ಉದಯವಾಣಿ ಸಂದರ್ಶನ: ಭೂ ಸುಧಾರಣೆ: ಅನ್ಯಾಯಕ್ಕೆ ಅವಕಾಶವಿಲ್ಲ!


Team Udayavani, Oct 15, 2020, 6:02 AM IST

ಉದಯವಾಣಿ ಸಂದರ್ಶನ: ಭೂ ಸುಧಾರಣೆ: ಅನ್ಯಾಯಕ್ಕೆ ಅವಕಾಶವಿಲ್ಲ!

ಕೇಂದ್ರ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಕುರಿತು ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ “ಉದಯವಾಣಿ’ಗೆ ನೀಡಿದ ಸಂದರ್ಶನದ ಪೂರ್ಣ ವಿವರ ಇಲ್ಲಿದೆ.

ಭೂಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ­ಯಿಂದ ರೈತರಿಗೆ ಹೇಗೆ ಅನುಕೂಲವಾಗುತ್ತದೆ?
ಹೊಸ ಕೃಷಿ ಕಾಯ್ದೆಗಳು ರೈತರ ಆದಾಯವನ್ನು ದ್ವಿಗುಣಗೊಳಿಸುವ ವೇಗವರ್ಧಕಗಳು. ರೈತರು ಕೃಷಿ ಆತ್ಮ ನಿರ್ಭರ ಭಾರತಕ್ಕೆ ಅತ್ಯಂತ ಹೆಚ್ಚು ಕೊಡುಗೆ ನೀಡುತ್ತಾರೆ. ಅವರ ಅಭಿಲಾಷೆಗಳು ಮೋದಿ ಸರಕಾರದ ಪ್ರಮುಖ ಆದ್ಯತೆಗಳಾಗಿವೆ. ಕೇಂದ್ರ ಸರಕಾರ ಉತ್ಪಾದಕರಿಂದ ಖರೀದಿ ಮಾಡುವ ಪ್ರಕ್ರಿಯೆಯನ್ನು ಹಿಂಪಡೆಯುತ್ತಿಲ್ಲ ಹಾಗೂ ಕನಿಷ್ಠ ಬೆಂಬಲ ಬೆಲೆ ಯೋಜನೆ ವ್ಯಾಪ್ತಿಯಿಂದ ಹೊರ ಹೋಗುತ್ತಿಲ್ಲ.

ರೈತ ಉತ್ಪಾದಕ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸವಲತ್ತು) ಕಾಯ್ದೆ 2020 ಪ್ರಕಾರ ರೈತರು ಮಧ್ಯವರ್ತಿಗಳ ಹಾವಳಿಯಿಂದ ಮುಕ್ತರಾಗುತ್ತಾರೆ. ಅವರು ದೇಶದ ಯಾವುದೇ ಭಾಗದಲ್ಲಾದರೂ ತಮ್ಮ ಉತ್ಪನ್ನಕ್ಕೆ ಸೂಕ್ತ ಬೆಲೆ ದೊರೆತಿದೆ ಎಂದಾಗ ಮಾರಾಟ ಮಾಡಬಹುದು. ಮುಖ್ಯವಾಗಿ ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಕಾಯ್ದೆ 2020 ಪ್ರಕಾರ, ರೈತರು ಕೃಷಿ ಉತ್ಪನ್ನಗಳ ವ್ಯಾಪಾರಿ ಸಂಸ್ಥೆಗ ಳೊಂದಿಗೆ ಗುತ್ತಿಗೆ ಒಪ್ಪಂದ ಮಾಡಿಕೊಳ್ಳಬಹುದು. ಹೋಲ್‌ಸೇಲ್‌ ಮಾರಾಟಗಾರರು, ದೊಡ್ಡ ಚಿಲ್ಲರೆ ವ್ಯಾಪಾರಿ ಸಂಸ್ಥೆಗಳು ಮತ್ತು ರಪು¤ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅವಕಾಶ ಇರುವುದರಿಂದ ರೈತರು ಬಿತ್ತನೆ ಸಮಯದಲ್ಲಿಯೇ ಉತ್ಪಾದನ ವೆಚ್ಚ -ಬೆಲೆ ಬಗ್ಗೆ ಖಾತರಿ ಪಡಿಸಿಕೊಳ್ಳಲು ಅವಕಾಶವಿದೆ.

ಸರಕಾರ ಸಂಪೂರ್ಣ ಕೃಷಿ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಬಿಟ್ಟುಕೊಡುವುದಿಲ್ಲ. ಲೀಸ್‌ (ಗುತ್ತಿಗೆ) ಕಾಯ್ದೆ ಪ್ರಕಾರ ರೈತರು ತಮಗೆ ಇಷ್ಟವಾದ ಬೆಳೆ ಯನ್ನು ಬೆಳೆಯಬಹುದು. ಅಲ್ಲದೇ ಕೇವಲ ಎಪಿಎಂಸಿಗೆ ಮಾತ್ರ ಮಾರಬೇಕೆಂಬ ನಿರ್ಬಂಧ ಇಲ್ಲ. ರೈತನಿಗೆ ತನ್ನ ಉತ್ಪನ್ನದ ಮೇಲೆ ಸಂಪೂರ್ಣ ಅಧಿಕಾರ ಇರಲಿದೆ. ಬೆಳೆಯ ಬೆಲೆಯನ್ನು ಅವನೇ ನಿರ್ಧರಿಸುವ ಅಧಿಕಾರ ಇರಲಿದೆ. ಕೇಂದ್ರ ಸರಕಾರ ಈಗಾಗಲೇ ದೇಶದ ರೈತರಿಗೆ ನೀಡಿರುವ ಭರವಸೆಯಂತೆ ಈ ಕಾಯ್ದೆಗಳು 2022ಕ್ಕೆ ರೈತರ ಆದಾಯ ದ್ವಿಗುಣಗೊಳಿಸಲಿವೆ.

ಮೂರು ಕಾಯ್ದೆಗಳು ಕಾರ್ಪೋರೆಟ್‌ ಕಂಪೆನಿಗಳ ಪರವಾಗಿವೆ ಎಂಬ ಆರೋಪ ಇದೆ. ಎಂಎನ್‌ಸಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶವೇನಾದರೂ ಇದೆಯೇ?
ಈ ಕಾಯ್ದೆಗಳು ರೈತರನ್ನು ಸಬಲೀಕರಣಗೊ ಳಿಸುವ ಉದ್ದೇಶ ಹೊಂದಿವೆ. ರೈತರು ಖಾಸಗಿ ಸಂಸ್ಥೆಗಳೊಂದಿಗೆ ತಾವು ಬಯಸಿದರೆ ಮಾತ್ರ ವ್ಯಾಪಾರ ಮಾಡಬಹುದು. ಅವರಿಗೆ ಖಾಸಗಿ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಯಾವುದೇ ಕಡ್ಡಾಯ ನಿಯಮವಿಲ್ಲ. ಮಾರುಕಟ್ಟೆ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದೇ ಕೃಷಿ ಕ್ಷೇತ್ರ ಹಿಂದುಳಿಯಲು ಕಾರಣವಾಗಿದೆ. ದೇಶದಲ್ಲಿ 1 ಸಾವಿರ ಸ್ಟಾರ್ಟ್‌ಅಪ್‌ಗ್ಳು ಯುವ ತಂತ್ರಜ್ಞ ಪದವೀಧರರಿಂದ ಆರಂಭವಾಗಿವೆ. ಸುಮಾರು 20 ಸಾವಿರ ಅಗ್ರಿ ಕ್ಲಿನಿಕ್‌ಗಳನ್ನು ಅಗ್ರಿಕಲ್ಚರ್‌ ಪದವೀ ಧರರೇ ಆರಂಭಿಸಿದ್ದಾರೆ. ನಾವು ಹಿಂದೆಂದಿಗಿಂತ ಈಗ ಹೊಸ ಸುಧಾರಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಇದು ರೈತರಿಗೆ ಹೆಚ್ಚು ಅನುಕೂಲ.

ಈ ಕಾಯ್ದೆಗಳ ಮೂಲಕ ನಾವು ರೈತರಿಗೆ ಹೆಚ್ಚಿನ ಆಯ್ಕೆ ಒದಗಿಸಿ ಕೊಡುತ್ತಿದ್ದೇವೆ. ರೈತರಿಗೆ ಎಪಿಎಂಸಿ ವ್ಯವಸ್ಥೆ ಸರಿಯಾಗಿದೆ ಎಂದು ಅನಿಸಿದರೆ ಅಲ್ಲಿಯೇ ಮಾರಾಟ ಮಾಡಬಹುದು. ಒಂದು ವೇಳೆ ರೈತರು ಖಾಸಗಿ ಕಂಪೆನಿಗೆ ಮಾರಾಟ ಮಾಡಲು ಬಯಸಿ ದರೆ ಅಲ್ಲಿಯೂ ಮಾರಾಟ ಮಾಡಬಹುದು. ಈ ಕೃಷಿ ಕಾಯ್ದೆಗಳು ರೈತರಿಗೆ ಆಯ್ಕೆಯ ಅವಕಾಶ ನೀಡಿ ಅವರನ್ನು ಸಬಲೀಕರಣಗೊಳಿಸಿವೆ.

ರೈತರು ದೇಶದ ಯಾವ ಭಾಗದಲ್ಲಿಯಾದರೂ ಮಾರಾಟ ಮಾಡಲು ಯಾವುದೇ ನಿರ್ಬಂಧ ಇಲ್ಲದಿ ರುವುದರಿಂದ ಪಕ್ಕದ ರಾಜ್ಯಗಳಲ್ಲಿಯೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ, ಅಂತಾರಾಜ್ಯ ವ್ಯಾಪಾರ ವೃದ್ಧಿಗೊಳಿಸಬಹದು. ಕೇಂದ್ರ ಸರಕಾರ ಕೂಡ ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ. ಘೋಷಣೆ ಮಾಡಿದೆ. ಈ ಅನುದಾನವನ್ನು ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ ಬಳಕೆ ಮಾಡಲಾ ಗುತ್ತದೆ. ಕೃಷಿ ಉತ್ಪನ್ನ ಸಂಗ್ರಹಾಗಾರಗಳು, ವಿಯರ್‌ಹೌಸ್‌, ಶೀತಲಗೃಹಗಳ ಅಭಿವೃದ್ಧಿಗೆ ಬಳಸಲಾ ಗುವುದು. ಅಲ್ಲದೇ ರೈತರಿಗೆ ಪರ್ಯಾಯ ಆದಾಯ ಹೆಚ್ಚಿಸಲು ಪಶು ಸಂಗೋಪನೆ ಮತ್ತು ಮೀನುಗಾರಿಕೆಗೆ ಅನುದಾನ ನೀಡಲಾಗುವುದು.

ಕೇಂದ್ರದ ಕಾಯ್ದೆಗಳು ರೈತ ಪರವಾಗಿವೆ ಎಂದಾ ದರೆ, ಅದನ್ನು ರೈತರಿಗೆ ಮನವರಿಕೆ ಮಾಡಿಕೊ ಡುವಲ್ಲಿ ಕೇಂದ್ರ ಸರಕಾರ ವಿಫ‌ಲ­ವಾಗಿದೆಯೇ?
ರೈತರ ಕೊಡುಗೆ ಮತ್ತು ಅವರ ಜಾಣ್ಮೆಯನ್ನು ಯಾರೂ ನಿರ್ಲಕ್ಷ್ಯ ಮಾಡುವಂತಿಲ್ಲ. ವಿಪಕ್ಷ ನಡೆಸಿದ ಪ್ರತಿಭಟನೆಯಲ್ಲಿ ನಿಜವಾದ ರೈತರು ಭಾಗವಹಿಸಿಲ್ಲ. ರೈತರ ಹೆಸರಿನಲ್ಲಿ ಗಿಮಿಕ್‌ ಮಾಡಲು ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿರುವುದಕ್ಕೆ ಕಾಂಗ್ರೆಸ್‌ನವರಿಗೆ ನಾಚಿಕೆ ಆಗಬೇಕು. ಅವರು ಯಾಕೆ ರೈತರ ಪರ ನಿಲ್ಲು ವ ಬದಲು ಏಕಸ್ವಾಮ್ಯ ವ್ಯವಸ್ಥೆಯ ಪರವಾಗಿ ದೆ?

ಈ ವಿಚಾರದಲ್ಲಿ ನಾವೂ ರೈತರ ಅಭಿಪ್ರಾಯ ಪಡೆದಿದ್ದೇವೆ. ದೇಶಾದ್ಯಂತ ರೈತರು ಈ ಕಾಯ್ದೆಗಳ ಬಗ್ಗೆ ಖುಷಿಯಾಗಿದ್ದಾರೆ. ಈ ಕಾಯ್ದೆಗಳು ಕೃಷಿ ಕ್ಷೇತ್ರದಲ್ಲಿ ನಿಧಾನವಾಗಿ ಹೊಸ ಬದಲಾವಣೆಯನ್ನು ತರಲಿವೆ. ಅಗ್ರಿಟೆಕ್‌ ಸ್ಟಾರ್ಟ್‌ಅಪ್‌ಗ್ಳ ಮೂಲಕ ರೈತರು ತಮ್ಮ ವ್ಯವಹಾರಗಳನ್ನು ಮಾಡಲು ಆರಂಭಿ ಸಿದ್ದಾರೆ. ಸರಕಾರ ಕೂಡ ಕೃಷಿ ಕ್ಷೇತ್ರದ ಮೂಲ ಸೌಕರ್ಯ ಹೆಚ್ಚಳಕ್ಕೆ ಆದ್ಯತೆ ನೀಡುತ್ತಿದೆ. ಈಗ ನಿಧಾ ನವಾಗಿ ರೈತರ ಆದಾಯ ಹೆಚ್ಚಾಗುತ್ತಿದ್ದು, ಅವರ ಜೀವನಮಟ್ಟವೂ ಮೇಲ್ದರ್ಜೆಗೇರುತ್ತಿದೆ. ರೈತ ಸಹೋದರ ಸಹೋದರಿಯರಿಗೆ ನಮ್ಮ ಬಾಗಿ ಲುಗಳು ಯಾವಾಗಲೂ ತೆರೆದಿರುತ್ತವೆ. ನಾವು ಅವ ರಿಗೆ ಯಾವಾಗಲೂ ತಲೆಬಾಗುತ್ತೇವೆ. ಈ ಕಾಯ್ದೆ ಗಳನ್ನು ಅವರ ಅನುಕೂಲಕ್ಕಾಗಿ ಮಾಡಲಾಗಿದೆ. ಅವರೇ ಆತ್ಮ ನಿರ್ಭರದ ದೊಡ್ಡ ಕೊಡುಗೆ ದಾರರು.

ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಯಾಕೆ ಜಂಟಿ ಸಲಹಾ ಸಮಿತಿಗೆ ಕಾಯ್ದೆಯನ್ನು ನೀಡಲಿಲ್ಲ?
ಈ ವಿಷಯ ಸಂಸತ್ತಿನ ಕೃಷಿ ಸ್ಥಾಯಿ ಸಮಿತಿಯಲ್ಲಿ ಹಲವು ವರ್ಷಗಳ ಹಿಂದೆಯೇ ಚರ್ಚೆಯಾಗಿದೆ. ಆ ಮೇಲೆ ನಾವು ಸಾಕಷ್ಟು ಚರ್ಚೆ ಮಾಡಿದ್ದೇವೆ. ಸಂಸತ್ತು ನಡೆದಿರುವ ಅವಧಿಯನ್ನೇ ಗಮನಿಸಿ. 60 ಗಂಟೆ ಚರ್ಚೆ, 2300 ಪ್ರಶ್ನೋತ್ತರ, 70 ಶೂನ್ಯ ವೇಳೆಯಲ್ಲಿ ತಡರಾತ್ರಿವರೆಗೂ ಸಂಸತ್ತಿನಲ್ಲಿ ಚರ್ಚೆಯಾಗಿದೆ. ಅನೇಕ ರಾಜಕೀಯ ಪಕ್ಷಗಳು ಈ ವಿಷಯದ ಮೇಲೆ ಚರ್ಚೆ ನಡೆಸಿವೆ.
ದೇಶದ ಬೆನ್ನೆಲುಬಾಗಿರುವ ರೈತರು 1.3 ಶತಕೋಟಿ ಜನರಿಗೆ ಆಹಾರ ಉತ್ಪಾದನೆ ಮಾಡುತ್ತಿ ದ್ದಾರೆ. ಆದರೆ ಆಡಳಿತ ನಡೆಸಿರುವ ಸರಕಾರಗಳ ನಕಾರಾತ್ಮಕ ಧೋರಣೆಯಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ನಾವು ಮಧ್ಯವರ್ತಿಗಳು ಮತ್ತು ಶ್ರೀಮಂತ ರೈತರ ಪರವಾಗಿರುವ ವ್ಯವಸ್ಥೆ ಯನ್ನು ತೆಗೆದುಹಾಕಲು ಭರವಸೆ ನೀಡಿದ್ದೇವೆ.

ಕಾರ್ಪೋರೆಟ್‌ ಕಂಪೆನಿಗಳು ರೈತರಿಗೆ ವಂಚನೆ ಮಾಡಿದರೆ, ರೈತರ ಹಿತ ಕಾಯುವವರು ಯಾ ರು? ಅದಕ್ಕೇ ಕಾನೂನು ಮಾಡಿದ್ದೀರಾ?
ಅದು ಸಂಸತ್ತಿನಲ್ಲಿ ಒಪ್ಪಿಗೆ ಪಡೆದಿರುವ ತಿದ್ದುಪಡಿ ಕಾಯ್ದೆಯ­ಲ್ಲಿಯೇ ಇದೆ. ಕೃಷಿ ಒಪ್ಪಂದದಲ್ಲಿ ಎರಡೂ ಕಡೆಯ ವ್ಯಕ್ತಿಗಳು ಒಪ್ಪಿಕೊಂಡ ಅನಂತರ ವೇ ವ್ಯವಹಾರಕ್ಕೆ ಅವಕಾಶ ದೊರೆಯಲಿದೆ. ವ್ಯಾಜ್ಯ ಗಳನ್ನು ಬಗೆಹರಿಸಲು ಎರಡೂ ಕಡೆಯ ವ್ಯಕ್ತಿಗಳ ನ್ನೊಳಗೊಂಡ ರಾಜಿ ಮಂಡಳಿ ರಚನೆ ಮಾಡ ಲಾಗುತ್ತದೆ. ಏನೇ ವ್ಯಾಜ್ಯಗಳು ಉಂಟಾದರೂ ರಾಜಿ ಮಂಡಳಿಗೆ ಕಳುಹಿಸ­ಲಾಗುತ್ತದೆ. ಆ ಮಂಡಳಿ ಎರಡೂ ಕಡೆಯ ವ್ಯಕ್ತಿಗಳನ್ನು ಕುಳಿತುಕೊಳಿಸಿ ರಾಜಿ ಮಾಡುವ ಕೆಲಸ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ರೈತರ ಹಿತ ಕಾಯಲು ಸರಕಾರ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಿದೆ. ಅಲ್ಲದೇ ರೈತರಿಗೆ ಅನ್ಯಾಯವಾಗಲು ಅವಕಾಶವಿಲ್ಲ.

ಶಂಕರ ಪಾಗೋಜಿ

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2024-Merge

Rewind 2024: ಸರಿದ 2024ರ ಪ್ರಮುಖ 24 ಹೆಜ್ಜೆ ಗುರುತು

Amber-1

ಬೆಲೆ ಬಾಳುವ ಅಪರೂಪದ ಅಂಬರ್‌ ಗ್ರೀಸ್‌ನ ಚಿದಂಬರ ರಹಸ್ಯವೇನು ಗೊತ್ತಾ?

China

ಚೀನ ಸರಕಾರದ ವಿರುದ್ಧ ಸೊಲ್ಲೆತ್ತಿದರೆ ಮಾಯಾ

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.