ತಿಲಕ್‌ ಯುಗದಲ್ಲಿ ಮೂಡಿದ ಗಣೇಶೋತ್ಸವ ಯುಗ


Team Udayavani, Aug 27, 2022, 6:10 AM IST

ತಿಲಕ್‌ ಯುಗದಲ್ಲಿ ಮೂಡಿದ ಗಣೇಶೋತ್ಸವ ಯುಗ

ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರು. ಅವರಿಗೆ ಹಿಂದೂಗಳ ಪರ ಎಂಬ ಟೀಕೆಯೂ ಬಂದಿತ್ತು. ತಿಲಕರ ವಿರುದ್ಧ ಬ್ರಿಟಿಷ್‌ ಸರಕಾರ ಪ್ರಕರಣ ದಾಖಲಿಸಿದಾಗ ಅವರ ಪರ ವಕಾಲತ್ತು ವಹಿಸಿದವರು ಮುಂದೆ ಪಾಕಿಸ್ಥಾನದ ಜನಕರಾದ ಮಹಮ್ಮದಾಲಿ ಜಿನ್ನಾ. 1916ರಲ್ಲಿ ಲಖನೌ ಕಾಂಗ್ರೆಸ್‌ ಅಧಿವೇಶನದಲ್ಲಿ ಮುಸ್ಲಿಂ ಲೀಗನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದು-ಮುಸ್ಲಿಮರು ಜಂಟಿಯಾಗಿ ಪಾಲ್ಗೊಳ್ಳಲು ಕಾರಣರಾದವರು ತಿಲಕರು. ಇದನ್ನು ಜಿನ್ನಾ, ಶೌಕತ್‌ ಅಲಿಯವರೂ ಹೇಳಿದ್ದರು. ಇದೇ ಅಧಿವೇಶನದಲ್ಲಿ ಕಾಂಗ್ರೆಸ್‌ನ ತೀವ್ರಗಾಮಿಗಳು- ಮಂದಗಾಮಿಗಳೆಂಬ ಗುಂಪುಗಳೂ ಒಂದಾದವು. ತಿಲಕರ ಅಸಹಕಾರ ಆಂದೋಲನ, ಪೂರ್ಣ ಸ್ವರಾಜ್ಯ, ಸ್ವದೇಶೀ ಚಿಂತನೆಯನ್ನೇ ಗಾಂಧೀಜಿ ಮುಂದುವರಿಸಿದರು. “ನಾನು ತಿಲಕರ ಕಲ್ಪನೆಯನ್ನು ನನ್ನದೇ ಆದ ರೀತಿಯಲ್ಲಿ ಜನಮಾನಸಕ್ಕೆ ಮುಟ್ಟಿಸಿದ್ದೇನೆ’ ಎಂದು ಗಾಂಧೀಜಿಯವರೇ ಹೇಳಿದ್ದರು. ನಾವು ಒಬ್ಬರ ಒಂದು ನಡೆ ನೋಡಿದ ಜಡ್ಜ್ಮೆಂಟ್‌ ರೀತಿಯಲ್ಲಿ ಪ್ರತಿಕ್ರಿಯೆ ಕೊಡುತ್ತೇವೆ. ವ್ಯಕ್ತಿಯನ್ನು ಸಮಗ್ರವಾಗಿ ನೋಡದೆ ಒಂದು ಮುಖ/ಒಂದು ನಡೆಯನ್ನು ಮಾತ್ರ ನೋಡಿ ಜಡ್ಜ್ ಮೆಂಟ್ ಕೊಡುವುದು ಸಾಧುವಲ್ಲ ಎಂದು ಅನಿಸುತ್ತದೆ.

19ನೆಯ ಶತಮಾನದಲ್ಲಿ ಒಂದೆಡೆ ಬ್ರಿಟಿಷರ ವಿರುದ್ಧ ಹೋರಾಟ, ಮಗದೊಂದೆಡೆ ಭಾರತೀಯರಲ್ಲಿದ್ದ ಜಾತಿಮತಗಳ ಸಮಸ್ಯೆ, ಮತ್ತೂಂದೆಡೆ ನಾಯಕರ ಒಡಕುಗಳು, ಬ್ರಿಟಿಷರ ಜನಸತ್ತಾ ವಿರೋಧಿ ಆಡಳಿತ, ಕಿತ್ತು ತಿನ್ನುವ ಬಡತನ ಇತ್ಯಾದಿಗಳಿಂದ ಒಟ್ಟಾರೆ ಬದುಕು ಘನಘೋರವಾಗಿತ್ತು. ಮಹಾರಾಷ್ಟ್ರದ ರತ್ನಾಗಿರಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಬುದ್ಧಿಶಾಲಿ ಬಾಲ ಗಂಗಾಧರ ತಿಲಕರು (23-7-1856- 1-8-1920) ಪತ್ರಕರ್ತರಾಗಿ ಬ್ರಿಟಿಷರ ವಿರುದ್ಧ ಹರಿತ ಲೇಖನ- ಪ್ರತ್ಯಕ್ಷ ಹೋರಾಟ, ಗಣಿತ- ಸಂಸ್ಕೃತದ ಶಿಕ್ಷಕರಾಗಿ ಬೋಧನೆ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ(ಪುಣೆಯ ಡೆಕ್ಕನ್‌ ಎಜುಕೇಶನ್‌ ಸೊಸೈಟಿ, ಫ‌ರ್ಗ್ಯುಸನ್‌ ಕಾಲೇಜು), ಸಾಮಾಜಿಕ ಅಂಕುಡೊಂಕುಗಳ ವಿರುದ್ಧ ಜನಜಾಗೃತಿಯ ಜತೆಗೆ ಮನೆಯೊಳಗೆ ನಡೆಯುತ್ತಿದ್ದ ಗಣೇಶನ ಪೂಜೆಯನ್ನು ಸಾರ್ವಜನಿಕವಾಗಿ ಆಚರಿಸಲು ಇಟ್ಟ ಹೆಜ್ಜೆ “ವಿಶ್ವರೂಪ’ ತಳೆಯಲು ಕಾರಣವಾಯಿತು.

ಗಣಪತಿಯನ್ನು ಎಲ್ಲ ಹಿಂತೂಗಳೂ ಪೂಜಿಸುತ್ತಾರೆ. ಸಾಮೂಹಿಕ ಪೂಜೆಗೆ (ಎಲ್ಲರನ್ನೂ ಒಂದುಗೂಡಿಸಿ ಪ್ರಾರ್ಥಿಸಲು) ಗಣೇಶೋತ್ಸವ ಉತ್ತಮವೆಂದು ಆಗ ಒಂದೆಡೆ ಸೇರಿದ್ದ ತಿಲಕ್‌, ನಾಮ್‌ ಜೋಷಿ, ಬಾಬಾ ಮಹಾರಾಜ್‌ ಪಂಡಿತ್‌ ಅವರು ನಿರ್ಧರಿಸಿದರು.

ಮಹಾರಾಷ್ಟ್ರ ಪ್ರದೇಶದಲ್ಲಿ ಶಿವಾಜಿ ಮಹಾರಾಜರ ಕಾಲದಲ್ಲಿ ಸಾರ್ವಜನಿಕವಾಗಿ ಗಣೇಶ ಹಬ್ಬದ ಆಚರಣೆ ನಡೆಯುತ್ತಿತ್ತು. ಸಿಂಧಿಯಾ, ಹೋಳ್ಕರ್‌, ಪೇಶ್ವೆಗಳ ಕಾಲದಲ್ಲಿಯೂ ಇದು ಮುಂದುವರಿದು ಸಾಮಾಜಿಕ ಬುನಾದಿ ಇತ್ತು. ಅನಂತರ ಗಣೇಶ ಹಬ್ಬ ಮನೆ- ಮಂದಿರಗಳಿಗೆ ಸೀಮಿತವಾಯಿತು. ಗಣೇಶ ಹಬ್ಬವನ್ನು ಮರಾಠ ಆಳ್ವಿಕೆಯ ಗ್ವಾಲಿಯರ್‌ನಲ್ಲಿ ಸಾರ್ವಜನಿಕವಾಗಿ ಆಚರಿಸಲಾಗುತ್ತಿತ್ತು. ಅದನ್ನು ನೋಡಿ ರಾಜವೈದ್ಯ ಸ್ವಾತಂತ್ರ್ಯ ಹೋರಾಟಗಾರ ಬಾಹುಸಾಹೇಬ್‌ ರಂಗಾರಿಯವರು 1892ರಲ್ಲಿ ಪುಣೆಯಲ್ಲಿ ಸಾರ್ವಜನಿಕವಾಗಿ ಗಣೇಶ ಪೂಜೆ ನಡೆಸಿದರು. ಅವರು ರಾಕ್ಷಸನನ್ನು ಸಂಹರಿಸುತ್ತಿರುವ ಗಣೇಶ ವಿಗ್ರಹವನ್ನು ಮರ ಹಾಗೂ ಹೊಟ್ಟಿನಿಂದ ಮಾಡಿಸಿಟ್ಟು ದೇಶಕ್ಕೆ ಬಂದಿರುವ ಕೆಟ್ಟದ್ದನ್ನು ಗಣೇಶ ಸಂಹರಿಸುತ್ತಾನೆ ಎಂಬ ಸಂದೇಶವನ್ನು ಸಾರಿದ್ದರಂತೆ. ಇದನ್ನು ಗಮನಿಸಿದ ತಿಲಕರು ತಮ್ಮ ಕೇಸರಿ ಪತ್ರಿಕೆಯಲ್ಲಿ ಪ್ರಕಟಿಸಿ ಪ್ರಚಾರ ಮಾಡಿದರು ಹಾಗೂ ಸಾರ್ವಜನಿಕ ಗಣೇಶೋತ್ಸವಕ್ಕೆ ಎಲ್ಲ ವರ್ಗಗಳ ಜನರನ್ನು ಒಗ್ಗೂಡಿಸುವ ಶಕ್ತಿ ಇರುವುದನ್ನು ಮನಗಂಡರು.

ತಮ್ಮ ಪತ್ರಿಕಾ ಕಚೇರಿಯಲ್ಲಿ (ಕೇಸರಿ ವಾಡ) ಗಣೇಶನನ್ನು ಸ್ಥಾಪಿಸಿ ಹಾಗೆಯೇ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಗಣೇಶ ಮಂಡಳಿಯನ್ನು 1893ರಲ್ಲಿ ಸ್ಥಾಪಿಸಿದರು. ಗಣೇಶನ ಮಣ್ಣಿನ ಮೂರ್ತಿಯನ್ನು ನಿರ್ಮಿಸಿ ಹತ್ತುದಿನಗಳ ಕಾಲ (ಚೌತಿಯಿಂದ ಅನಂತನ ಚತುರ್ದಶಿವರೆಗೆ) ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿ, ಪೂಜಿಸಿ, ವಿಸರ್ಜಿಸುವ ಕಾರ್ಯಕ್ರಮ ಆರಂಭಿಸಿ ಹಳ್ಳಿ ಹಳ್ಳಿಗಳಿಗೆ ತೆರಳಿ ಜನರನ್ನು ಒಗ್ಗೂಡಿಸಿದರು. ಅಲ್ಲಿ ಬ್ರಿಟಿಷರನ್ನು ವಿರೋಧಿಸಿ ಮಾತನಾಡಿದರು. ಅವರ ಸ್ವದೇಶೀ, ಸ್ವರಾಜ್ಯ ಕಲ್ಪನೆ ಬೀಜಾಂಕುರವಾದದ್ದು ಇಲ್ಲಿಯೇ.

ತಿಲಕರು ಕಾಂಗ್ರೆಸ್‌ಗೆ ಸೇರಿದ್ದು 1890ರಲ್ಲಿ. ಗಣೇಶೋತ್ಸವವನ್ನು ಆರಂಭಿಸಿದ್ದು 1893ರಲ್ಲಿ. ಈ ಕಾಲಘಟ್ಟ ಕಂಡಾಗ ಒಂದಕ್ಕೊಂದು ಬೆಸೆಯುವಿಕೆ ಭಾಸವಾಗದೆ ಇರದು.

ತಿಲಕರು 1893ರಿಂದ ಮೂರು ವರ್ಷ ಮಾತ್ರವೇ ಗಣೇಶೋತ್ಸವದಲ್ಲಿ ಸಕ್ರಿಯವಾಗಿರಲು ಸಾಧ್ಯವಾಯಿತು. 1896ರಲ್ಲಿ ಪ್ಲೇಗ್‌ ಮಹಾಮಾರಿ ಅಪ್ಪಳಿಸಿತು. ಕೇಸರಿ ಪತ್ರಿಕೆ ಮೂಲಕ ಜನಜಾಗೃತಿ ಮೂಡಿಸುತ್ತಿದ್ದ ತಿಲಕರು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಪುಣೆಯ ಯರವಾಡಾ ಜೈಲಿನಲ್ಲಿ 18 ತಿಂಗಳು ಜೈಲುವಾಸ ಅನುಭವಿಸಬೇಕಾಯಿತು. ಆಗ ಹೊರಬಂದದ್ದು “ಓರಿಯನ್‌’ ಮತ್ತು “ವೇದ ಕಾಲ ನಿರ್ಣಯ’ ಕೃತಿಗಳು. ಜೈಲಿನ ಆಹಾರಕ್ರಮದಿಂದ ದೇಹವೂ ಕೃಶವಾಗಿ ಆರೋಗ್ಯ ಹದಗೆಟ್ಟಿತು. 1905ರಲ್ಲಿ ಗವರ್ನರ್‌ ಜನರಲ್‌ ಲಾರ್ಡ್‌ ಕರ್ಜನ್‌ ಬಂಗಾಲದ ವಿಭಜನೆಗೆ ನಿರ್ಣಯ ತಳೆದಾಗ 1906ರಲ್ಲಿ ತಿಲಕರು ಘೋಷಿಸಿದ “ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’ ವಾಕ್ಯ ಶಾಲಾ ಮಕ್ಕಳ ಬಾಯಲ್ಲೂ ಹೊರಹೊಮ್ಮಿತು. ಅವರ “ಅಸಹಕಾರ’ ಚಳವಳಿ, ಸ್ವದೇಶಿ- ಸ್ವರಾಜ್ಯ ಕಲ್ಪನೆಯನ್ನು ಗಾಂಧೀಜಿಯವರು “ಕರ ನಿರಾಕರಣೆ’, “ವಿದೇಶಿ ಬಟ್ಟೆಗಳ ಸುಡುವಿಕೆ’ಯಂತಹ ಮಾದರಿಯಲ್ಲಿ ಮುಂದುವರಿಸಿದರು. ಈ ಹೊತ್ತಿನಲ್ಲಿ ದೇಶದ್ರೋಹದ ಆರೋಪದಲ್ಲಿ ಮ್ಯಾನ್ಮಾರ್‌ನ ಮಂಡಾಲೆ ಜೈಲಿನಲ್ಲಿ (ಗಡೀಪಾರು ಶಿಕ್ಷೆ) 1908ರಿಂದ 14ರ ವರೆಗೆ ಸೆರೆಮನೆ ವಾಸ ವಿಧಿಸಲಾಯಿತು. 1912ರಲ್ಲಿ ಅವರ ಪತ್ನಿ ಸತ್ಯಭಾಮಾದೇವಿ ನಿಧನ ಹೊಂದಿದ ತಂತಿ ಸಂದೇಶ ಬಂದಾಗ ತಿಲಕ್‌ ಸೊರಗಿದರು. ಅವಧಿ ಮುಗಿದ ಬಳಿಕ ಸರಕಾರ ಗುಪ್ತವಾಗಿ ಪುಣೆಗೆ ತಂದು ಬಿಟ್ಟರೂ “ಲೋಕಮಾನ್ಯ’ ಆದರು. ಜೈಲಿನಲ್ಲಿ 10 ಕೃತಿಗಳನ್ನು ಹೊರತರಬೇಕೆಂದು ನಿರ್ಧರಿಸಿದ್ದರೂ ಬಂದದ್ದು “ಗೀತಾರಹಸ್ಯ’ ಮಾತ್ರ. ಆದರೆ ಅದು ಅತ್ಯಮೂಲ್ಯವಾಯಿತು. ಮಧುಮೇಹದಿಂದ ಬಳಲುತ್ತಿದ್ದ ತಿಲಕರು 1920ರ ಆಗಸ್ಟ್‌ 1ರಂದು ನಿಧನ ಹೊಂದಿದರು. ಮುಂಬಯಿ ಚೌಪಾಟಿ ಬೀಚ್‌ನಲ್ಲಿ ಸುಮಾರು 2 ಲಕ್ಷ ಅಭಿಮಾನಿಗಳ ಸಮ್ಮುಖ ಅಂತಿಮ ಸಂಸ್ಕಾರ ನಡೆಯಿತು.

19ನೆಯ ಶತಮಾನದ ಕೊನೆ ಮತ್ತು 20ನೆಯ ಶತಮಾನದ ಮೊದಲ ಭಾಗವನ್ನು (ಗಾಂಧೀಜಿಯವರು ನಾಯಕರಾಗಿ ಹೊರಹೊಮ್ಮುವ ಮುನ್ನ) ಸ್ವಾತಂತ್ರ್ಯ ಹೋರಾಟ ಇತಿಹಾಸದಲ್ಲಿ “ತಿಲಕ್‌ ಯುಗ’ ಎಂದು ಇತಿಹಾಸಕಾರರು ಬಣ್ಣಿಸಿದ್ದಾರೆ. ತಿಲಕ್‌ ಯುಗದಲ್ಲಿ “ಗಣೇಶೋತ್ಸವ’ ಯುಗವೂ ಮೇಳೈಸಿದೆ. ಗಣೇಶೋತ್ಸವಗಳ ಪದಾಧಿಕಾರಿಗಳು ಸಹಿತ ನಾವೆಲ್ಲರೂ ತಿಲಕರ ವಾರಸುದಾರರು, ಹಾಗೆ ನಡೆದುಕೊಳ್ಳಬೇಕಾಗಿದೆ.

-ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.