ಕೋವಿಡ್‌ 19 ಹಿರಿಯರಿಗಾಗಿ ಹೋರಾಡೋಣ


Team Udayavani, Mar 31, 2020, 6:55 AM IST

ಕೋವಿಡ್‌ 19 ಹಿರಿಯರಿಗಾಗಿ ಹೋರಾಡೋಣ

ಕೋವಿಡ್‌ 19ಗೆ ಹೆಚ್ಚಾಗಿ ಬಾಧಿತರಾಗುವುದು ವಯೋವೃದ್ಧರು. ಅದರಲ್ಲೂ ವಿಶ್ವಾದ್ಯಂತ ವಯೋಸಹಜ ಆರೋಗ್ಯ ಸಮಸ್ಯೆ ಇರುವಹಿರಿಯರೇ ಈ ವೈರಸ್‌ಗೆ ಹೆಚ್ಚಾಗಿ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೃದ್ಧರನ್ನು ಹೆಚ್ಚಾಗಿಕಾಡುತ್ತಿರುವ ಕೋವಿಡ್‌ 19 ಕುರಿತಾದ ಅಂಕಿ-ಅಂಶಗಳಬಗೆಗಿನ ಕಿರು ಮಾಹಿತಿ ಇಲ್ಲಿದೆ.ಪರಿವಾರದಲ್ಲಿನ ಹಿರಿಯರ ಕಾಳಜಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೋವಿಡ್‌ 19 ದಿಂದ ನಮ್ಮನ್ನುಮತ್ತು ಕುಟುಂಬದವರನ್ನುರಕ್ಷಿಸೋಣ.

ವೃದ್ಧರನ್ನೇ ಕಾಡುತ್ತಿರುವುದು ಹೆಚ್ಚು ಇದುವರೆಗಿನ ಅಂಕಿ-ಅಂಶಗಳ ಪ್ರಕಾರಕೊರೊನಾ, ವಿಶ್ವಾದ್ಯಂತ ವೃದ್ಧರಿಗೆ ಹೆಚ್ಚು ಮಾರಣಾಂತಿಕವಾಗಿ ಪರಿಣಮಿಸುತ್ತಿದೆ. ಚೀನ, ಅಮೆರಿಕ, ಇಟಲಿ,ಇರಾನ್‌, ಜರ್ಮನಿ, ಭಾರತ ಮತ್ತು ಬ್ರಿಟನ್‌ನಲ್ಲಿ ಈ ರೋಗಕ್ಕೆ ತುತ್ತಾದವರನ್ನು ನೋಡಿದಾಗ ಈ ಸಂಗತಿ ಸ್ಪಷ್ಟವಾಗುತ್ತದೆ.

● ಚೀನದಲ್ಲಿ ಕೋವಿಡ್‌ 19 ಸೋಂಕಿತರ ಪೈಕಿ, 51 ವರ್ಷಕ್ಕಿಂತ ಕೆಳಗಿನವರಲ್ಲಿ ಸಾವಿನ ಪ್ರಮಾಣಶೇ.1ಕ್ಕಿಂತ ಕಡಿಮೆಯಿದ್ದರೆ, 70 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದವರಲ್ಲಿ ಸಾವಿನ ಪ್ರಮಾಣ ಶೇ.19ಕ್ಕಿಂತ ಹೆಚ್ಚಿದೆ. ಇಟಲಿ,ಬ್ರಿಟನ್‌ನಲ್ಲಿನ ಕೋವಿಡ್‌ 19 ಸೋಂಕಿತರ ವಯಸ್ಸು ಹಾಗೂ ಸಾವಿನ ಪ್ರಮಾಣದ ಅಂಕಿ-ಅಂಶಗಳು
ಚೀನದ ಅಂಕಿ-ಅಂಶಗಳ ಜೊತೆ ಸಾಮ್ಯತೆ ಹೊಂದಿವೆ. ಅದರಲ್ಲೂ, ವೃದ್ಧರಲ್ಲಿ ಹೃದಯ ಸಂಬಂಧಿ ರೋಗಗಳಿಂದ ಬಳಲುತ್ತಿರುವವರಿಗೆ ಅಪಾಯ ಅಧಿಕ. ಮಧುಮೇಹ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದವರಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ.

55ಕ್ಕೂ ಅಧಿಕ ವಯೋಮಾನದವರಿಗೆ ಕೊರೊನಾ ಅಪಾಯ ಅಧಿಕ ಎನ್ನುತ್ತವೆ ಅಂಕಿ-ಅಂಶಗಳು. ಭಾರತದಲ್ಲಿ ಮೃತಪಟ್ಟವರ ವಯೋಮಾನವೂ ಇದಕ್ಕೆ ಸಾಕ್ಷಿ.

● ಅಮೆರಿಕದ ರಾಷ್ಟ್ರೀಯ ರೋಗ ನಿಯಂತ್ರಣ ಹಾಗೂ ತಡೆ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ, ಕೋವಿಡ್‌ 19 ಸೋಂಕಿನ ಗಂಭೀರ ಪ್ರಕರಣಗಳಲ್ಲಿ ಮೃತರ ಸಂಖ್ಯೆ ಹೆಚ್ಚಿರುವುದು ವೃದ್ಧರಲ್ಲಿ. ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಶೇ.17ರಷ್ಟು ಮಂದಿ 65 ವರ್ಷಕ್ಕೆ ಮೇಲ್ಪಟ್ಟವರು. ಮೃತರ ಪೈಕಿ ಈ ವಯೋಮಾನದವರ ಪ್ರಮಾಣ ಶೇ.31.

● ವೃದ್ಧರಲ್ಲಿ ಕೋವಿಡ್‌ 19 ಸೋಂಕು ತಗಲುವುದಕ್ಕೂಮೊದಲು, ಗಂಭೀರ ಆರೋಗ್ಯ ಸಂಬಂಧಿಸಮಸ್ಯೆಗಳಿದ್ದರೆ ಅವರಿಗೆ ಕೋವಿಡ್‌ 19 ವೈರಸ್‌ ಮಾರಣಾಂತಿಕವಾಗುವುದು ವಿಶ್ವಾದ್ಯಂತ ಸಾಬೀತಾಗಿದೆ. ಹಾಗೆಂದು, ಯುವಕರಿಗೆ,ಮಧ್ಯವಯಸ್ಕರಿಗೆ ಈ ಅಪಾಯವಿಲ್ಲ ಎಂದು ಭಾವಿಸುವುದು ಖಂಡಿತ ತಪ್ಪು.

● ಅಮೆರಿಕದ ರಾಷ್ಟ್ರೀಯ ರೋಗ ನಿಯಂತ್ರಣ ಹಾಗೂ ತಡೆ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ, ಕೋವಿಡ್‌ 19 ಸೋಂಕಿತ ಅಮೆರಿಕನ್‌ ವೃದ್ಧರ ಪೈಕಿ, ಶೇ.80ರಷ್ಟು ರೋಗಿಗಳು ಮೃತಪಟ್ಟರೆ, ಶೇ.53ರಷ್ಟು ರೋಗಿಗಳು ತುರ್ತು ಚಿಕಿತ್ಸಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಶೇ.45ರಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಇದಕ್ಕೆ ವ್ಯತಿರಿಕ್ತವಾಗಿ 20 ಅಥವಾ ಅದಕ್ಕಿಂತ ಕಡಿಮೆ ವಯಸ್ಕರಲ್ಲಿನ ಕೋವಿಡ್‌ 19 ಸೋಂಕಿತರ ಪೈಕಿ, ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದವರ ಬಗ್ಗೆ ವರದಿಯಾಗಿಲ್ಲ.

ವೃದ್ಧರೇ ಏಕೆ?
ಕೋವಿಡ್‌ 19 ಇರಲಿ ಅಥವಾ ಮತ್ತಾವುದೇ ರೋಗವಿರಲಿ, ವೃದ್ಧರೇ ರೋಗಕ್ಕೆ ಬೇಗ ತುತ್ತಾಗುತ್ತಾರೆ.ವಯಸ್ಸಾಗುತ್ತಿದ್ದಂತೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುವುದು ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಆರೋಗ್ಯ ತಜ್ಞರು.
ವಯಸ್ಸಾಗುತ್ತಿದ್ದಂತೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ
ಕುಂಠಿತವಾಗುತ್ತದೆ. ಹೊರಗಿನಿಂದ ಬಂದು ನಮ್ಮ ದೇಹವನ್ನು ಬಾಧಿಸುವ ರೋಗ ಜಂತುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಕುಗ್ಗುತ್ತಾ ಹೋಗುತ್ತದೆ. ಹೀಗಾಗಿ,
ವಯಸ್ಸಾಗುತ್ತಿದ್ದಂತೆ ವ್ಯಕ್ತಿ ರೋಗಕ್ಕೆ ತುತ್ತಾಗುವ ಸಂಭವ ಹೆಚ್ಚುತ್ತಾ ಹೋಗುತ್ತದೆ. ಇದು ಕೊವಿಡ್‌-19ಗೂ ಅನ್ವಯ. ವಯಸ್ಸಾದವರಲ್ಲಿ ರೋಗ ನಿರೋಧಕ ಶಕ್ತಿ ಹೇಗೆ ಕುಗ್ಗುತ್ತಾ ಸಾಗುತ್ತದೆ ಎಂಬುದರ ವಿಶ್ಲೇಷಣೆ ಇಲ್ಲಿದೆ

ನಮ್ಮ ದೇಹವನ್ನು ಪ್ರವೇಶಿಸುವ ವ್ಯಾಧಿಕಾರಕ ಕ್ರಿಮಿಗಳನ್ನು ಪತ್ತೆ ಹಚ್ಚಿ, ಅವುಗಳ ವಿರುದ್ಧ ಹೋರಾಟ ನಡೆಸುವ ಕೆಲಸವನ್ನು ಬಿಳಿ ರಕ್ತಕಣಗಳು ಮಾಡುತ್ತವೆ. ವಯಸ್ಸಾಗುತ್ತಿದ್ದಂತೆ ನಮ್ಮ ದೇಹದಲ್ಲಿ ಬಿಳಿ ರಕ್ತಕಣಗಳ ಉತ್ಪಾದನೆಯ ಪ್ರಮಾಣ ಕುಂಟುತ್ತಾ ಸಾಗುತ್ತದೆ. ಜೊತೆಗೆ, ಇರುವ ಬಿಳಿ ರಕ್ತಕಣಗಳಲ್ಲಿನ ಹೋರಾಟದ ಸಾಮರ್ಥ್ಯ ಕೂಡ ಕಡಿಮೆಯಾಗುತ್ತದೆ. ಹೀಗಾಗಿ, ವೃದ್ಧರಿಗೆ ಕೋವಿಡ್‌ 19 ಸೋಂಕು ತಗುಲಿದಾಗ ಸೋಂಕಿಗೆ ಕಾರಣವಾದ ವೈರಸ್‌ನ್ನು ಪತ್ತೆ ಹಚ್ಚುವ ಹಾಗೂ ಅವುಗಳ ವಿರುದ್ಧ ಹೋರಾಡಿ, ಅವುಗಳನ್ನು ದೇಹದಿಂದ ಹೊರದಬ್ಬುವ ಸಾಮರ್ಥ್ಯ ಕಡಿಮೆಯಾಗುತ್ತದೆ.

● ಇದರಿಂದಾಗಿ, ಕೋವಿಡ್‌ 19 ವೈರಸ್‌, ವೃದ್ಧರ ದೇಹ ಪ್ರವೇಶಿಸಿದಾಗ ಕಡಿಮೆ ಸಾಮರ್ಥ್ಯದ, ಕಡಿಮೆ ಸಂಖ್ಯೆಯಲ್ಲಿರುವ ಈ ಬಿಳಿ ರಕ್ತಕಣಗಳ ವಿರುದ್ಧ ಹೋರಾಡಿ
ಮೇಲುಗೈ ಸಾಧಿಸುತ್ತದೆ. ತನ್ಮೂಲಕ, ದೇಹದ ಒಳಭಾಗಕ್ಕೆ ಮತ್ತಷ್ಟು ಆಕ್ರಮಣಕಾರಿಯಾಗಿ ನುಗ್ಗುತ್ತದೆ. ಇದರಿಂದಾಗಿ ಸೋಂಕಿನ ಪ್ರಮಾಣ ವೃದ್ಧಿಸುತ್ತದೆ.

● ಜಾನ್‌ ಹಾಪ್‌ಕಿನ್ಸ್‌ ಯೂನಿವರ್ಸಿಟಿ ಸ್ಕೂಲ್‌ ಆಫ್ ಮೆಡಿಸಿನ್ಸ್‌ ನಡೆಸಿದ ಅಧ್ಯಯನ ವರದಿ ಪ್ರಕಾರ, ಬಹುತೇಕ ವೃದ್ಧರಲ್ಲಿ 60 ಅಥವಾ 70ರ ವಯಸ್ಸಿನಲ್ಲಿ ರೋಗ ನಿರೋಧಕ ಶಕ್ತಿ ಸ್ವಲ್ಪ ಮಟ್ಟಿಗೆ ಸಮಾಧಾನಕರವಾಗಿರುತ್ತದೆ. 75 ಅಥವಾ 80
ವರ್ಷವಾಗುತ್ತಿದ್ದಂತೆ ವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಅತ್ಯಂತ ಶೀಘ್ರಗತಿಯಲ್ಲಿ ಕ್ಷೀಣಿಸುತ್ತದೆ.

● ವೃದ್ಧರಲ್ಲಿ ರೋಗಾಣುಗಳು ಪ್ರವೇಶಿಸುತ್ತಿದ್ದಂತೆ, ಅವುಗಳ ವಿರುದ್ಧ ಹೋರಾಡುವ ರೋಗ ನಿರೋಧಕ ವ್ಯವಸ್ಥೆಯನ್ನು ಪ್ರಚೋದಿಸುವ “ಸೈಟೊಕಿನ್‌’ ಪ್ರೋಟಿನ್‌ಗಳು ಅಧಿಕ ಪ್ರಮಾಣದಲ್ಲಿ ಸ್ರವಿಸುತ್ತವೆ. ಇದು ವ್ಯಕ್ತಿಯಲ್ಲಿ ಊತ, ಅಧಿಕ ಜ್ವರ ಹಾಗೂ ಅಂಗಾಗಗಳ ವೈಫ‌ಲ್ಯಕ್ಕೆ ಕಾರಣವಾಗುತ್ತದೆ. ಇದು ವೃದ್ಧರಲ್ಲಿ ವೈರಾಣುಗಳ ವಿರುದ್ಧ ಹೋರಾಡುವ ರೋಗ ನಿರೋಧಕ ಸಾಮರ್ಥ್ಯವನ್ನು ಕುಗ್ಗಿಸುವ ಮೂಲಕ ಅವರ
ಆರೋಗ್ಯಕ್ಕೆ ಹಾನಿ ಉಂಟು ಮಾಡಬಹುದು. ಇಲ್ಲವೇ, ವೈರಾಣುಗಳ ವಿರುದ್ಧ ಹೋರಾಡುವ ರೋಗ ನಿರೋಧಕ ಪ್ರೋಟಿನ್‌ ಅತಿಯಾದ ಉತ್ಪಾದನೆ (ಅತಿಸ್ರಾವ) ಆ
ವ್ಯಕ್ತಿಯನ್ನೇ ಕೊಲ್ಲಬಹುದು.

● ವಯಸ್ಸಾಗುತ್ತಿದ್ದಂತೆ ವ್ಯಕ್ತಿಯಲ್ಲಿ ಜೀವಕೋಶಗಳ ಪ್ರತ್ಯುತ್ಪಾದನೆ ಕ್ರಿಯೆ ಅಪಾಯಕಾರಿಯಾಗುವ ಸಾಧ್ಯತೆ ಹೆಚ್ಚಿದ್ದು, ವ್ಯಕ್ತಿಯ ಅಂಗಾಂಗಗಳು ಸಹಜ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವಂತೆ ನಿಯಂತ್ರಿಸುವ ವ್ಯವಸ್ಥೆ ದುರ್ಬಲವಾಗುವ
ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ವೃದ್ಧರಲ್ಲಿ ಮಧುಮೇಹ, ಕ್ಯಾನ್ಸರ್‌ನಂತಹ ದೀರ್ಘ‌ಕಾಲಿಕ ರೋಗ ಬರುವ ಸಂಭವ ಹೆಚ್ಚು. ಇದು ವೃದ್ಧರಲ್ಲಿನ ರೋಗ ನಿರೋಧಕ ವ್ಯವಸ್ಥೆಯನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ.

ಟಾಪ್ ನ್ಯೂಸ್

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.