾಗುತ್ತಿದ್ದಂತೆ ಮೇಲೆದ್ದು ನಿಂತವು. ” ಬ್ರಾಹ್ಮಣ ಸಮೂದಾಯದವಳಾಗಿ ಸಾಗರ ದಾಟಿದ್ದಕ್ಕೆ ಸಿಕ್ಕಿದ ಶಾಪವೆಂಬ ಮಾತುಗಳು ಕೇಳಿಬಂದವು. ಪಂಡಿತರು ಯಾರು ಅವಳನ್ನು ಮುಟ್ಟಲು ಒಪ್ಪಲಿಲ್ಲ, “ಅವಳಿಗೆ ಸಿಕ್ಕಿದ ಫಲವೆಂದು” ಕೈ ತೊಳೆದುಕೊಂಡರು. ಕೊನೆಗೂ ತನ್ನ  ಆಸೆಯಂತೆ ಸೇವೆ ಸಲ್ಲಿಸಲಾಗದೆ 1887ರಲ್ಲಿ ಕೊನೆ ಉಸಿರೆಳೆದಳು ಅನಂದಿ.

ಇಂದು ಹಲವು ಅನಂದಿಗಳು ಭಾರತ ಆರೋಗ್ಯ ವ್ಯವಸ್ಥೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ . ಅಂದು ಕಿಚ್ಚು ಹಚ್ಚಿದ ಆನಂದಿ  ಎಂದಿಗೂ ಮಹಿಳೆಯರಿಗೆ ದಾರಿದೀಪದಂತೆ.

– ನಿಧೀಶ ಕೆ ಶೆಟ್ಟಿಗಾರ್

ಟಾಪ್ ನ್ಯೂಸ್

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rangavaibhava

Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

Donald Trump Salry: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Kannada-Horata

Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

byndoor

Udupi: ಬೈಕಿಗೆ ಕಾರು ಢಿಕ್ಕಿ; ಸವಾರನಿಗೆ ಗಾಯ

dw

Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.