ನಿನ್ನ ಮಗನಷ್ಟೇ ಅಲ್ಲ, ನೀನೂ ವ್ಯಸನಿ ಎಂದಾಗ ತಬ್ಬಿಬ್ಟಾದಳು!


Team Udayavani, Nov 4, 2018, 3:30 AM IST

3.jpg

ನನ್ನ ದೃಷ್ಟಿ ಅವನ ಪಕ್ಕ ಬಿದ್ದಿದ್ದ ಮೊಬೈಲ್‌ನತ್ತ ಹೋಯಿತು. ಅದರಲ್ಲಿ ಇನ್ನೂ ಪೋರ್ನ್ ವಿಡಿಯೋವೊಂದು ಪ್ಲೇ ಆಗುತ್ತಿತ್ತು. ನನಗೆ ಮೈ ಮೇಲೆ ಚೇಳು ಹರಿದಂತಾಯಿತು. ಎಲ್ಲಿತ್ತೋ ಆ ಪರಿ ಸಿಟ್ಟು, ಅವನ ಮೊಬೈಲ್‌ ತೆಗೆದು ಗೋಡೆಗೆಸೆದು ಪುಡಿ ಮಾಡಿದೆ, ಅವನನ್ನು ಎಬ್ಬಿಸಿ ಕೂರಿಸಿ ಕಪಾಳಕ್ಕೆ ನಾಲ್ಕು ಬಾರಿಸಿದೆ.

ಆಕೆ ನನ್ನ ಕೊಠಡಿಗೆ ಬಂದು “ಹಾಯ್‌’ ಅಂದಾಗ ನನಗೆ ಅಚ್ಚರಿ. ಅನೇಕ ವರ್ಷಗಳಾಗಿ ಹೋಗಿದ್ದವು ಎಮಿಲಿಯನ್ನು ನೋಡಿ. ಕಾಲೇಜು ದಿನಗಳಲ್ಲಿ ಗಳಸ್ಯಂ ಕಂಠಸ್ಯರಂತಿದ್ದ ನಾವು ವೃತ್ತಿ ಜೀವನಕ್ಕೆ ಕಾಲಿಟ್ಟದ್ದೇ ಪರಸ್ಪರ ದಿಕ್ಕು ಬದಲಿಸಿಬಿಟ್ಟಿದ್ದೆವು. ಸುಮಾರು 15 ವರ್ಷಗಳಾದವೆನಿಸುತ್ತದೆ. ಎಮಿಲಿಗೆ ಮಗ ಹುಟ್ಟಿದ್ದಾನೆಂಬ ಸುದ್ದಿ ತಿಳಿದು ಹೇಗೋ ಕಷ್ಟಪಟ್ಟು ಆಕೆಯ ನಂಬರ್‌ ಹುಡುಕಿ ಫೋನ್‌ ಮಾಡಿ ಹಾರೈಸಿದ್ದೆ. ಆಮೇಲೆ ನಮ್ಮ ಮಾತುಕತೆಯೇ ಕಟ್‌ ಆಗಿಹೋಯಿತು. ಕಾಲ ಸರಿದಂತೆ ಆಕೆಯನ್ನು ನಾನು ಮರೆತೇಹೋಗಿದ್ದೆ. ಖುಷಿಯಿಂದ ಎದ್ದು ಹೋಗಿ ಅವಳನ್ನು ಆಲಂಗಿಸಿದೆ. ಆದರೆ ಅವಳ ಅಪ್ಪುಗೆಯಲ್ಲಿ ಬಿಗಿಯಿರಲಿಲ್ಲ, ಸೋತಂತೆ ಸಡಿಲವಾಗಿದ್ದವು ಅವಳ ಕೈಗಳು. 
“ಹೇಗಿದ್ದೀಯಾ? ಏನು ಇಷ್ಟು ವರ್ಷ ಆದ್ಮೇಲೆ?’ ಎಂದೆ. ಏನೋ ನೆಪಕ್ಕೆಂಬಂತೆ ಉತ್ತರಿಸಿದಳು. 2ನೇ ನಿಮಿಷದಲ್ಲಿ ನನಗೆ ವಿಷಯ ಗಂಭೀರವಾಗಿದೆ ಎಂದು ಅರಿವಾಯಿತು. ಅವಳನ್ನು ಸೋಫಾದ ಮೇಲೆ ಕೂಡಿಸಿ ಸುಮ್ಮನೇ ಮಖ ನೋಡುತ್ತಾ ಕುಳಿತೆ. “ಸಾಕಾಗಿ ಹೋಗಿದೆ ನನಗೆ’ ಅಂದಳು ಎಮಿಲಿ. ಏನಾಯೆ¤ಂದು ನಾನು ಪ್ರಶ್ನಿಸಲಿಲ್ಲ, ತಾನೇ ಮುಂದುವರಿಸಿದಳು… “ನನ್ನ ಮಗ ಗೊತ್ತಲ್ಲ, ಈಗ 15 ವರ್ಷ. ಅವನದ್ದೇ ನನಗೆ ಸಮಸ್ಯೆಯಾಗಿಬಿಟ್ಟಿದೆ..’

“ಏನಾಯಿತು?’
“ವರ್ಷದ ಮೇಲಾಯಿತು. ತುಂಬಾ ವಿಚಿತ್ರವಾಗಿ ವರ್ತಿಸಲಾರಂಭಿಸಿದ್ದಾನೆ. ಶಾಲೆಗೆ ಸರಿಯಾಗಿ ಹೋಗೋದಿಲ್ಲ, ಹತ್ತಾದರೂ ನಿದ್ದೆ ಮಾಡುತ್ತಿರುತ್ತಾನೆ. ಎಷ್ಟಿದ್ದರೂ ಹದಿಹರೆಯ ಅಲ್ಲವೇ, ಇಂಥ ಗುಣಗಳೆಲ್ಲ ಸಹಜ ಎಂದು ನಾನೂ ಸುಮ್ಮನಾಗುತ್ತಿದ್ದೆ. ಮೊದ ಮೊದಲೆಲ್ಲ ಮಾತೆತ್ತಿದರೆ ರೇಗುತ್ತಿದ್ದವ, ಆಮೇಲೆ ರೇಗುವುದಿರಲಿ, ನನ್ನೊಂದಿಗೆ ಮಾತಾಡುವುದನ್ನೇ ನಿಲ್ಲಿಸಿಬಿಟ್ಟ. ಯಾವಾಗಲೂ ತನ್ನ ಕೊಠಡಿಯಲ್ಲಿ ಬಾಗಿಲು ಹಾಕಿಕೊಂಡು ಕೂರ್ತಾನೆ. ಒಂದು ದಿನ ಅವನ ರೂಮು ಸ್ವತ್ಛಗೊಳಿಸುತ್ತಿದ್ದೆ. ಅವನೆಲ್ಲೋ ಹೊರಗೆ ಹೋಗಿದ್ದ. ನನಗೆ ಅನುಮಾನ ತಡೆಯಲಾಗಲಿಲ್ಲ ಅವನ ಕಂಪ್ಯೂಟರ್‌ ಆನ್‌ ಮಾಡಿದೆ. ಬ್ರೌಸರ್‌ ಹಿಸ್ಟರಿ ತೆರೆದು ನೋಡಿದರೆ…’ ನಿಟ್ಟುಸಿರುಬಿಟ್ಟು ಸುಮ್ಮನಾದಳು ಎಮಿಲಿ. “ಪೋರ್ನ್ ವೆಬ್‌ಸೈಟ್ಸ್‌?’ ಎಂದು ಅವಳ ಮಾತು ಪೂರ್ಣಗೊಳಿಸಲು ಪ್ರಯತ್ನಿಸಿದ. 
“ಯಸ್‌. ಆದರೆ ನನಗೇನೂ ಆಘಾತವಾಗಲಿಲ್ಲ. ಎಷ್ಟಿದ್ದರೂ ಬೆಳೆಯುತ್ತಿರುವ ಹುಡುಗ. ವಯೋಸಹಜೆ ಕಾಮನೆಗಳು…ಹಾರ್ಮೋನುಗಳ ಹೆಚ್ಚಳದಿಂದ ಲೈಂಗಿಕಾಸಕ್ತಿ ಹೆಚ್ಚಿರುತ್ತೆ ಎನ್ನುವುದು ನನಗೂ ತಿಳಿದಿದೆ.’
“ಯಾವುದು ಸಹಜ ಅನ್ನೋದು ನಿನಗೆ ಗೊತ್ತೇ ಇದೆ…ಹಾಗಿದ್ದರೆ ಸಮಸ್ಯೆ ಏನು?’ ಎಂದೆ. 

“ಯಾವುದು ಸಹಜ ಎನ್ನುವುದು ಗೊತ್ತಿರುವಂತೆಯೇ, ಯಾವುದು ಅಸಹಜ ಎನ್ನುವುದೂ ನನಗೆ ಗೊತ್ತಿದೆ. ಆ ದಿನದಿಂದಲೇ ನಾನು ಅವನ ವರ್ತನೆಯನ್ನು ಗಮನಿಸುತ್ತಾ ಬಂದೆ. ಯಾವುದೋ ನೆಪ ಹೇಳಿ ಶಾಲೆ ಬಿಡುತ್ತಿದ್ದು, ರೂಮು ಸೇರಿಕೊಂಡುಬಿಡುತ್ತಿದ್ದ. ಗೆಳೆಯರು-ಗೆಳತಿಯರ ಜೊತೆ ಹೊರ ಹೋಗುವುದನ್ನೇ ನಿಲ್ಲಿಸಿಬಿಟ್ಟ….ಬರೀ ರೂಮು ರೂಮು ರೂಮು. ಈಗ ಒಂದು ವಾರದ ಹಿಂದೆ, ನಾನು ಅಡುಗೆ ಮನೆಯಲ್ಲಿ ಬೆಳಗ್ಗೆ ಹತ್ತರ ಸುಮಾರು ಬ್ರೇಕ್‌ಫಾಸ್ಟ್‌ ತಯಾರು ಮಾಡುತ್ತಿದ್ದೆ. ಅವನಿನ್ನೂ ಮಲಗಿದ್ದಾನೆ ಎಂದುಕೊಂಡು ಎಬ್ಬಿಸಲು ಹೋಗಿರಲಿಲ್ಲ. ಆಗಲೇ ಅಚಾನಕ್ಕಾಗಿ ರೂಮಿನಿಂದ ಕಿಟಾರನೆ ಚೀರಿದ ಸದ್ದು. ನೆಲವೇ ಕುಸಿದಂತಾಯಿತು. ಗಾಬರಿಯಲ್ಲಿ ಅವನ ರೂಮಿನತ್ತ ಓಡಿ, ಅವನ ಹೆಸರು ಕೂಗುತ್ತಾ ಜೋರಾಗಿ ಬಾಗಿಲು ತೆರೆದೆ. ಅವನು ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದ. “ಮಾಮ್‌ ಸೇವ್‌ ಮಿ. ಈ ಪೋರ್ನ್ ನನ್ನ ಕೊಂದು ಬಿಡುತ್ತೆ. ನಾನು ಮಲಗೇ ಇಲ್ಲ. ನಿನ್ನೆ ರಾತ್ರಿ 10 ಗಂಟೆಯಿಂದ ನೋಡ್ತಾ ಇದೀನಿ’ ಎಂದು ಹೇಳಿ ಉಸಿರುಗಟ್ಟುವಂತೆ ಅಳುತ್ತಾ, ತನ್ನ ಹಣೆ ಚಚ್ಚಿಕೊಳ್ಳಲಾರಂಭಿಸಿದ. ಆಗಲೇ ನನ್ನ ದೃಷ್ಟಿ ಅವನ ಪಕ್ಕ ಬಿದ್ದಿದ್ದ ಮೊಬೈಲ್‌ನತ್ತ ಹೋಯಿತು. ಅದರಲ್ಲಿ ಇನ್ನೂ ಪೋರ್ನ್ ವಿಡಿಯೋವೊಂದು ಪ್ಲೇ ಆಗುತ್ತಿತ್ತು. ನನಗೆ ಮೈ ಮೇಲೆ ಚೇಳು ಹರಿದಂತಾಯಿತು. ಎಲ್ಲಿತ್ತೋ ಆ ಪರಿ ಸಿಟ್ಟು, ಅವನ ಮೊಬೈಲ್‌ ತೆಗೆದು ಗೋಡೆಗೆಸೆದು ಪುಡಿ ಮಾಡಿದೆ, ಅವನನ್ನು ಎಬ್ಬಿಸಿ ಕೂರಿಸಿ ಕಪಾಳಕ್ಕೆ ನಾಲ್ಕು ಬಾರಿಸಿದೆ. ಮಹಾನ್‌ ಕೊಳಕ ನೀನು, ಛೀ..’ ಅಂತ ಉಗುಳಿ ನೇರವಾಗಿ ನನ್ನ ಕೊಠಡಿಗೆ ಬಂದು ಬ್ಯಾಗ್‌ ಹಿಡಿದುಕೊಂಡು ಕಚೇರಿಗೆ ಹೋಗಿಬಿಟ್ಟೆ. ನನ್ನ ಮಗನ ಮೇಲಷ್ಟೇ ಅಲ್ಲ, ಆಗ, ನನ್ನ ಮೇಲೆಯೂ ಬಹಳ ಜುಗುಪ್ಸೆಯಾಗಿಬಿಟ್ಟಿತ್ತು. ಆದರೆ ಮನದಲ್ಲಿ “ಮಾಮ್‌, ಸೇವ್‌ ಮಿ’ ಎನ್ನುವ ಅವನ ಆದ್ರì ಮಾತೇ ಪ್ರತಿಧ್ವನಿಸಲಾರಂಭಿಸಿತ್ತು.  ಕಚೇರಿಯ ಬಾತ್‌ರೂಮಿಗೆ ಹೋಗಿ ಹಲ್ಲುಕಚ್ಚಿ ಚೆನ್ನಾಗಿ ಅತ್ತುಬಿಟ್ಟೆ. ಅಷ್ಟರಲ್ಲೇ ನನ್ನ ಫೋನ್‌ಗೆ ಮೆಸೇಜ್‌ ಬಂತು. ಅವನದ್ದೇ. “ಅಮ್ಮ, ಐ ಆ್ಯಮ್‌ ಸಾರಿ. ಪ್ಲೀಸ್‌, ನಾನು ಕೆಟ್ಟವನಲ್ಲ ಅಮ್ಮ. ನಿಜ ಹೇಳ್ತೀನಿ, ನಾನು ಪೋರ್ನೋಗ್ರಫಿಗೆ ಅಡಿಕ್ಟ್ ಆಗಿಬಿಟ್ಟಿದ್ದೇನೆ. ಯಾವಾಗಲೂ ಅದನ್ನೇ ನೋಡುತ್ತಿರುತ್ತೇನೆ. ಹಾಗಂತ ಅದರಿಂದ ನನಗೆ ಖುಷಿಯೇನೂ ಸಿಗುತ್ತಿಲ್ಲ. ಬಹಳ ದುಃಖದಲ್ಲಿದ್ದೇನೆ. ನನ್ನ ಮೇಲೆ ನನಗೇ ಹೇವರಿಕೆಯಾಗುತ್ತದೆ. ನಾನೇಕೆ ಹೀಗಾದೆನೋ ತಿಳಿಯದು. ಹೆಲ್ಪ್ ಮಿ’ ಎಂದು ಸಂದೇಶ ಕಳುಹಿಸಿದ್ದ. ನನಗೇನು ಮಾಡಬೇಕೋ ತಿಳಿಯುತ್ತಿಲ್ಲ, ನರನಾಡಿಗಳಲ್ಲಿ ನರಕವೇ ತುಂಬಿಹೋಗಿದೆ’ ಎಂದು ಹಣೆ ಹಿಡಿದುಕೊಂಡು ಕುಳಿತಳು ಎಮಿಲಿ. “ಅವನೆಲ್ಲಿ?’ ಎಂದೆ. “ಹೊರಗೇ ಕುಳಿತಿದ್ದಾನೆ. ನಿನ್ನ ಬಳಿ ಮಾತಾಡೋಕ್ಕೆ ಅವನಿಗೆ ನಾಚಿಕೆಯಂತೆ. ಬೇರೇ ಥೆರಪಿಸ್ಟ್‌ ಹತ್ತಿರ ಹೋಗೋಣವೆಂದುಕೊಂಡೆ, ಆದರೆ ನಿನ್ನ ಬಳಿಯೇ ಸರಿ ಎನಿಸಿತು’ ಎಂದಳು.

ನಾನು ಎದ್ದು ಹೊರಗೆ ಹೋದೆ. ಪ್ರಿನ್ಸಿಪಲ್‌ ಚೇಂಬರ್‌ ಒಳಗೆ ಹೋಗಲು ಹೆದರುವ ಹುಡುಗರನ್ನು ನೆನಪಿಸಿತು ಅವನ ಮುಖ. “ಹೆಲ್ಲೋ ಸರ್‌..ಹೌ ಆರ್‌ ಯೂ’ ಎಂದು ಆಪ್ತವಾಗಿ ಮಾತನಾಡಿಸಿ ಅವನ ಕಿವಿ ಹಿಂಡಿದೆ. ಅವನಿಗೆ ಹಿಂಜರಿಕೆ ದೂರವಾಯಿತು, ಹೆದರಿಕೆ ಬಿಟ್ಟು ಚೇಂಬರ್‌ಗೆ ಬಂದ. ಆ ದಿನ ಅವನೊಂದಿಗೆ ನಾನು ಮುಖ್ಯ ವಿಷಯವನ್ನು ಬಿಟ್ಟು ಬೇರೆಲ್ಲಾ ಸಂಗತಿಗಳನ್ನೂ ಮಾತನಾಡಿದೆ. ಅವನಿಗೂ ಮಾತನಾಡಲು ಮೈಚಳಿ ಬಿಟ್ಟಿತು. ಮಾತು ಮುಗಿಸಿ ಅಮ್ಮ-ಮಗನನ್ನು ಹತ್ತಿರದ ಕೆಫೆಗೆ ಕರೆದುಕೊಂಡುಹೋಗಿ, ಮರುದಿನ  ಬರಲು ಹೇಳಿ ಬೀಳ್ಕೊಟ್ಟೆ. ಮರುದಿನ ಎಮಿಲಿಗೆ ಏನೋ “ಬಹಳ’ ಕೆಲಸವಿತ್ತಂತೆ. ಮಗನನ್ನು ಡ್ರಾಪ್‌ ಮಾಡಿ ಹೊರಡಲು ಅನುವಾದಳು. “ನೀನು ಇದ್ದರೆ ಚೆನ್ನಾಗಿತ್ತು’ ಅಂದೆ. “ಪ್ಲೀಸ್‌ ಹೊರಡಲೇಬೇಕು’ ಎಂದು ಹೊರಟುಬಿಟ್ಟಳು. 

ಅದಾಗಿ ಒಂದು ವಾರ ನಿತ್ಯ ಅವರು ನನ್ನ ಬಳಿ ಬಂದರು. ಆದರೆ ಎಮಿಲಿ ಮಾತ್ರ ಇಡೀ ವಾರ “ಬಹಳ’ ಕೆಲಸ ಎಂದು ಹೇಳಿ ಮಗನನ್ನು ನನ್ನ ಕಚೇರಿಗೆ ಬಿಟ್ಟು ಹೊರಟಳೇ ಹೊರತು ಒಳಗೆ ಬರಲಿಲ್ಲ. 
ಒಂದು ವಾರದ ನಂತರ ನನಗೆ ಅವನ ಈ “ಪೋರ್ನೋಗ್ರಫಿ ಅಡಿಕ್ಷನ್‌’ಗೆ ಕಾರಣವೇನೆಂದು ಸ್ಪಷ್ಟವಾಯಿತು. ಎಮಿಲಿಗೆ ಫೋನ್‌ ಮಾಡಿ “ಸಂಜೆ ಭೇಟಿಯಾಗಲೇಬೇಕು ನಿನ್ನ ಮಗನ ಬಗ್ಗೆ ಅರ್ಜೆಂಟ್‌ ಮಾತಾಡುವುದಿದೆ’ ಎಂದು ಹೇಳಿದೆ. ಅವಳು ಕೂಡಲೇ “ಸಂಜೆ, ಬಹಳ ಕೆಲಸ ಇದೆ’ ಎಂದು ಹೇಳಿದಳು. ಅವಳ ಮಾತು ಕೇಳಿಸಿಕೊಳ್ಳದವಳಂತೆ. “ಈಗ ಬರಲಿಲ್ಲ ಅಂದರೆ ಮತ್ತೆ ಬರಲೇಬೇಡ’ ಎಂದು ಹೇಳಿ ಫೋನಿಟ್ಟೆ. 
ನಾನು ಹೇಳಿದ ಸಮಯಕ್ಕೆ ಸರಿಯಾಗಿ ಬಂದಳು ಎಮಿಲಿ. ಹತ್ತಿರದ ಅದೇ ಕೆಫೆಗೆ ಅವಳನ್ನು ಕರೆದೊಯ್ದೆ. 
“ಏನಾಗಿದೆ ಅವನಿಗೆ ಸಮಸ್ಯೆ?’ ಅಂತ ಕಾತರದಿಂದ ಪ್ರಶ್ನಿಸಿದಳು. 
“ನಿನಗೇನು ಸಮಸ್ಯೆ ಇದೆಯೋ ಅದೇ ಸಮಸ್ಯೆ ಅವನಿಗೂ ಇದೆ. ಅವನಿಗಷ್ಟೇ ಅಲ್ಲ, ನಿನಗೂ ಟ್ರೀಟ್‌ಮಂಟ್‌ ಬೇಕು’ ಅಂದೆ. 
“ನನಗಾ? ನನಗೇನು ಸಮಸ್ಯೆ ಇದೆ?’ ಎಂದು ಸಿಡಿಮಿಡಿಗೊಂಡಳು ಎಮಿಲಿ. 
“ಇಬ್ಬರೂ ಅಡಿಕ್ಟ್ಗಳೇ…ನಿನ್ನ ಮಗ ಪೋನೊìàಗ್ರಫಿಗೆ ಅಡಿಕ್ಟ್ ಆಗಿದ್ದಾನೆ, ನೀನು ಕೆಲಸಕ್ಕೆ ಅಡಿಕ್ಟ್ ಆಗಿದ್ದೀಯ. ಅವನಿಗೆ ನಾನು ಥೆರಪಿ ನೀಡುತ್ತೇನೆ. ಆದರೆ ನೀನೂ ಥೆರಪಿಗೆ ಬರಬೇಕು’ ಅಂದೆ. ಅವಳಿಗೆ ಅರ್ಥವಾಗಲಿಲ್ಲ…ಸಮಾಧಾನದಿಂದ ಅವಳಿಗೆ ಎಲ್ಲವನ್ನೂ ಬಿಡಿಸಿ ಹೇಳಬೇಕಾಯ್ತು…ನಮ್ಮ ಮಾತು ಮುಗಿಯುವುದರಲ್ಲಿ ರಾತ್ರಿಯಾಗಿತ್ತು, ಅವಳು “ಥ್ಯಾಂಕ್ಯೂ, ನಾಳೆಯಿಂದ ಬತೇìನೆ ‘ಎಂದು ಹೇಳಿ ಮಗನಿಗೆ ಫೋನ್‌ ಮಾಡಿ ಆಪ್ತವಾಗಿ ಮಾತನಾಡುತ್ತಾ ತ‌ನ್ನ ಕಾರಿನ ಬಳಿ ನಡೆದಳು. 

ವ್ಯಸನ ಎಂದರೆ ಮಾದಕ ದ್ರವ್ಯಗಳಿಗಷ್ಟೇ ವ್ಯಸನಿಗಳಿರುವುದಿಲ್ಲ. ವ್ಯಸನವೆಂದರೇನು? ವಾಸ್ತವದಿಂದ ನಮ್ಮನ್ನು ದೂರವಿಡುವಂಥ ಒಂದು ವಸ್ತು ಎಂದೇ ಅಲ್ಲವೇ? ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ವಾಸ್ತವದಿಂದ ತಪ್ಪಿಸಿಕೊಳ್ಳಲು ವ್ಯಸನಿಗಳಾಗಿಬಿಟ್ಟಿರುತ್ತೇವೆ. ಎಮಿಲಿಯ ವಿಚಾರಕ್ಕೆ ಬರುವುದಾದರೆ, ಅವಳ ಮಗನ ಜೊತೆ ಮಾತನಾಡಿದಾಗ ನನಗೆ ತಿಳಿದದ್ದೇನೆಂದರೆ, 2 ವರ್ಷದ ಹಿಂದೆ ಎಮಿಲಿಗೆ ತನ್ನ ಗಂಡ ಇನ್ನೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದಾನೆ ಎನ್ನುವುದು ತಿಳಿದುಬಿಟ್ಟಿದೆ. ಅದನ್ನು ಅವನೇ ಒಪ್ಪಿಕೊಂಡು, “ಇನ್ನು ನಿನ್ನೊಂದಿಗೆ ಇರಲಾಗೋಲ್ಲ, ಐ ವಾಂಟ್‌ ಡಿವೋರ್ಸ್‌’ ಎಂದಿದ್ದಾನೆ. ಇವಳು ಎಷ್ಟು ಅಂಗಲಾಚಿದರೂ ಅವನು ಕೇಳಲೇ ಇಲ್ಲ. ಅಲ್ಲಿಯವರೆಗೂ ತನ್ನದು ಪಫೆìಕ್ಟ್ ಸಂಸಾರವೆಂದು ಭಾವಿಸಿದ್ದ ಎಮಿಲಿಗೆ ಗಂಡನ ಈ ಕೃತ್ಯದಿಂದ ಎದೆಯೊಡೆದುಬಿಟ್ಟಿದೆ. ಮಗನಿಗೂ ಇದೆಲ್ಲ ನೋಡಿ ಆಘಾತವಾಗಿಬಿಟ್ಟಿದೆ. ಹಠಾತ್ತಾಗಿ ಒಂದು ದಿನ ಎಮಿಲಿಯ ಪತಿ ಡಿವೋರ್ಸ್‌ ಪತ್ರಗಳಿಗೆ ಸಹಿ ಹಾಕಿಸಿಕೊಂಡು, ಮಗನ ಮುಖವನ್ನೂ ನೋಡದೇ ಹೊರಟುಬಿಟ್ಟಿದ್ದಾನೆ. 

ಇವೆರಡೂ ಮುಗ್ಧ ಹೃದಯಗಳಿಗೆ ಎಂಥ ಆಘಾತವೋ ನೋಡಿ! ಇವರಿಗೆ ಹುಚ್ಚೇ ಹಿಡಿದಂತಾಗಿಬಿಟ್ಟಿದೆ. ಪ್ರೀತಿಯ ಗಂಡನನ್ನು ಕಳೆದುಕೊಂಡ ನೋವು ಯಾವ ಮಟ್ಟಿಗೆ ಅವಳನ್ನು ಕಾಡಿತೆಂದರೆ ಅದನ್ನು ಸಹಿಸಿಕೊಳ್ಳುವುದೇ ಅಸಾಧ್ಯವಾಗಿಬಿಟ್ಟಿತು. ಅದಕ್ಕೇ ತಕ್ಷಣ ಅವಳು ಕೆಲಸವೊಂದಕ್ಕೆ ಸೇರಿ ನೋವನ್ನು ಮರೆಯಲು “ಬಹಳ ಬ್ಯುಸಿ’ ಆಗಿಬಿಟ್ಟಿದ್ದಾಳೆ. ಮಗ ತನ್ನ ನೋವನ್ನು ಮರೆಯಲು ಹುಡುಕಿಕೊಂಡ ದಾರಿ ಪೋರ್ನೋಗ್ರಫಿ! ಪೋರ್ನೋಗ್ರಫಿಗೆ, ಒಬ್ಬ ವ್ಯಕ್ತಿಗೆ ವಾಸ್ತವವನ್ನು ಪೂರ್ಣವಾಗಿ ಮರೆಸಿ ಬೇರೆ ಜಗತ್ತಿಗೆ  ಕರೆದೊಯ್ಯುವ ಶಕ್ತಿಯಿರುತ್ತದೆ. ಅದನ್ನು ನೋಡುವವರೆಗೂ ಈ ಹುಡುಗನಿಗೆ ವಾಸ್ತವ ಜೀವನದ ಕಠೊರ ಸತ್ಯಗಳು ದೂರವಾಗಿಬಿಡುತ್ತಿದ್ದವು. ಅದರಿಂದ ಹೊರಬಂದ ನಂತರ ಆ ಸತ್ಯಗಳು ಮತ್ತೆ ಯಾತನೆ ನೀಡಲಾರಂಭಿಸಿದವು. ಅವನು ಅವುಗಳಿಂದ ತಪ್ಪಿಸಿಕೊಳ್ಳಲು ಮತ್ತೆ ಮೊರೆ ಹೋಗಿದ್ದು ಮತ್ತೆ ಅದೇ ಪೋರ್ನೋಗ್ರಫಿಯತ್ತ! ಈ ವಿಷ ಸರ್ಪಳಿ ಮುಂದುವರಿಯುತ್ತಾ, ಅವನಿಗೆ ತನ್ನ ಮೇಲೆ ಕೀಳರಿಮೆ, ಪ್ರಾಪಪ್ರಜ್ಞೆ ಬೆಳೆಯುತ್ತಾ ಹೋಯಿತು. ಗಂಡನ ವಂಚನೆಯ ನೋವಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಎಮಿಲಿ ಕೆಲಸಕ್ಕೆ ವ್ಯಸನಿಯಾಗಿಬಿಟ್ಟಳು. ಬೆಳಗ್ಗೆ ಮನೆ ಬಿಟ್ಟರೆ ರಾತ್ರಿಯಾದರೂ ಮನೆಗೆ ಬರುತ್ತಿರಲಿಲ್ಲ. ಆಕೆಯ ಸ್ಥಿತಿ ಹೇಗಾಗಿತ್ತೆಂದರೆ ಚಿಕ್ಕದೊಂದು ಸಮಸ್ಯೆ ಬಂದರೂ ತಲೆ ಚಿಟ್ಟುಹಿಡಿಯುವಂತಾಗಿಬಿಟ್ಟಿತ್ತು. ಆ ಕ್ಷಣಕ್ಕೆ ಆ ಸಮಸ್ಯೆಯಿಂದ ದೂರ ಓಡಿಬಿಡುತ್ತಿದ್ದಳು. ಆವತ್ತು ತನ್ನ ಮಗ ಕೆಳಕ್ಕೆ ಬಿದ್ದು “ಅಮ್ಮ ಹೆಲ್ಪ್ ಮೀ’ ಎಂದು ಅಂಗಲಾಚಿದಾಗ, ತನ್ನ ಮಗನಿಗೆ ಸಹಾಯ ಮಾಡಬೇಕೆಂದೂ ಅವಳಿಗೆ ತೋಚಲಿಲ್ಲ. ಆ ಹೊಸ ಸಮಸ್ಯೆಯಿಂದ ಪಾರಾಗಲು ಮತ್ತೆ ತನ್ನ ವ್ಯಸನ ವಲಯಕ್ಕೆ(ಅಂದರೆ ಕಚೇರಿಗೆ) ಬ್ಯಾಗ್‌ ಓಡಿಹೋಗಿದ್ದಳು.
ಈಗ ಸಂತಸದ ಸುದ್ದಿ ಹೇಳುತ್ತೇನೆ ಕೇಳಿ. ಅವರಿಬ್ಬರ ಥೆರಪಿ 6 ತಿಂಗಳು ನಡೆಯಿತು. ಕೆಲವು ದಿನಗಳ ಹಿಂದಷ್ಟೇ ಎಮಿಲಿ ನನ್ನನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದಳು. ಅವಳ ಮನೆಗೆ ಕಾಲಿಡುತ್ತಿದ್ದಂತೆಯೇ “ಎಲ್ಲಿದ್ದಾನೆ ಮಗರಾಯ?’ ಎಂದು ರೂಮಿನತ್ತ ನೋಡುತ್ತಾ ಕೇಳಿದೆ. 

“ಅವನೆಲ್ಲಿರುತ್ತಾನೆ, ಫ್ರೆಂಡ್ಸ್‌ ಜೊತೆ ಬಾಸ್ಕೆಟ್‌ಬಾಲ್‌ ಆಡಲು ಹೋಗಿದ್ದಾನೆ’ ಎಂದು ಚಹಾ ಗುಟುಕರಿಸಿದಳು ಎಮಿಲಿ. 

ಎಸ್ತೆರ್‌ ಅಲೆನ್‌ ಮನಃಶಾಸ್ತ್ರಜ್ಞೆ

ಟಾಪ್ ನ್ಯೂಸ್

Chalavadi2

Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

Chalavadi

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Parliment

ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chalavadi2

Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ

Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ

Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

Chalavadi

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.