ಹಚ್ಚೋಣ ಹಣತೆಯ ಹೊಸ ಭರವಸೆಯ ಜತೆಗೆ


Team Udayavani, Nov 4, 2021, 12:18 PM IST

ಹಚ್ಚೋಣ ಹಣತೆಯ ಹೊಸ ಭರವಸೆಯ ಜತೆಗೆ

ಭಾರತೀಯ ಸಂಸ್ಕೃತಿ ಆಚರಣೆಯ ಸಾಲಿನಲ್ಲಿ ಹಬ್ಬಗಳಿಗೇನು ಬರವಿಲ್ಲ, ಎಲ್ಲ ಹಬ್ಬಗಳ ಸಾಲಿನಲ್ಲಿ ದೀಪಾವಳಿಯು ಹಬ್ಬಗಳ ರಾಜನ ಹಾಗೇ ಕಾಣುವುದು.  ಮೂರು ದಿನಗಳ ಆಚರಣೆ ಎಂದರೆ ಕಮ್ಮಿಯೇನು ಅಲ್ಲ! ಪ್ರತಿ ದಿನವೂ ಭಿನ್ನ ಪದ್ಧತಿಯಲ್ಲಿ ಆಚರಿಸುವ ಹಬ್ಬ. ಕೇವಲ ಇಂತಿಷ್ಟೇ ಪ್ರದೇಶಗಳಿಗೆ ಸೀಮಿತವಾಗದೇ ವಿಶ್ವಾದ್ಯಂತ ಆಚರಣೆಯ ಕ್ರಮ ಭಿನ್ನವಾದರೂ ದೀಪವನ್ನು ಹಚ್ಚಿ ಪೂಜಿಸುವುದು ಸಾಮಾನ್ಯ.

ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ, ವಿಚಾರಗಳಿಗೆ ಅಂಟಿಕೊಂಡಿರುವಂತಹ ಕತ್ತಲೆಯನ್ನು ಹೋಗಲಾಡಿಸುವಂತಹದ್ದು ಎಂಬರ್ಥ ಕೂಡ ಇದೆ. ಜೀವನದ, ಮನದ ಎಲ್ಲ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ದೀಪ ಬೆಳಗುತ್ತೇವೆ. ಹಿಂದೆ ಹಬ್ಬಗಳನ್ನು ಆಚರಿಸುವುದರ ಮುಖ್ಯ ಉದ್ದೇಶವೇ ಪ್ರಕೃತಿಯನ್ನು ಆರಾಧಿಸುವುದು ಆಗಿದೆ. ಆದರೆ ಕಾಲ ಕ್ರಮೇಣ ನಾವು ಆಡಂಬರಕ್ಕೆ ಒಗ್ಗಿಕೊಂಡಾಗ ಹಬ್ಬಗಳು ಪರಿಸರಕ್ಕೆ ಮಾರಕವಾಗಲು ಆರಂಭವಾದವು. ನಮ್ಮ ಆಚರಣೆಯಿಂದ ಪ್ರಕೃತಿಗೆ ನೋವುಂಟಾಗದಂತೆ ನೋಡಿಕೊಳ್ಳುವುದು ಕೂಡಾ ನಮ್ಮ ಕರ್ತವ್ಯವೇ ಹೌದು. ಅದಕ್ಕಾಗಿ ಇತ್ತೀಚೆಗೆ ಹಸಿರು ದೀಪಾವಳಿಯ ಆಚರಣೆ ಹೆಚ್ಚಾಗಿದೆ.

ಏನಿದು ಹಸಿರು ದೀಪಾವಳಿ?

ಹೆಚ್ಚಾಗಿ ಇಂದಿನ ಜನ ಪಟಾಕಿ ಸಿಡಿಸುವುದೊಂದೆ ಹಬ್ಬ ಎಂದು ತಿಳಿದಿದ್ದಾರೆ. ಮೌಲ್ಯಗಳು ಕಾಲ ಸರಿದಂತೆ ಗೌಣವಾಗುತ್ತಿದೆ. ಒಂದು ದಿನದ ಆಚರಣೆಗೆ ಅದೆಷ್ಟೋ ಪಟಾಕಿ ಸಿಡಿಮದ್ದು ಸಿಡಿಸುವ ನಮಗೆ ನಮ್ಮನ್ನು ಸಲಹಿದ ಪ್ರಕೃತಿ ಕಾಣಲೇ ಇಲ್ಲ ಎನ್ನುವುದು ವಿಷಾದಕರ ಸಂಗತಿ. ತಿಳಿದ ವಿಷಯವೇ ಆದರೂ ಸಹ ನಿರ್ಲಕ್ಷ್ಯ ಮಾಡುವ ನಮ್ಮ ಮನಸ್ಥಿತಿ ನಿಜಕ್ಕೂ ಸರಿಯಿಲ್ಲ.

ಇದನ್ನೂ ಓದಿ:ಸಿಹಿ ತಿನಿಸು, ಪಟಾಕಿ, ಅಪ್ಪನ ಬೋನಸ್..: ದೀಪಗಳ ಹಬ್ಬದ ನೆನಪು

ಹಸಿರು ದೀಪಾವಳಿ. ಹೆಸರೇ ಹೇಳುವ ಹಾಗೆ ಪ್ರಕೃತಿಯ ಜೊತೆಗಿನ ದೀಪಾವಳಿ; ಹಣತೆ ಬೆಳಗುವ ಮೂಲಕ ಹಬ್ಬವನ್ನು ಆಚರಣೆ ಮಾಡಿದ ಹಾಗೂ ಆಗುತ್ತದೆ ; ಪಟಾಕಿ ಸಿಡಿಮದ್ದು ಮುಂತಾದವುಗಳನ್ನು ನಿಷೇಧ ಮಾಡಿದಾಗ ಪ್ರಕೃತಿಗೆ ಆಗುವ ಹಾನಿಯನ್ನು ಸಹ ತಡೆಗಟ್ಟಬಹುದು . ಹಲವು ಸಂಘ ಸಂಸ್ಥೆಗಳು ಇಂತಹ ಆಚರಣೆಗೆ ಒತ್ತು ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದೆ. ಶಬ್ಧ ಮಾಲಿನ್ಯದ ಜೊತೆಗೆ ಅದೆಷ್ಟೋ ವಿಷಕಾರಿ ರಾಸಾಯನಿಕ ಅನಿಲಗಳು ಪಟಾಕಿಯ ಮೂಲಕ ಪ್ರಕೃತಿಯನ್ನು ಸೇರುತ್ತಿದೆ. ಆಮ್ಲಜನಕದ ಜೊತೆಗೆ ಇಂತಹ ವಿಷಾನಿಲಗಳು ಸೇರಿ ನಾವು ಉಸಿರಾಡುವ ಗಾಳಿಯು ಸಹ ನಮಗೆ ತಿಳಿದೂ ಹಾಳಾಗುತ್ತಿದೆ. ಇದನ್ನು ತಡೆಗಟ್ಟಲು ಪೂರಕವಾಗಿ ಇಂತಹ ಆಚರಣೆಗಳು ನಿಜಕ್ಕೂ ಅವಶ್ಯಕ.

ಪಟಾಕಿಗಳ ಹೊಗೆಯಿಂದ ಉಸಿರಾಟದ ತೊಂದರೆಯಾಗುತ್ತದೆ. ಅಂತೆಯೆ ಯಾರಿಗೆ ಉಸಿರಾಟದ ತೊಂದರೆಯಿದೆಯೋ ಅವರ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. ಪರಿಸರದಲ್ಲಿ ಆಮ್ಲಜನಕದ ಪ್ರಮಾಣವು ಕಡಿಮೆಯಾಗಿ ಕಾರ್ಬನ್‌ ಡೈ ಆಕ್ಸೈಡ್‌ ನ ಪ್ರಮಾಣವು ಹೆಚ್ಚುತ್ತದೆ. ಆದುದರಿಂದ ಜನರಿಗೆ ಶುದ್ಧ ಗಾಳಿ ಸಿಗುವುದಿಲ್ಲ ಹಾಗೂ ಪರಿಸರ ಮಾಲಿನ್ಯವಾಗುತ್ತದೆ. ಹಾಗಾಗಿ ನಾವು ಪ್ರಕೃತಿಗೆ ತೊಂದರೆ ನೀಡದೇ ಪರಿಸರ ಪೂರಕವಾಗಿ ಹಬ್ಬವನ್ನು ಆಚರಿಸುವ ಎನ್ನುವುದೇ ಆಶಯವಾಗಿದೆ.

ಮನುಷ್ಯ ಸದಾ ಇತಿಮಿತಿಗಳನ್ನು ಮೀರಿ ದೀಪದಂತೆ ಮೇಲಕ್ಕೆ ಬೆಳಗುತ್ತಾ ಹೋಗಬೇಕು. ದೀಪ ಹೇಗೆ ತನ್ನನ್ನು ತಾನು ಉರಿದುಕೊಂಡು ಸುತ್ತಲಿಗೆ ಬೆಳಕು ಕೊಡುತ್ತದೋ ಮನುಷ್ಯ ಕೂಡ ತಾನು ತ್ಯಾಗ ಮಾಡಿ ಸುತ್ತಲಿನವರ ಬಾಳಿಗೆ ಬೆಳಕಾಗಬೇಕು ಎಂಬ ಸಂಕೇತ ಕೂಡ ಇಲ್ಲಿದೆ. ಇನ್ನಾದರೂ ಹಬ್ಬದ ನಿಜ ಅರ್ಥವನ್ನು ತಿಳಿದು ಆಚರಿಸಬೇಕು ಮನಸ್ಸಿನ ಅಂಧಕಾರವನ್ನು ತೆಗೆದು ಹಾಕಿ ಜ್ಞಾನದ ಬೆಳಕನ್ನು ಹರಿಸಬೇಕು ನಮ್ಮಲ್ಲಿನ ನಾನು ಎಂಬುದನ್ನು ತೊರೆದು ನಾವೆಂಬ ಭಾವನೆ ಬಿತ್ತಬೇಕು. ಹೀಗಾದರೆ ಮಾತ್ರ ಅದು ನಿಜವಾದ ದೀಪಾವಳಿಯ ಆಚರಣೆಗೆ ಅರ್ಥ ದೊರೆಯುತ್ತದೆ.

– ಸಾಧನ ಶಾಸ್ತ್ರೀ

ಭಂಡಾರ್ಕರ್ ಕಾಲೇಜು ಕುಂದಾಪುರ

ಟಾಪ್ ನ್ಯೂಸ್

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.