![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Mar 21, 2021, 7:11 AM IST
ಬದುಕಿನಲ್ಲಿ ನೆನಪುಗಳು ಸಿಹಿಯಾಗಿರಬೇಕು :
ಸಮಯದ ಜತೆ ಸಾಗಿ ಸುಂದರ ನೆನಪುಗಳೊಂದಿಗೆಇರೋ ಚಿಕ್ಕ ಜೀವನದಲ್ಲಿ ಆದಷ್ಟುಖುಷಿಯಾಗಿ ಇರೋದಕ್ಕೆ ಕಲಿಯಿರಿಯಾಕೆಂದರೆ ಮರಳಿ ಬರೋದು ನೆನಪುಗಳು ಮಾತ್ರ ಸಮಯವಲ್ಲ. ಇಂಥದ್ದೊಂದು ಸಂದೇಶ ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ನೋಡಿದಾಗ ನಿಜವೆನಿಸಿತು. ಕೆಲವಷ್ಟು ದಿನಗಳನ್ನು ಕಳೆಯಲು ಈ ಭೂಮಿಯ ಮೇಲೆ ಬಾಡಿಗೆದಾರರಾಗಿ ಬರುವ ನಾವು ದ್ವೇಷ ಮತ್ಸರಗಳಿಲ್ಲದೇ ಇರುವಷ್ಟು ದಿನ ಜೀವನದ ಮಕರಂದವನ್ನು ಅನುಭವಿಸಲು ಸಾಧ್ಯವೇ ಇಲ್ಲ ಎನ್ನುವ ಹಾಗೆ ಬದುಕನ್ನು ಸಾಗಿಸುತ್ತೇವೆ. ಕಾಲ ಸರಿದ ಹಾಗೆ ಕಳೆದುಕೊಂಡ ಸುಂದರ ಬದುಕಿಗಾಗಿ ವ್ಯಥೆ ಪಡುತ್ತೇವೆ. ಹಾಗೆಯೇ ಆ ಸಮಯವನ್ನು ಮರಳಿ ಪಡೆಯಲು ಮನಸ್ಸು ಹಾತೊರೆಯುತ್ತಿರುತ್ತದೆ. ಆದರೆ ಆ ಸಮಯ ಮುಗಿದುಹೋಗಿರುತ್ತದೆ ಹಾಗೂ ಆ ಸಮಯದ ನೆನಪುಗಳು ಕಹಿಯಾಗಿರುತ್ತದೆ. ಸಿಹಿಯಾದ ನೆನಪುಗಳೊಂದಿಗೆ ಕೆಲವಷ್ಟು ದಿನ ಬದುಕಿದರೂ ಸಾಕು ಆ ಬದುಕು ಪರಿಪಕ್ವತೆ ಹೊಂದುತ್ತದೆ. ಸಮಯ ಮತ್ತೆ ಬರುವುದಿಲ್ಲ ನಿಜ. ಆದರೆ ಆ ಸಮಯದಲ್ಲಿ ನಾವೆಷ್ಟು ಜನರೊಡನೆ ಪ್ರೀತಿ ವಿಶ್ವಾಸದಿಂದ ಇರುತ್ತೇವೆಯೋ ಅದರ ನೆನಪುಗಳು ಸಮಯ ಸರಿದರೂ ಮನದ ಸ್ಮತಿ ಪಟಲದಲ್ಲಿ ಹಾಗೆಯೇ ಉಳಿದಿರುತ್ತದೆ ಎನ್ನುವುದಂತೂ ನಿಜ ತಾನೇ?.. – ಪ್ರಿಯಾಂಕ ಬಿಜೂರು, ಬೈಂದೂರು
ಆದ್ಯತೆ ತಿಳಿದಿರಲಿ :
“ನೀವು ಮಾಡುವ ಕೆಲಸ ನಿಮ್ಮ ಜೀವನದಲ್ಲಿ ನಿಮಗಿರುವ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ.’ ಹೀಗೊಂದು ಸಂದೇಶವನ್ನು ಸ್ನೇಹಿತರೊಬ್ಬರ ಫೇಸ್‌ಬುಕ್ ವಾಲ್‌ನಲ್ಲಿ ನೋಡಿದಾಗ ಎಷ್ಟೊಂದು ಅರ್ಥಪೂರ್ಣವಾದದ್ದು ಎಂದೆನಿಸಿತು. ನಾವು ಯಾವುದೇ ಕೆಲಸ ಮಾಡಲಿ. ಆದರೆ ನಾವು ಮೊದಲಿಗೆ ಆದ್ಯತೆ ಕೊಡುವುದು ನಮ್ಮ ಮನಸ್ಸಿಗೊಪ್ಪುವ ಕಾರ್ಯಗಳಿಗೆ ಮತ್ತು ತೀರಾ ಅನಿವಾರ್ಯದ ವಿಷಯಗಳಿಗೆ. ಹೀಗಾಗಿ ನಾವು ಆದ್ಯತೆಗಳ ಮೇರೆಗೆ ಕೆಲಸ ಮಾಡುತ್ತಿರುತ್ತೇವೆ. ಒಂದು ವೇಳೆ ನಮ್ಮ ಆದ್ಯತೆಗಳು ಬದಲಾಗುತ್ತಿದ್ದರೆ ನಮ್ಮ ಜೀವನವೂ ಅತಂತ್ರವಾಗುವುದು. ಆದ್ಯತೆಗಳು ಇಲ್ಲದೇ ಹೋದರೆ ನಮಗೆ ಕೆಲಸ ಮಾಡುವ ಆಸಕ್ತಿ ಇರುವುದಿಲ್ಲ. – ಶ್ರೀರಾಮ್, ಉಡುಪಿ
“ಗೌರವ ಎನ್ನುವುದು ಕನ್ನಡಿ ಇದ್ದಂತೆ. ಅದು ಪಡೆಯುವುದರಿಂದಲ್ಲ ಕೊಡುವುದರಿಂದ ಲಭಿಸುತ್ತದೆ.’ ಹೇಗೆ ನಾವು ಕನ್ನಡಿಯ ಮುಂದೆ ನಿಂತಾಗ ನಮ್ಮದೇ ಪ್ರತಿಬಿಂಬ ಕಾಣುತ್ತದೋ ಅದೇ ರೀತಿ ನಾವು ನಮ್ಮ ಸುತ್ತಮುತ್ತ ಇರುವವರಿಗೆ ಗೌರವ ನೀಡಿದರೆ ಅದರ ಪ್ರತಿಬಿಂಬವಾಗಿ ನಮಗೂ ಹೆಚ್ಚು ಗೌರವ ಲಭಿಸುವುದು. ಹೀಗಾಗಿ ಗೌರವವನ್ನು ನಾವು ಕೊಟ್ಟು ಪಡೆಯಬೇಕು. ಕೊಡದೇ ಪಡೆಯುವಂಥದ್ದು ಅದು ದೀರ್ಘಕಾಲ ಉಳಿಯಲಾರದು. – ರಾಕೇಶ್, ಕಾರ್ಕಳ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.