ಮೀ ಟೂ ಅಭಿಯಾನ ಭ್ರಷ್ಟಾಚಾರದ ವಿರುದ್ಧ ನಡೆಯಲಿ 


Team Udayavani, Nov 7, 2018, 6:12 AM IST

6.jpg

ಭಾರೀ ಸಂಚಲನ ಮೂಡಿಸಿದ ಮೀ ಟೂ ಅಭಿಯಾನ ಹಲವು ಸಂತ್ರಸ್ತರ ಪ್ರಬಲ ಧ್ವನಿಯಾಗಿ ಮಾರ್ಪಟ್ಟಿದ್ದರೆ, ಹಲವರ ನಿದ್ದೆಗೆಡಿಸಿದೆ. ಲೈಂಗಿಕ ಕಿರುಕುಳದ ವಿರುದ್ಧ ಧ್ವನಿಯಾಗಿ ಇಂದು ಪ್ರತಿನಿತ್ಯ ಸುದ್ದಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ ಈ ಅಭಿಯಾನದಲ್ಲಿ ಪಾಲ್ಗೊಳ್ಳುವುದರ ಸಲುವಾಗಿ ವಿನಾಕಾರಾಣ ಹೆಸರನ್ನು ಎಳೆದು ತಂದರೆ ಈ ಪರಿಕಲ್ಪನೆಯ ದಿಕ್ಕು ತಪ್ಪುತ್ತದೆ. ಮೀ ಟೂ ಅಭಿಯಾನ ಹಲವು ಹೊಸ ಆಯಾಮಗಳನ್ನು, ಅವಕಾಶವನ್ನು ತೆರೆದಿರಿಸಿದೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶವನ್ನು ಕಾಡುತ್ತಿರುವ ಎರಡು ಪ್ರಬಲ ಸವಾಲುಗಳಾದ ಭಯೋತ್ಪಾದನೆ ಹಾಗೂ ಭ್ರಷ್ಟಾಚಾರ ಇವೆರಡೂ ದೇಶದ ಅಭಿವೃದ್ಧಿಗೆ ಮಾರಕವಾದಂತಹದ್ದು. ಇವುಗಳ ವಿರುದ್ಧ ಹೋರಾಡುವ ಸಲುವಾಗಿ ಸಾಂವಿಧಾನಿಕವಾಗಿ ಸ್ಥಾಪಿಸಲ್ಪಟ್ಟ ಹಲವು ಸಂಸ್ಥೆಗಳು ನಮ್ಮಲ್ಲಿವೆ. ಆದರೆ ಅವುಗಳಿಗೆ ದೂರು ಸಲ್ಲಿಕೆಯಾಗದೇ ಹೆಚ್ಚಿನ ಇಲಾಖೆಗಳು ಕರ್ತವ್ಯ ನಿರ್ವಹಿಸುವಂತಿಲ್ಲ. 

ಮೀ ಟೂ ಅಭಿಯಾನ ಲೈಂಗಿಕ ಕಿರುಕುಳಗಳ ಅಥವಾ ಕೆಲಸದ ಸ್ಥಳಗಳಲ್ಲಿ ಹೆಣ್ಣು ಅನುಭವಿಸಿದ/ಅನುಭವಿಸುತ್ತಿರುವ ತೊಂದರೆಗಳನ್ನು ಬಯಲಿಗೆಳೆದು ಜಾಗೃತ ಸಮಾಜವನ್ನು ಸೃಷ್ಟಿಸುವ ಸಂಕಲ್ಪ ಮಾಡಿದೆ. ಅದೇ ರೀತಿ ಭ್ರಷ್ಟರ ವಿರುದ್ಧ ನಾವು ಹೋರಾಡುವ ಸಲುವಾಗಿ ಮೀ ಟೂ ವಿಸ್ತರಿಸಬೇಕಿದೆ. ಒಂದು ವೇಳೆ ಇಂತಹ ಒಂದು ಅಭಿಯಾನ ನಡೆದದ್ದೇ ಆದಲ್ಲಿ ಜಾಗತಿಕ ಮಟ್ಟದಲ್ಲಿ ಭ್ರಷ್ಟಾಚಾರ ಸ್ವಲ್ಪಮಟ್ಟಿನ ಇಳಿಕೆಯನ್ನಾದರೂ ಸಾಧಿಸಬಹುದು. ಭ್ರಷ್ಟಚಾರ ಎಂದರೆ ಕೇವಲ ಕೇವಲ ಹಣ ಪಡೆಯುವುದಲ್ಲ. ಆಮಿಷವೊಡ್ಡುವುದು ಹಾಗೂ ಆಮಿಷ ಪಡೆಯುವುದು ಎರಡೂ ಭ್ರಷ್ಟಾಚಾರವಾಗಿದೆ. ಇದು ಯಾವುದೇ ರೂಪದಲ್ಲಿಯಾದರೂ ಇರಬಹುದು. ಹಣ, ವಸ್ತು, ಚರಾಸ್ತಿ, ಸ್ಥಿರಾಸ್ತಿ ಹೀಗೆ ಈ ರೂಪದಲ್ಲಿ ನಾವು ಮತ್ತೂಬ್ಬರಿಗೆ ಆಮಿಷವೊಡ್ಡುವುದು ಅಥವಾ ಸ್ವೀಕರಿಸುವುದು, ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ತನ್ನವರಿಗೆ ಸುಲಭ ಮಾಡಿಕೊಡುವುದು ಅಥವ ವ್ಯವಸ್ಥೆಯ ದುರ್ಬಳಕೆಯೂ ಭ್ರಷ್ಟಾಚಾರದ ಭಾಗವಾಗಿದೆ. ಮೀ ಟೂ ಅಭಿಯಾನದ ಬಭ್ರಷ್ಟಚಾರದ ವಿರುದ್ದ ಸಾಗಬೇಕಾದ ಅನಿವಾರ್ಯತೆ ಇದೆ. 

ಸಾರ್ವಜನಿಕರು ಸರಕಾರಿ ಕೆಲಸಗಳಿಗೆ ಅಥವ ಖಾಸಗಿ ಕೆಲಸದ ಸಂದರ್ಭ ತಮ್ಮಿಂದ ಲಂಚ ಕೇಳಿದ ಹಾಗೂ ತಾವು ನೀಡಿದ ಪ್ರಸಂಗವನ್ನು ಸಾರ್ವಜನಿಕವಾಗಿ ಹೇಳಬೇಕು. ಭ್ರಷ್ಟಚಾರ ವಿರೋಧಿ ಕಾನೂನಿನಲ್ಲಿ ಲಂಚ ನೀಡುವುದು ಹಾಗೂ ಪಡೆಯುವುದು ಎರಡೂ ಅಪರಾಧ. ಆದರೆ ಕೆಲವು ಸಂದರ್ಭದಲ್ಲಿ ನಮ್ಮ ಕೆಲಸ ಆಗಬೇಕೆಂಬ ಕಾರಣದಿಂದ ತಾವಾಗಿ ಆಮಿಷವೊಡ್ಡಿದ್ದರೆ ಅದನ್ನು ಬಹಿರಂಗಪಡಿಸಬೇಕು. ಸಾರ್ವಜನಕರು ಇಂತಹ ಅಭಿಯಾನ ಆರಂಭಿಸಿದರೆ ವ್ಯವಸ್ಥೆಯ ನಡುವೆ ನಡೆದುಕೊಂಡು ಬರುತ್ತಿರುವ ಹಲವು ವಾಮಮಾರ್ಗದ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತದೆ. 

 ಸಾಮಾನ್ಯವಾಗಿ ಫೈಲುಗಳು ಬೇಗ ಮೂವ್‌ ಆಗಬೇಕೆನ್ನುವ ಕಾರಣದಿಂದ ಜನರು ಅಧಿಕಾರಿಗಳಿಗೆ ಆಮಿಷವೊಡ್ಡುತ್ತಾರೆ. ಕೆಲವು ಸಂದರ್ಭ ಅಧಿಕಾರಿಗಳು ಬಾಯಿಬಿಟ್ಟು ಕೇಳದೇ ಇರಬಹದು, ಆದರೆ ಅವರು ಅದನ್ನು ಅಪೇಕ್ಷಿಸುತ್ತಾರೆ ಎಂದು ತಿಳಿದು ತಾನಾಗೇ ಅಧಿಕಾರಿಗೆ ಆಮಿಷವೊಡ್ಡಿದ್ದರೆ, ಅಥವಾ ಅದನ್ನು ಅಧಿಕಾರಿ ನಿರಾಕರಿಸಿದ್ದರೆ ಅಭಿಯಾನದ ಮೂಲಕ ಭ್ರಷ್ಟರಿಗೆ ಎಚ್ಚರಿಕೆ ನೀಡುವ ಅವಕಾಶ ನಮ್ಮ ಮುಂದಿದೆ. 

ಬಡ್ತಿ ಹೊಂದುವ ಸಮಯದಲ್ಲಿ  ಯಾರಾದರೂ ಆಮಿಷ ಕೇಳಿದ್ದರೆ ನೀವೇನು ಮಾಡಿದಿರಿ ಎಂಬುದನ್ನು ಮೀ ಟೂ ಟ್ಯಾಗ್‌ ಮೂಲಕ ಹೊರ ಪ್ರಪಂಚಕ್ಕೆ ತಿಳಿಸಬಹುದಾಗಿದೆ. ರಾಜಕಾರಣಿಗಳು ಭ್ರಷ್ಟಚಾರದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಸದನ ಸಮಿತಿ, ಸಂಸದೀಯ ಸಮಿತಿಗಳಿಂದ ತನಿಖೆ ನಡೆಸುತ್ತಾರೆ. ವಿಶೇಷ ತನಿಖಾ ದಳವನ್ನು ಅಸ್ತಿತ್ವಕ್ಕೆ ತರುತ್ತಾರೆ. ಹೀಗೆ ಭ್ರಷ್ಟವ್ಯವಸ್ಥೆಯ ವಿರುದ್ಧ ಹೋರಾಡುತ್ತಲೇ ಇರುತ್ತಾರೆ. ಆದರೆ ಭ್ರಷ್ಟಾಚಾರಕ್ಕೆ ಕಡಿವಾಣ ಮಾತ್ರ ಬಿದ್ದಿಲ್ಲ. ಸರಕಾರಗಳ ರಚನೆ ಸಂದರ್ಭ ಮ್ಯಾಜಿಕ್‌ ನಂಬರ್‌ ತಲುಪದೇ ಇದ್ದಾಗ ಇದೇ ರಾಜಕಾರಣಿಗಳ ವಿರುದ್ಧ ಕುದುರೆ ವ್ಯಾಪಾರ, ಭ್ರಷ್ಟಾಚಾರದ ಆರೋಪ ಬರುತ್ತದೆ. ಕಾನೂನನ್ನು ರೂಪಿಸುವ ಜನರೇ ಅದರ ಪ್ರಭಾವಕ್ಕೆ ಒಳಗಾದರೆ ಇನ್ನು ವ್ಯವಸ್ಥೆ ಸರಿಹೊಂದಲು ಸಾಧ್ಯವಿದೆಯೇ ಎಂಬ ಪ್ರಶ್ನೆ ಕೇಳಿಬರುತ್ತದೆ. ಹಾಗಾದರೆ ರಾಜಕಾರಣಿಗಳು ಭ್ರಷ್ಟಚಾರದ ವಿರುದ್ದ ಮೀ ಟೂ ಅಭಿಯಾನ ಆರಂಭಿಸಿದರೆ ಹೇಗಿರಬಹುದು ಎನ್ನುವ ಕುತೂಹಲ ಇದೆ. 

ರಾಜಕೀಯ ಪಕ್ಷಗಳ ಪಾರ್ಟಿಫ‌ಂಡ್‌, ಡೈರಿ ಡಿಟೇಲ್ಸ್‌, ಸ್ವಜನ ಪಕ್ಷಪಾತ, ಕಿಕ್‌ಬ್ಯಾಕ್‌, ಹಾರ್ಸ್‌ ಟ್ರೇಡಿಂಗ್‌, ಮಂತ್ರಿಗಿರಿ, ನಿಗಮಮಂಡಳಿಗೆ ಆಮಿಷ ಹೀಗೆ ಹಲವು ಆರೋಪಗಳಿಗೆ ಪದೇ ಪದೇ ತುತ್ತಾಗುತ್ತಿರುವ ರಾಜಕಾರಣಿಗಳು ತಾವು ಅನುಭವಿಸಿದ ಆಮಿಷ ಸ್ವೀಕರಿಸುವ, ಆಮಿಷವೊಡ್ಡುವ ಪ್ರಕರಣಗಳ ಕುರಿತಾಗಿ ಸಾರ್ವಜನಿಕವಾಗಿ ಹೇಳಿಕೊಳ್ಳಬೇಕು. ಅಂದು ವ್ಯವಸ್ಥೆ ಬದಲಾಗುವ ಕಾಲ ಸನ್ನಿಹಿತ ಎಂದು ವಿಶ್ಲೇಷಿಸಬಹುದಾಗಿದೆ. ವೋಟಿಗಾಗಿ ನೋಟು ಚುನಾವಣೆ ಸಂದರ್ಭ ಅತೀ ಹೆಚ್ಚು ಚರ್ಚೆಯಾಗುತ್ತಿರುವ ವಿಷಯ. ಚುನಾವಣೆ ಎಂದರೆ ಪ್ರಜಾಪ್ರಭುತ್ವದ ಹಬ್ಬ. ಆ ಹಬ್ಬಕಾಗಿ ತೆರಳುವವರಿಗೆ ದುಡ್ಡುಕೊಟ್ಟು ಕಳುಹಿಸುವ ಕ್ರಮ ಇನ್ನೂ ಕೆಲವು ಕಡೆ ಇದೆ ಎನ್ನುವ ಆರೋಪ ಇದೆ. ಇದಕ್ಕೆ ಪೂರಕ ಎಂಬಂತೆ ಕೆಲವು ಪ್ರಕರಣದಲ್ಲಿ ಇದು ಸಾಬೀತಾಗಿದ್ದು, ದೃಶ್ಯ ಮಾಧ್ಯಮಗಳಲ್ಲಿ ಸುದ್ದಿಗಳು, ವಿಡಿಯೋ ತುಣುಕಿನ ಸಮೇತ ಬಿತ್ತರಗೊಂಡಿದ್ದವು. ಇದರ ವಿರುದ್ಧ ಜನ ಏಕೆ ಹೋರಾಡಬಾರದು. ಪ್ರಜೆಗಳು ತಾವು ಅನುಭವಿಸಿದ ಸಂದಿಗ್ಧತೆ ಅಥವಾ ಮಾರಿಕೊಂಡ ಮತವನ್ನು ಮೀ ಟೂ ಮಾದರಿಯಲ್ಲಿ ಹೇಳುವಂತಹ ವಾತಾವರಣ ಸೃಷ್ಟಿಯಾಗಬೇಕಿದೆ. 

ತೀವ್ರ ಸ್ವರೂಪ ಪಡೆದುಕೊಂಡಿರುವ ಮೀಟೂ ಅಭಿಯಾನ ದುರ್ಬಳಕೆಯಾದರೆ… ಎಂಬ ಭಯ ಆವರಿಸತೊಡಗಿದೆ. ಲೈಂಗಿಕ ಕಿರುಕುಳದಂತಹ ಪ್ರಕರಣಗಳು ನಿಜವಾಗಿಯೂ ನಡೆದಿದ್ದೇ ಆದರೆ ಅದರ ವಿರುದ್ಧ ದ್ವನಿ ಎತ್ತುವುದರಲ್ಲಿ ತಪ್ಪಿಲ್ಲ. ಆದರೆ ಮಾನಹರಾಜು ಹಾಕಲು ಯಾರಾದರೂ ಸರಿ ಇದನ್ನು ಬಳಸಿಕೊಳ್ಳಬಾರದು. ಅದೇ ರೀತಿ ಭ್ರಷ್ಟಾಚಾರ ಪ್ರಕರಣಗಳು ಅಥವಾ ಆ ಸನ್ನಿವೇಶ ನಿರ್ಮಾಣವಾಗಿದ್ದರೆ ಅಂಥವುಗಳನ್ನು ಹೇಳಿಕೊಂಡರೆ ತಪ್ಪಿಲ್ಲ. ಆದರೆ ಸೇಡು ಅಥವ ಇನ್ಯಾವುದೂ ಕಾರಣಕ್ಕೆ ದುರ್ಬಳಕೆಗೊಳ್ಳುವಂತಿರಬಾರದು. ಇಂದು ನಮ್ಮ ಮುಂದೆ ಒಳ್ಳೆಯ ಒಂದು ಆಯ್ಕೆ ಇದೆ. ಅದನ್ನು ಉಳಿಸುವುದು, ಬೆಳೆಸುವುದು ನಮ್ಮ ಕೈಯಲ್ಲಿದೆ. ಈ ಮೀಟೂ ಸೂರಿನಡಿ ನಿರ್ಮಾಣವಾಗಿರುವ ಅಭಿಯಾನವನ್ನು ಬೇರೆ ಬೇರೆ ಆಯಾಮಗಳಿಗೆ ವಿಸ್ತರಿಸುವಂತಹ ವಾತಾವರಣ ನಿರ್ಮಾಣವಾಗಲಿ, ತನ್ಮೂಲಕ ಹುದುಗಿರುವ ಅದೆಷ್ಟೂ ಸಂಕಷ್ಟದ ದಿನಗಳ ಕರಾಳತೆ ಕಣ್ತೆರೆಯಲಿ. ನಾವು, ನೀವು ಅನುಭವಿಸಿದ ಪಿಡುಗು ಮಾದರಿಯ ಸಮಸ್ಯೆ ಮುಂದಿನ ತಲೆಮಾರಿಗೆ ದಾಟದೆ, ಇಲ್ಲೆ ಕೊನೆಗಾಣಿಸುವಂತಾಗಲಿ ಆ ನಿಟ್ಟಿನಲ್ಲಿ ಕೈಜೋಡಿಸುವಂತಾಗಲಿ.

ಕಾರ್ತಿಕ್‌ ಅಮೈ 

ಟಾಪ್ ನ್ಯೂಸ್

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ

Basa-Horatti

ಮೇಲ್ಮನೆಗೆ ನಾನೇ ಫೈನಲ್‌, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ

Parliment

ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.