Language identity: ಭಾಷಾ ಅಸ್ಮಿತೆ ಎಂಬ ಭಾವಲೋಕ


Team Udayavani, Oct 12, 2023, 11:17 AM IST

tdy-5

ತಾಯ್ತನಕ್ಕೂ ತಾಯ್ನುಡಿಗೂ ನೇರವಾದ ನಂಟಿದೆ. ಮಗು ಭಾಷೆಯನ್ನು ಕಲಿ ಯುವುದೇ ತನ್ನ ತಾಯಿಯ ಒಡನಾಟದ ಮೂಲಕ. ಆದರೆ ಭಾಷಾಬಹುತ್ವದ ಆಧುನಿಕ ಕಾಲದಲ್ಲಿ ತಾಯ್ನುಡಿಯೊಂದಿಗಿನ ನಮ್ಮ ನಂಟನ್ನು, ಅದರ ಸ್ವರೂಪವನ್ನು ಸ್ಪಷ್ಟಪಡಿಸಿಕೊಳ್ಳಬೇಕಾದ ಅನಿವಾರ್ಯತೆಯೂ ನಮ್ಮ ಮುಂದಿದೆ.

ಯಾವುದೇ ಭಾಷೆ ಜೀವಂತವಾಗಿರಲು ಮಾತು ಮತ್ತು ಬರಹ ಅವಶ್ಯ. ಮಣ್ಣು ಮತ್ತು ಭಾಷೆಗೆ ಭಾವುಕತೆ ಬಹು ಬೇಗನೆ ಅಂಟಿಕೊಂಡು ಬಿಡುತ್ತದೆ. ಸಾಮಾನ್ಯವಾಗಿ ನಾವು ನಮ್ಮ ತಾಯ್ನುಡಿಯ ಬಗ್ಗೆ ಅಪಾರವಾದ ಒಲವನ್ನು ಹೊಂದಿರುತ್ತೇವೆ. ಆದರೆ ನಾವೀಗ ಕನ್ನಡದ ಬಗೆಗೆ ಅಂದಿನ ಒಲವು ಹಾಗೂ ಆತ್ಮೀಯತೆಯನ್ನು ಹೊಂದಿಲ್ಲವೆಂಬುದೂ ವಿಷಾದದ ಸಂಗತಿ. ನಮ್ಮ ಪಾರಂಪರಿಕ ಸಂಪತ್ತನ್ನು ಉಳಿಸಿಕೊಳ್ಳಲು ಭಾಷೆಯಷ್ಟು ಪರಿಣಾಮಕಾರಿ ಯಾದ ಉಪಕರಣ ಮತ್ತೂಂದಿಲ್ಲ. ಶಿಕ್ಷಣದಲ್ಲಿ ತಾಯ್ನುಡಿಗೆ ಪ್ರಾಮುಖ್ಯವಿರಬೇಕಾದುದು ಅತ್ಯ ಗತ್ಯ. ಮಾತೃಭಾಷಾ ಶಿಕ್ಷಣವು ವಿಷಯ ವನ್ನು ಮನಸ್ಸಿಗೆ ನಾಟಿಸಲು, ಸೃಜನ ಶೀಲತೆಯನ್ನು ಅರಳಿಸಲು ಸಹಕಾರಿ.    ಹಿಂದೆ ಬಳಕೆಯಲ್ಲಿದ್ದ ಅದೆಷ್ಟೋ ಭಾಷೆಗಳು ಇಂದು ಜಗತ್ತಿನಿಂದಲೇ ಕಣ್ಮರೆಯಾಗಿ ಹೋಗಿವೆ. ತಜ್ಞರ ಪ್ರಕಾರ, ಪ್ರತೀ ವಾರವೂ ಸುಮಾರು ಎರಡು ಭಾಷೆಗಳು ಕಣ್ಮರೆಯಾಗು ತ್ತಿವೆ. ಹೀಗೆ ನುಡಿಯ ಮರಣ ಒಂದು ಸಮುದಾಯದ ಅದುವರೆಗಿನ ಬದುಕು, ಸಾಧನೆಗಳ ಕುರುಹನ್ನೇ ನಿರ್ನಾಮವಾಗಿಸುತ್ತದೆ. ಯಾವುದೇ ಭಾಷೆಯಾಗಲೀ ಅಥವಾ ಸಾಹಿತ್ಯವಾಗಲೀ ಬೆಳೆಯಲು ಅನ್ಯಭಾಷಾ ಸಂಸರ್ಗ ಅಗತ್ಯ. ನಮ್ಮ ಕನ್ನಡವೂ ಇದಕ್ಕೆ ಹೊರತಾಗಿಲ್ಲ. ಅನ್ಯಭಾಷೆಯನ್ನು ಆಶ್ರಯಿಸುವುದರ ಮೂಲಕ ಭಾಷೆಯೊಂದು ತನ್ನ ಒಡಲನ್ನು ತುಂಬಿಕೊಳ್ಳುತ್ತದೆ. ಹಾಗೆಯೇ ಕನ್ನಡವೂ ಪೂರ್ವದಲ್ಲಿ ಸಂಸ್ಕೃತ, ಪ್ರಾಕೃತಗಳಿಂದಲೂ, ಅನಂತರ ಮರಾಠಿ, ಹಿಂದೂಸ್ಥಾನಿ, ಪೋರ್ಚುಗೀಸ್‌ ಮೊದಲಾದ ಭಾಷೆ ಗಳ ಸಂಸರ್ಗದ ಮೂಲಕ ಬೆಳೆದು ಬಂದಿದೆ. ಹೊಸತನ್ನು ಸೇರಿಸಿಕೊಂಡು ಬೆಳೆಯುವುದು ಯಾವುದೇ ಜೀವಂತ ಭಾಷೆಯ ಲಕ್ಷಣವೂ ಹೌದು.            ಜನರ ನುಡಿಗಳಲ್ಲಿ ಅನ್ಯಭಾಷಾ ಪದಗಳು ಅಪ್ರಜ್ಞಾಪೂರ್ವಕವಾಗಿ ನುಸುಳುತ್ತವೆ. ಕೊನೆಗೊಮ್ಮೆ ಅವು ಅನ್ಯಭಾಷಾ ಪದಗಳು ಎಂಬ ಸಂದೇಹಕ್ಕೂ ಎಡೆ ಇಲ್ಲದಂತೆ ನಮ್ಮ ಬದುಕಿನ ಭಾಗವಾಗಿ ಬಿಡುತ್ತವೆ. ಕನ್ನಡವನ್ನು ಅಚ್ಚಗನ್ನಡವನ್ನಾಗಿ ಉಳಿಸುವ ಪ್ರಯತ್ನಗಳು ಎಲ್ಲ ಕಾಲ ದಲ್ಲಿಯೂ ನಡೆದಿವೆ. ಆದರೆ ಅವೆಲ್ಲ ವನ್ನೂ ಮೀರಿ ಭಾಷೆಯು ಬೆಳೆ ಯುತ್ತದೆ. ಅಂತೆಯೇ ಕನ್ನಡವೂ ಸಹ ಶುದ್ಧ-ಅಶುದ್ಧತೆಗಳ ಮಡಿವಂತಿಕೆ ಯನ್ನು ಬದಿಗೊತ್ತಿ ಬೆಳೆದಿದೆ.

ಇಂದು ವಿವಿಧ ಭಾಷೆಗಳ ಪದಗಳು ಕನ್ನಡದಲ್ಲಿ ಸೇರಿ ಹೋಗಿವೆ. ಅವು ಕನ್ನಡದ ಮನಸುಗಳನ್ನು ಪೋಷಿಸಿವೆ. ಆದರೆ ಅನ್ಯಭಾಷೆಯ ಬಗೆಗಿನ ಕನ್ನಡದ ಈ ಸ್ವಭಾವವೇ ಅದಕ್ಕೆ ಮಾರಕವಾಗದಂತೆ ಎಚ್ಚರ ವಹಿಸ ಬೇಕಾಗಿದೆ. ಈ ಅನ್ಯಭಾಷಾ

ಮೋಹವೇ ಸ್ವಭಾಷೆಗೆ ಮುಳು ವಾಗುವ ಸಾಧ್ಯತೆಯಿದೆ. ಕನ್ನಡದ ಮನಸ್ಸುಗಳು ಜಾಗೃತಗೊಂಡು ಬದುಕಿನ ಓಟದಲ್ಲಿ ನಮ್ಮ ತಾಯ್ನುಡಿಯನ್ನು ಸಾಕಾರಗೊಳಿಸಿ ಕೊಳ್ಳಬೇಕಾಗಿದೆ. ಏಕೆಂದರೆ ನಮ್ಮ ಮಾತೃಭಾಷೆಯ ಒಳಗೆ ನಮಗೇ ತಿಳಿಯದಂತೆ ನಿತ್ಯವೂ ಪರಿವರ್ತನೆಗಳಾಗಿವೆ ಹಾಗೂ ಆಗುತ್ತಲೇ ಇರುತ್ತವೆ.

ಒಟ್ಟಿನಲ್ಲಿ “ತಾಯ್ನುಡಿ’ ಅಥವಾ “ಮಾತೃಭಾಷೆ’ ಎನ್ನುವುದು ಭಾಷೆ ಮತ್ತು ಭಾಷಿಕರ ನಡುವಿನ ಸಂಬಂಧ. ತಾಯಿ ಮತ್ತು ಮಗುವಿನ ಸಂಬಂಧದಷ್ಟೇ ಜೀವಂತವಾದುದು ಹಾಗೂ ಸೃಷ್ಟಿಶೀಲವಾದುದು ಎಂಬುದನ್ನು ಸೂಚಿಸುತ್ತದೆ. ಭಾಷೆ ಯು ಕೇವಲ ಸಂವಹನದ ಮಾಧ್ಯ ಮವಲ್ಲ; ಅದು ಪರಸ್ಪರ ಸಾಂಸ್ಕೃತಿಕ ಸಂಬಂಧವನ್ನು ಬೆಸೆಯುವ ಅರಿವಿನ ವಿಸ್ತಾರವೂ ಹೌದು.

ಭಾಷೆ ಎನ್ನುವುದು ಸಮಾಜ ವಿಜ್ಞಾ ನಿಗಳು ಭಾವಿಸುವಂತೆ ನಮ್ಮ ಅಸ್ಮಿತೆ ಹೌದಾದರೆ, ನಾವೇ ಭಾಷೆಯನ್ನು ಆಯ್ದುಕೊಂಡರೂ ಅಥವಾ ಭಾಷೆ ಯೇ ನಮ್ಮನ್ನು ಆಯ್ದುಕೊಂಡರೂ ಒಂದಂತೂ ನಿಜ; ಬದುಕಿನ ಭಾಗ ವಾಗದ ಹೊರತು ಯಾವ ಭಾಷೆಯೂ ನಮ್ಮದಾಗುವುದಿಲ್ಲ!

-ಡಾ| ಮೈತ್ರಿ ಭಟ್‌, ವಿಟ್ಲ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.