ಮಿರಾಕಲ್‌ ಗಾರ್ಡನ್

Team Udayavani, Jul 24, 2021, 10:35 PM IST

sfdADSFds

2013ರಲ್ಲಿ  ಉದ್ಘಾಟನೆಯಾದ  ದುಬೈ ಮಿರಾಕಲ್‌ ಗಾರ್ಡನ್‌ ಪ್ರತಿ ವರ್ಷ ನವೆಂಬರ್‌ ತಿಂಗಳಿನಿಂದ ಮೇ ತಿಂಗಳಿನವರೆಗೆ ಸಾರ್ವಜನಿಕವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ. ಬೆಳಗ್ಗೆ 9ರಿಂದ ರಾತ್ರಿ 10 ಗಂಟೆಯವರೆಗೆ ತೆರೆದಿದ್ದು ಹಗಲಿನಲ್ಲಿ ಸೂರ್ಯನ ರಶ್ಮಿಯಲ್ಲಿ ಮಿಂದು, ರಾತ್ರಿ ಪ್ರಖರ ವಿದ್ಯುತ್‌ ದೀಪದ ಬೆಳಕಿನಲ್ಲಿ ಕಂಗೊಳಿಸುವ ಪುಷ್ಪ ಲೋಕ ನೋಡುಗರ ಕಣ್ಮನತಣಿಸುತ್ತದೆ.

ಅರಬ್‌ ಸಂಯುಕ್ತ ಸಂಸ್ಥಾನದ ಸುಂದರ ವರ್ಣರಂಜಿತ ನಗರಗಳಲ್ಲಿ ದುಬೈ ವಿಶ್ವ ವಿಖ್ಯಾತ ಜ್ಞಾನ ವಿಜ್ಞಾನದ ನಗರ. ಗಿನ್ನೆಸ್‌ ದಾಖಲೆಯಲ್ಲಿ ಹಲವಾರು ಅದ್ಭುತಗಳು ಸೇರ್ಪಡೆಯಾಗಿದೆ. ಈ ರೀತಿಯ ಮಾಡಿಕೊಂಡಿರುವ  ದಾಖಲೆಗಳ ಸಾಲಿನಲ್ಲಿ ದುಬೈಯ ಮಿರಾಕಲ್‌ ಗಾರ್ಡನ್‌ ಪುಷ್ಪ ಪ್ರಿಯರ ಸ್ವರ್ಗ. ವಿಶ್ವದ ಉದ್ಯಾನವನಗಳಲ್ಲಿ ಅತ್ಯಂತ ಹೆಚ್ಚು ವಿಸ್ತಾರವನ್ನು ಹೊಂದಿರುವುದು ಮಾತ್ರವಲ್ಲ ಅತ್ಯಂತ ಎತ್ತರದ ವಾಸ್ತು ಶಿಲ್ಪದ ಆಕೃತಿಯ ಪುಷ್ಪ ಉದ್ಯಾನದ ವಿನ್ಯಾಸಕ್ಕಾಗಿ ಗಿನ್ನೆಸ್‌ ದಾಖಲೆಗೆ ಸೇರ್ಪಡೆಯಾಗಿದೆ.

2013 ಫೆಬ್ರವರಿ 14ರಂದು ದುಬೈ ಮಿರಾಕಲ್‌ ಗಾರ್ಡನ್‌ ಉದ್ಘಾಟನೆಯಾಗಿ ಲೋಕಾರ್ಪಣೆಯಾಯಿತು. ಪ್ರತಿ ವರ್ಷ ನವೆಂಬರ್‌ ತಿಂಗಳಿನಿಂದ ಮೇ ತಿಂಗಳಿನ ವರೆಗೆ ಸಾರ್ವಜನಿಕವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ. ಬೆಳಗ್ಗೆ 9ರಿಂದ ರಾತ್ರಿ 10 ಗಂಟೆಯವರೆಗೆ ತೆರೆದಿದ್ದು ಹಗಲಿನಲ್ಲಿ ಸೂರ್ಯನ ರಶ್ಮಿಯಲ್ಲಿ ಮಿಂದು ರಾತ್ರಿ ಪ್ರಖರ ವಿದ್ಯುತ್‌ ದೀಪದ ಬೆಳಕಿನಲ್ಲಿ ಕಂಗೊಳಿಸುವ ಪುಷ್ಪ ಲೋಕ ನೋಡುಗರ ಮನತಣಿಸುತ್ತದೆ.

ಬಹುವಿಸ್ತಾರ

ಮಿರಾಕಲ್‌ ಗಾರ್ಡನ್‌ ದುಬೈ ದೊರೆಯ ಹೆಸರಿನಲ್ಲಿರುವ ಮಹ್ಮದ್‌ ಬಿನ್‌ ಜಾಹಿದ್‌ ರಾಷ್ಟ್ರೀಯ ಹೆ¨ªಾರಿಯ ಬದಿಯಲ್ಲಿ ದುಬೈ ಲ್ಯಾಂಡ್‌ನ‌ಲ್ಲಿ ನಿರ್ಮಾಣವಾಗಿದೆ. 72 ಸಾವಿರ ಚದರ ಮೀಟರ್‌ನಲ್ಲಿ ವ್ಯಾಪಿಸಿರುವ  ಉದ್ಯಾನವನದಲ್ಲಿ 150 ಮಿಲಿಯನ್‌ ಪುಷ್ಪಗಳು ಅರಳಿ ನಿಂತಿವೆ. 120 ವಿವಿಧ ರೀತಿಯ ತಳಿಯ ಹೂಗಳಿರುವ ಗಿಡಗಳು ಇಲ್ಲಿವೆ. ಪ್ರತಿದಿನ ಎರಡು ಲಕ್ಷ ಯು.ಎಸ್‌. ಗ್ಯಾಲನ್‌ ನೀರನ್ನು ಉದ್ಯಾನವನಕ್ಕೆ ಹಾಯಿಸಲಾಗುತ್ತದೆ. ಈ ನೀರು ದುಬೈಯ ಒಳಚರಂಡಿಯಲ್ಲಿ ಹರಿಯುವ ನೀರನ್ನು ಸಂಸ್ಕರಿಸಿ ಉಪಯೋಗಿಸಲಾಗುತ್ತಿದೆ.

ಮೂರು ಬಾರಿ  ಗಿನ್ನೆಸ್‌ ದಾಖಲೆ

ಮೂರು ಬಾರಿ ಗಿನ್ನೆಸ್‌ ದಾಖಲೆಗೆ ಸೇರ್ಪಡೆಯಾಗಿರುವ ದುಬೈ ಮಿರಾಕಲ್‌ ಗಾರ್ಡನ್‌ ವಿಶ್ವದಲ್ಲಿ ಸಮತಟ್ಟಿನಲ್ಲಿ ಅತ್ಯಂತ ವಿಸ್ತಾರವಾಗಿಯೂ ಮತ್ತು ಅತ್ಯಂತ ಎತ್ತರದ ವಿವಿಧ ವಾಸ್ತುಶಿಲ್ಪದ ಅಕೃತಿಯ ಮೇಲ್ಪದರದಲ್ಲಿ ಹೂವಿನ ಗಿಡಗಳನ್ನು ಬೆಳೆಸಿರುವ ಕೌಶಲಕ್ಕೆ ಪ್ರಥಮ ಬಾರಿಗೆ 2013 ರಲ್ಲಿ ಗಿನ್ನೆಸ್‌ ದಾಖಲೆಗೆ ಸೇರ್ಪಡೆಯಾಯಿತು. ದುಬೈಯ ಎಮಿರೇಟ್ಸ್‌ ಏರ್‌ಲೈನ್ಸ್‌ನ ಎ380 ಏರ್‌ ಬಸ್‌ ನೈಜ್ಯತೆಯ ಮಾದರಿಯನ್ನು ನಿರ್ಮಾಣ ಮಾಡಿದ ಕೃತಿಯ ಮೇಲ್ಪದರದಲ್ಲಿ ಪುಷ್ಪಗಳನ್ನು ಬೆಳೆಸಿರುವ ಚಾಕಚಕ್ಯತೆಗೆ 2016ರಲ್ಲಿ ಎರಡನೇ ಬಾರಿಗೆ ಗಿನ್ನೆಸ್‌ ದಾಖಲೆಗೆ ಸೇರ್ಪಡೆಯಾಯಿತು.

ವಾಲ್ಟ್ ಡಿಸ್ನೆ ಕಂಪೆನಿಯ ಪರವಾನಿಗೆ ಮತ್ತು  ಕರಾರು ಒಪ್ಪಂದದೊಂದಿಗೆ 18 ಮೀಟರ್‌ ಎತ್ತರದ ಮಿಕ್ಕಿ ಮೌಸ್‌ ಆಕೃತಿಯನ್ನು ರಚಿಸಿ ಅದರ ಮೇಲ್ಪದರ ಮೇಲೆ ಒಂದು ಲಕ್ಷ ಹೂವು ಅರಳಿಸಿರುವ ಚಮತ್ಕಾರಕ್ಕೆ ಮೂರನೇ ಬಾರಿ 2018 ರಲ್ಲಿ ಗಿನ್ನೆಸ್‌ ದಾಖಲೆಗೆ ಸೇರ್ಪಡೆಯಾಯಿತು.

ಮಿರಾಕಲ್‌ ಗಾರ್ಡನಲ್ಲಿ ಪ್ರತಿ ವರ್ಷ ಒಂದೊಂದು ನೂತನ ವಾಸ್ತುಶಿಲ್ಪದ ವೈವಿಧ್ಯಮಯ ವಿನ್ಯಾಸಗಳನ್ನು ಸೇರ್ಪಡೆ ಮಾಡುತ್ತಾರೆ. ಪುಷ್ಪ ಉದ್ಯಾನವು ಅತ್ಯಂತ ಆಕರ್ಷಣೀಯವಾಗಿ ಅಂದ ಹೆಚ್ಚಿಸಿ ಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

2013 ರಲ್ಲಿ ದುಬೈ ಮಿರಾಕಲ್‌ ಗಾರ್ಡನ್‌ ನಿರ್ಮಾಣ ಮಾಡಲು ತಗಲಿರುವ ವೆಚ್ಚ 40 ಮಿಲಿಯನ್‌ ದಿರಾಂಸ್‌ 11 ಮಿಲಿಯನ್‌ ಯು.ಎಸ್‌. ಡಾಲರ್‌. ಅರಬ್‌ ಸಂಯುಕ್ತ ಸಂಸ್ಥಾನದ ಅರಬ್ಬರ ವೃಕ್ಷ ಪ್ರೇಮ, ಹಸುರು ಕ್ರಾಂತಿಗೆ ಇದು ಸಾಕ್ಷಿಯಾಗಿದೆ.

ಬಿ.ಕೆ. ಗಣೇಶ್ರೈ, ಶಾರ್ಜಾ

ಟಾಪ್ ನ್ಯೂಸ್

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.