ಪ್ರತಿಭೆಗಳಿಗೆ ಪ್ರೇರಣೆ: ಮಾಸ್ತಿ ಮಾದರಿ


Team Udayavani, Jun 18, 2022, 6:10 AM IST

ಪ್ರತಿಭೆಗಳಿಗೆ ಪ್ರೇರಣೆ: ಮಾಸ್ತಿ ಮಾದರಿ

ಡಾ| ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಟ್ರಸ್ಟ್‌  ಮಾಸ್ತಿಯವರ 131ನೆಯ ಜನ್ಮವರ್ಷದ ಪ್ರಯುಕ್ತ 30ನೆಯ ವರ್ಷದ ಮಾಸ್ತಿ ಪ್ರಶಸ್ತಿಯನ್ನು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಇಂದು (ಜೂ. 18)  ಪ್ರದಾನ ಮಾಡುತ್ತಿರುವ ಸಂದರ್ಭ ಮಾಸ್ತಿಯವರು ಕಿರಿಯ ಪ್ರತಿಭೆಗಳನ್ನು ಹಿರಿಯ ಪ್ರತಿಭೆಗಳನ್ನಾಗಿಸಲು ಹೇಗೆ ಪ್ರಯತ್ನಿಸುತ್ತಿದ್ದರು ಎಂಬುದರ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವಿದು. ನಾಳೆ (ಜೂ. 19) ವಿಶ್ವ ಅಪ್ಪಂದಿರ ದಿನ. ಭೂತಕಾಲದ‌ವರಂತೆ ವರ್ತಮಾನದ ಹಾಲಿ ತಂದೆ ಆದರ್ಶದ ಬದುಕು ನಡೆಸಿದರೆ ಇದನ್ನು ನೋಡಿಯೇ ಭವಿಷ್ಯದ ಪೀಳಿಗೆ ಯೋಗ್ಯ ತಂದೆಯಾಗುತ್ತಾರೆಂಬ ಆಶಯವೂ ಇಲ್ಲಿದೆ.

ಪ್ರಸಿದ್ಧ ಸಾಹಿತಿ ಜಿ.ಪಿ.ರಾಜರತ್ನಂ (5.12.1908- 13.3.1979) ಇಂದಿಗೂ ಜನಮಾನಸದಲ್ಲಿದ್ದಾರೆ.ಇಂತಹ ಮಹಾನ್‌ ಕೃತಿಕಾರ ಹೇಗೆ ರೂಪುಗೊಂಡರು ಎಂಬುದು ಕುತೂಹಲಕರ. ಮೂಲತಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯವರು. ಪೂರ್ವಜರು ತಮಿಳುನಾಡಿನಿಂದ ಬಂದವರು. ಮನೆತನದ ಹೆಸರು ಗುಂಡ್ಲು ಪಂಡಿತ (ಜಿ.ಪಿ.). 1931ರಲ್ಲಿ ಎಂಎ ಕನ್ನಡ ಪಾಸಾಗಿ ತಂದೆಯ ಶಾಲೆಯಲ್ಲಿ ತಂದೆ ರಜೆ ಇರುವಾಗ ಎರಡನೆಯ ತರಗತಿಗೆ ಶಿಕ್ಷಕರಾದರು. ತರಗತಿಯ ಪಾಠದ ಕಷ್ಟ ನೋಡಿದ ಪರಿಣಾಮವೇ

“ತುತ್ತೂರಿ’ ಕವನ ಸಂಕಲನ ಹೊರಬಂತು. ಬಳಿಕ “ನಾಯಿಮರಿ’ಯಂತಹ ಕವನಗಳು ಹೊರಬಂದವು. ಉದ್ಯೋಗಕ್ಕೆ ಪ್ರಯತ್ನಿಸಿದ್ದೇ ಜೀವನದಲ್ಲಿ ತಿರುವನ್ನು ತಂದುಕೊಟ್ಟಿತು.

ಆಗ ಮೈಸೂರು ಸರಕಾರದಲ್ಲಿ ಜನಗಣತಿ ಅಧೀಕ್ಷಕರಾಗಿ ಹೆಸರಾಂತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ (6.6.1891-6.6.1986) ಇದ್ದರು. ಜನಗಣತಿಯಲ್ಲಿ ಚೀಟಿ ಬರೆಯುವುದು ಮುಖ್ಯ ಕೆಲಸ. ಹಂಚಿಕೆ ಕೆಲಸಕ್ಕೆ ನೇಮಕರಾದವರಿಗೆ 25 ರೂ. ವೇತನ ನಿಗದಿಯಾಗಿತ್ತು. ಎಸೆಸೆಲ್ಸಿ, ಇಂಟರ್‌ ಮೀಡಿಯಟ್‌ ಓದಿದವರು ಬರುತ್ತಿದ್ದರು. ಪದವೀಧರ‌ರನ್ನು ಮೇಲ್ವಿಚಾರಣೆಗೆ ನೇಮಿಸಿಕೊಂಡು 30 ರೂ. ಕೊಡುತ್ತಿದ್ದರು.

ಒಂದು ದಿನ ಮಾಸ್ತಿಯವರಲ್ಲಿ ರಾಜರತ್ನಂ ಕೆಲಸ ಕೇಳಿದರು. ಮೇಲ್ವಿಚಾರಕರ ಹುದ್ದೆ ಭರ್ತಿಯಾಗಿತ್ತು. “ಚೀಟಿ ಹಂಚಿಕೆ ಕೆಲಸ ನಿಮಗೆ ಸೂಕ್ತವಾದುದಲ್ಲ’ ಎಂದು ಮಾಸ್ತಿ ಹೇಳಿದರು. “ಬದುಕಲು ಕಾಸು ಬೇಕು’ ಎಂದು ರಾಜರತ್ನಂ ಒತ್ತಾಯಿಸಿದರು. “ನಿಮಗೆ 25 ರೂ. ಕೆಲಸ ಕೊಟ್ಟು ಚೀಟಿ ಬರೆಸುವುದು ಸರಿಕಾಣದು. ಫಾಹಿಯಾನ್‌, ಹ್ಯುಯೆನ್‌ತ್ಸಾಂಗ್‌ ಪ್ರವಾಸಕಥನವನ್ನು, ವಾಲ್ಟೆàರವರ ಕ್ಯಾಂಡಿಡೆ ಪುಸ್ತಕವನ್ನು ಕನ್ನಡಕ್ಕೆ ತನ್ನಿ. ನಾನು 25 ರೂ. ಕೊಡುತ್ತೇನೆ’ ಎಂದು ಮಾಸ್ತಿ ಹೇಳಿದಾಗ ರಾಜರತ್ನಂ ಒಪ್ಪಿದರು.

ಭಾಷಾಂತರ ಕೆಲಸ ತಿಳಿದು ಹೆಸರಾಂತ ಸಾಹಿತಿ, ಪ್ರಾಧ್ಯಾಪಕ ಪ್ರೊ|ಎ.ಆರ್‌.ಕೃಷ್ಣಶಾಸಿŒಯವರು ಬೆಂಗಳೂರಿನಲ್ಲಿ ಕನ್ನಡ

ಸಂಘದಿಂದ ಹೊರತರುತ್ತಿದ್ದ “ಪ್ರಬುದ್ಧ ಕರ್ನಾಟಕ’ ತ್ತೈಮಾಸಿಕದಲ್ಲಿ ಸರಣಿ ರೂಪದಲ್ಲಿ  ಪ್ರಕಟಿಸಿದರು. ಪ್ರಕಟನೆಗಾಗಿ ಸಿಕ್ಕಿದ 150 ರೂ.ವನ್ನು ಮಾಸ್ತಿಯವರಿಗೆ ನೀಡಲು ರಾಜರತ್ನಂ ಮುಂದಾದರು. “ನಾನು ಕೊಟ್ಟದ್ದು ಸಂಬಳವಲ್ಲ, ಮಾಸಾಶನ. ಈ ಹಣ ನೀವು ಸಂಪಾದಿಸಿದ್ದು ಎಂದು ಇಟ್ಟುಕೊಳ್ಳಿ. ಕೆಲಸವನ್ನು ಇನ್ನಷ್ಟು ದಿನ ಮಾಡಿ. ನಾನು ತಿಂಗಳೂ 25 ರೂ. ಕೊಡುತ್ತೇನೆ’ ಎಂದು ಮಾಸ್ತಿ ಹೇಳಿದರು. ಮತ್ತೆ ರಾಜರತ್ನಂ ಬರಲಿಲ್ಲ. “ಕೃಷ್ಣಶಾಸಿŒಗಳು ಕೊಟ್ಟ ಕಾಸು ಕೈಯಲ್ಲಿದೆ. ಜೀವನ ನಡೆಯುತ್ತಿದೆ. ಕಾಸು ಬೇಕಾದಾಗ ಬರುತ್ತೇನೆ’ ಎಂದು ಯಾವತ್ತೋ ಸಿಕ್ಕಿದಾಗ ಮಾಸ್ತಿಯವರಿಗೆ ರಾಜರತ್ನಂ ಹೇಳಿದರಂತೆ.

ರಾಜರತ್ನಂರಿಗೆ 1969ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1970ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1977ರಲ್ಲಿ ಮೈಸೂರು ವಿ.ವಿ. ಡಾಕ್ಟರೇಟ್‌ ಪದವಿ, ಕಾರ್ಕಳದಲ್ಲಿ ನಡೆದ ದ.ಕ. ಜಿಲ್ಲಾ, ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನ (1976), ದಿಲ್ಲಿಯಲ್ಲಿ ನಡೆದ ಅ.ಭಾ. ಕನ್ನಡ (ಸುವರ್ಣ ಸಮ್ಮೇಳನ) ಸಾಹಿತ್ಯ ಸಮ್ಮೇಳನದ (1978)ಅಧ್ಯಕ್ಷತೆ ಗೌರವ ದೊರಕಿತು.”ರಾಜರತ್ನಂ ಪಾಲಿ ಭಾಷೆಯನ್ನು ಕಲಿತು ಬೌದ್ಧ, ಜೈನಸಾಹಿತ್ಯದಲ್ಲಿ  ಪ್ರಕಾಂಡ ಪಂಡಿತರಾದರು. ಇವರ ಮನಸ್ಸನ್ನುಈ ಕೆಲಸದತ್ತ ಮೊದಲು ತಿರುಗಿಸಿದ ಭಾಗ್ಯ ನನ್ನದು ಎನ್ನುವುದು ಈಗಲೂ ನನಗೆ ಸಂತೋಷದ ಸಂಗತಿಯಾಗಿದೆ’ ಎಂದು ಮಾಸ್ತಿಯವರು ಇಳಿವಯಸ್ಸಿನಲ್ಲಿ ಬರೆದ “ಭಾವ-2′ ಸಂಪುಟದಲ್ಲಿ ಹೇಳಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ದಿನದ ಕೊನೆಯಲ್ಲಿ ಈ ಆತ್ಮಸಂತೃಪ್ತ ಭಾವ ಬರಬೇಕು. ಇದನ್ನು “ಎಟ್‌ ದಿ ಎಂಡ್‌ ಆಫ್ ದಿ ಡೇ…’ ಎನ್ನುತ್ತಾರೆ, ಈ ಎಲ್ಲ “ಎಂಡ್‌ ಆಫ್ ದಿ ಡೇ’ ಸೇರಿ “ಎಟ್‌ ದಿ ಎಂಡ್‌ ಆಫ್ ದಿ ಲೈಫ್…’ ಆಗುತ್ತದೆ…

****

ಬಹುತೇಕ ಎಲ್ಲರೂ ಕಲಿತು ಹೊರಬರುವಾಗ ರಾಜರತ್ನಂ ಆಗಿರುತ್ತಾರೆ. ಬೇರೆ ಪ್ರಾಣಿ ಸಂಕುಲಗಳಿಗೆ ಹೋಲಿಸಿದರೆ ಮನುಷ್ಯ ಹುಟ್ಟುವಾಗ ಅಷ್ಟೂ ದುರ್ಬಲ, ಒಂದು ಮಾಂಸದ ಮುದ್ದೆ ಮಾತ್ರ. ಹಸು, ಪಕ್ಷಿಇನ್ಯಾವುದೇ ಪ್ರಾಣಿಗಳು ಹುಟ್ಟಿದ ತತ್‌ಕ್ಷಣ ತನ್ನ ಸಹಜ ಚಟು

ವಟಿಕೆಗಳನ್ನು ಆರಂಭಿಸುತ್ತವೆ. ಮನುಷ್ಯನಿಗೆ ಮಾತ್ರ ಕನಿಷ್ಠ ಒಂದೂವರೆ ವರ್ಷ ತಾಯಿ ಆರೈಕೆ ಬೇಕು. ಬಳಿಕ ತಂದೆ, ಬಂಧುಗಳು, ಶಿಕ್ಷಕರು, ಒಟ್ಟಾರೆ ಸಮಾಜದಿಂದ ಬೆಳೆಯುತ್ತಾನೆ/ಳೆ. ಬೆಳೆದ ಅನಂತರ ಎಲ್ಲ ಪ್ರಾಣಿಗಳನ್ನು ಮೀರಿಸುವ ಕಾಮ (ದುರಾಸೆ), ಕ್ರೋಧ, ಮದ, ಮೋಹ, ಮತ್ಸರ (ಹೊಟ್ಟೆಕಿಚ್ಚು), ಲೋಭ ಈ ಷಡ್ವರ್ಗ ಹೊಂದುತ್ತಾನೆ/ಳೆ. ಪ್ರಾಣಿಗಳಲ್ಲಿ ಇವು ಸೀಮಿತವಾಗಿರುತ್ತವೆ. ಉದಾಹರಣೆಗೆ ನೈಸರ್ಗಿಕ ಕಾಮ-ಹಸಿವು-ಬಾಯಾರಿಕೆ ಮಾತ್ರ. ಕಲಿತ ಬಳಿಕವೂ ವ್ಯಾವಹಾರಿಕ ಲೋಕದಲ್ಲಿ ಮಗು ಇದ್ದಂತೆಯೇ. ಮೊತ್ತ ಮೊದಲ ಬಾರಿ ಮೆಟ್ರೋ ನಗರಗಳಿಗೆ ಹೋಗಿ ಬೆಳಗ್ಗೆ ಬಸ್‌ -ರೈಲ್ವೇ ನಿಲ್ದಾಣದಲ್ಲಿಳಿದಾಗ ಏನನ್ನಿಸುತ್ತದೋ ಕಲಿತಬಳಿಕ ವ್ಯಾವಹಾರಿಕ ಲೋಕವೂ ಹಾಗೆಯೇ. ಅಂತಹ ಮಗುವಾಗಿದ್ದ ರಾಜರತ್ನಂರಿಗೆ ಮಾಸ್ತಿಯವರು ನೀಡಿದ ಆರೈಕೆ

ಯನ್ನು ಎಲ್ಲ ದೊಡ್ಡ ಅಧಿಕಾರಸ್ಥರು ಮಾಡಬೇಕಾಗಿದೆ. ಮಾಸ್ತಿಯವರು ರಾಜರತ್ನಂ ಅವರಿಗೆ ಮಾತ್ರವಲ್ಲ, ದ.ರಾ.ಬೇಂದ್ರೆಯವರಿಗೂ ಕಷ್ಟದ ಕಾಲದಲ್ಲಿ ನೆರವಾಗಿದ್ದರು. ಮಾಸ್ತಿ ಪ್ರಶಸ್ತಿಯ ಪೂರ್ವದ ಕತೆಯೂ ಇಂಥದ್ದೆ. ಕಷ್ಟದಲ್ಲಿರುವ ಬರೆಹಗಾರರಿಗೆ ನೆರವಾಗಬೇಕೆಂದು ಸ್ವತಃ ಅವರು ಆಸಕ್ತಿ ವಹಿಸಿ ಮನೆಗಳಿಗೆ ಹೋಗಿ ಕೊಟ್ಟಿದ್ದರು. ಯಾರೋ ಒಬ್ಬನಿಂದ ಭಾರತ

ಮಹಾನ್‌ ಆಗದು, ಅಲ್ಲಲ್ಲಿ ವಿಶಾಲ ಹೃದಯಿಗಳು ಬೇಕು. ತಂತಾನೆ ಹೃದಯಗಳು ವಿಶಾಲವಾಗದು, ತಮ್ಮನ್ನು ತಾವೇ ಅರಳಿಸಿಕೊಳ್ಳಬೇಕು.

-ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.