ಮಳೆ ಬಿಲ್ಲು ಕರಗದೆ ಉಳಿದ ಬಣ್ಣ: ಬದುಕಿಗೆ ಬೇಕಾದ ಖರೀದಿ ಆಯ್ಕೆ ನಮ್ಮದು
Team Udayavani, Aug 8, 2021, 6:00 AM IST
ಬದುಕಿಗೆ ಬೇಕಾದ ಖರೀದಿ ಆಯ್ಕೆ ನಮ್ಮದು :
ಒಂದು ತಗೊಂಡ್ರೆ ಇನ್ನೊಂದು ಪುಗಸಟ್ಟೆ.. ಇದೂ ಒಂದು ವ್ಯಾಪಾರಿ ತಂತ್ರ. ಖರೀದಿಸಿ ಉಳಿತಾಯ ಮಾಡಿ ಎಂಬ ಮೂರ್ಖತನದ ರೀತಿಯಲಿ ಖರೀದಿಸಿ ಉಳಿತಾಯ ಮಾಡೋದು ಹೇಗೆ ಎಂದು ಯೋಚಿಸಿ ಸ್ವಲ್ಪ ಉಪಾಯ ಇಲ್ಲಿದೆ. ಕೆಲವು ನಿದರ್ಶನ ಗಮನಿಸಿ.
ಕೋಪ ಸ್ವಲ್ಪ ಹೆಚ್ಚುವರಿಯಾಗಿ ಖರೀದಿಸಿ ಆಗ ಅಸಿಡಿಟಿ ಉಚಿತ. ಅಸೂಯೆ ಖರೀದಿಸಿ ದಾಗ ನಿಮಗೆ ಹೊಟ್ಟೆಕಿಚ್ಚು, ಒತ್ತಡ ಖರೀದಿಸಿದರೆ ಬಿಪಿ ಫ್ರೀ. ಹಾಗೆಯೇ ವಾಚಾಳಿಯಾಗಿ ಬಿಟ್ಟು ಉಳಿದವರ ರಂಜಿಸಿ, ವಿಶ್ವಾಸ ಪಡೆದರೆ, ಮನಸ್ಸು ಗೆದ್ದರೆ ಗೆಳೆತನ ಪುಕ್ಕಟೆ, ಶಾಂತಿ ಖರೀದಿಸಿ ನೋಡಿ, ನಿಮಗೆ ಸುಖ ಸಂತೃಪ್ತಿ ಫ್ರೀ, ಪ್ರಾಮಾಣಿಕತೆ, ಸತ್ಯಸಂಧತೆ ಖರೀದಿಸಿ, ಆಗ ರಾತ್ರಿ ನಿದ್ರೆ ಹೊರಳಾಟವಿಲ್ಲದೆ ಶಾಂತ ಚಿತ್ತದಿಂದ ಫ್ರೀ, ಪ್ರೀತಿ ಸ್ನೇಹ ಇತ್ಯಾದಿ ಕಾಂಬೋ ಆಫರ್ ಇದ್ದರೆ ಸದ್ಗುಣ ಸದಾಚಾರ ಉಳ್ಳವರ ಸಂಘ ಫ್ರೀ ಇವೆಲ್ಲ ನಿಮ್ಮದೇ ನಿಯಂತ್ರಣದಲ್ಲಿ ಇರುವ ಕಾರಣ ನೀವು ಏನನ್ನು ಬೇಕಾದರೂ ಖರೀದಿಸಲು ಸ್ವತಂತ್ರರು. ನಿಮ್ಮದೇ ಆಯ್ಕೆ. ಸಗುಣ ನಿಮ್ಮದಾದರೆ, ನೀವು ಅವಗುಣ ಮುಕ್ತರಾದರೆ ನಿಮಗೆ ಈ ಬಂಪರ್ ಕೊಡುಗೆ ಒಂದರ ಜತೆ ಇನ್ನೊಂದು ಉಚಿತ.. ಸಂದೇಹ ಬೇಡ. ಹೀಗೊಂದು ಮರಾಠಿ ಸಂದೇಶ ಬಂದಿತ್ತು. – ಅನುವಾದ: ಬಿ. ನರಸಿಂಗ ರಾವ್, ಕಾಸರಗೋಡು
ನಕಾರಾತ್ಮಕ ಗುಣಗಳನ್ನು ತ್ಯಜಿಸಿ : ಇತ್ತೀಚೆಗೆ ಮಿತ್ರರೊಬ್ಬರು ಕಳುಹಿಸಿದ ವಾಟ್ಸ್‌ಆ್ಯಪ್ ಸಂದೇಶವೊಂದು ಬಹಳ ಅರ್ಥಪೂರ್ಣವಾಗಿತ್ತು. ಮನುಷ್ಯನ ವ್ಯಕ್ತಿತ್ವಕ್ಕೆ ಮಾರಕವಾಗಬಲ್ಲ 5 ನಕಾರಾತ್ಮಕ ಗುಣಗಳು ಹೇಗೆ ಅವನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಬಲ್ಲದು ಎನ್ನುವುದೇ ಅದರ ಸಾರಾಂಶ.
- ಅತಿಯಾದ ಯೋಚನೆ – ಯೋಚನೆ ಬಿಡಿ ಕಾರ್ಯ ಮಗ್ನರಾಗಿ.
- ಅತಿಯಾದ ಚಿಂತೆ- ಚಿಂತೆಯು ಚಿತೆಗೆ ದೂಡಬಹುದು ಆದ್ದರಿಂದ ಚಿಂತೆಯಿಂದ ದೂರವಿರಿ.
- ಗತಿಸಿ ಹೋದ ಘಟನೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದು- ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಏನು ಪ್ರಯೋಜನ ಅಲ್ಲವೇ?
- ಪ್ರತಿಯೊಬ್ಬರನ್ನು ಸಂತೋಷಿಸಲು ಪ್ರಯತ್ನಿಸುವುದು- ಇದು ಅಸಾಧ್ಯದ ಮಾತು.
- ಸಂಶಯ- ಆತ್ಮ ವಿಶ್ವಾಸ ಕಡಿಮೆಯಾದಾಗ, ತಮ್ಮಲ್ಲಿ ಸಂಶಯ ಗುಣವಿದ್ದಾಗ ಇನ್ನೊಬ್ಬರನ್ನು ಹೇಗೆ ವಿಶ್ವಾಸಿಸಲು ಸಾಧ್ಯ?
ಹೀಗಾಗಿ ಈ ಐದು ಅವಗುಣಗಳನ್ನು ಮುರಿಯಬೇಕು ಎನ್ನುವ ಸಂದೇಶದಲ್ಲಿ ಸಂತೋಷದ ಜೀವನಕ್ಕಾಗಿ ಏನು ಮಾಡಲು ಸಾಧ್ಯ ಎನ್ನುವುದನ್ನು ಅರ್ಥವತ್ತಾಗಿ ವಿವರಿಸಿದ್ದಾರೆ.
– ಸೊಲೊಮನ್ ಸಾಲಿನ್ಸ್, ಬ್ರಹ್ಮಾವರ
ಸಹಾಯವೆಂದರೆ ಹಣವಲ್ಲ :
By heeping one person You can’t change the world But you can surely change his world ತುಂಬಾ ಅರ್ಥಪೂರ್ಣವಾದ ಈ ಸಂದೇಶವು ವಾಟ್ಸ್‌ಆ್ಯಪ್‌ನಲ್ಲಿ ಬಂದಿತ್ತು. ನೀಡುವ ಕೈಗಳಿಗಿಂತ ಬೇಡುವ ಕೈಗಳು ಬಹಳ. ಮನುಷ್ಯ ಮನೆ ಮನೆಯ ಲ್ಲಿಯೂ ಜನಿಸುತ್ತಾನೆ. ಆದರೆ ಮನುಷ್ಯತ್ವ ಎಂಬುದು ಕೆಲವರಲ್ಲಿ ಮಾತ್ರ. ಮಾನವೀಯತೆ, ಮನುಷ್ಯತ್ವ ಈ ಎಲ್ಲ ಶಬ್ದಗಳು ಕೇಳಲು ತುಂಬಾ ಹಿತವಾಗಿರುತ್ತದೆ. ಪಾಲಿಸುವುದು ಕಷ್ಟವೇ ಸರಿ. ಒಬ್ಬರು ಕಷ್ಟ ಅಥವಾ ಯಾವುದೇ ತೊಂದರೆಯಲ್ಲಿ ಸಿಲುಕಿದ್ದಾಗ ಸಹಾಯ ಮಾಡುತ್ತೇವೆ. ಇದರಿಂದ ನಾವು ಇಡೀ ಪ್ರಪಂಚವನ್ನು ಬದಲಾಯಿಸಲು ಸಾಧ್ಯವಿಲ್ಲ . ಆದರೆ ಅವನ ಕುಟುಂಬವೆಂಬ ಚಿಕ್ಕ ಪ್ರಪಂಚವನ್ನು ಬದಲಾಯಿಸಬಹುದು. ಬರೀ ಹಣದ ಸಹಾಯವನ್ನಲ್ಲದೇ ಮನುಷ್ಯ ಬೇರೊಬ್ಬರಿಗೆ ಮಾನಸಿಕವಾಗಿ, ದೈಹಿಕವಾಗಿಯೂ ಅವನ ಕಷ್ಟದಲ್ಲಿ ಪಾಲ್ಗೊಂಡು ತಮ್ಮಿಂದಾಗುವ ಸೇವೆಯನ್ನು ಮಾಡಬಹುದು. – ಆಶಾ, ನಾರಾವಿ
ಹಿತಮಿತವಾಗಿರಲಿ ಮಾತು : 95% Problems of life are due to the tone of voice. It’s not what we Say, It’s how we say, Just change the tone and See the changes in life… ಮಾತು ಬೆಳ್ಳಿ , ಮೌನ ಬಂಗಾರ.. ಮಾತು ಮನೆ ಮುರಿಯಿತು, ತೂತು ಒಲೆ ಕೆಡಿಸಿತು.. ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ . ಈ ಗಾದೆ ಮಾತುಗಳು ಮಾತಿಗೆ ಸಂಬಂಧಿಸಿರುವಂಥದ್ದು. ನಾವು ಮಾತನಾಡುವ ರೀತಿ ನಮ್ಮ ಗುಣ, ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಮಾತನ್ನು ಎಲ್ಲಿ, ಹೇಗೆ, ಎಷ್ಟು ಯಾವ ಸಮಯ, ಪರಿಸ್ಥಿತಿಯಲ್ಲಿ ಯಾವ ರೀತಿ ಮಾತನಾಡಬೇಕು ಎಂಬುದು ತುಂಬಾ ಮುಖ್ಯ. ಜೀವನದಲ್ಲಿ ಶೇ.95ರಷ್ಟು ಸಮಸ್ಯೆ ಉಂಟಾಗುವುದು ಮಾತಿನ ಧಾಟಿಯಿಂದಲೇ ಎಂದರೆ ತಪ್ಪಾಗಲಾರದು. ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಬಸವಣ್ಣನವರು ಹೇಳಿದ ಹಾಗೆ ಬೇರೆಯವರ ಮನ ನೋಯದ ಹಾಗೆ ಅವರಿಗೆ ಅರ್ಥವಾಗುವ ರೀತಿ ಶಾಂತಿ ಸಮಾಧಾನದಿಂದ ಮಾತನಾಡಿ ತಿಳಿ ಹೇಳಿದಾಗ ಯಾವ ಸಮಸ್ಯೆಯೂ ಎದುರಾಗುವುದಿಲ್ಲ. ಮಾತನಾಡುವ ರೀತಿಯನ್ನು ಬದಲಿಸಿಕೊಂಡರೆ ಖಂಡಿತ ಯಾವ ಸಂಬಂಧದಲ್ಲೂ ಬಿರುಕು ಬೀಳುವುದಿಲ್ಲ. ಯಾರಿಗೂ ಬೇಸರವಾಗುವುದಿಲ್ಲ. ಒಮ್ಮೆ ಮಾತನಾಡುವ ಶೈಲಿಯನ್ನು ಬದಲಿಸಿ ನೋಡಿ. ಜೀವನದಲ್ಲಿ ಒಳ್ಳೆಯ ಬದಲಾವಣೆ ಕಾಣಬಹುದು.- ಜ್ಯೋತಿ ಕಿಣಿ, ಮುಂಬಯಿ
ಸಾಮಾಜಿಕ ಮಾಧ್ಯಮಗಳು ನಮ್ಮ ಇಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ದಿನಕ್ಕೆ ನೂರಾರು, ಸಾವಿರಾರು ಸಂದೇಶಗಳು ವಾಟ್ಸ್‌ಆ್ಯಪ್, ನಮ್ಮ ಫೇಸ್‌ಬುಕ್ ವಾಲ್‌ಗಳಲ್ಲಿ ಹರಿದಾಡುತ್ತವೆ. ನೀವು ನಿಮಗೆ ಖುಷಿಕೊಟ್ಟ ಮೆಸೇಜ್‌ಗಳನ್ನು 76187 74529 ಈ ಸಂಖ್ಯೆಗೆ ವಾಟ್ಸ್ ಆ್ಯಪ್ ಮಾಡಿ. ಸೂಕ್ತ ಬರಹಗಳನ್ನು ಪ್ರಕಟಿಸುತ್ತೇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.