ಪ್ರೀತಿಯೆಂದರೆ, ರೆಡಿಮೇಡ್ ಖುಷಿಯಲ್ಲ…!
ಇಲ್ಲಿ ಯಾರನ್ನು ದೂರಿಯೂ ಪ್ರಯೋಜನವಿಲ್ಲ, ಇದು 4G ಯುಗದ ಪ್ರೀತಿಯಲ್ಲವೇ !!
Team Udayavani, Feb 14, 2021, 10:29 AM IST
ಮೂರು ವರ್ಷದಲ್ಲಿ ಮೂರೇ ಸಲ ಅವರಿಬ್ಬರ ಭೇಟಿ ಆಗಿದ್ದು, ಆ ಭೇಟಿಗೆ ಪ್ರೀತಿಯೆಂದು ಹೆಸರು ಕೊಟ್ಟುಕೊಂಡಿದ್ದೂ ಅವರಿಬ್ಬರೇ.
ಆ ಒಂದು ಭೇಟಿಗಾಗಿ ಇಡೀ ವರ್ಷವೇ ಕಾದು ಎಷ್ಟೆಲ್ಲ ಮಾತನಾಡಬೇಕೆಂದು ಕಂಠಪಾಠ ಮಾಡಿಕೊಂಡೇ ಹೊರಡುವ ಅವಳು, ಅವನೆದುರು ಬಂದಾಗ ನಿಶ್ಯಬ್ಧವಾಗುತ್ತಾಳೆ, ಬರೀ ಮೌನವನ್ನೇ ಹೊತ್ತು ನಿಲ್ಲುತ್ತಾಳೆ. ಅವ ಜೊತೆಗಿದ್ದಷ್ಟು ಹೊತ್ತೂ ಅವಳು ಹಸನ್ಮುಖಿ, ಆ ತಿರುವಿನಲ್ಲಿ ಅವ ಮರೆಯಾಗುವುದನ್ನೇ ನೋಡುತ್ತಾ ನಿಲ್ಲುವ ಅವಳು ಅವನು ಕಣ್ಮರೆಯಾದ ತಕ್ಷಣವೇ ದುಃಖದಿಂದ ಕಣ್ಣೀರುಗರೆಯುತ್ತಾಳೆ, ಅವನು ಈ ಕ್ಷಣಕ್ಕೆ ಮಾತ್ರ ದೂರವಾದ ಅದು ಶಾಶ್ವತವಾಗಿ ಅಲ್ಲ ಎಂದು ಮೆದುಳು ಮನಸ್ಸಿಗೆ ಸಮಾಧಾನಿಸುತ್ತದೆ, ಆದರೆ ಮನಸ್ಸು ಎಂದೂ ಮೆದುಳಿನ ಮಾತೊಂದನ್ನೂ ಕೇಳುವುದಿಲ್ಲ, ಇದು ಪ್ರೀತಿ!
ಅವನ ಮಾಸದ ನಗು, ಅವನು! ಇದಿಷ್ಟಿದ್ದರೇ ಅವಳಿಗೆ ಸಾಕೆನಿಸುತ್ತದೆ, ಅದೇ ಬೇಕೆನಿಸುತ್ತದೆ, ಪ್ರೀತಿಯಲ್ಲಿದ್ದವರು ಏಕಾಏಕಿ ಹೊಸ ಒಲವಿನೆಡೆಗೆ ಹೊಳಪುಗಣ್ಣುಗಳಿಂದ ಹೊರಳಿಕೊಳ್ಳುವುದೆಲ್ಲ ಇವಳಿಗೆ ಬಲು ಸೋಜಿಗ. ಅವಳು ಒಬ್ಬನನ್ನೇ ಆರಾಧಿಸುವ ಪೊಸೆಸಿವ್ ಪ್ರೇಮಿ,ಪತಿವ್ರತೆ!
ಓದಿ : ವಿಡಿಯೋ: ಜ್ಯೂನಿಯರ್ ಚಿರು ಮುದ್ದುಮುಖ ಅನಾವರಣ ಮಾಡಿದ ಮೇಘನಾ ಸರ್ಜಾ
ಅವಳ ಕೈಯ ಮದರಂಗಿಯಂತೆ ಅವನಿರಬೇಕಿತ್ತು ಸದಾ ಜೊತೆಗೆ…ಕೈಯ ಜೊತೆಗೇ ಕೆನ್ನೆಯ ಕೆಂಪಾಗಿಸಲು. ಅವಳು ಪ್ರೀತಿಸಿದ್ದೂ ಸತ್ಯ, ಅಲ್ಲಿ ಸ್ವಾರ್ಥವಿರಲಿಲ್ಲ. ಪ್ರೀತಿಯಲ್ಲಿ ಅವನೂ ಅವಳಷ್ಟೇ ಪರಿಶುದ್ಧ, ಅವನ ಪ್ರೇಮವೆಲ್ಲವೂ ಅವಳೆಡೆಗೆ ಮಾತ್ರ.
ಇದು ಪರಿಶುದ್ಧ ಪ್ರೀತಿ ಹಾಗೂ ಅವರ ದೃಷ್ಟಿಯಲ್ಲಿ ಅವರ ಪ್ರೀತಿಯ ವ್ಯಾಖ್ಯಾನವಷ್ಟೇ. ಯಾರೋ ಒಬ್ಬರು ನಮ್ಮನ್ನು ಅದಮ್ಯವಾಗಿ ಪ್ರೀತಿಸುತ್ತಾರೆ ಎಂಬ ಕಲ್ಪನೆಯೇ ಎಷ್ಟು ರೋಮಾಂಚನಕ್ಕೆ ಒಳಗುಗೊಳ್ಳಿಸುತ್ತದೆ..?
ನೀವು ಆಲೋಚಿಸಬಹುದು, ಇಂತಹದ್ದೊಂದು ಪ್ರೇಮವೊಂದು ಈಗಲೂ ಜಾರಿಯಲ್ಲಿದೆಯೇ ಎಂದು, ಮಣ್ಣರಾಶಿಯ ನಡುವೆಯಲ್ಲೆಲ್ಲೋ ಗುಂಡುಸೂಜಿಯಷ್ಟೇ ಚಿನ್ನವು ಗೋಚರಿಸುವಂತೆ ಸ್ವಚ್ಛ – ಸುಂದರ ಪ್ರೇಮವೂ ಜಾರಿಯಲ್ಲಿರಬಹುದು, ಪ್ರೀತಿಯೆಂದರೆ ಎರಡು ಮುದ್ದು ಮನಸುಗಳ ಸಮ್ಮಿಲನ, ಪ್ರೀತಿಯೆಂದರೆ ಕಾಳಜಿಯ ಕೊಡುಕೊಳ್ಳುವಿಕೆ, ಪ್ರೀತಿಯೆಂದರೆ ನಿಷ್ಕಲ್ಮಶ, ನಿಸ್ವಾರ್ಥತೆ, ಪ್ರೀತಿಯೆಂದರೆ ಭಾವನೆಗಳ ಮೂಟೆ, ಪ್ರೀತಿಯೆಂದರೆ ಒಬ್ಬರಿಗಾಗಿ ಇನ್ನೊಬ್ಬರು ಸದಾ ಕಾಲ ಮಿಡಿಯುವುದು, ಪ್ರೀತಿಯೆಂದರೆ ಒಂದು ಬಗೆಯ ಆರ್ದೃತೆ, ಇನ್ನೂ ಹೆಚ್ಚು ಹೇಳುವುದೆಂದರೆ ಪ್ರೀತಿಯೆಂದರೆ ತ್ಯಾಗವೇ ಸೈ!
ಮಾಡರ್ನ್ ಯುಗದ ಹಲವರ ಪ್ರಕಾರ ಪ್ರೀತಿಯ ವ್ಯಾಖ್ಯಾನ ಇತ್ತೀಚಿಗೆ ಬದಲಾದಂತಿದೆ. ಅವನಿಗಾಗಿ ಅವಳು ವರ್ಷಗಟ್ಟಲೆ ಕಾದಳು, ಅದೂ ಕೇವಲ ಅವನನ್ನು ನೋಡಿ ಕಣ್ತುಂಬಿಕೊಳ್ಳಲು ಎಂತೆಲ್ಲ ಈಗಿನ ಕಾಲದಲ್ಲಿ ಪ್ರೇಮದ ಕುರಿತು ಹೇಳಹೊರಟರೆ ಮಾಡರ್ನ್ ಯುಗದ ಹದಿಹರೆಯದವರು ನಗುತ್ತಾರಷ್ಟೇ! ಪ್ರೀತಿ-ಪ್ರೇಮದ ಹೆಸರಲ್ಲಿ ನಡೆಸುವ ಮೀಟಿಂಗ್, ಚಾಟಿಂಗ್, ಡೇಟಿಂಗ್ ಗೆಲ್ಲ ಒಂದು ಅರ್ಥವಿದೆಯೇ? ಇದೆಲ್ಲ ಜೀವನವನ್ನು ಅನುಭವಿಸಲು ಕಂಡುಕೊಂಡ ತಾತ್ಕಾಲಿಕ ಮಾರ್ಗವಷ್ಟೇ, ಪ್ರೀತಿ-ಮದುವೆ-ಸಂಸಾರ ಎಂದೆಲ್ಲ ತಲೆಕೆಡಿಸಿಕೊಳ್ಳಲು ತಯಾರಿಲ್ಲದ ಇವರು ಈ ರೆಡಿಮೇಡ್ ಖುಷಿಯ ಮೊರೆಹೋಗುವುದಂತೂ ಸತ್ಯ, ಇಂತಹುದೇ ಎಂಜಾಯ್ಮೆಂಟ್ಗಳು ಹೆಚ್ಚಾಗಿಯೇ ಹದಿಹರೆಯದವರು ಹಾದಿ ತಪ್ಪುತ್ತಿರುವುದು ಎಂದರೆ ತಪ್ಪಾಗಲಾರದು, ಅದೂ ಪ್ರೀತಿ-ಪ್ರೇಮದ ಹೆಸರಿನಲ್ಲಿ ನಡೆವ ಹಲವು ದುರಾಚಾರಗಳಿಂದಾಗಿಯೇ ಶುದ್ಧ ಪ್ರೀತಿಯ ಅಸ್ಮಿತತೆ ಕಳೆದು ಹೋಗುತ್ತಿರುವುದು.
ಇಲ್ಲಿ ಯಾರನ್ನು ದೂರಿಯೂ ಪ್ರಯೋಜನವಿಲ್ಲ, ಇದು 4G ಯುಗದ ಪ್ರೀತಿಯಲ್ಲವೇ !! ಶಾಲಾ-ಕಾಲೇಜುಗಳಲ್ಲಿ ಹುಟ್ಟುವ ಮೊದ-ಮೊದಲ ಪ್ರೀತಿಯಲ್ಲ ಹೇಗೆ ಕೊನೆಗಾಣುತ್ತವೆ? ಮದುವೆಯಲ್ಲಿಯೇ? ಇರಬಹುದು, ಅವಳ ಮದುವೆಯಲ್ಲಿಯೋ ಅವನ ಕಂಬನಿಗಳಲ್ಲಿಯೋ ಕೊನೆಗೊಳ್ಳಬಹುದು, ಅಥವಾ ಅವನ ಮೋಸದ ಹೊಂಚಿನಲ್ಲಿಯೋ ಅವಳ ಮರಣದಲ್ಲಿಯೋ ಕೊನೆಯಾಗಬಹುದು, ಅಥವಾ ಇಬ್ಬರೂ ನ್ಯಾಯವಾಗಿರದೆ ಒಬ್ಬರೊನ್ನೊಬ್ಬರು ದ್ವೇಷಿಸಿ ದೂರಾಗಬಹುದು, ಸಾವಿರಕ್ಕೆ ಹತ್ತರಷ್ಟು ಜನ ಮೊದಲ ಪ್ರೇಮಿಯನ್ನೇ ಮದುವೆಯಾಗಿ ಸಂಸಾರದಲ್ಲಿ ಮುಳುಗಲೂಬಹುದು, ತುಂಬಾ ಸಾಧ್ಯತೆಗಳಿವೆ.
ಓದಿ : ಕವಿತೆಯಾಗಿ ಉಳಿದ ಹುಡುಗ
ಎಷ್ಟೇ ಆದರೂ ಆ ಪತ್ರ ವ್ಯವಹಾರದ ಕಾಲದ ಪ್ರೀತಿಯ ಮುಂದೆ ಈ 4ಜಿ ಯುಗದ ಪ್ರೀತಿ ಒಂಥರಾ ಉಪ್ಪಿನ ಕಾಯಿ ಇಲ್ಲದ ಊಟದಂತೆ, ಬರೀ ಶುಷ್ಟ ಉಣಸು. ಪ್ರೀತಿಯಲ್ಲಿ ಒಬ್ಬರು ಇನ್ನೊಬ್ಬರಿಗಾಗಿ ವಾರಗಟ್ಟಲೆ, ತಿಂಗಳುಗಟ್ಟಲೆ ಕೇವಲ ಒಂದೇ ಒಂದು ಪತ್ರಕ್ಕಾಗಿ ಕಾಯುವ ಮುದವನ್ನು ಈ ಮೊಬೈಲ್ ನೀಡಲಾರದೆಂದುಕೊಳ್ಳುತ್ತೇನೆ. ಕಾಯುವಿಕೆ ಹೆಚ್ಚಾದಂತೆಲ್ಲಾ ಪ್ರೀತಿಯ ತೀವ್ರತೆಯೂ ಹೆಚ್ಚಾಗುವ ಸಾಧ್ಯತೆಯಿದೆ, ದೂರದಲ್ಲಿದ್ದರೇ ಪ್ರೀತಿ ಹೆಚ್ಚಲ್ಲವೇ?!
ಇನ್ನೂ ಕೆಲವು ಮುಗ್ಧ ಪ್ರೀತಿಗಳೆಲ್ಲ ಹಿರಿಯರ ಒತ್ತಡಕ್ಕೆ ಬಲಿಯಾಗುತ್ತವೆ, ಇಂತಹ ವಿಚಾರಗಳ ಬಗ್ಗೆ ಸಂತಾಪವಿದೆ. ಯಾಕೆಂದರೆ ಪ್ರೀತಿಯೊಂದು ಕುಡಿಯೊಡೆಯುವಾಗ ಕೇಳಿ ಬರುವುದಿಲ್ಲ, ಅದೊಂದು ಭಾವವಷ್ಟೇ, ಭಾವನೆಗಳು ಜನಿಸುವುದೇ ತಪ್ಪೆಂದರೆ ಉಸಿರಾಡುವುದೂ ತಪ್ಪೆಂದಂತೆ ಅಲ್ಲವೇ?
ಪ್ರೀತಿಯ ವ್ಯಾಖ್ಯಾನವೆಲ್ಲ ಕೊಂಚ-ಕೊಂಚವೇ ಬದಲಾಗಿ ಮುಂದಿನ ಪೀಳಿಗೆಗೆ ಅದರ ಅರ್ಥವೆ ತಿಳಿಯದೆ ಕೇವಲ ಜೊತೆಗೆ ಓಡಾಡುವುದು, ದುಬಾರಿ ಉಡುಗೊರೆಗಳನ್ನು ನೀಡುವುದು, ಸ್ವೀಕರಿಸುವುದನ್ನೇ ಪ್ರೀತಿಯೆಂದುಕೊಂಡರೆ ? ಹೀಗಾಗುವ ಮುನ್ನವೇ ಈ ಪೀಳಿಗೆಯವರು ಆಲೋಚಿಸಬೇಕಾಗಿದೆ, ಮುಂದಿನ ಪೀಳಿಗೆಗೆ ತಿಳಿಹೇಳುವ ಮೊದಲು ತಾವೇ ಹಾದಿ ತಪ್ಪುವಂತಹ ಕಾರ್ಯ ಮಾಡಲೇಬೇಡಿ, ಕೊನೆಗೂ ಪ್ರೀತಿ ಪ್ರೀತಿಯೇ ಆಗಿರಲಿ ಮತ್ತು ಪರಿಶುದ್ಧವಾಗಿರಲಿ, ಶುಧ್ಧ ಪ್ರೀತಿಗೆ, ಪರಿಶುದ್ಧ ಮನಗಳಿಗೆ ಮೋಸವಾಗದಿರಲಿ. ಪ್ರೀತಿ ಬೆಳಗುತಲೇ ಇರಲಿ.
-ವಿನಯಾ ಶೆಟ್ಟಿ, ಕೌಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ
India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !
Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Story Of Generations: ಪೀಳಿಗೆಗಳ ವೃತ್ತಾಂತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಗುಲ್ವಾಡಿ; ಗಾಯಾಳು ಸಾವು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.