ಗಾಂಧೀಜಿಯನ್ನು ಸ್ಮರಿಸುವ ನೆಪದಲ್ಲಿ ಮತ್ತೆ ಕಲಿಯಬೇಕಾದ ಪಾಠಗಳು
ಪ್ರಾಮಾಣಿಕತೆ- ಸರಳತೆ- ಸ್ವಚ್ಛತೆ
Team Udayavani, Oct 2, 2019, 5:09 AM IST
ಗಾಂಧೀಜಿ ಅವರ 150ನೇ ಹುಟ್ಟು ವರ್ಷದಲ್ಲಿ ರಾಷ್ಟ್ರವ್ಯಾಪಿಯಾಗಿ ಚರ್ಚಿತವಾಗುತ್ತಿರುವ ಹಾಗೂ ಕಾರ್ಯಗತಗೊಳಿಸಬೇಕಾದ ಪ್ರಮುಖ ಹೆಜ್ಜೆಗಳೆಂದರೆ ಸ್ವಚ್ಚತೆ, ಸರಳತೆ ಮತ್ತು ಪ್ರಾಮಾಣಿಕತೆ. ಮೋದಿ ಅವರು 2014 ಅಕ್ಟೋಬರ್ 2ರಂದು ಮೊದಲ ಬಾರಿಗೆ ಪ್ರಧಾನಿ ಹುದ್ದೆ ಸ್ವೀಕರಿಸಿದ ಸಂದರ್ಭದಲ್ಲಿ ಮಾಡಿದ ಪ್ರಮುಖ ಘೋಷಣೆ ಅಂದರೆ ಗಾಂಧೀಜಿಯ ಕಾಯಕದ ಪರಿಕಲ್ಪನೆಯ ಸ್ವತ್ಛತೆ ಇದರ ಸಂಕೇತವಾಗಿ ರಾಷ್ಟ್ರವ್ಯಾಪಿಯಾಗಿ ಬಹು ಸುದ್ದಿ ಮಾಡಿದ ಪದವೆಂದರೆ ಸ್ವಚ್ಛತೆ.
ಈ ಶತಮಾನದ ಮಹಾನ್ ಚೇತನ, ಅನಿಕೇತನ, ಮಾನವ ಕುಲದ ಮಹಾತ್ಮ, ದೇಶದ, ಸಮಾಜದ ಉದ್ಧಾರಕ, ಭಾರತದ ಕೋಟಿ ಕೋಟಿ ಜನಗಳ ನೋವನ್ನು, ಸಂಕಟವನ್ನು, ದಾರುಣ ದುಃಖವನ್ನು ಸ್ವಯಂ ಅನುಭವಿಸಿ ಗುಲಾಮಗಿರಿಯಿಂದ ಮುಕ್ತಿಗೊಳಿಸಿದ ರಾಷ್ಟ್ರಿಪಿತ, ವಿಶ್ವಪಿತ ಮಹಾತ್ಮ ಗಾಂಧೀಜಿ ಅವರ 150ನೇ ವರ್ಷದ ಆಚರಣೆಯ ಹೊಸ್ತಿಲಲ್ಲಿ ನಾವಿದ್ದೇವೆ.
ಗಾಂಧೀಜಿ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ ಇದೆಯೇ ಎಂಬ ಕುರಿತು ರಾಷ್ಟ್ರೀಯ ವಾಹಿನಿಯೊಂದು ಅಭಿಪ್ರಾಯ ಸಂಗ್ರಹಿಸಿತ್ತು. ಈ ಸಂದರ್ಭದಲ್ಲಿ ಮೂಡಿ ಬಂದ ಫಲಿತಾಂಶ ಅತ್ಯಂತ ಆಶ್ಚರ್ಯಕರವಾಗಿತ್ತು. ಸುಮಾರು ಶೇ. 45ರಷ್ಟು ಮಂದಿ ಗಾಂಧೀಜಿ ಇಂದಿಗೂ ಪ್ರಸ್ತುತರು ಎಂದು ಮತ ಚಲಾಯಿಸಿದರೆ ಶೇ. 55ರಷ್ಟು ಮಂದಿ ಗಾಂಧೀಜಿಯವರ ಪ್ರಸ್ತುತತೆಯ ಪ್ರಶ್ನೆಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದಿರುವುದು ಕಂಡು ಬಂತು. ಇದೇ ವಾಹಿನಿಯ ಕಾರ್ಯಕ್ರಮ ನಿರೂಪಕರ ಮಾತು ಇನ್ನಷ್ಟು ಚಿಂತನೆಗೆ ಗ್ರಾಸವಾಗುವಂತಿತ್ತು. ಅದೇನೆಂದರೆ “Familiarities not knowledge’. “ಗೊತ್ತಿದೆ ಅಂದ ಮಾತ್ರಕ್ಕೆ ಅರ್ಥಮಾಡಿಕೊಂಡಿದ್ದೇವೆ ಎಂದು ಅರ್ಥವಲ್ಲ’ ಇದು ಗಾಂಧೀಜಿಯನ್ನು ತಿಳಿದುಕೊಂಡ ನಮಗೂ ಅನ್ವಯಿಸತಕ್ಕ ಮಾತು.
ಗಾಂಧೀಜಿ ಅವರ 150ನೇ ಹುಟ್ಟು ವರ್ಷದಲ್ಲಿ ಇಂದು ರಾಷ್ಟ್ರವ್ಯಾಪಿಯಾಗಿ ಚರ್ಚಿತವಾಗುತ್ತಿರುವ ಹಾಗೂ ಕಾರ್ಯಗತಗೊಳಿಸಬೇಕಾದ ಪ್ರಮುಖ ಹೆಜ್ಜೆಗಳೆಂದರೆ ಸ್ವಚ್ಚತೆ, ಸರಳತೆ ಮತ್ತು ಪ್ರಾಮಾಣಿಕತೆ. ಪ್ರಧಾನಿ ನರೇಂದ್ರ ಮೋದಿ ಅವರು 2014 ಅಕ್ಟೋಬರ್ 2ರಂದು ಮೊದಲ ಬಾರಿಗೆ ಪ್ರಧಾನಿ ಹುದ್ದೆ ಸ್ವೀಕರಿಸಿದ ಸಂದರ್ಭದಲ್ಲಿ ಮಾಡಿದ ಪ್ರಮುಖ ಘೋಷಣೆ ಅಂದರೆ ಗಾಂಧೀಜಿಯ ಕಾಯಕದ ಪರಿಕಲ್ಪನೆಯ ಸ್ವತ್ಛತೆ ಇದರ ಸಂಕೇತವಾಗಿ ರಾಷ್ಟ್ರವ್ಯಾಪಿಯಾಗಿ ಬಹು ಸುದ್ದಿ ಮಾಡಿದ ಪದವೆಂದರೆ ಸ್ವತ್ಛತೆ. ಪ್ರಧಾನಿ ಮೋದಿಯವರೇ ಸ್ವತಃ ಪೊರಕೆ ಹಿಡಿದು ಸ್ವತ್ಛತಾ ಆಂದೋಲನಕ್ಕೆ ಚಾಲನೆ ನೀಡಿದರು. ಅಂತು ದಿಲ್ಲಿಯಿಂದ ಹಿಡಿದು ಹಳ್ಳಿಯ ತನಕ ಸ್ವಚ್ಛತೆ, ಪೊರಕೆಯ ಸಪ್ಪಳ ಸಾಕಷ್ಟು ಸುದ್ದಿ ಮಾಡಿತು. ಸ್ವಚ್ಛತೆಯ ಬಗ್ಗೆ ಮಾತನಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ವೇಗೋತ್ಕರ್ಷ ಪಡೆದಿರುವುದಂತು ಸತ್ಯ. ಸ್ವಚ್ಛತಾ ಕಾರ್ಯದಲ್ಲಿ ಪಕ್ಷ, ಜಾತಿ, ಧರ್ಮ, ಪಂಥ, ವಯಸ್ಸು ಮೀರಿ ಕೈ ಜೋಡಿಸಿರುವುದಂತು ಎಲ್ಲರೂ ಒಪ್ಪಿಕೊಂಡ ಕಾಯಕವೂ ಹೌದು.
ಭಾರತ ಸಂಪೂರ್ಣವಾಗಿ ಸ್ವಚ್ಛ ಭಾರತ ವಾಗಬೇಕೆಂಬ ಸಂಕಲ್ಪ ತೊಟ್ಟಿದ್ದೇವೆ. ಬರೇ ನೆಲ, ಜಲ ಸ್ವಚ್ಛಗೊಳ್ಳುವುದು ಮಾತ್ರವಲ್ಲ ಪ್ರತಿಯೊಬ್ಬ ವ್ಯಕ್ತಿಯ ತನು -ಮನ -ಧನ ಸ್ವಚ್ಛಗೊಳ್ಳಬೇಕು ಅನ್ನುವುದು ನಮ್ಮೆಲ್ಲರ ಬಯಕೆಯೂ ಹೌದು. ಗಾಂಧೀಜಿಯವರ ಕಾಯಕದ ಪರಿಕಲ್ಪನೆಯೊಳಗೆ ಶುಚಿತ್ವ ತತ್ವ ಹೇಗೆ ಅಡಗಿದೆ ಅನ್ನುವುದನ್ನು ನಾವು ಚಿಂತನೆ ಮಾಡಬೇಕಾದ ಪ್ರಮುಖ ಪ್ರಸ್ತುತತೆಯ ವಿಚಾರಗಳು. ಗಾಂಧೀಜಿ ಅವರು ನವಜೀವನ್ ಪತ್ರಿಕೆಯಲ್ಲಿ (02-11-1919) civic sense and sanitation ಲೇಖನದಲ್ಲಿ ಸ್ವಚ್ಛತೆ ಮತ್ತು ಉತ್ತಮ ಅಭ್ಯಾಸ ಹಾಗೂ ಉತ್ತಮ ಆರೋಗ್ಯದ ಸಂಬಂಧವನ್ನು ಕೂಲಂಕಷವಾಗಿ ವಿವರಿಸಿದ್ದಾರೆ. ಸಿಕ್ಕಾಪಟ್ಟೆ, ಬೇಕಾಬಿಟ್ಟಿಯಾಗಿ ಬೀದಿಗಳಲ್ಲಿ ಉಗುಳುವುದು ಸಿಂಬಳ ಸುರಿಯುವುದು ಕೆಟ್ಟ ಅಭ್ಯಾಸ. ಇದೊಂದು ಕೆಟ್ಟ ಚಟ. ಇದೊಂದು ಅಪರಾಧವೆಂದೇ ಭಾವಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ. ಗಾಂಧೀಜಿಯವರ ಮಾತಿನಲ್ಲಿಯೇ ಹೇಳಬೇಕಾದರೆ ಬಾಯಿಯಲ್ಲಿ ತಂಬಾಕು, ಜರ್ದಾ ತಿಂದು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಅಪರಾಧವೆಂದೇ ಗುರುತಿಸಿ ಶಿಕ್ಷಿಸಬೇಕು.
ಹಳ್ಳಿಗಳಲ್ಲಿ ಒಂದೇ ಕೆರೆಯ ನೀರನ್ನು ಹಲವು ಕಾರ್ಯಗಳಿಗೆ ಬಳಸುತ್ತೇವೆ. ಇದರಿಂದಾಗಿ ಹಳ್ಳಿಗಳಲ್ಲಿ ರೋಗರುಜಿನಗಳು ಜಾಸ್ತಿ ಅನ್ನುವುದನ್ನು ಗಾಂಧೀಜಿ ಗಂಭೀರವಾಗಿ ಪರಿಗಣಿಸಿದ್ದಾರೆ. ಗಾಂಧೀಜಿ ಅವರು ನವಜೀವನ್ (24-05-1925)ರ ಪತ್ರಿಕೆಯಲ್ಲಿ, ನಾವು ಕನಿಷ್ಟ ಪಕ್ಷ ಮೂರು ಕಡೆ ಶುಚಿತ್ವ ಕಾಪಾಡಿಕೊಳ್ಳಲೇ ಬೇಕೆಂದು ನೆನಪು ಮಾಡಿದ್ದಾರೆ. 1. ತಿನ್ನುವ ಸ್ಥಳ 2. ಮಲಗುವ ಸ್ಥಳ 3. ಪಾಯಿಖಾನೆ . ಇಲ್ಲಿ ಸ್ವತ್ಛತೆ ಕಾಪಾಡದೇ ಹೋದರೆ ಮಾನಸಿಕ; ದೈಹಿಕ ಆರೋಗ್ಯ ಹಾಳು ಎಂದು ಎಚ್ಚರಿಸಿದ್ದಾರೆ. ಮಾತ್ರವಲ್ಲ ಈ ನಾಗರಿಕ ಸಭ್ಯತೆಯನ್ನು ನಾವು ಪಾಶ್ಚಾತ್ಯರಿಂದ ಕಲಿಯಬೇಕೆಂಬ ಮಾತನ್ನು ಯಾವುದೇ ಸಂಕೋಚವಿಲ್ಲದೆ ನೆನಪಿಸಿರುತ್ತಾರೆ. ನವಜೀವನ್ (13-09-1925) ಪತ್ರಿಕೆಯಲ್ಲಿ “our dirty ways’ ಎಂಬ ಲೇಖನದಲ್ಲಿ ಸ್ವತ್ಛತೆ ಕುರಿತು ಸುಜರ್ಘವಾದ ಅನಿಸಿಕೆಗಳನ್ನು ಮಂಡಿಸಿದ್ದಾರೆ. ಸಿಕ್ಕಿದ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಬಾರದು ಇದಕ್ಕಾಗಿ ಪರ್ಯಾಯ ವ್ಯವಸ್ಥೆಯನ್ನು ರೂಪಿಸಬೇಕೆಂಬ ಸಲಹೆಯನ್ನು ನೀಡಿದ್ದಾರೆ.
ನಿಗದಿತ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿದ ಅನಂತರ ಅದನ್ನು ಮಣ್ಣಿನಿಂದ ಮುಚ್ಚುವ ಕೆಲಸ ಮಾಡಬೇಕು. ಇದನ್ನು ನೀವು ಪ್ರಾಣಿಗಳಿಂದ ಕಲಿಯಬೇಕು. ಹಾಗಾಗಿ ನಮ್ಮ ಪಾಯಿಖಾನೆಗಳನ್ನು ನಾವೇ ಸ್ವತ್ಛಗೊಳಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಇದು ನಮ್ಮ ಕರ್ತವ್ಯವೂ ಹೌದು ಎಂದು ಗಾಂಧೀಜಿ ತಮ್ಮ ಕಾಯಕದಲ್ಲಿಯೇ ನೆನಪಿಸಿಕೊಂಡಿದ್ದಾರೆ. ಹರಿಜನ ಪತ್ರಿಕೆಯಲ್ಲಿ (17-02-1942) ಗಾಂಧೀಜಿ ಒಂದು ಮಾತನ್ನು ಸ್ಪಷ್ಟವಾಗಿ ನಮೂದಿಸಿರುತ್ತಾರೆ. “simplicity helped healthy living’ ಸರಳತೆಯೇ ಆರೋಗ್ಯದ ಬದುಕಿಗೆ ಸಹಾಯಕ. ಇದಕ್ಕಾಗಿ ಅವರು ಕೊಡುವ ಉದಾಹರಣೆಗಳೆಂದರೆ ಮನೆಯ ಒಳಾಂಗಣ ಸೌಂದರ್ಯ ಹಿತಮಿತವಾಗಿರಬೇಕು. ಅನಗತ್ಯವಾದ ಒಳಾಂಗಣ ಸೌಂದರ್ಯದ ಪರಿಕರಗಳು ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಮಾಡುತ್ತದೆ. ಇದರಿಂದಾಗಿ ಒಂದಿಷ್ಟು ಧೂಳು; ರೋಗಾಣುಗಳಿಗೆ ಉಳಿದುಕೊಳ್ಳುವ ಪರಿಸರ ನಿರ್ಮಾಣವಾಗುತ್ತದೆ. ಹಾಗಾಗಿ ಮನೆಯ ಸೌಂದರ್ಯತೆಯನ್ನು ಸರಳತೆಯಿಂದಲೇ ನೋಡಬೇಕೆ ಹೊರತು ಅನಗತ್ಯ ಪರಿಕರಗಳನ್ನು ತುಂಬಿಸುವುದರಿಂದ ಅಲ್ಲ. ಇದು ಇಂದಿಗೂ ಸತ್ಯದ ಮಾತು. ಗಾಂಧೀಜಿ ಅವರ 150ನೇ ವರ್ಷದ ಸಂದರ್ಭದಲ್ಲಿ ನಾವೆಲ್ಲರೂ ನೆನಪಿಸಬೇಕಾದ ಮತ್ತು ಹೆಚ್ಚು ಪ್ರಸ್ತುತತೆಯ ಮಾತೆಂದರೆ ಸರಳತೆ; ಸ್ವಚ್ಛತೆ ಮತ್ತು ಪ್ರಾಮಾಣಿಕತೆ.
ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ; ವಿಡಿಯೋ ನೋಡಿ
Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.