ಮಂಗಳೂರು ಬಾನುಲಿಯ ಭವ್ಯ ಪರಂಪರೆ ಪ್ರಕಾಶಿಸುತ್ತಿರಲಿ


Team Udayavani, Dec 11, 2021, 6:50 AM IST

ಮಂಗಳೂರು ಬಾನುಲಿಯ ಭವ್ಯ ಪರಂಪರೆ ಪ್ರಕಾಶಿಸುತ್ತಿರಲಿ

ಸಾರ್ವಜನಿಕ ಸೇವಾ ಪ್ರಸಾರ ಮಾಧ್ಯಮ ಮಂಗಳೂರು ಆಕಾಶವಾಣಿಗೆ ಡಿ. 11ರ ಶನಿವಾರ 46ನೇ ಜನ್ಮದಿನ. 1976ರ ಡಿ. 11ರಂದು ರಾಷ್ಟ್ರದ 78ನೇ ಹಾಗೂ ಕರ್ನಾಟಕದ 6ನೆಯ ಸ್ವತಂತ್ರ ಪ್ರಸಾರ ಕೇಂದ್ರವಾಗಿ ಮಂಗಳೂರು ಬಾನುಲಿ ಕೇಂದ್ರ ಅಸ್ತಿತ್ವಕ್ಕೆ ಬಂದಿತು.

ಧ್ವನಿ ಅಥವಾ ಶ್ರಾವ್ಯ ಮಾಧ್ಯಮವಾದ ಆಕಾಶವಾಣಿ ಯನ್ನು ರೇಡಿಯೋ ಎಂಬ ಪುಟ್ಟ ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಆಲಿಸಿಕೊಂಡು ಬಂದೆವು. ಇಂದಿನ ಮೊಬೈಲ್‌ ಯುಗದಲ್ಲೂ ಈಗ ಈ ಚರವಾಣಿ ಸಾಧನದಲ್ಲಿ ರೇಡಿಯೋ ಆ್ಯಪ್‌, ನ್ಯೂಸ್‌ ಆನ್‌ ಏರ್‌, ಆಕಾಶವಾಣಿ ಆ್ಯಪ್‌ ಮೂಲಕ ರೇಡಿಯೋ ಜಗದಾಂತರ್ಯಾಮಿ.

1920ರಲ್ಲಿ ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಮೊದಲ ರೇಡಿಯೋ ಪ್ರಸಾರ ಆರಂಭವಾಯಿತು. ಅದರ ಮರುವರ್ಷ ಅಂದರೆ 1921ರಲ್ಲಿ ಭಾರತದಲ್ಲಿ ಮೊದಲ ರೇಡಿಯೋ ಕೇಂದ್ರ ಮುಂಬಯಿಯಲ್ಲಿ ಪ್ರಾರಂಭಗೊಂಡಿತು. ಕಲ್ಕತ್ತಾ, ಮದ್ರಾಸ್‌ಗಳಲ್ಲಿ ರೇಡಿಯೋ ಕ್ಲಬ್‌ಗಳು ಆರಂಭವಾದವು.

1927ರಲ್ಲಿ ಇಂಡಿಯನ್‌ ಬ್ರಾಡ್‌ಕಾಸ್ಟಿಂಗ್‌ ಕಂಪೆನಿ ಮುಂಬಯಿ ಮತ್ತು ಕಲ್ಕತ್ತಾದಲ್ಲಿ ರೇಡಿಯೋ ಪ್ರಸಾರ ಆರಂಭಿಸಿತು. 1936ರಲ್ಲಿ ಅಂದಿನ ಆಂಗ್ಲ ಸರಕಾರ ಖಾಸಗಿ ಬಾನುಲಿ ಕೇಂದ್ರಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡು ಭಾರತೀಯ ಪ್ರಸಾರ ಸೇವೆ (ಐnಛಜಿಚn ಆrಟಚಛcಚsಠಿಜಿnಜ ಖಛಿrvಜಿcಛಿ) ಎಂದು ಮರುನಾಮಕರಣ ಮಾಡಿತು. 1936ರಲ್ಲಿ ಮೈಸೂರು ವಿ.ವಿ. ಪ್ರಾಧ್ಯಾಪಕರಾಗಿದ್ದ ಎಂ.ವಿ.ಗೋಪಾಲಸ್ವಾಮಿ ಅವರು ಮೈಸೂರಿನ ತನ್ನ ಮನೆಯಲ್ಲಿಯೇ ರೇಡಿಯೋ ಪ್ರಸಾರವನ್ನು ಆರಂಭಿಸಿ ಅದಕ್ಕೆ “ಆಕಾಶವಾಣಿ’ ಎನ್ನುವ ಹೆಸರು ನೀಡಿದ್ದರು.
ಸ್ವಾತಂತ್ರಾéನಂತರ ಭಾರತ ಸರಕಾರವು ದೇಶದ ಎಲ್ಲ ಬಾನುಲಿ ಕೇಂದ್ರಗಳನ್ನು ತನ್ನ ವಶಕ್ಕೆ ತೆಗೆದುಕೊಂಡು ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ “ಆಲ್‌ ಇಂಡಿಯಾ ರೇಡಿಯೋ’ ಎಂಬುದಾಗಿ ನಾಮಕರಣ ಮಾಡಿತು. 1957ರಿಂದ ಆಕಾಶವಾಣಿ ಎನ್ನುವ ಹೆಸರನ್ನು ಸಾರ್ವತ್ರಿಕಗೊಳಿಸಲಾಯಿತು.

ಸಾರ್ವಜನಿಕ ಸೇವಾ ಪ್ರಸಾರ ಮಾಧ್ಯಮವಾಗಿರುವ ಆಕಾಶವಾಣಿ “ಬಹುಜನ ಹಿತಾಯ, ಬಹುಜನ ಸುಖಾಯ’ ಎನ್ನುವ ಧ್ಯೇಯದೊಂದಿಗೆ “ಶಿಕ್ಷಣ, ಮಾಹಿತಿ, ಮನೋರಂಜನೆ’ ಎಂಬ ಮೂರು ಮುಖ್ಯಾಂಶಗಳ ಸಮ್ಮಿಲನದೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡುತ್ತಿದೆ. ಸುದ್ದಿ, ವಿವಿಧ ಪ್ರಕಾರದ ಸಂಗೀತ, ಅಭಿವೃದ್ಧಿಪರ ಕಾರ್ಯಕ್ರಮಗಳೆಲ್ಲ ಇದರಲ್ಲಿ ಅಡಕ. ಆಕಾಶವಾಣಿ ಮತ್ತು ದೂರದರ್ಶನಕ್ಕೆ ಸ್ವಾಯತ್ತೆ ನೀಡಬೇಕೆಂಬ ಬಹುಕಾಲದ ಒತ್ತಾಸೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು 1997ರಲ್ಲಿ ಪ್ರಸಾರ ಭಾರತಿ ಕಾಯ್ದೆಯನ್ನು ಜಾರಿಗೊಳಿಸಿತು. ಆ ಬಳಿಕ ಸಂಪನ್ಮೂಲ ಕ್ರೋಡೀಕರಣವೂ ಈ ಮಾಧ್ಯಮದ ಹೆಚ್ಚುವರಿ ಹೊಣೆಯಾಯಿತು.

ದೇಶದ ಪಶ್ಚಿಮ ಕರಾವಳಿಯ ದಕ್ಷಿಣ ಕರ್ನಾಟಕದ ತುಳುಜನರ ಜನಸಮುದಾಯದ ಆಶೋತ್ತರ, ಜನಪ್ರತಿ ನಿಧಿಗಳ, ಸಂಘ ಸಂಸ್ಥೆಗಳ ದೀರ್ಘ‌ಕಾಲೀನ ಬೇಡಿಕೆಯ ಪರಿಣಾಮವಾಗಿ ಆಕಾಶವಾಣಿ ನಿಲಯವೊಂದು ಈ ಭಾಗದಲ್ಲಿ ಅಸ್ತಿತ್ವಕ್ಕೆ ಬಂದಿತು. ಮಂಗಳೂರಿನ ಕದ್ರಿ ಹಿಲ್ಸ್‌ ನಲ್ಲಿ ಸ್ಟುಡಿಯೋ ಸೌಲಭ್ಯದೊಂದಿಗೆ ಅಲ್ಪ ಶಕ್ತಿಯ ಮೀಡಿಯಂ ವೇವ್‌ ಟ್ರಾನ್ಸ್‌ಮಿಟರ್‌ ಮತ್ತು ವ್ಯಾಪಕ ಪ್ರಸಾರಕ್ಕಾಗಿ ಉಡುಪಿ ತಾಲೂಕಿನ ಬ್ರಹ್ಮಾವರದಲ್ಲಿ 20ಕೆವಿ ಟ್ರಾನ್ಸ್‌ಮಿಟರ್‌ ಒಳಗೊಂಡ ಮಂಗಳೂರು ಆಕಾಶವಾಣಿ ಕೇಂದ್ರ ಆರಂಭವಾಯಿತು.

ಇದನ್ನೂ ಓದಿ:ವಾಸ್ತುಶಿಲ್ಪಿ ಬಾಲಕೃಷ್ಣ ಜೋಷಿಗೆ ರಾಯಲ್‌ ಗೋಲ್ಡ್‌ ಮೆಡಲ್‌ 2022 ಗೌರವ

ಇಲ್ಲಿನ ಪ್ರಮುಖ ಆಡಳಿತ ಭಾಷೆ ಕನ್ನಡವಾದರೂ ಮೂಲತಃ ತುಳುನಾಡಾದ ಇಲ್ಲಿನ ಆಡುನುಡಿ ತುಳು. ಕೊಂಕಣಿ ಭಾಷಿಗರೂ ಅಧಿಕ ಸಂಖ್ಯೆಯಲ್ಲಿದ್ದು ಇತರ ಸ್ಥಳೀಯ ಭಾಷೆಗಳನ್ನಾಡುವವರೂ ಇದ್ದಾರೆ. ಆ ಕಾಲದಲ್ಲಿ ತುಳುವಲ್ಲಿ ಆಧುನಿಕ ಸಾಹಿತ್ಯ ರಚನೆ ಅಲ್ಪ ಪ್ರಮಾಣದಲ್ಲಿತ್ತು. ಅಪಾರವಾದ ಜಾನಪದ ಸಾಹಿತ್ಯವಿತ್ತು. ತುಳುವರದೇ ಆದ ಸಂಗೀತ ವಾದ್ಯಗಳಿದ್ದವು. ಆರೋಗ್ಯ, ಕೃಷಿ, ಬ್ಯಾಂಕಿಂಗ್‌ ತಜ್ಞರು, ಮೇಧಾವಿಗಳು, ಸಂಶೋಧಕರು, ಕಲಾವಿದರು, ಪತ್ರಕರ್ತರು, ಶಿಕ್ಷಣವೇತ್ತರು, ಸಾಹಿತಿಗಳಿದ್ದರು. ಎಲ್ಲೆಲ್ಲೂ ತುಳು ನಾಟಕ, ಯಕ್ಷಗಾನ ಪ್ರದರ್ಶಿಸಲ್ಪಡುತ್ತಿದ್ದವು. ಇವುಗ ಳಿಗೆಲ್ಲ ಮಂಗಳೂರು ಆಕಾಶವಾಣಿ ಏಕಗವಾಕ್ಷಿಯಂತಾ ಯಿತು. ಈ ಎಲ್ಲ ಕ್ಷೇತ್ರಗಳು ಮತ್ತು ತಜ್ಞರಿಗೆ ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಯಿತು.

ಈ ಹಿನ್ನೆಲೆಯಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರ ಕನ್ನಡ, ತುಳು, ಕೊಂಕಣಿ ಈ ಮೂರೂ ಭಾಷೆಗಳಲ್ಲೂ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡಿತು. ಆಧುನಿಕ ತಂತ್ರಜ್ಞಾನ ಅಳವಡಿಕೆಯ ಬಳಿಕ ವಿವಿಧ ಸ್ಥಳೀಯ ವಿಶೇಷ ಕಾರ್ಯಕ್ರಮಗಳ ನೇರ ವೀಕ್ಷಕ ವಿವರಣೆ, ಸಂದರ್ಶನಗಳು, ಮಕ್ಕಳು, ಯುವಜನರು ಸೇರಿದಂತೆ ವಿವಿಧ ವಯೋಮಾ ನದ ಪ್ರತಿಭಾವಿಕಾಸಕ್ಕಾಗಿ ಕಾರ್ಯಕ್ರಮಗಳ ಪ್ರಸಾರಗಳು ಭವ್ಯ ಪರಂಪರೆಯಾಗಿರುವಂತೆಯೇ, ಕೃಷಿರಂಗದಲ್ಲಿ ರೈತರ ಅನುಭವ ಕಥನ, ಸಲಹೆ, ಮಾಹಿತಿಗಳು ಬಲುಮುಖ್ಯವಾದ ಮತ್ತೂಂದು ಅಂಗ. ಚಿಂತನ, ಪ್ರತ್ರೋತ್ತರ, ಫೋನ್‌ ಇನ್‌ ಮೂಲಕ ದ್ವಿಮುಖ ಸಂವಹನ ಹೀಗೆ ಜನಮನದಲ್ಲಿ ಹಾಸು ಹೊಕ್ಕಾಗಿ ಬೆಳೆದು ಬಂತು ಮಂಗಳೂರು ಆಕಾಶವಾಣಿ.

ಆಧುನಿಕ ಕಾಲಘಟ್ಟದಲ್ಲಿ 1997ರಲ್ಲಿ ಪ್ರಸಾರ ಭಾರತಿ ಅನುಷ್ಠಾನೋತ್ತರದಲ್ಲಿ ಪ್ರಸಾರದ ಅಂಶಗಳಲ್ಲಿ, ಕೇಳುಗರ ಅಭಿರುಚಿಗಳಲ್ಲಿ ಹಲವಾರು ಸ್ಥಿತ್ಯಂತರಗಳಾದರೂ ಮಂಗ ಳೂರು ಆಕಾಶವಾಣಿ ಸಾರ್ವಜನಿಕ ಸೇವಾಪರತೆಯ ತನ್ನ ಧೋರಣೆ, ಶಿಸ್ತು ಮತ್ತು ಗುಣಮಟ್ಟವನ್ನು ಆತ್ಮಸಖನಂತೆ, ಆಪ್ತ ಸಮಾಲೋಚಕನಂತೆಯೂ ಉಳಿಸಿಕೊಂಡು ಬಂದಿದೆ. ಪ್ರಸಾರ ಕೇಂದ್ರಗಳ ಸ್ಥಳೀಯ ಮಹತ್ವವನ್ನು ಉಳಿಸಲು ಬ್ರಹ್ಮಾವರದ ಪ್ರಸರಣ ಕೇಂದ್ರವನ್ನು ತಾಂತ್ರಿಕವಾಗಿ ಪುನಶ್ಚೇ ತನಗೊಳಿಸುವುದು, ಸ್ಥಗಿತಗೊಂಡಿರುವ ಅವಶ್ಯ ಸಿಬಂದಿ ನೇಮಕಾತಿ ಪುನರಾರಂಭಿಸಿ ಉದ್ಯೋಗಿಗಳ ಹಿತಾಸಕ್ತಿ ಕಾಪಾಡುವ ಕ್ರಮಗಳನ್ನು ಕೈಗೊಂಡು ಪ್ರಸಾರ ಭಾರತಿಯು ಮಂಗಳೂರು ಆಕಾಶವಾಣಿಯಂತಹ ಸ್ವತಂತ್ರ ಕೇಂದ್ರಗಳ ಶಕ್ತಿಯನ್ನು ಮತ್ತಷ್ಟು ಬಲಪಡಿಸಲಿ ಎಂಬುದು ಸಂಸ್ಥಾಪನ ದಿನದ ಹಾರೈಕೆ.

-ಮುದ್ದು ಮೂಡುಬೆಳ್ಳೆ

ಟಾಪ್ ನ್ಯೂಸ್

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

1-horoscope

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MM-Singh1

Tribute Dr.Singh: ಡಾ.ಮನಮೋಹನ್‌ ಸಿಂಗ್‌ ಆಡಳಿತದ ಜನಪರ ಯೋಜನೆಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.