ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ರಾಜ್ಯದಲ್ಲಿ ಅತೀ ಹೆಚ್ಚು ಜಾನಪದ ಕಲಾಪ್ರಕಾರಗಳು

Team Udayavani, Nov 26, 2024, 6:15 AM IST

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದವೆಂಬುದು ನಮ್ಮ ಸಾಂಸತಿಕ ಪರಂಪರೆಯ ತಾಯಿಬೇರು. ಹಾಡುಗಳ ರೂಪದಲ್ಲಿ ಬಾಯಿಂದ ಬಾಯಿಗೆ ಹರಡಿದ ಜಾನಪದದಲ್ಲಿ ಪ್ರಾರ್ಥನೆ, ವೇದನೆ, ವ್ಯಂಗ್ಯ, ಕರುಣೆ, ಕಿವಿಮಾತು, ಭಕ್ತಿ, ಬೋಧನೆ ಎಲ್ಲವೂ ಇತ್ತು/ ಇದೆ. ಆದರೆ ಈ ದಿನಗಳಲ್ಲಿ ಜಾನಪದ ಕಲೆಯ ಸ್ಥಿತಿ ಹೇಗಿದೆ? ಅದಕ್ಕೆ ಎದುರಾಗಿರುವ ಸವಾಲುಗಳೇನು? ಜಾನಪದಕ್ಕೂ ಹಿನ್ನಡೆಯಾಗಲು ಕಾರಣಗಳೇನು? ಜಾನಪದವನ್ನು ಮರು ಕಟ್ಟುವ ಬಗೆ ಹೇಗೆ? ಮುಂದಿನ ತಲೆಮಾರಿಗೂ ಅದು ಏಕೆ ಅಗತ್ಯ? ಜಾನಪದವನ್ನು ಅದರ ಎಲ್ಲ ವೈಭವದೊಂದಿಗೆ ಉಳಿಸಿಕೊಳ್ಳಲು ಈಗ ತುರ್ತಾಗಿ ಆಗಬೇಕಿರುವುದೇನು ಎಂಬುದರ ಅವಲೋಕನ…

ಜಾನಪದದ ಬಹುದೊಡ್ಡ ನೆಲೆಯೇ ಕೃಷಿಕರ ಸಂಸ್ಕೃತಿ. ಈ ಸಂಸ್ಕೃತಿಯೊಂದಿಗೆ ಕಮ್ಮಾರ, ಚಮ್ಮಾರ, ಕುಂಬಾರ, ಬಡಗಿಗಳಂತಹ ಆಯಗಾರರೂ ಇರುವಂತೆ ಜನಪದ ಕಲಾಕಾರರೂ ಇದ್ದಾರೆ. ಇವರ ನಡುವೆ ಯಾವುದೇ ಭೇದಭಾವಗಳಿಲ್ಲದೆ ಎಲ್ಲರೂ ಒಟ್ಟಿಗೆ ಸಮಾನ ಸ್ಕಂದರಾಗಿ ತಮ್ಮ ತಮ್ಮ ಕಸುಬಿನ ಕಲಾವಂತಿಕೆಯ ನೈಪುಣ್ಯಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿರುತ್ತಾರೆ. ಗ್ರಾಮೀಣರು ಹಾಡಿದ್ದು, ಕುಣಿದದ್ದು, ವಾದ್ಯ ಬಾರಿಸಿದ್ದು ಅಷ್ಟೇ ಜಾನಪದವಲ್ಲ. ಅವರಷ್ಟೇ ಜನಪದರಲ್ಲ. ಒಂದರ್ಥದಲ್ಲಿ ಎಲ್ಲರೂ ಜನಪದರೇ. ಜಾನಪದದ ಪರಿಸರ ಪ್ರಭಾವಕ್ಕೆ ಒಳಗಾಗದೆ ಯಾರಿಗೂ ಬದುಕಲು ಸಾಧ್ಯವೇ ಇಲ್ಲ. ಶ್ರಮಿಕ ಜನಗಳ ಜೀವಂತ ಸಂಸ್ಕೃತಿಯೇ ಜನಪದ.ಪದ ಬಂದರೇಳು ಬಾರದಿರೆ ಶರಣಾಗುಪದವುಂಟು ನನ್ನ ಎದೆಯಲ್ಲಿ ತಾಮ್ರದ
ತಾತ್ಯುಂಟು ನನ್ನ ತೋಳಲಿ.

ಜನಪದರು ಕಟ್ಟಿದ ಪ್ರಾರ್ಥನಾ ಗೀತೆಯಿದು. 1950ರ ವರೆಗಿನ ಕನ್ನ­ಡ ಜಾನಪದ ಅಧ್ಯಯನ ಮತ್ತು ಸಂಗ್ರಹ ತೀರಾ ಭಾವ­ನಾತ್ಮಕ ನಿಲುವಿನಿಂದ ಕೂಡಿತ್ತು. ವೈಚಾರಿಕ ನೆಲೆಯಲ್ಲಿ ವಿದ್ವಾಂಸರು ಜಾನಪದವನ್ನು ಅಧ್ಯ ಯನಕ್ಕೆ ತಂದರು. ಅನಂತರ, ಪಾಶ್ಚಾತ್ಯ ಅಧ್ಯಯನ ಮಾದರಿಗಳನ್ನು ನಿರಾಕರಿಸಿ, ದೇಸೀ ನೆಲೆಯಲ್ಲಿ ಜಾನಪದ ಅಧ್ಯಯನ ಶುರುವಾಯಿತು. ಎಪ್ಪತ್ತರ ದಶಕದಲ್ಲಿ ಜಾನಪದಕ್ಕೆ ಸಾಂಸ್ಥಿಕ ಸ್ವರೂಪ ತಂದುಕೊ­ಡುವುದರ ಮೂಲಕ ಜಾನಪದ ಸಂರಕ್ಷಣೆ, ಸಂವರ್ಧನೆ, ಪ್ರಸಾರ ಮತ್ತು ಪ್ರಚಾರಗಳು ಪ್ರಾರಂಭವಾದವು.

ವಿಶ್ವವಿದ್ಯಾನಿಲಯಗಳು ಜಾನಪದ ಅಧ್ಯ­ಯನ, ಸಂಶೋಧನೆ, ಬೋಧನೆ, ಪ್ರಕಟನೆಗಳ ಕೆಲಸ ನಿರ್ವಹಿಸಿದವು. ಸಂಘಸಂಸ್ಥೆಗಳು ಆಸಕ್ತಿಯಿಂದ ಜನಪದ ಕಲೆಗಳು, ಉತ್ಸವ-ಜಾತ್ರೆ ಮೇಳಗಳು, ಆಚರಣೆ, ಸಂಪ್ರದಾಯಗಳು ಆರಂಭವಾದವು. ಇದೇ ಸಂದರ್ಭದಲ್ಲಿ ಅಜ್ಞಾತ ಜನಪದ ಕಲಾವಿದರನ್ನು ಗುರುತಿಸಿ, ಗೌರವಿಸಿ, ಮೂಲೆಗುಂಪಾಗಿದ್ದ, ನಶಿಸಿಹೋಗಿದ್ದ ಜನಪದ ಕಲೆಗಳಿಗೆ, ಕಲಾವಿದರಿಗೆ ಚೇತನ ತುಂಬಿ ಮುಂಚೂಣಿಗೆ ತರಲಾಯಿತು. ಇದರ ಜತೆಗೆ, ಜಾನಪದ ಸಮ್ಮೇಳನಗಳು ನಡೆದವು. ಜಾನಪದದ ವಿಚಾರಗೋಷ್ಠಿ, ಕಲಾಮೇಳ, ಜನಪದ ಕಲೆಗಳಿಗೆ ಮೀಸಲಾದ ಲೇಖನಗಳು, ಕೃತಿಗಳು ಹುಟ್ಟಿಕೊಂಡವು. ಪತ್ರಿಕೆಗಳು ಜಾನಪದದ ಕುರಿತು ಚರ್ಚೆ, ಚಿಂತನೆ ಮತ್ತು ಸಂಶೋಧನೆಗಳತ್ತ ಗಮನ ಹರಿಸಿದವು.

ಜೋಪಾನದ ಅರಿವು, ಎಚ್ಚರಿಕೆ ಅಗತ್ಯ
ಇಡೀ ಭಾರತದಲ್ಲಿ ಬೇರೆ ಯಾವುದೇ ರಾಜ್ಯದಲ್ಲೂ ಕಾಣದಷ್ಟು ಜಾನಪದ ಕಲಾಪ್ರಕಾರಗಳು ಕರ್ನಾಟಕದಲ್ಲಿರುವುದು ಹೆಮ್ಮೆಯ ವಿಷಯ. ಆದರೆ ಇತ್ತೀಚಿನ ದಿನಗಳಲ್ಲಿ ಜನಪದವು “ಫೋಕ್‌ ಲೋರ್‌’ ಹೋಗಿ “ಫೇಕ್‌ ಲೋರ್‌’ (ನಕಲಿ ಜಾನಪದ) ಆಗುವಂತಹ ಹಂತವನ್ನು ತಲುಪಿದೆ. ಇನ್ಸ್‌ ಟೆಂಟ್‌ ಗಾಯಕರು ಮೂಲಭೂತ ಸಂಗೀತದ ಅರಿವಿಲ್ಲದ ಯುವಜನತೆ ಜಾನಪದ ಗಾಯನ, ಮೂಲ ಜಾನಪದ ಅಧ್ಯಯನವನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ನಾಳಿನ ಸಂಶೋಧನೆಯ ಮಾರ್ಗವೇನು ಎಂಬುದರ ಕನಿಷ್ಠ ಅರಿವಿಲ್ಲದವರೇ ವಿಜೃಂಭಿಸುತ್ತಿದ್ದಾರೆ, ನಿಜ ಅರಿವಿರುವವರು ಮೂಲೆ ಗುಂಪಾಗಿದ್ದಾರೆ.

ಜಾನಪದ ಜೀವಕೇಂದ್ರಿತವಾದದ್ದು. ಪರಿಸರ ಕೇಂದ್ರಿತವಾದುದು. ಇದನ್ನು ಇತ್ತೀಚಿನ ಯುವಜನತೆ, ವಿದ್ವಾಂಸರು ಕೇವಲ ವಸ್ತು ಸಂಗ್ರಹಾಲಯದ ಮಟ್ಟಕ್ಕೆ ಇಳಿಸಿಬಿಟ್ಟಿದ್ದಾರೆ. ಕನ್ನಡ ಜಾನಪದವು ಸದಾಕಾಲ ನಿರಂತರವಾಗಿ, ಜೀವಂತವಾಗಿ ಮುಂದುವರಿಸಿಕೊಂಡು ಹೋಗಬೇಕಾದಲ್ಲಿ, ಹಿಂದಿನ ತಲೆಮಾರಿನ ವಿದ್ವಾಂಸರುಗಳು ಮತ್ತು ಹೊಸ ತಲೆಮಾರಿನ ವಿದ್ವಾಂಸರುಗಳ ಮುಖಾ­ಮುಖೀ ಆಗಬೇಕು. ಈ ಮಂಥನದಿಂದ ಹೊಸ­ದಾದ ಜಾನಪದ ರೂಪುರೇಷೆಗಳನ್ನು, ಅಂದರೆ ಒಂದು ರೀತಿಯ ಮುರಿದು ಕಟ್ಟುವ ಕೆಲಸವು ಆಗಬೇ­ಕಿದೆ. ಜನಪದ ಸಾಹಿತ್ಯ, ಸಂಗೀತ, ಕುಣಿತ-ನಾಟಕ, ಹಬ್ಬ-­ಹರಿದಿನ, ತೇರು-ಜಾತ್ರೆ, ನಂಬಿಕೆ-ನಡಾವಳಿ, ಚಿತ್ರ-ಶಿಲ್ಪ ಇವೆಲ್ಲ ಹಿಂದೆ ಮತ್ತು ಈಗಲೂ ನಮ್ಮ ಸಾಂಸ್ಕೃತಿಕ ಪರಂ­ಪರೆಯ ತಾಯಿ ಬೇರುಗಳು. ಆದರೆ, ಜಾಗತೀಕರಣದ, ಆಧು­ನಿ­ಕ­ತೆಯ ಬಿರುಗಾಳಿಯಲ್ಲಿ ನಮ್ಮಿà ಸಾಂಸ್ಕೃತಿಕ ಪರಂ­ಪರೆಯ ಮರಗಳು ಉರುಳುತ್ತಿವೆ, ತಾಯಿ ಬೇರುಗಳು ಒಣಗುತ್ತಿವೆ.

ಪೂರಕವಾಗುವ ಬದಲಾವಣೆಗಳಿರಲಿ
ಕಳೆದ ಎರಡು-ಮೂರು ದಶಕಗಳಲ್ಲಿ, ಜಾನಪದವು ಕರ್ನಾಟಕದಲ್ಲಿ ಗಣನೀಯವಾಗಿ ಪರಿವರ್ತನೆಗೊಂಡಿರುವುದನ್ನು ಕಾಣಬಹುದು. ಇದಕ್ಕೆ ಹಲವು ಕಾರಣಗಳಿವೆ. ಸಾಮಾಜಿಕ ಸ್ತರಗಳ ಸ್ಥಿತ್ಯಂತರ, ತಂತ್ರಜ್ಞಾನಗಳಲ್ಲಿ ಆಧುನೀಕರಣ ಮತ್ತು ಅವುಗಳ ಪ್ರಭಾವ, ಸಾಂಪ್ರದಾಯಿಕ ಅಭ್ಯಾಸಗಳೇ ಮುಂತಾದ ಬದಲಾವಣೆಗಳಿಗೆ ಒಗ್ಗಿಕೊಂ­ಡಿ­ದ್ದಾಗ್ಯೂ, ಅವುಗಳ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಿಕೊಳ್ಳಲು ತಮ್ಮ ಮೂಲರೂಪ, ಸ್ವರೂಪವನ್ನು ಜತನ ಮಾಡಿಕೊಳ್ಳುವ ಅಗತ್ಯವಿದೆ. ವಿಶ್ವದಾದ್ಯಂತ ಜಾನಪದದ ಮೇಲೆ ಬೀರಿರುವ ಪ್ರಭಾವಗಳು, ಕರ್ನಾಟಕದ ಜನಪದದ ಮೇಲೂ ಸಾಕಷ್ಟು ಪರಿಣಾಮ ಬೀರಿವೆ. ಸಿನೆಮಾ, ಟಿವಿಗಳಲ್ಲಿನ ವಿಷಯ, ವಸ್ತುವೂ ಇದಕ್ಕೆ ಹೊರತಾಗಿಲ್ಲ.

ಮನರಂಜನೆಯ ಭಾಗವಾಗಿ ಜಾನಪದದ ಮೇಲಿರುವ ಜನರ ನಂಬಿಕೆಗಳಿಗೆ ಧಕ್ಕೆ ಬಂದೊದಗುತ್ತಿದೆ. ಆದ್ದರಿಂದ ನಮ್ಮ ಜಾನಪದ ಆಟಗಳು, ಜಾತ್ರೆಗಳು, ಹಬ್ಬಗಳು, ಅಣ್ಣಮ್ಮ, ಗಂಗಮ್ಮ, ಹುಲಿಗೆಮ್ಮ, ಚೌಡಮ್ಮ, ಅಟ್ಟಿಲಕ್ಕಮ್ಮ, ಮಾರಮ್ಮ, ಕರಗದಮ್ಮ – ಹೀಗೆ ಎಲ್ಲ ಗ್ರಾಮ ದೇವತೆಗಳು ಹಳ್ಳಿಗಳಲ್ಲಿ ನಿರಂತರವಾಗಿ ನೆಲೆಸಿರುವಂತೆ ಸಮೃದ್ಧ ಆಚರಾತ್ಮಕ ಜಾನಪದವನ್ನು ನಾವು ಕಾಪಾಡಿಕೊಳ್ಳಬೇಕು. ಪೀಳಿಗೆಯಿಂದ ಪೀಳಿಗೆಗೆ, ಪರಂಪರೆಯಿಂದ ಪರಂಪರೆಗೆ ಇವುಗಳ ನಡುವಿನ ಅಂತರಕ್ಕೆ ಸೇತುವಾಗುವ ಕಾರ್ಯದಲ್ಲಿ ಜಾನಪದ ಕಲೆಗಳನ್ನು ಬಳಕೆ ಮಾಡಿಕೊಳ್ಳುವುದು ಇಂದು ಅನಿವಾರ್ಯವಾಗಿದೆ.

ಇಂದು ಕನ್ನಡದ ಯುವಪೀಳಿಗೆಯ ಅನೇಕರು ತಮ್ಮದೇ ಆದ ಕಲಾಪ್ರ­ಕಾರಗಳಲ್ಲಿ ಜಾಗತಿಕ ಮಟ್ಟದಲ್ಲಿ ಮಂಟೇಸ್ವಾಮಿ, ಮಲೆಮಹದೇಶ್ವರ ಕಾವ್ಯದ ಸೊಗಡನ್ನು ಯಶಸ್ವಿಯಾಗಿ ಕೊಂಡೊಯ್ದಿದ್ದಾರೆ. ಸರಕಾರವು ಸಹ ಯುವಜನ ಮೇಳಗಳನ್ನು ನಡೆಸುವುದರ ಮೂಲಕ ಯುವ­ಜನತೆಯಲ್ಲಿ ಜಾನಪದದ ಎಚ್ಚರಿಕೆಯನ್ನು ಮೂಡಿಸುತ್ತಾ ಬಂದಿದೆ. ಈ ಕೆಲಸ ನಿರಂತರವಾಗಿ ಆಗಬೇಕು. ಸೂತ್ರದ ಗೊಂಬೆಯಾಟ, ತೊಗಲು ಗೊಂಬೆಯಾಟ, ಬಯಲಾಟ, ಯಕ್ಷಗಾನ ಇವೆಲ್ಲವುಗಳನ್ನು ಆಧುನಿಕತೆ­ಯೊಂದಿಗೆ ತೊಡಗಿಸಿಕೊಂಡು ಅಭಿವ್ಯಕ್ತಗೊಳಿಸುವ ನಿಟ್ಟಿನಲ್ಲಿ ಸಂಘ-­ಸಂಸ್ಥೆಗಳು ಕಾರ್ಯಪ್ರವೃತ್ತರಾಗುವ ಅಗತ್ಯವಿದೆ. ಜಾಗತಿಕ ಜಗತ್ತಿನೊಂದಿಗೆ ಜಾನಪದ ಮುಖಾಮುಖಿ ಆಗಬೇಕಾದ ಅನಿವಾರ್ಯತೆ ಇದೆ.

ಮರುಕಟ್ಟುವ ಬಗೆ
ಕನ್ನಡ ರಂಗಭೂಮಿಗೆ ಜಾನಪದವೇ ಪುನರುಜ್ಜೀವನ ಕೊಟ್ಟದ್ದು. ಆಧುನಿಕ ರಂಗಭೂಮಿಯ ದಿಗ್ಗಜರು, ಧುರೀಣರು ಜನಪದ ರಂಗಭೂಮಿಯ ಅಡಿಪಾಯದಿಂದಲೇ ಕನ್ನಡ ರಂಗಭೂಮಿಯ ಭೂಮಿಕೆಯನ್ನು ಸದೃಢಗೊಳಿಸಿದ್ದು. ನಾಟಕ ಪರಂಪರೆಯಲ್ಲಿ ಜನಪದದ ಮೊರೆ ಹೋಗಲೇಬೇಕಾಗಿದೆ. ಮೌಖೀಕ ಮಹಾಕಾವ್ಯಗಳನ್ನು, ಸಾಂಸ್ಕೃತಿಕ ವೀರರನ್ನು ಕುರಿತ ಮಹಾಕಾವ್ಯಗಳ ಸಂದೇಶಗಳನ್ನು ಗಟ್ಟಿಯಾಗಿ ಸಾರಿ, ಜನಮಾನಸದಲ್ಲಿ ಹಾಸುಹೊಕ್ಕಾಗುವಂತೆ ಮಾಡಬೇಕಿದೆ. ಮಂಟೇಸ್ವಾಮಿ, ಮಲೆಮಾದೇಶ್ವರ, ಜೋಕುಮಾರರು, ಯಲ್ಲಮ್ಮ, ಕೊರಗಜ್ಜ, ಮೈಲಾರಲಿಂಗ, ಚೌಡಿಕೆ, ಡೊಳ್ಳು, ಕಂಸಾಳೆ, ಕೋಲಾಟ, ವೀರಗಾಸೆ, ರಂಗದ ಕುಣಿತವೇ ಮುಂತಾದ ಕಲಾಪರಂಪರೆಯ ಆಶಯಗಳನ್ನು ಹೆಚ್ಚುಹೆಚ್ಚು ರಂಗರೂಪದಲ್ಲಿ ತರುವುದು ಅನಿವಾರ್ಯವಾಗಿದೆ.

ನಮ್ಮ ಬದುಕಿನ ಭಾಗವಾಗಿ ಬಂದಿರುವ ನಮ್ಮೊಳಗಿನ ದನಿ ನಮ್ಮ ಜನಪದರ ಕಂಠಸ್ಥ ಸಂಪತ್ತು. ಜನಪದ ಹೇಳುವುದಲ್ಲ, ಓದುವುದಲ್ಲ, ಮಾತನಾಡುವುದೂ ಅಲ್ಲ, ಬೋಧನೆ ಮಾಡುವುದಕ್ಕಂತೂ ಅಲ್ಲವೇ ಅಲ್ಲ. ಕಲೆಗಳ ಪ್ರದರ್ಶನ, ವಾದ್ಯಗಳ ಪ್ರಯೋಗ, ಹಾಡುಗಳ ಪ್ರಯೋಗವಾ­ದಾಗ ಮಾತ್ರ ಜನಪದ. ನಾವು ಮಾತನಾಡುವುದಕ್ಕಿಂತ ಜನಪದ ಮಾತನಾ­ಡುತ್ತವೆ, ಪ್ರದರ್ಶಿಸುತ್ತಿವೆ. ಅವುಗಳ ವೈಭವ ನಮ್ಮ ಮನಸ್ಸನ್ನು ಆನಂದಗೊ­ಳಿ­ಸುತ್ತದೆ ಎಂದಮೇಲೆ, ಅದನ್ನು ಉಳಿಸಿ, ಬೆಳೆಸುವ ಆಲೋಚನೆ ನಮ್ಮಲ್ಲಿ ಬಂದರೆ ಮಾತ್ರ ಕಲೆಗಳು ಉಳಿಯುವುದು. ದೇಸೀ ಪರಂಪರೆ ಉಳಿಸಿಕೊಂಡಲ್ಲಿ ಜಾಗತಿಕ ಪರಂಪರೆಗೆ ಸುರಕ್ಷೆ ಎಂಬುದು ಕಟುವಾಸ್ತವ.

ಸಾರ್ವಜನಿಕ ಸಹಭಾಗಿತ್ವ ಮತ್ತು ಸರಕಾರ
ಪಾರಂಪರಿಕ ಜಾನಪದ ಸಂಸ್ಕೃತಿಯನ್ನು ಯುವಜನಾಂಗಕ್ಕೆ ತಲುಪಿಸು­ವಲ್ಲಿ ಸರಕಾರದ ಪಾತ್ರ ಮುಖ್ಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಜಾನಪದ ವಿಶ್ವವಿದ್ಯಾನಿಲಯಗಳು, ಅಕಾಡೆಮಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಕಾರ್ಯಪ್ರವೃತ್ತವಾಗಬೇಕಿದೆ. ರಾಷ್ಟ್ರ ಮಟ್ಟದ ಸ್ವಾಯತ್ತ ಸಂಸ್ಥೆ ಐಸಿಸಿಆರ್‌ನಂತಹ ಮಟ್ಟದಲ್ಲಿ ಜನಪದ ಕಲಾವಿದರು ಭಾಗವಹಿಸಲು ವಿಪುಲ ಅವಕಾಶ ಕಲ್ಪಿಸಬೇಕಿದೆ. ಶಿಕ್ಷಣದ ವಿವಿಧ ಹಂತಗಳಲ್ಲಿ ಸ್ಥಳೀಯ ಜಾನಪದ ಕಲಾವಿದರ ಕಥೆಗಳು, ಸಾಂಸ್ಕೃತಿಕ ವೀರರು, ಒಗಟು-ಒಡಪು, ಜನಪದ ವೈದ್ಯ, ಸ್ಥಳೀಯ ಆಹಾರ ಪದ್ಧತಿ, ಜಾನಪದ ಕರಕುಶಲ ಇವೆಲ್ಲದರ ಬಗ್ಗೆ ಪಠ್ಯದಲ್ಲಿರುವಂತಾಗಬೇಕು. ಕನ್ನಡ ಜಾನಪದಕ್ಕೆ ಹೊಸ ಸ್ವರೂಪ ಕೊಟ್ಟಂತಹ, ತಮ್ಮ ಬದುಕನ್ನೇ ಜಾನಪದಕ್ಕೆ ಅರ್ಪಣೆ ಮಾಡಿದಂತಹ ತಲೆಮಾರು ಇಂದು ಮುಂದುವರೆ­ಯುತ್ತಿಲ್ಲವೆಂಬ ಆತಂಕ ಕಾಡುತ್ತಿದೆ. ತಲೆಮಾರಿನಿಂದ ತಲೆಮಾರಿಗೆ ಜಾನಪದ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಕೊಡುಗೆ ನೀಡುವವರನ್ನು ಗುರುತಿಸಿ, ಪುರಸ್ಕರಿಸುವ ಮೂಲಕ ಅಂತಹವರ ಪರಂಪರೆ ಉಳಿಸಿ, ಬೆಳೆಸುವ ಕೆಲಸ ಆಗಬೇಕಿದೆ.

ಆಗಬೇಕಾದ್ದೇನು?
1. ಶಾಲಾ ಕಾಲೇಜುಗಳಲ್ಲಿ ಜಾನಪದ ಪಠ್ಯವನ್ನು ಸಮರ್ಪಕವಾಗಿ ಅಳವಡಿಸುವ ಪ್ರಯತ್ನ ಅಗತ್ಯ
2.ರಾಜ್ಯದಲ್ಲಿ ಜನಪದ ಕಲಾವಿದ ಕೇಂದ್ರಿತ ಅಧ್ಯಯನಗಳು ಹೆಚ್ಚು ಹೆಚ್ಚು ಆಗಬೇಕು
3. ಕಲಿಯದವರಿಂದ ಕಲಿತವರಿಗೆ ಕಲಿಸುವ ಕೆಲಸ ಆಗಬೇಕು. ಅಂದರೆ ಜನಪದ ಕಲೆಗಳ ತರಬೇತಿ ನಡೆಯಬೇಕು. ಸರಕಾರ ಆಸ್ಥೆ ವಹಿಸಬೇಕು
4.ಬುಡಕಟ್ಟು ಸಮುದಾಯಗಳ ಕಲೆ, ಸಾಹಿತ್ಯ – ಸಂಸ್ಕೃತಿಯನ್ನು ಉಳಿಸಿ, ಸಂರಕ್ಷಿಸಿ, ಪ್ರವರ್ಧನೆ ಮಾಡುವ ಕೆಲಸ ಆಗಬೇಕಾದ ಅಗತ್ಯವಿದೆ
5. ಕನ್ನಡ ಜಾನಪದವನ್ನು ವರ್ತಮಾನಕ್ಕೆ ಅನುಗುಣ­ವಾಗಿ ಮುರಿದು ಕಟ್ಟುವ ಕೆಲಸ ನಡೆಯಬೇಕು

-ಡಾ| ವತ್ಸಲಾ ಮೋಹನ್‌ ಅಧ್ಯಾಪಕಿ, ಬೆಂಗಳೂರು

ಟಾಪ್ ನ್ಯೂಸ್

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚುರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು

ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

Astronamy-moon

Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

4-new-year

New Year 2025:ಹಳೆ ವ್ಯಕ್ತಿಗೆ ಹೊಸ ವರ್ಷ….ಹಳೆ ವರ್ಷದಲ್ಲಿ ಕಲಿತ ಎಲ್ಲಾ ಅನುಭವ ಪಾಠವಾಗಲಿ

Priyank-Kharghe

ರಾಷ್ಟ್ರಮಟ್ಟದಲ್ಲೂ ಪ್ರತಿಭಟಿಸಲಿ, ಬಿಜೆಪಿಯವರೇ ಮೂಗು ಕೊಯ್ಯಿಸಿಕೊಳ್ತಾರೆ: ಪ್ರಿಯಾಂಕ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Court-1

Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.