ಬಿಆರ್‌ಟಿ, ಮಹದೇಶ್ವರ ವನ್ಯಧಾಮ ; ಕಪ್ಪು ಚಿರತೆಗಳ ಆವಾಸ ಸ್ಥಾನ
Team Udayavani, Jan 6, 2021, 5:35 AM IST
ಚಾಮರಾಜನಗರದ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಕೆಮರಾ ಟ್ರ್ಯಾಪ್ ಮೂಲಕ ಕಂಡು ಬಂದಿರುವ ಕಪ್ಪು ಚಿರತೆ ವನ್ಯಜೀವಿ ಪ್ರಿಯರ ಗಮನ ಸೆಳೆದಿದೆ. ಈಗ ಕಪ್ಪು ಬಣ್ಣದ ಚಿರತೆಗಳ ಆವಾಸ ಸ್ಥಾನದ ಪಟ್ಟಿಗೆ ಮಹದೇಶ್ವರ ವನ್ಯಧಾಮವೂ ಸೇರಿದಂತಾಗಿದೆ.
ಕಳೆದ ಆಗಸ್ಟ್‌ನಲ್ಲಿ ಬಿಳಿಗಿರಿರಂಗ ನಾಥಸ್ವಾಮಿ (ಬಿಆರ್‌ಟಿ) ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕೌಳಿಕಟ್ಟೆ ಡ್ಯಾಂ ಬಳಿ ಅರಣ್ಯ ಇಲಾಖೆ ಅಳವಡಿಸಿರುವ ಕೆಮರಾ ಟ್ರ್ಯಾಪ್‌ನಲ್ಲಿ ಕಪ್ಪು ಚಿರತೆಯ ಛಾಯಾಚಿತ್ರ ಮೂಡಿಬಂದಿತ್ತು. ಇದಾದ ಬಳಿಕ, ಮಲೆ ಮಹದೇಶ್ವರ ವನ್ಯಧಾಮದ ಲೊಕ್ಕನಹಳ್ಳಿ ಬೀಟ್‌ನಲ್ಲಿ ಅಳವಡಿಸಿರುವ ಕೆಮರಾ ಟ್ರ್ಯಾಪ್‌ನಲ್ಲಿ, ಡಿಸೆಂಬರ್‌ನಲ್ಲಿ ಕಪ್ಪು ಚಿರತೆ ಸೆರೆಯಾಗಿದೆ. ಬಿಆರ್‌ಟಿಯ ಬೈಲೂರು ವನ್ಯಜೀವಿ ವಲಯ , ಮಲೆ ಮಹದೇಶ್ವರ ಪಿ.ಜಿ. ಪಾಳ್ಯ ವನ್ಯಜೀವಿ ವಲಯಗಳು ಸಮೀಪ ದಲ್ಲೇ ಇದ್ದು, ಎರಡೂ ಕಡೆ ಕಂಡಿದ್ದು ಒಂದೇ ಕಪ್ಪು ಚಿರತೆಯೇ ಎಂಬುದು ಸ್ಪಷ್ಟವಾಗಿಲ್ಲ.
ಪ್ರಪಂಚದ ಚಿರತೆಗಳಲ್ಲಿ ಶೇ. 11ರಷ್ಟು ಕಪ್ಪು ಚಿರತೆಗಳಿವೆ. ಮಲೇಷ್ಯಾ, ಥೈಲ್ಯಾಂಡ್, ಜಾವಾ ದ್ವೀಪಗಳಲ್ಲಿ ಇವು ಹೆಚ್ಚಿವೆ. ಅಲ್ಲದೇ ಭಾರತ, ಶ್ರೀಲಂಕಾ, ನೇಪಾಲದಲ್ಲೂ ಕಂಡು ಬರುತ್ತವೆ. ಭಾರತದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಒಡಿಶಾ, ಛತ್ತೀಸ್‌ಗಢ, ಪ. ಬಂಗಾಲ, ಅಸ್ಸಾಂನಲ್ಲಿ ಕಂಡು ಬರುತ್ತವೆ. ಕರ್ನಾಟಕದಲ್ಲಿ ನಾಗರಹೊಳೆ, ಬಂಡೀಪುರ, ಭದ್ರಾ, ಕಾಳಿ, ಬಿಳಿಗಿರಿರಂಗನಬೆಟ್ಟ ಅರಣ್ಯ ಪ್ರದೇಶಗಳಲ್ಲಿ ಕಂಡು ಬಂದಿವೆ. ಈಗ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲೂ ಕಪ್ಪು ಚಿರತೆ ಪತ್ತೆಯಾಗಿದೆ. ಆದರೆ, ಕಬಿನಿ ಅರಣ್ಯ ಪ್ರದೇಶದಲ್ಲಿ ಕಪ್ಪು ಚಿರತೆಗಳು ವನ್ಯಜೀವಿ ಛಾಯಾಗ್ರಾಹಕರಿಗೆ ಹೆಚ್ಚು ಸೆರೆಸಿಕ್ಕಿ ಪ್ರಸಿದ್ಧಿಯಾಗಿವೆ!
ದಪ್ಪ ಚುಕ್ಕೆಗಳ ಚಿರತೆಗಳು ಬೇರೆ ಪ್ರಭೇದವಲ್ಲ ಅಥವಾ ಉಪಪ್ರಭೇದವೂ ಅಲ್ಲ! ಮಾಮೂಲಿ ಚಿರತೆಗಳ ವಂಶ ವಾಹಿನಿಯಿಂದ, ಚರ್ಮ ಮತ್ತು ಕೂದಲಿನಲ್ಲಿ ಮೆಲನಿನ್ ಅಂಶ ಜಾಸ್ತಿ ಯಾಗಿ ಅವುಗಳ ಚರ್ಮದ ಬಣ್ಣ ಕಪ್ಪಾಗಿರುತ್ತದೆ. ಇದನ್ನು ಮೆಲನಿಸಂ ಎಂದು ಕರೆಯುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.