Deepavali ಭರವಸೆಯ ಬೆಳಕ ತೋರಣ ನಳನಳಿಸಲಿ…
Team Udayavani, Nov 14, 2023, 5:20 AM IST
ಅಂಧಕಾರದಲ್ಲಿ ಮುಳುಗಿ ತೊಳ ಲಾಡುತಿಹ ಜಗಕೆ ಜಗಮಗಿಸುವ ಬೆಳಕ ಮೂಲಕ ಕತ್ತಲೆಯನ್ನು ಕಳೆವ ದೀಪಾವಳಿ ಮತ್ತೂಮ್ಮೆ ಬಂದಿದೆ. ಹಬ್ಬಗಳ ಅಚರಣೆಯಲ್ಲಿ ದೀಪಾವಳಿಗೆ ಅಗ್ರ ಸ್ಥಾನ. ಎಲ್ಲೆಲ್ಲೂ ಹಣತೆಗಳ ಸಾಲು ಸಾಲು… ಸಂತಸದ ಹೊನಲು… ಸಂಸ್ಕೃತಿ-ಸಂಭ್ರಮಗಳ ಸಂಗಮ. ಕಾರ್ತಿಕ ಶುಕ್ಲ ಪಾಡ್ಯಮಿಯು ದೀಪಾ ವಳಿ ಎಂಬ ಹೆಸರಿನಿಂದ ಗುರುತಿಸಲ್ಪ ಟ್ಟರೂ ಆಶ್ವಯುಜ ಕೃಷ್ಣ ಚತುರ್ದಶಿ (ನರಕ ಚತುರ್ದಶಿ) ಹಾಗೂ ಅಮಾ ವಾಸ್ಯೆ (ಧನಲಕ್ಷ್ಮೀ ಪೂಜೆ) ಸೇರಿಕೊಂಡು ಮೂರು ದಿನಗಳ ಹಬ್ಬ ಎಲ್ಲೆ ಡೆ ನಡೆಯುತ್ತದೆ. ನಮ್ಮ ತವಕ ಸದಾ ಕತ್ತಲಿನಿಂದ ಬೆಳಕಿನೆಡೆಗೆ ಹೋಗಬೇಕೆಂಬುದು. ಕತ್ತಲಿನ ತಲ್ಲಣ, ಬೆಳಕಿನ ಜೀವನ ಎರಡೂ ನಮಗೆ ಗೊತ್ತು. ಬೆಳಕಿನ ಇರು ವಿಕೆಗೂ ಗೆಲುವಿಗೂ ಕತ್ತಲು ಅನಿವಾರ್ಯ. ಕತ್ತ ಲಿಲ್ಲದ ಬೆಳಕು ಬೆಳಕೇ ಅಲ್ಲ. ಹಾಗೆ ನೋಡಿದಲ್ಲಿ ಕತ್ತಲು ಬೆಳಕಿನ ಛಾಯೆ ಅಷ್ಟೆ.
ಭಾರತೀಯರು ಹಬ್ಬಗಳ ಪ್ರಿಯರು. ಭಾರ ತೀಯ ಸಂಸ್ಕೃತಿಯಲ್ಲಿ ವರ್ಷದ ಪ್ರತೀದಿನ ವನ್ನೂ ಒಂದೊಂದು ಹಬ್ಬವನ್ನಾಗಿ ಆಚರಿಸುವ ಕಾಲ ವಿತ್ತು. ನಮ್ಮ ಇಡೀ ಬದುಕನ್ನೇ ಸಂಭ್ರ ಮಿಸುವ ಮತ್ತು ಹಬ್ಬವಾಗಿಸುವ ಆಲೋ ಚನೆಯೇ ಇದರ ಹಿಂದಿರುವಂಥಹುದು. ಭಾರ ತೀಯ ಪರಂಪರೆ ಯಲ್ಲಿ ದೀಪಕ್ಕೆ ಬಹಳ ಮಹತ್ವದ ಸ್ಥಾನವಿದೆ. ಅದು ಪರ ಬ್ರಹ್ಮದ ಸಂಕೇತ. ದೀಪವು ಬೆಳಕಿನ ಪ್ರತೀಕವೂ ಹೌದು; ಜ್ಞಾನದ ಸಂಕೇತವೂ ಹೌದು. ಅಂತೆಯೇ, ಮನೆ-ಮನೆಯಲ್ಲೂ ಹಚ್ಚುವ ನರುಬೆಳಕು ತನ್ನ ಮಿತಿಯಲ್ಲಿ ಇರುಳ ಕತ್ತಲೆಯನ್ನು ಮೊಗೆದು ಹೊರ ಚೆಲ್ಲುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತದೆ. ಇದು ಕತ್ತಲು-ಬೆಳಕಿನ ಕಣ್ಣಾಮುಚ್ಚಾಲೆ.
ಬೆಳಕು ಜೀವಂತಿಕೆಯ ಸಂಕೇತ. ದೀಪಾ ವಳಿಯ ಹಣತೆಯ ಬೆಳಕಿನಲ್ಲಿ ಹೊರಗೆ ಮಾತ್ರ ಪ್ರಕಾಶಿಸಿದರೆ ಸಾಲದು. ಹೊರಗಿನೊಂದಿಗೆ ನಮ್ಮೊಳಗನ್ನೂ ಬೆಳಕಿನ ನಿಕಷಕ್ಕೊಡ್ಡಬೇಕು. ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿ ನೆಡೆಗೆ ಬದುಕನ್ನು ಸಾಗಿಸುವಂತೆ ಮನದಿ ರಂಗೇ ರಲಿ ಎಂಬುದೇ ಈ ದೀಪಾವಳಿಯ ಆಶಯ.
ಭೂಮಿಯ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಧರೆಯೊಡಲು ಬೆಂಕಿಯಂತೆ ಸುಡು ತ್ತಿದೆ. ಕತ್ತಲನ್ನು ಗೆದ್ದೇ ತೀರುತ್ತೇನೆಂಬ ಮಾನವ ನೆದೆಯ ದಾಹವಿಂದು ಭುವಿಯ ಬೆಂಕಿ ಯಾಗಿಸುತ್ತಿದೆ. ಬೆಳಕೇ ಹೊಸಹುಟ್ಟು; ಬೆಳಕೇ ಭಾವದೀಪ್ತ ಎಂದು ಮತ್ತೆ ಮತ್ತೆ ನೆನಪಿಸುವ ಬೆಳಕಿನೊಲುಮೆಯ ಮೂಲಕ ಮನುಜ ನೆದೆಯ ಸಿಂಗರಿಸುವ ಕುಡಿ ಬೆಳಕಿನಲ್ಲಿ ಮನವ ನವಿರಾಗಿಸಿ ಸಿಂಗರಿಸುವ ದೀಪಾವಳಿ ಬೆಳಕಿನ ಒಲುಮೆಯ ಹರಡಲು ಭಾವ ದೀಪ್ತಿಯಲಿ ಸಿಂಗರಿಸಿ ನಿಂತಿದೆ.
ಬದುಕಿನ ಒತ್ತಡ, ನಾಗಲೋಟದ ಮಧ್ಯೆ ಮನವ ಗರಿಗೆದರಿಸಿ ಮುಂದಿನ ಪಯಣಕೆ ಉತ್ಸಾಹ ತುಂಬಿ ಚೈತನ್ಯದ ಸೆಲೆಯಲ್ಲಿ ಮುಳು ಗೇಳಿಸಬಲ್ಲ ಸಾಮರ್ಥ್ಯ ಈ ದೀಪಾವಳಿಗಿದೆ. ಮನೆಯಂಗಳದಿ ಸಾಲು ಸಾಲಾಗಿ ಬೆಳಗುವ ಹಣತೆ, ಆಕಾಶಬುಟ್ಟಿಯ ಬೆಳಕ ರಂಗೋಲಿ, ಮನದೊಳಗಿನ ಸಂಭ್ರಮ ಎಲ್ಲವೂ ಜತೆ ಸೇರಿದಾಗ ದೀಪಾವಳಿ ಹಬ್ಬ ಕಳೆಗಟ್ಟಿ ನಲಿಯು ವುದು. ಮನದ ಬೇಸರವ ಮರೆಯಲು, ಏಕತಾ ನತೆಯಿಂದ ಹೊರಬರಲು ಈ ಬೆಳಕ ಹಬ್ಬ ನಾಂದಿಯಾಗುವುದು.
ಜಗತ್ತು ಬೆಳಕಿನಲ್ಲಿದೆ ಎಂಬ ಭ್ರಮೆಯಿಂದ ಕತ್ತಲಿನಲ್ಲಿ ಮುಳುಗೇಳುತ್ತಿರುವ ಮತಧರ್ಮದ ಹೆಸರಿನಲ್ಲಿ ಮನುಜರ ನಡುವೆ ದ್ವೇಷ, ಸೇಡಿನ ಅಂಧಕಾರದ ಕಂದಕ ಮೂಡಿ ನಂಬಿಕೆ, ಜೀವ ಪ್ರೀತಿ ಮರೆಯಾಗುತ್ತಿರುವ ಪ್ರಸ್ತುತ ಸನ್ನಿವೇ ಶದಲ್ಲಿ ಮನುಜ ತನ್ನತನವ ಮರೆತು ಯಾವುದೇ ಮೌಲ್ಯಗಳಿಲ್ಲದೆ ಸಾಗುತ್ತಿರುವಾಗ ಅಂತರಂಗವ ಬೆಳಗಲು ಬೆಳಕು ಬೇಕು. ನಮ್ಮ ಅಂತರಂಗದ ಕೊಳೆ ತೊಳೆದು ಅಂತರಾಳಕ್ಕೆ ಶೋಭೆಯನ್ನು ನೀಡುವ ಕಾರ್ಯಕ್ಕೆ ನಾವಿಂದು ಮುಂದಾ ಗಲೇಬೇಕು. ಜಗತ್ತನ್ನು ಕವಿದು ಕಾಡುತ್ತಿರುವ ಗೋಜಲುಗಳಿಂದ ಹೊರ ಬರಲೇಬೇಕು.
ಕತ್ತಲು ಚಿಂತನೆಗೆ ಅವಕಾಶ ನೀಡುತ್ತದೆ; ಕತ್ತಲಿನ ತಿರಸ್ಕಾರ ಸಲ್ಲದು. ಕತ್ತಲಿನಲ್ಲಿ¨ªಾಗ ಬೆಳಕಿನ ಅರಿವು ಹಾಗೂ ಬೆಳಕನ್ನು ಸೇರುವ ಪ್ರಯತ್ನ ಅಗತ್ಯ. ಅಂತೆಯೇ, ದೀಪವನ್ನು ಬೆಳ ಗುವುದು ನಮ್ಮ ಮನಸ್ಸಿನಲ್ಲಿ ಅಡಗಿರುವ ಬೆಳಕಿನ ಹಂಬಲದ ಬಾಹ್ಯರೂಪ.
ಭಾರತದ ವಿವಿಧ ಕಡೆಗಳಲ್ಲಿ ಬೇರೆ ಬೇರೆ ಹೆಸರಿನೊಂದಿಗೆ ಆಚರಿಸಲಾಗುವ ಈ ಹಬ್ಬ ದೀಪದ ಆರಾಧನೆಯÇÉೇ ತನ್ನ ಉಸಿರನ್ನು ಹೊಂದಿದೆ. ಬೆಳಕು ಎನ್ನುವುದೇ ಸ್ಪಷ್ಟತೆ. ಸ್ಪಷ್ಟತೆ ಬದುಕಿನ ಅಗತ್ಯ.
ಈ ಬೆಳಕ ಹಬ್ಬಕ್ಕೆ ಬೆಳಕೇ ತೋರಣ. ಅದೇ ಬೆಳಕೇ ಎಲ್ಲರ ಸಂಭ್ರಮಕ್ಕೆ ಕಾರಣ. ಮನದ ಗೆಲುವಿಗೆ ಹೂರಣ. ದೀಪ ವೊಂದು ತಾನು ಬೆಳಕಾಗಿ ತನ್ಮೂಲಕ ಇನ್ನೊ ಂದು ದೀಪವ ಬೆಳಗಿಸಿ ಮತ್ತೂಂದಕ್ಕೆ ಬೆಳಕಾಗಿ ಹರಿಯುತ್ತಾ ಸಾಲು-ಸಾಲಾಗಿ ದೀಪಗಳ ಪೋಣಿಸುತ್ತಾ ಬದುಕಿನ ನಂಬಿಕೆಯಾಗಿ ಮುನ್ನಡೆಯುತ್ತದೆ.
ಇಂದು ನಿರಾಶೆಯ ಕತ್ತಲ ಹರಿದೊಗೆದು, ಮನದ ಅಂಧಕಾರವಳಿದು, ಸಮತೆ ಶಾಂತಿಯು ನೆಲೆಸಿ, ಬದುಕಿಗೆ ಪ್ರೀತಿಯ ಹೂವ ಮುಡಿಸಬೇ ಕಾಗಿದೆ. ತೋರಣದ ತಳಿರಲ್ಲಿ, ಹೊಸಿಲ ಹಣತೆಯಲ್ಲಿ, ಬಾಣ ಬಿರುಸಿನಲ್ಲೂ ನಲಿವು ಮೂಡಬೇಕಾಗಿದೆ. ಕತ್ತಲೆಯ ಪುಟಗಳಲ್ಲಿ ಬೆಳಕಿನ ಅಕ್ಷರದಲ್ಲಿ ದೀಪದ ಸಂದೇಶ ನಳನಳಿಸ ಬೇಕಾಗಿದೆ. ಅದು ಮನೆ- ಮನವ ಬೆಳಗಬೇಕಾಗಿದೆ. ಹೀಗಿ ರುವಾಗ, ದೀಪ ಒಂದನು ಬೆಳಗೆ ಮೃತ್ಯು ಭಯವಿಲ್ಲ; ಹತ್ತು ದೀಪ ಗಳನುರಿಸೆ ಅನಾರೋಗ್ಯವಿಲ್ಲ; ನೂರು ದೀಪವ ಬೆಳಗೆ ಬಂಜೆ ತನವಿಲ್ಲ.
ಕತ್ತಲೆಗೂ ಬೆಳಕಿಗೂ ಯುಗ- ಯುಗಗಳ ಸಂಘರ್ಷ; ನಿರಂತರ ಹೋರಾಟ. ಬೆಳಕು ಗೆಲ್ಲುವುದೇ ದೀಪಾವಳಿಯ ಸಂಕೇತ. ಬೆಳಕು ಎಲ್ಲ ಚೇತನಗಳ ಆಧಾರ, ಕ್ರಿಯಾಶಕ್ತಿ. ಬೆಳಕಿ ಲ್ಲದೆ ಈ ಜಗವೇ ಇಲ್ಲ; ಜಗಕೆ ಅಸ್ತಿತ್ವವಿಲ್ಲ. ಬೆಳಕೇ ಬದುಕು. ಆ ಬೆಳಕಿನ ಆರಾಧನೆಯೇ ಈ ದೀಪಾವಳಿ.
ದೀಪಾವಳಿಯ ಉದ್ದೇಶವೇ ಬದುಕಿನ ಸಂಭ್ರಮವನ್ನು ಇಮ್ಮಡಿಸುವುದು. ನಾವು ಸಿಡಿಸುವ ಪಟಾಕಿ ನಮ್ಮೊಳಗಿರುವ ಅರಿವಿನ ಕಿಚ್ಚನ್ನು ಉದ್ದೀಪಿಸಬೇಕು; ದ್ವೇಷದ ದಳ್ಳುರಿಯನ್ನು ಅಲ್ಲ. ಪಟಾಕಿ ಸುಡುವುದು ಪ್ರಸ್ತುತ ನಮ್ಮ ಭುವಿಯ ಒಳಿತಿಗೆ ಪೂರಕ ವಾಗಿಲ್ಲ. ಹೀಗಿರುವಾಗ ಮನೆಯನ್ನು ಹಸುರ ತೋರಣಗಳಿಂದ ಸಿಂಗರಿಸಿ, ಮುಸ್ಸಂಜೆಯ ವೇಳೆಯಲ್ಲಿ ಪುಟ್ಟ ಹಣತೆಯ ಬೆಳಕು ಇಡೀ ಮನೆಯನ್ನು, ಮನವನ್ನು ವ್ಯಾಪಿ ಸುವಂತೆ ಹಚ್ಚಿಟ್ಟು ಸಂಭ್ರಮಿಸುವ ರೀತಿಗಿಂತ ಮಿಗಿಲಾದುದು ಬೇರೆ ಬೇಕೇ? ಇಂದು ಸಿಡಿಸಬೇಕಾಗಿರುವುದು ಪಟಾಕಿಯನ್ನಲ್ಲ. ನಮ್ಮ ಪ್ರಾಣಶಕ್ತಿ, ಹೃದಯ, ಮನಸ್ಸು ಮತ್ತು ಈ ದೇಹವು ಸದಾ ಕ್ರಿಯಾಶೀಲವಾಗಿ ಒಳಿತಿನ ಚಿಂತ ನೆಗಳ ಒಡಗೂಡಿ ಸದಾ ಜೀವಂತ ಪಟಾಕಿ ಯಂತೆ ಸಿಡಿಯುತ್ತಿರಬೇಕು. ಆಗ ಹೊರಗಿನ ಪಟಾಕಿಯ ಅಗತ್ಯವೇ ಇರುವುದಿಲ್ಲ.
ಅಂತೆಯೇ, ಈ ದೀಪಾವಳಿಯಂದು ನಾವು ಬೆಳಗುವ ದೀವಿಗೆ ಮನೆ-ಮನಕೆ ಹೊಸ ಕಳೆಯ ತುಂಬುತ ನಂದಾದೀಪವಾಗಿ ಬೆಳಗಲಿ. ಬಾಳ ಕತ್ತಲೆಯ ಹೊಡೆದೋಡಿಸಿ ಅರಿವಿನ ಬೆಳಕಿಗೆ ಮುನ್ನುಡಿಯಾಗಲಿ. ನಮ್ಮ ಅಂತರಂ ಗವೇ ದೀಪವಾಗಿ ಸತ್ಯ, ಸ್ನೇಹ, ಕರುಣೆಗಳ ಎಣ್ಣೆ ಯನ್ನು ಹೊಯ್ದು ಜ್ಞಾನ ಜ್ಯೋತಿಯು ಸಂಭ್ರಮಿಸಲಿ.
ಬೆಳಕು ಮೂಲೆ ಮೂಲೆಯ ತಬ್ಬಿ ಕತ್ತಲಿಗೆ ಮುತ್ತಿಡುತ್ತಿದೆ. ದೀಪಾವಳಿಯು ಬರೀ ಹಾವಳಿ ಯಾಗದಿರಲಿ; ಮೂಲೆ ಮೂಲೆಯ ತಬ್ಬಿ ಮುತ್ತಿಡುವ ಕತ್ತಲೆಗೆ ಚಳಿಯಿಡಲಿ. ಸುಖದ ಬೆಳಗು ಮೂಡಿಬಂದು ಮೊಗದಿ ನಗೆಯು ಚಿಮ್ಮಲಿ. ಮನುಜನೀ ಬಾಳ ಪಯಣದಲಿ ಭರವಸೆಯ ಬೆಳಕು ಹೊಮ್ಮಲಿ. ಬೆಳಕು ಬಾಳ ಬೆಳಗಲಿ. ಬದುಕು ಸದಾ ನಳನಳಿಸಲಿ. ಮನದಿ ಮುದವು ತುಂಬಲಿ…
ಡಾ| ಮೈತ್ರಿ ಭಟ್, ವಿಟ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.