ಸಂಸ್ಕೃತಿ; ಜೀವನಶೈಲಿ ನಿರ್ದೇಶಿಸುವ ಕಲೆ
Team Udayavani, Mar 5, 2021, 6:40 AM IST
ಸಾಂದರ್ಭಿಕ ಚಿತ್ರ
ಹೆಚ್ಚಿನ ಜನರಿಗೆ ಸಂಸ್ಕೃತಿ ಎಂದರೇ ಏನೆಂದೇ ಗೊತ್ತಿಲ್ಲ….ಹೀಗೆ ಹೇಳಿದರೇ ಹಲವಾರು ಜನರಿಗೆ ಕೋಪ ಬರಬಹುದು. ಆದರೇ ಇದು ಸರ್ವಕಾಲಿಕ ಸತ್ಯ. ಯಾಕೆಂದರೆ ಜನ ರೇಷನ್ ಬದಲಾದಂತೆ ಸಂಸ್ಕೃತಿಯೂ ಬದಲಾಗುತ್ತಲೇ ಇರುತ್ತದೆ. ಇದನ್ನು ಒಪ್ಪದವರು ಮಾತ್ರ ನಮ್ಮ “ಸಂಸ್ಕೃತಿ’ ನಾಶ ಆಯಿತು ಎಂದು ಬೊಬ್ಬೆ ಹೊಡೆಯುತ್ತಾರೆ.
ಹೆಚ್ಚಿನವರಿಗೆ ಸಂಸ್ಕೃತಿ ಮತ್ತು ಸಂಪ್ರದಾಯ ಎರಡರ ವ್ಯತ್ಯಾಸವೂ ಗೊತ್ತಿಲ್ಲ. ಸಂಪ್ರದಾಯವನ್ನು ಸಂಸ್ಕೃತಿ ಒಟ್ಟಿಗೆ ತಳಕು ಹಾಕಿ, ಭಾರತೀಯ ಪರಂಪರೆಯನ್ನು ಅವಹೇಳನ ಮಾಡುತ್ತಿ ರುವುದು ಅಸಹನೀಯ…
ಮೊದಲು ಸಂಸ್ಕೃತಿಯ ಆರಂಭ ಯಾವಾಗ ಆಗಿದ್ದು ಎನ್ನುವುದನ್ನು ಅವಲೋಕಿಸೋಣ. ಮನುಷ್ಯ ಸಮುದಾ ಯದತ್ತ ಜೀವನ ಪ್ರಾರಂಭ ಮಾಡಿದಾಗ ಮುಕ್ತ ಸಮಾಜದ ಅನಾವರಣದಿಂದ ಬದಲಾವಣೆ ಬಯಸಿ ಮಾಡಿಕೊಂಡ ಬದಲಾವಣೆಯ ಕಣಜವನ್ನು “ಸಂಸ್ಕೃತಿ’ ಎನ್ನಬಹುದು. ನಿಮಗೆ ಈಗ ಓದುವಾಗ ಹೊಸದೊಂದು ಭಾವನೆ ಸಂಸ್ಕೃತಿಯ ಪರಿಕಲ್ಪನೆಗೆ ಬಂದಿದ್ದರೇ ಇದೇ ಸಂಸ್ಕೃತಿಯ ಉಚ್ಛ್ರಾಯ ಸ್ಥಿತಿ.
ಅನಂತರ ಬರುವುದೇ ಸಂಸ್ಕೃತಿಯ ಅನಾವರಣ… ಭಾಷೆ, ಧರ್ಮ, ಸಾಮಾಜಿಕ ಕರ್ತವ್ಯ ಮತ್ತು ಬದ್ಧತೆ, ಸಂಗೀತ, ಕಲೆ ಸಾಹಿತ್ಯ, ಇವುಗಳು ಕಾಲಕ್ಕೆ ತಕ್ಕಂತೆ ಬದಲಾದಾಗ ಮಾತ್ರ ಸಂಸ್ಕೃತಿ ಅನಾವರಣಗೊಳ್ಳುತ್ತದೆ.
ಬಾಲಗಂಗಾಧರ ತಿಲಕ್ ಅವರು 1892ರಲ್ಲಿ “The orion, or researches into the antiquity Vedas’ ಎಂದು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಅವರನ್ನು ಬ್ರಿಟಿಷ್ ಪತ್ರಕರ್ತರು ಕೇಳಿದಾಗ ಹೇಳಿದ್ದರು. ಅದರರ್ಥ ಸಂಸ್ಕೃತಿ ಭಾರತದಲ್ಲಿ ವೇದಗಳಲ್ಲಿ ಅಡಗಿದೆ. ಅದನ್ನು ಎಷ್ಟೇ ಸಂಶೋಧನೆ ಮಾಡಿದರೂ ಹೊಸ ಹೊಸ ರೀತಿಯಲ್ಲಿ ಹೊರಬರುತ್ತದೆ.
ಭೌಗೋಳಿಕವಾಗಿ ನೋಡುವುದಾ ದರೂ ಮನುಷ್ಯನ ಇತಿಹಾಸದಂತೆಯೇ ಸಂಸ್ಕೃತಿಯೂ ಬದಲಾಗುತ್ತ ಬೆಳೆಯು ತ್ತಲೇ ಹೋಗುತ್ತದೆ. ಭಾರತೀಯ ಸಂಸ್ಕೃತಿ ವೇದಗಳಲ್ಲಿ ಅಡಗಿದೆ, ಎಂಬುದು ನಮ್ಮ ಇತಿಹಾಸ ತಜ್ಞರ ಅಭಿಪ್ರಾಯ. ಆದರೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಂಸ್ಕೃತಿ ಅಲ್ಲಿಯ ಭೌಗೋಳಿಕ ಸನ್ನಿವೇಶ, ಪ್ರದೇಶಗಳು, ಸಿದ್ಧಾಂತಗಳು, ಜೀವನಕ್ರಮವನ್ನು ಅವಲಂಬಿಸಿದೆ ಎಂಬುದು ಫೆಡ್ರಿಕ್ ರಾಟ್ಜೆಲ್ ಮತ್ತು ಹಾರ್ಲಪೋರ್ಡ ಮ್ಯಾಕಂರ್ಡ ಅಭಿಪ್ರಾಯಪಟ್ಟಿದ್ದಾರೆ.
ಹಾಗಾಗಿಯೇ ಅಲ್ಲಿಯ ಸಂಸ್ಕೃತಿ ಸಾಧಾರಣವಾಗಿ ಒಂದೇ ಸಿದ್ಧಾಂತದ ಅಡಿಯಲ್ಲಿ ಬರದಿದ್ದರೂ ಜೀವನ ಕ್ರಮ ಮಾತ್ರ ಒಂದೇ ರೀತಿ ಕಂಡುಬರುತ್ತದೆ. ಆದರೆ ಭಾರತೀಯ ಸಂಸ್ಕೃತಿಯನ್ನು ಅಭ್ಯಸಿಸಿದರೆ “ಆರ್ಯಾಸ್’ ಮತ್ತು “ಆರ್ಟಿಕ್’ ಎಂದು ಬೇರೆ ಬೇರೆ ಯಾಗಿ ಪ್ರಸ್ತುತಪಡಿಸಿದ್ದಾರೆ. ” ಶ್ರೀ ಅರಬಿಂದೊ ಪ್ರಕಾರ ಜೈವಿಕವಾಗಿಯೂ ಆಸ್ಟ್ರೋಲಿಜಿಕಲ್ ಆಗಿಯೂ ವೈಜ್ಞಾನಿಕ ವಾಗಿಯೂ ಸಹ ಭಾರತದ ಸಂಸ್ಕೃತಿ ಪ್ರಪಂಚದ ಬೇರೆಲ್ಲ ಸಂಸ್ಕೃತಿಗಿಂತಲೂ ವಿಭಿನ್ನವಾಗಿ ಕಾಣುತ್ತದೆ.
ಅಂದರೆ ನಲವತ್ತು ಲಕ್ಷ ವರ್ಷಗಳ ಹಿಂದೆಯೇ ಸಮಾಜ ಹೇಗಿರುತ್ತದೆ ಎಂಬ ಕಲ್ಪನೆ ಭಾರತೀಯರಿಗಿತ್ತು. ಇದಕ್ಕೆ ಮೂಲ ಕಾರಣ ವೇದಗಳಲ್ಲಿರುವ ಅಂಶಗಳು. ನಾಲ್ಕೂ ವೇದಗಳಲ್ಲಿನ ಸಾಮಾನ್ಯ ಗುಣಗಳನ್ನು ಜನರು ತಮ್ಮದಾಗಿಸಿ
ಕೊಳ್ಳುತ್ತ ಹೋದಾಗ ಶಂಕರ, ಮಧ್ವÌ ಹಾಗೂ ರಾಮಾನುಜ ಆಚಾರ್ಯರು ತಮ್ಮ ತಮ್ಮ ಜೀವಿತಾವಧಿಯಲ್ಲಿ ಹೇಗೆಲ್ಲ ನಾವು ಸಂಸ್ಕೃತಿಯನ್ನು ಉಳಿಸಿಕೊಳ್ಳಬಹುದು ಎಂಬುದನ್ನು ಹೇಳಿದ್ದರು.
ಮೊತ್ತಮೊದಲಾಗಿ ನಾವು ಸಂಸ್ಕೃತಿ ಮತ್ತು ಸಂಪ್ರದಾಯದ ನಡುವಿನ ಸೂಕ್ಷ್ಮ ಅಂತರವನ್ನು ಅರಿತುಕೊಳ್ಳಬೇಕು. ಹೀಗೆ ಬದಲಾದ ಸಂಸ್ಕೃತಿ ಹಾಗೂ ಈಗ ನಾವು ಹೇಳುತ್ತಿರುವ ಸಂಪ್ರದಾಯ ಎರಡನ್ನು ತಳಕು ಹಾಕಿ ನೋಡುವ ಮನೋಭಾವ ಹೋಗಬೇಕು. ಆಗಲೇ ನಮ್ಮ ಭಾರತೀಯ ಸಂಸ್ಕೃತಿ ನಮಗೆ ಸರಿಯಾಗಿ ಅರ್ಥ ಆಗುವುದು.
–ಶಾರದಾ ಭಟ್, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.