ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನ ಪ್ರಸಂಗಗಳೆಂದರೆ 12 ಲಕ್ಷಕ್ಕೂ ಅಧಿಕ ಪದ್ಯಗಳ ಕನ್ನಡದ ಗೀತ ಸಂಪದ

Team Udayavani, Nov 14, 2024, 6:30 AM IST

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ವಾš¾ಯವು ಒಂದು ಪರಮ ಗುಣಾದರ್ಶ ಚಂಪೂ. ಅದರ ಕಾವ್ಯಗಳು, ಅರ್ಥಗಾರಿಕೆ, ಸಂಗೀತ, ಸಾಹಿತ್ಯ ಭಾಷೆಗಳು ಒಂದು ಅದ್ಭುತ ಸಾಂಸ್ಕೃತಿಕ ಭಂಡಾರ. ಇಂಥ ಪರಮ ವಿಶಿಷ್ಟ ಸಾಹಿತ್ಯ ಪ್ರಕಾರವನ್ನು ಮುಂದಿನ ಹಂತಕ್ಕೂ ಅಷ್ಟೇ ಶಾಸ್ತ್ರೀಯತೆಯೊಂದಿಗೆ ಭಾವ ಮತ್ತು ಭಾಷಾ ಶುದ್ಧಿಯೊಂದಿಗೆ ದಾಟಿಸಬೇಕಾದ ಸಾಂಸ್ಕೃತಿಕ ಹೊಣೆಗಾರಿಕೆ ಇದೆ. ಹೀಗಾಗಿ ಸಣ್ಣ ಪ್ರಮಾಣದಲ್ಲಿ ಪಥ ಬದಲಿಸುತ್ತಿರುವ ಪ್ರಕ್ರಿಯೆಯನ್ನು ಈ ಹಂತದಲ್ಲೇ ನಲ್ನುಡಿಗಳೊಂದಿಗೆ ಸರಿ ದಾರಿಗೆ ತರುವ ಕೆಲಸ ಆಗಬೇಕಾಗಿದೆ. ಇದು ಯಕ್ಷಗಾನದ ಸೌಂದರ್ಯ, ಶಕ್ತಿಗಳನ್ನು ಉಳಿಸಿಕೊಳ್ಳುವ ಮತ್ತು ಅದನ್ನು ವಿಶ್ವಗಾನವಾಗಿ ವಿಸ್ತರಿಸುವ ನಿಟ್ಟಿನಲ್ಲಿ ಅಗತ್ಯವೂ ಹೌದು.

ನಿಸ್ಸಂದೇಹವಾಗಿ ಯಕ್ಷಗಾನ, ಅದರ ವಾš¾ಯ ಸಾಹಿತ್ಯ ಆಯಾಮವು ಕನ್ನಡ ನುಡಿಯ ಸು-ವರ್ಣ, ಸುವರ್ಚಸ್ಸಿನ ಸ್ವರ್ಣರೇಖೆ. ನಾಟ್ಯ ಶಾಸ್ತ್ರ, ಪರಂಪರೆ ಮತ್ತು ಸ್ಥಳೀಯ ಸಾಂಸ್ಕೃತಿಕತೆಗಳ ಸಂಯುಕ್ತವಾದ ಯಕ್ಷಗಾನ ಎಂದು ನಾವೀಗ ಹೇಳುವ ದಶಾವತಾರ- ಬಯಲಾಟಗಳಿಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಈ ಆಟಗಳು ಹಾಗೂ ಅದರ ಅಖೀಲ ಏಷ್ಯಾದ ಸೋದರ ಕಲೆಗಳಾದ ಭಾವೋನಾ, ಕಥಕ್ಕಳಿ, ದಶಾವತಾರಿ, ತೆರುಕೂತ್ತು, ಕೂಟಿಪ್ಪುಟ, ನಾಡಗಂ, ಬಾಲಿ ರಾಮಾಯಣ ನೃತ್ಯ ಪ್ರಕಾರಗಳು ಸೇರಿ ಭಾರತೀಯ ಭಾಷೆಗಳಿಗೆ ದೊಡ್ಡ ಅಂದವನ್ನು, ಸಿರಿವಂತಿಕೆಯನ್ನು ನೀಡುತ್ತಾ ಬಂದಿವೆ. ಪದ್ಯ, ಗದ್ಯ ಕೃತಿಗಳು, ಮಾತು ವಿಮರ್ಶೆಗಳು, ಕಲಾತಂತ್ರ, ತಣ್ತೀ ವಿವರಣೆಗಳ ಮೂಲಕ ಅವು ನುಡಿಗಳನ್ನು ನುಡಿಸಿವೆ, ಮಿಂಚಿಸಿ ಮಿಂಚಿವೆ. ಜ್ಞಾನ-ರಂಜನೆ-ಜೀವ ದ್ರವ್ಯ ನೀಡಿ ಸಾಹಿತ್ಯ ಹಿತ ಚಿಂತನ ಗೈದಿವೆ.

ಯಕ್ಷಗಾನ ಸಿಂಗಾರ ಕನ್ನಡದ ಪಿಂಗಾರ
ಯಕ್ಷಗಾನವೆಂಬುದು ಬಹುಶಃ ಮೂಲತಃ ಗಾನೋದಿºಷ್ಟ ಸಾಹಿತ್ಯ ಪ್ರಕಾರದ ಹೆಸರು. ಈಗ ಅದು ಸಾಹಿತ್ಯ, ರಂಗದ ಆಟ, ತಾಳಮದ್ದಳೆ, ಯಕ್ಷಗಾನದ ಬಗೆಗಿನ ಬರಹಗಳು, ಎಲ್ಲವನ್ನೂ ಒಳಗೊಂಡ ಪದ.

ಯಕ್ಷಗಾನ ಸಾಹಿತ್ಯವೆಂಬುದು ನಾಲ್ಕು ವಿಧ
1. ಪದ-ಪದ್ಯ: ಯಕ್ಷಗಾನ ಪ್ರಸಂಗ ಎನ್ನುವುದು ಹಾಡುಗಳಿಂದ ಕೂಡಿದ ಕಥಾನಕ-ನಾಟಕ.
2. ಗದ್ಯ-ವಾš¾ಯ: ಸಭಾ ಲಕ್ಷಣವೆಂಬ ಪೂರ್ವ-ರಂಗ ಕೃತಿ (ಪಾರ್ತಿ ಸುಬ್ಬ) ಯಲ್ಲಿ ಬರುವ ಮಾತು ಗಳ ಪಠ್ಯ. ಪ್ರಸಂಗ ಪದ್ಯಗಳಿಗೆ ಆಟ, ಕೂಟಗಳ ಅರ್ಥಧಾರಿ, ವೇಷಧಾರಿಗಳು ತಾವೇ ಅಲ್ಲಲ್ಲೇ ರಚಿಸಿ ಆಡುವ ಆಶು-ಗದ್ಯ ವಾš¾ಯ ಎಂಬ ವಿಸ್ಮಯಕರ ಸಾಹಿತ್ಯ.
3. ಯಕ್ಷಗಾನದ ಕುರಿತಾದ ವಿಮರ್ಶೆ, ವಿವರಣೆಗಳ ಸಾಹಿತ್ಯ. ಗ್ರಂಥ, ಲೇಖನ, ಸಂಶೋಧನೆ, ಟಿಪ್ಪಣಿ, ಕಮ್ಮಟಗಳ ವರದಿಗಳು, ಕೋಶ, ಮಹಾಪ್ರಬಂಧಗಳು, ಶಿಕ್ಷಣ ಕೈಪಿಡಿಗಳು.
4. ವಾದನ, ನರ್ತನಗಳ ತಾಳಗಳ ನುಡಿತ (ನುಡಿಕಾರ, ಬೋಲ್‌, ಬಾಯಿ ತಾಳ)ಗಳಿಗೂ ಸಾಹಿತ್ಯವೆಂದೇ ಹೆಸರು. ಕನ್ನಡ ಮತ್ತು ಭಾರತೀಯ ಶಾಸ್ತ್ರ ಹಾಗೂ¤ ಕಲಾ ಸಾಹಿತ್ಯ ಸಂಪತ್ತಿನ ಒಂದು ದೊಡ್ಡ ಗಣನೀಯ ಭಾಗ ಯಕ್ಷಗಾನ ಸಾಹಿತ್ಯ.

ಮಹಾಪ್ರಸಂಗ ಸಂಪದ
ಮುಖ್ಯವಾಗಿ ಪೌರಾಣಿಕ ಕಥಾನಕಗಳನ್ನು ವಿವಿಧ ಛಂದಸ್ಸು, ಮಟ್ಟು, ರಾಗ ತಾಳಗಳಲ್ಲಿ ರಚಿಸಿದ, ಯಕ್ಷಗಾನ ಪ್ರದರ್ಶನದ ಆಧಾರವಾಗಿರುವ ಗೀತ ಪ್ರಬಂಧಗಳೇ ಯಕ್ಷಗಾನ ಪ್ರಸಂಗಗಳು.

ಪುರಂದರದಾಸ, ಪಾರ್ತಿ ಸುಬ್ಬರಿಂದ ತೊಡಗಿ ಈಗಿನ ಹೊಸ್ತೋಟ ಭಾಗವತರ ಹೊಸ ಯುಗದವರೆಗೆ-ಪ್ರಕಟಿತ, ಅಪ್ರಕಟಿತ, ಲುಪ್ತ ಸೇರಿ ಸುಮಾರು ಆರು ಸಾವಿರ ಪ್ರಸಂಗಗಳಿರಬಹುದು ಎಂದು ಅಂದಾಜು. ಅಂದರೆ, ಒಂದು ಪ್ರಸಂಗದಲ್ಲಿ ಸರಾಸರಿ 200 ಪದ್ಯಗಳು ಎಂದಿಟ್ಟುಕೊಂಡರೂ, ಹನ್ನೆರಡು ಲಕ್ಷ ಪದ್ಯಗಳಾಯಿತು! ಇದು ಕನ್ನಡದ ಗೀತ ಸಂಪದ. ಬಹುಶಃ ಯಾವುದೇ ಭಾಷೆಯಲ್ಲಿ ಈ ಪ್ರಮಾಣದ ಹಾಡುಗಳ ನಿಧಿ ಇಲ್ಲವೇನೋ.

ವಿವಿಧ ಗುಣಮಟ್ಟದ ಸ್ತರಗಳಿದ್ದರೂ ಪ್ರಸಂಗ ಸಾಹಿತ್ಯದ ಒಂದು ದೊಡ್ಡ ಭಾಗ ಶ್ರೇಷ್ಠವಾಗಿದೆ. ಪಾರ್ತಿ ಸುಬ್ಬ, ವೆಂಕಟ, ಹಟ್ಟಿಯಂಗಡಿ ರಾಮ ಭಟ್ಟ, ಬ್ರಹ್ಮಾವರ ವಿಷ್ಣು ಕವಿ, ಅಜಪುರ ಸುಬ್ಬ, ದೇವಿದಾಸ, ವಿಷ್ಣು ಸಭಾಹಿತ, ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ, ಮುದ್ದಣರಿಂದ ತೊಡಗಿ ಇಂದಿನವರೆಗೆ ಹತ್ತಾರು ಯಕ್ಷಗಾನ ಮಹಾಕವಿಗಳಿದ್ದಾರೆ. ಅವರ ಯಕ್ಷಗಾನ ಪ್ರಬಂಧಗಳ ಗೀತ ಸೌಂದರ್ಯ, ಭಾಷೆಯ ಬನಿ, ಸರಳ ಗಹನವಾದ ಅಚ್ಚರಿಯ ಸ್ವಭಾವೋಕ್ತಿ ಅಲಂಕಾರ, ಪ್ರಬಂಧ ಧ್ವನಿಗಳು ಕನ್ನಡದ ಹೆಮ್ಮೆ. ಈ ಪ್ರಬಂಧಗಳು ಯಕ್ಷಗಾನ ಸಂಗೀತದಲ್ಲಿ ಅಭಿವ್ಯಕ್ತಿಗೊಳ್ಳುವ ಪರಿ ಅನನ್ಯ. ಈ ಪ್ರಸಂಗಗಳಲ್ಲಿ ಐನೂರಕ್ಕೂ ಹೆಚ್ಚು ಮಟ್ಟು (ಹಾಡಿನ ರಾಗ-ತಾಳ- ಲಯ -ಹೇಳುವಿಕೆಗಳ ನುಡಿಕಟ್ಟು) ಗಳಲ್ಲಿ ಬೇರೆಡೆ ದೊರೆಯದ ಅನೇಕ ಛಂದೋರೂಪಗಳನ್ನು ಸಂಶೋಧಕರು ಗುರುತಿಸಿದ್ದಾರೆ.

ವಾಗರ್ಥ ಬ್ರಹ್ಮಾಂಡ ಕನ್ನಡ
ಕರಾವಳಿಯ ಯಕ್ಷಗಾನ ರಂಗಭೂಮಿಗಳ ಮಾತು- ಸಂವಾದ, ನಾಟಕ- ಇದು ಆಶುರಚನೆ, ಪ್ರಸಂಗದ ಪದ್ಯಗಳ ಸ್ಥೂಲವಾದ ಹಂದರದ ಮೇಲೆ ಅಲ್ಲಲ್ಲೆ ರಚನೆಗೊಳ್ಳುವ ಸ್ವಂತ ಅರ್ಥಗಾರಿಕೆ. ಇದು ನಿಜಕ್ಕೂ ವಾಕ್‌ ಸಾಹಿತ್ಯದ ಬ್ರಹ್ಮಾಂಡ. ಭಾಗವತರ ಪದ್ಯಗಳಿಗೆ ಪಾತ್ರಧಾರಿ ಅರ್ಥ ಹೇಳುವುದಲ್ಲ, ಅರ್ಥ ಮಾತನಾಡು ವುದು. ಇದರ ಸಾಧ್ಯತೆಗಳು ಅನಂತ.ಇಡಿಯ ಯಕ್ಷಗಾನ ಪ್ರದರ್ಶನವು ಪದ್ಯ (ಹಾಡು ಮತ್ತು ಹಿಮ್ಮೇಳ)- ನೃತ್ಯ ಚಲನೆ, ರಂಗ ಪದ್ಧತಿಗಳು, ಮಾತು- ಪುನಃ ಪದ್ಯ ಹೀಗೆ ಒಂದು ಸರಪಣಿಯಾಗಿ ನಡೆಯುವುದು. ಅದರಲ್ಲಿ ಪುರಾಣ, ವರ್ತಮಾನ, ಅಲಂಕಾರ, ಭಾವ, ವಿಮರ್ಶೆ, ಒಳನೋಟ, ಆಖ್ಯಾನ, ವ್ಯಾಖ್ಯಾನ ಎಲ್ಲ ಸೇರಿ ರಚನೆಯಾಗುತ್ತದೆ. ವಿವಿಧ ಕಾಲಗಳ ತಣ್ತೀ ಶಾಸ್ತ್ರ, ನೀತಿ ಮತ್ತು ಸಂಸ್ಕೃತಿಯ ಪದರುಗಳ ಸಮನ್ವಯವಾಗುತ್ತದೆ. “ಸದ್ಯೋಜಾತ ಸದ್ಯೋಗಷ್ಟ’ ಕಾವ್ಯಗಳು ಎನ್ನುವುದು ದಿ| ಪಂಡಿತ ಪೆರ್ಲ ಕೃಷ್ಣ ಭಟ್ಟರ ಮಾತು. ಶತಮಾನಗಳ ಕಾಲ ಕೋಟಿಗಟ್ಟಲೆ ಗಂಟೆ ನಡೆದ ಆಶುಭಾಷಣ ಇದು. ಆದರೆ, ಒಂದೇ ಒಂದು ಆಂಗ್ಲ ಪದವಿಲ್ಲದ ಕನ್ನಡ. ಈ ಭಾಷಾ ಸಿದ್ಧಿ, ಶುದ್ಧಿಯೇ ಒಂದು ಮಹಾಕಥನ.

ವಿಶಿಷ್ಟ ಭಾಷಿಕ ಸನ್ನಿವೇಶ
ಕರಾವಳಿಯ ಆಡುಮಾತು ಎಂಬುದೇ ಕಲಿತ ಕನ್ನಡ, ಗ್ರಾಂಥಿಕ ಭಾಷೆ. ಜೊತೆಗೆ ಬಹುಭಾಷಿಕತೆ. ಈ ವಿಶಿಷ್ಟವಾದ ಭಾಷಿಕ ಸನ್ನಿವೇಶವು ಯಕ್ಷಗಾನದ ಸಾಹಿತ್ಯದ ಶಿಷ್ಟ ಕನ್ನಡ ರೂಪುಗೊಳ್ಳಲು ಮುಖ್ಯ ಕಾರಣವಾಗಿದೆ. ಬಹುಭಾಷಿಕತೆಯು ಅನುಭವ ಶ್ರೀಮಂತಿಕೆ ಮತ್ತು ಅಭಿವ್ಯಕ್ತಿಯ ವೈವಿಧ್ಯವನ್ನು ನೀಡಿದೆ. ಮಾಧ್ಯಮ ಮತ್ತು ನಿತ್ಯ ಬಳಕೆಯ ಶಬ್ದ ಮತ್ತು ಪ್ರಯೋಗಗಳಲ್ಲಿ ಆಗುತ್ತಿರುವ ಸಂಕರ, ಮಾಧ್ಯಮಗಳ ಭಯಾನಕ ಭಾಷೆಯ ಆಕ್ರಮಣಗಳ ಮಧ್ಯೆಯೂ ಭಾಷಾ ಗಾಂಭೀರ್ಯ ಉಳಿಸಿಕೊಂಡ ಹೆಮ್ಮೆ ಯಕ್ಷಗಾನದ್ದು.

ಅರ್ಥ ಸಾಹಿತಿಗಳ ಶ್ರೇಷ್ಠ ಸಂಕಥನ
ಕಿಲ್ಲೆ-ಸಾಮಗ-ಶೇಣಿ-ದೇರಾಜೆ ಹೀಗೆ ಅರ್ಥ ಸಾಹಿತಿಗಳು ನೂರಾರು. ಸುದೀರ್ಘ‌ ಇತಿಹಾಸದಲ್ಲಿ ಜ್ಞಾತ, ಅಜ್ಞಾತ, ಆಗಿ ಹೋದ,
ಇರುವ ವಾಕ್ಕವಿಗಳು ರಚಿಸಿದ ಅರ್ಥ ಪರಂಪರೆಯು ಭಾಷೆ ವಿಷಯ ವಿಶ್ಲೇಷಣೆ, ಕಾವ್ಯ ಗುಣಗಳಲ್ಲಿ ಕನ್ನಡದ, ದೇಶದ ಶ್ರೇಷ್ಠ ಸಂಕಥನಗಳಲ್ಲಿ ಗಣನೆಗೆ ಅರ್ಹವೆಂದು ಈಗಾಗಲೇ ವಿಮರ್ಶಕರು ಹೇಳಿದ್ದಾರೆ. ಪ್ರಾತಿನಿಧಿಕವಾಗಿ ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥವನ್ನು ಕೇಳಿದರೆ ಸಾಕು. ಭಾವ, ಭಾಷೆ, ವಿಷಯ, ವಾದ, ಸ್ವರ, ಅಭಿವ್ಯಕ್ತಿ, ಚಿತ್ರಣ, ಪಾಂಡಿತ್ಯಗಳಲ್ಲಿ “ಅರ್ಥ’ ಎಂದರೆ ಶೇಣಿ ಪೂರ್ಣ ಶ್ರೇಣಿ! ಯಕ್ಷಗಾನದ ಹಾಸ್ಯವೆಂಬ ಬಹುಪದರಿನ ವೇದಾಂತವು ಅಸಾಧಾರಣ ಕಥನವಾಗಿದೆ.

ಯಕ್ಷಗಾನ ಸಾಹಿತ್ಯದಲ್ಲಿ ವಿಮರ್ಶೆ, ವಿವರಣೆ, ಶಿಕ್ಷಣ ಪಠ್ಯಗಳು ಸೇರಿವೆ. ಯಕ್ಷಗಾನದ ಅಂಗೋಪಾಂಗಗಳ- ಗಾನ, ಗೀತ, ಅರ್ಥ, ಶಾಸ್ತ್ರೀಯತೆ, ಹಿಮ್ಮೇಳ, ರಂಗ ವಿಧಾನ, ಇತಿಹಾಸ, ವ್ಯಕ್ತಿಪರ- ವಿಶ್ಲೇಷಣೆ ಬಂದಿದೆ. ಸುಮಾರು 50 ಪಿಎಚ್‌.ಡಿ. ಪ್ರಬಂಧಗಳಲ್ಲಿ ಹೆಚ್ಚಿನವು ಒಳ್ಳೆಯ ಗುಣಮಟ್ಟ ಹೊಂದಿವೆ. ಪ್ರೌಢ ಪ್ರೇಕ್ಷಕರ ಮೌಖೀಕ ವಿಮರ್ಶೆಯ ಪರಂಪರೆಯೂ ದೊಡ್ಡದಿದೆ. ನಾನಾ ಭಾಷೆಗಳಲ್ಲೂ ಯಕ್ಷಗಾನ ಅರಳಿದೆ.

ಭಾಷಾ ಪ್ರಯೋಗದಲ್ಲಿ ದೋಷ ಪ್ರವೇಶ
ವಿಶ್ವಗಾನವೆಂದು, ಶ್ರೇಷ್ಠವೆಂದು ನಾವು ಹೆಮ್ಮೆಪಡುವ ಈ ಕಲಾ ಭಾಷಾ ಸಮುತ್ಛಯದಲ್ಲಿ ಕಳೆದ ಕೆಲವು ದಶಕಗಳಲ್ಲಿ ಭಾಷಾ ಪ್ರಯೋಗ, ಮಾತುಗಾರಿಕೆಗಳು ಹಿಂದಿನ ಮೊನಚುತನ ಕಳೆದುಕೊಂಡಿವೆ. ಭಾಷಾ ಶುದ್ಧಿಯೇ ಪ್ರಧಾನವಾಗಿ ಗಮನ ಸೆಳೆದ ಮಾಧ್ಯಮದಲ್ಲಿ ಅದನ್ನಾ, ಇದನ್ನಾ, ಗರಂ, ಖತಂ ಎಂಬೆಲ್ಲ ಪದ ಪ್ರಯೋಗಗಳು, ಉಚ್ಛಾರ ದೋಷಗಳು ಹೆಚ್ಚಾಗುತ್ತಿವೆ. ಗಾಯನದ ವಿಚಾರಕ್ಕೆ ಬಂದರೆ ಏರುಪದದ ಅಸ್ಪಷ್ಟತೆ. ಕೆಲವೊಮ್ಮೆ ಗಾನ, ಗದ್ಯಗಳ ಅತಿವೇಗ. ಕೆಲವು ಸವೆದು ಹೋದ ಪದಪ್ರಯೋಗಗಳು, ಮೃತ ರೂಪಕಗಳು ಎದುರಾಗುತ್ತವೆ. ಇದಕ್ಕೆಲ್ಲ “ಅದು ಪರಂಪರೆ’ ಎಂಬ ಸಮರ್ಥನೆ ನೀಡಲಾಗುತ್ತದೆ.
ಒಟ್ಟು ಅಭಿವ್ಯಕ್ತಿ, ನುಡಿಗಟ್ಟು, ಸಾಹಿತ್ಯ, ನೃತ್ತ, ನಾಟ್ಯ, ಭಂಗಿ, ಪದ್ಯರಚನೆ, ಚಲನೆ, ಗಾನಗಳಲ್ಲಿ ರಸಿಕರ ಅಪೇಕ್ಷೆ ಹೆಸರಲ್ಲಿ ಸಿನಿಮೀಯತೆ ಆವರಿ ಸುತ್ತಿದೆ. ಫ್ಯಾನ್ಸಿ ಧೋರಣೆ ಹಣಕಿದೆ. ಇದಕ್ಕೆಲ್ಲ ಪ್ರೇಕ್ಷಕರ ಬೇಡಿಕೆ ಎಂಬ ಸಬೂಬನ್ನು ಹೇಳಲಾಗುತ್ತಿದೆ, ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಯ ಮೋಹಕ್ಕೆ ಒಳಗಾಗಿ ಯಕ್ಷಗಾನದ ಮೂಲಿಕ ರೇಖೆಯನ್ನು ಮೀರಲಾಗುತ್ತಿದೆ. ದೈನಂದಿನ ಆಗುಹೋಗುಗಳಿಗೆ ಸ್ಪಂದಿಸುವ ಭರದಲ್ಲಿ ಜಾಲ ತಾಣದ ರೀಲ್ಸ್‌ಗಳನ್ನೇ ಮರುಸೃಷ್ಟಿ, ರಾಜಕೀಯ ಪ್ರವೇಶ ಮಾಡುವುದೂ ಇದೆ.

ಎತ್ತರಕ್ಕೇರಿಸುವ ಕಲೆ ನಮ್ಮಲ್ಲೇ ಇದೆ
ಯಕ್ಷಗಾನ ಎನ್ನುವುದು ಸ್ವಂತ ಆಶುಮಾತಿನ ರಂಗ. ಇಲ್ಲಿ ಸ್ವಾತಂತ್ರ್ಯ ಹೆಚ್ಚು. ಜವಾಬ್ದಾರಿಯೂ ಹೆಚ್ಚು. ಜತೆಗೆ ಯಕ್ಷಗಾನಕ್ಕೆ ಇರುವ ಪರಂಪರೆಯನ್ನು ಉಳಿಸಿಕೊಳ್ಳುವ ಹೊಣೆಗಾರಿಕೆಯೂ ಇದೆ. ಹಿಂದೆ ಹೆಚ್ಚಿನ ವಿದ್ಯಾಭ್ಯಾಸವಿಲ್ಲದ, ಓದುವಿಕೆಗೆ ಅವಕಾಶವಿಲ್ಲದ ಕಾಲದಲ್ಲೂ ಕಲಾವಿದರು ಬಹಳಷ್ಟು ಕಷ್ಟಪಟ್ಟು ಅಧ್ಯಯನ ನಡೆಸಿ ಮಾತನಾಡುತ್ತಿದ್ದರು. ಯಾವುದೇ ವಿಚಾರವನ್ನು ಸಮಕಾಲೀನತೆಗೆ ಬಳಸಿಕೊಂಡರೂ ವಿದ್ವತ್‌ಪೂರ್ಣತೆ ಇತ್ತು. ನಿಜವಾಗಿ ಈಗ ಅಧ್ಯಯನಕ್ಕೆ ಅಪಾರ ಅವಕಾಶವಿದೆ. ಖುಷಿಯ ಸಂಗತಿ ಎಂದರೆ ಈಗ ಯಕ್ಷಗಾನ ಕಲಿಕೆಗೆ ಅವಕಾಶ ಮತ್ತು ಪ್ರೋತ್ಸಾಹ ಎರಡೂ ಚೆನ್ನಾಗಿದೆ. ಅ ಅದನ್ನು ಬಳಸಿಕೊಂಡು ಯಕ್ಷಗಾನದ ಭಾಷೆಯನ್ನು ಮೇಲ್ಮಟ್ಟಕ್ಕೆ ಒಯ್ಯುವ ಅವಕಾಶ ಎಲ್ಲರಿಗೂ ಇದೆ.
ಒಟ್ಟಿನಲ್ಲಿ ವಿಸ್ತರಿಸುತ್ತಿರುವ ಭಾಷಾ ವಲಯ, ಕಲಾ ವಲಯ, ವಿಶ್ವ ವ್ಯಾಪಿ ಬದಲಾವಣೆಗಳ ನಡುವೆ ನಮ್ಮ ಕಲೆಗಳು, ಭಾಷೆಗಳು ಉಳಿಯಬೇಕಾದರೆ ಸತತ ಸಂಸ್ಕರಣ, ಇತ್ಯಾತ್ಮಕ ಪರಿಷ್ಕಾರ, ಅಪೇಕ್ಷಿತವಿದೆ. ಹಾಗಾದರೇ ವಿಶ್ವಗಾನ.

ಆಗಬೇಕಾದ್ದೇನು?
1.ಯಕ್ಷಗಾನ ಕೇಂದ್ರಗಳಲ್ಲಿ ನೃತ್ಯ, ಸಂಗೀತದ ಜತೆ ತಜ್ಞರಿಂದ ಮಾತುಗಾರಿಕೆ ಕಲಿಸುವ ವ್ಯವಸ್ಥೆ.
2.ಮಾತುಗಾರಿಕೆಯನ್ನು ಪ್ರಸಂಗ ಮತ್ತು ಪುರಾಣ ಜ್ಞಾನದೊಂದಿಗೆ ವಿಸ್ತರಿಸುವ ಕಲೆಗಾರಿಕೆ ಬೇಕು.
3.ಪ್ರೇಕ್ಷಕರು ಔಚಿತ್ಯಪೂರ್ಣ, ಪ್ರಸಂಗದ ವ್ಯಾಪ್ತಿಯ ಮಾತು, ನಡೆಗಳನ್ನು ಪ್ರೋತ್ಸಾಹಿಸಬೇಕು.
4.ಕಿರಿಯ ಮತ್ತು ಮಧ್ಯಮ ಹಂತದ ಕಲಾವಿದರಿಗೆ ಮಾರ್ಗದರ್ಶನ ಶಿಬಿರ, ಕಮ್ಮಟ ನಡೆಸಬೇಕು.
5.ಕನ್ನಡ ಬಯಲಾಟಗಳು ಮತ್ತು ಕನ್ನಡ ಪ್ರಾಥಮಿಕ ಶಾಲೆ ಉಳಿದರೆ ಕನ್ನಡದ ನೆಲೆ ಭದ್ರವಾಗುತ್ತದೆ.

-ಡಾ| ಎಂ. ಪ್ರಭಾಕರ ಜೋಶಿ
ಸಂಸ್ಕೃತಿ ವಿಮರ್ಶಕ, ಬಹುಶ್ರುತ ವಿದ್ವಾಂಸ, ಅರ್ಥದಾರಿ

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.