ಅಂತರಂಗ ಪರಿಶುದ್ಧವಾಗಿರಲಿ
Team Udayavani, Sep 19, 2021, 6:00 AM IST
ಒಮ್ಮೆ ದೇವನಾದ ಶ್ರೀಕೃಷ್ಣ ಅಲಂಕರಿಸಿಕೊಳ್ಳುತ್ತಾ ಕನ್ನಡಿಯ ಮುಂದೆ ನಿಂತಿದ್ದ. ತನ್ನ ತಲೆಯ ಮೇಲೆ ವಿವಿಧ ಕಿರೀಟಗಳನ್ನು ಧರಿಸಿಕೊಂಡು, ಕೆಲವು ಉತ್ತಮವಾದ ಆಭರಣಗಳನ್ನು ಹಾಕಿ ನೋಡುತ್ತಿದ್ದನು.
ಅದೇ ಸಮಯಕ್ಕೆ ಅವನ ಸಾರಥಿಯು ರಥವನ್ನು ಸಿದ್ಧಪಡಿಸಿ ಹೊರಗೆ ಕಾಯುತ್ತಿದ್ದನು. ಅವನ ಸಾರಥಿಯು ಕಾಯುತ್ತಾ ಕಾಯುತ್ತಾ ತಾನೇ ಯೋಚಿಸುತ್ತಾನೆ. ಸಾಮಾನ್ಯವಾಗಿ, ಕೃಷ್ಣ ತತ್‌ಕ್ಷಣ ಬರುತ್ತಾನೆ, ಇಂದು ಅವನು ಇನ್ನೂ ಬಂದಿಲ್ಲ ಯಾಕಿರಬಹುದು ಎಂದು ಯೋಚಿಸಿ ಕೃಷ್ಣನೇನು ಮಾಡುತ್ತಿ¨ªಾನೆಂದು ನೋಡಲು ಒಳಗೆ ಹೋಗುತ್ತಾನೆ. ಸಾರಥಿಯು ಒಳಗೆ ಹೋಗಿ ಕೃಷ್ಣ ಕನ್ನಡಿಯ ಮುಂದೆ ನಿಂತು ತನ್ನನ್ನು ತಾನೇ ಮೆಚ್ಚಿಕೊಳ್ಳುವುದನ್ನು ನೋಡುತ್ತಾನೆ. ಆಗ ನಯವಾಗಿ ಸಾರಥಿಯು, ಇಂದು ಯಾಕೆ ತುಂಬಾ ಅಲಂಕಾರ ಮಾಡುತ್ತಿದ್ದೀರಿ, ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಪ್ರಶ್ನಿಸುತ್ತಾನೆ.
ಆಗ ಶ್ರೀಕೃಷ್ಣ , ನಾವು ದುರ್ಯೋದನನನ್ನು ಭೇಟಿಯಾಗಲಿದ್ದೇವೆ ಎನ್ನುತ್ತಾನೆ. ಅದಕ್ಕೆ ಸಾರಥಿ ಆಶ್ಚರ್ಯದಿಂದ ದುರ್ಯೋದನನನ್ನು ಭೇಟಿಯಾಗಲು ಇಷ್ಟೊಂದು ಅಲಂಕಾರ ಮಾಡಿಕೊಳ್ಳಿತ್ತಿರುವಿರೇ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಶ್ರೀಕೃಷ್ಣ, ಅವನು ನನ್ನ ಅಂತರಂಗವನ್ನು ನೋಡಲು ಸಾಧ್ಯವಿಲ್ಲ. ಕೇವಲ ಬಾಹ್ಯ ಸೌಂದರ್ಯವನ್ನು ನೋಡಿ ಮೆಚ್ಚಿಕೊಳ್ಳುತ್ತಾನೆ. ಅದಕ್ಕೆ ಹೀಗೆ ಅಲಂಕಾರ ಮಾಡುತ್ತಿದ್ದೇನೆ ಎನ್ನುತ್ತಾನೆ. ಅದಕ್ಕೆ ಸಾರಥಿ, ದುರ್ಯೋದನನ ಬಳಿ ನೀವೇಕೆ ಹೋಗಬೇಕು. ಅವನೇ ಬರಬೇಕು. ನೀವು ಹೋಗುವುದನ್ನು ನಾನು ಒಪ್ಪುವುದಿಲ್ಲ. ಇದು ನ್ಯಾಯವೂ ಅಲ್ಲ. ನೀವು ಲೋಕಕ್ಕೆ ಪ್ರಭು. ಹೀಗಿರುವಾಗ ಆತನ ಬಳಿ ಹೋಗುವುದು ಸರಿಯಲ್ಲ ಎನ್ನುತ್ತಾನೆ. ಅದಕ್ಕೆ ಶ್ರೀಕೃಷ್ಣ ಮುಗುಳ್ನಕ್ಕು ಕತ್ತಲೆ ಬೆಳಕಿನೆಡೆಗೆ ಬರುವುದಿಲ್ಲ. ಬೆಳಕೇ ಕತ್ತಲೆ ಇರುವಲ್ಲಿಗೆ ಹೋಗಬೇಕು ಎನ್ನುತ್ತಾನೆ.
ಫೇಸ್‌ಬುಕ್‌ನಲ್ಲಿ ಕಂಡ ಈ ಕಥೆಯಲ್ಲಿ ಎರಡು ಪ್ರಮುಖ ವಿಚಾರಗಳಿವೆ. ಒಂದು ಸೌಂದರ್ಯ, ಇನ್ನೊಂದು ಜ್ಞಾನಕ್ಕೆ ಸಂಬಂಧಿಸಿದ್ದು. ನಾವು ಯಾವತ್ತೂ ಇನ್ನೊಬ್ಬರ ಬಾಹ್ಯ ಸೌಂದರ್ಯವನ್ನು ನೋಡಿ ಅಳೆಯಬಾರದು. ಅವರ ಅಂತರಂಗ ಎಷ್ಟು ಶುದ್ಧವಾಗಿದೆ ಎಂಬುದನ್ನು ನೋಡಬೇಕು. ಜ್ಞಾನವೆನ್ನುವುದು ಎಲ್ಲೆಡೆಯೂ ಇರುತ್ತದೆ. ಆದರೆ ನಮ್ಮೊಳಗಿನ ಅಂಧಕಾರವನ್ನು ಹೋಗಲಾಡಿಸಲು ನಾವದನ್ನು ಶುದ್ಧ ಮನಸ್ಸಿನಿಂದ ಸ್ವೀಕರಿಸುತ್ತೇವೆಯೋ ಇಲ್ಲವೋ ಎನ್ನುವುದರ ಮೇಲೆ ಅದು ನಮಗೆ ಸಿಗುವುದು. – ಶ್ರಾವ್ಯಾ, ಉಡುಪಿ
ಜೀವನ ದೀಪದಂತಿರಲಿ:
ಸಂಬಂಧಗಳು ದೀಪದ ಎಣ್ಣೆಯಂತಿರಬೇಕು. ಯಾರೇ ಎಷ್ಟೇ ಬತ್ತಿ ಇಟ್ಟರೂ ಅದು ಬೆಳಗುವಂತಿರಬೇಕು. ಇದು ವಾಟ್ಸ್‌ಆ್ಯಪ್‌ನಲ್ಲಿ ಬಂದಿದ್ದ ಒಂದು ಸುಂದರ ಸಂದೇಶ. ಒಂದು ದೀಪ ಉರಿಯಲು ಎಣ್ಣೆ ಎಷ್ಟು ಅಗತ್ಯವೋ ಬತ್ತಿಯೂ ಕೂಡ ಅಷ್ಟೇ ಮುಖ್ಯವಾದದ್ದು. ಸಂಬಂಧಗಳು ದೀಪ, ಎಣ್ಣೆ, ಬತ್ತಿಯಂತೆ ಸದೃಢವಾಗಿದ್ದರೆ ದೀಪ ಸುಂದರವಾಗಿ ಹೆಚ್ಚು ಹೊತ್ತಿನವರೆಗೂ ಬೆಳಕನ್ನು ಬೀರುತ್ತದೆ. ಎಷ್ಟೇ ಅಡೆತಡೆಗಳು ಎದುರಾದರೂ ಅದನ್ನು ಎದುರಿಸಿ ಹೋರಾಡುತ್ತದೆ. ಅಂತೆಯೇ ನಾವು ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಯಾರು ಏನೇ ಹೇಳಲಿ ನಾವು ಯಾವುದರ ಬಗ್ಗೆಯೂ ಚಿಂತೆ ಮಾಡದೆ ಸುಂದರ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು. ನಾವು ದೀಪದಂತೆ ಬೆಳಗಿ ಇತರರಿಗೆ ಬೆಳಕನ್ನು ಹಂಚಬೇಕು. – ಉಮೇಶ, ಮಂಗಳೂರು
ಕಾಯುವ ತಾಳ್ಮೆಯಿರಲಿ :
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ, ಮನಸ್ಸಿಗೆ ಹಾಸುಹೊಕ್ಕಾದ ಒಂದು ಮೌಲ್ಯಯುಕ್ತ ಸಂದೇಶ “ಬಾಳಿನಲ್ಲಿ ಯಾವುದು, ಯಾರಿಗೆ, ಯಾವಾಗ ಸೇರಬೇಕು ಎಂದು ವಿಧಿಲಿಖೀತವಾಗಿರುತ್ತದೆಯೋ ಅವಾಗ ತಡವಾದರೂ ಸಹ ಅವರಿಗೆ ಸೇರುತ್ತದೆ’ ಎಂಬುದು. ಅದು ವ್ಯಕ್ತಿಯಾದರೂ ಸರಿ, ವಸ್ತುವಾದರೂ ಸರಿ. ಏಕೆಂದರೆ ಹೆಣ್ಣು, ಹೊನ್ನು, ಮಣ್ಣು ಈ ಮೂರು ಸೇರೋ ಋಣ ಇದ್ದರೆ ಏನೇ ಅಡೆತಡೆಗಳಿದ್ದರೂ ಸೇರೋ ಕಾಲ ಬಂದೇಬರುತ್ತದೆ. ಕಾಯುವ ತಾಳ್ಮೆ ನಮ್ಮದಾಗಿರಬೇಕು. ಮನುಷ್ಯನ ಶ್ರಮ, ನಡತೆ, ಗೌರವಕ್ಕೆ ತಕ್ಕ ಪ್ರತಿಫಲ ಖಂಡಿತಾ ಸಿಗುತ್ತದೆ. ಹಣೆಯಲ್ಲಿ ಬರೆದಂತೆ ಅಗುವುದು ಹೊರತು ನಾವು ಬಾಯಿ ಮಾತಿನಲ್ಲಿ ಹೇಳಿದ ಹಾಗೆ ಯಾವುದು ನಡೆಯಲ್ಲ. ಬಯಸಿದ್ದು ಸಿಗಲ್ಲ ಎಂದು ಕೋಪಿಸಿಕೊಳ್ಳುವುದು ಮೂರ್ಖತನ. ಕಾಯುವ ತಾಳ್ಮೆಯೇ ಇದಕ್ಕೆ ಪರಿಹಾರ.– ಸತೀಶ್ ಬಿಳಿಯೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.