Modern Mangaluru ನಿರ್ಮಾತೃ ಯು.ಎಸ್.ಮಲ್ಯ
ಸಾರ್ಥಕ ಬಾಳು ಸವೆಸಿ ಜನಸೇವೆಗೂ ಧನ್ಯತೆ ಒದಗಿಸಿದ ಅನುಪಮ ರಾಜಕಾರಣಿ
Team Udayavani, Nov 21, 2023, 12:36 AM IST
ನಮ್ಮ ರಾಷ್ಟ್ರದ ರಾಜಕೀಯ ಚರಿತ್ರೆ ಯಲ್ಲಿ ಪ್ರಾಮಾಣಿಕ-ಆದರ್ಶ ರಾಜ ಕಾರಣಿಗಳು ಅತ್ಯಲ್ಪ. ಅಂತಹ ಕೆಲವೇ ಅನುಕರಣೀಯ ರಾಜಕಾರಣಿ- ಜನ ಪ್ರತಿನಿಧಿ- ಜನಸೇವಕರ ಪೈಕಿ ನಮ್ಮ ಅವಿ ಭಜಿತ ಜಿಲ್ಲೆಯ ನವ ನಿರ್ಮಾಣದ ಹರಿ ಕಾರರಾದ ಉಳ್ಳಾಲ ಶ್ರೀನಿವಾಸ ಮಲ್ಯ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಇದು ಕರಾವಳಿಗರೆಲ್ಲರ ಪಾಲಿಗೆ ಬಲುದೊಡ್ಡ ಹೆಮ್ಮೆಯೇ ಸರಿ. ಸಾರ್ಥಕ ಬಾಳು ಸವೆಸಿ ಜನಸೇವೆಗೂ ಧನ್ಯತೆ ಒದಗಿಸಿದ ಅನುಪಮ ರಾಜಕಾರಣಿ ಇವರು.
“ಶಿನ್ನಪ್ ಮಾಲ್ ಮಾಮ್’ ಎಂದೇ ಖ್ಯಾತರಾಗಿದ್ದ ಉಳ್ಳಾಲ ಶ್ರೀನಿವಾಸ ಮಲ್ಯರು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಸಂಪ್ರದಾಯಸ್ಥ ಕುಟುಂಬ ವಾದ ಉಳ್ಳಾಲ ಮಲ್ಯ ಮನೆತನಕ್ಕೆ ಸೇರಿದ ಮಂಜುನಾಥ ಮಲ್ಯ ಮತ್ತು ಸರಸ್ವತಿ ಅಲಿಯಾಸ್ ರುಕಾ¾ಬಾೃ ದಂಪತಿಯ ಸುಪುತ್ರನಾಗಿ 1902ರ ನವೆಂಬರ್ 21ರಂದು ಜನಿಸಿದರು. ಇವರ ತಂದೆಯವರಿಗೆ ಮಂಗಳೂರಿನ ಬಂದರಿನಲ್ಲಿ ಕೌಟುಂಬಿಕ ಭಂಡಸಾಲೆ ಯಲ್ಲಿ ವ್ಯಾಪಾರ ವೃತ್ತಿ. ಶ್ರೀನಿವಾಸ ಮಲ್ಯರು ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಅಲೋಶಿಯಸ್‌ನಲ್ಲಿ, ಹೆೃಸ್ಕೂಲ್ ಶಿಕ್ಷಣವನ್ನು ಕೆನರಾ ಶಾಲೆಯಲ್ಲಿ ಪಡೆ ದರು. ಅನಂತರ ಸರಕಾರಿ ಕಾಲೇಜಲ್ಲಿ ಇಂಟರ್ ಮೀಡಿಯಟ್ ಶಿಕ್ಷಣ ಪಡೆ ದರು. ಹದಿ ಹರೆಯದಲ್ಲೇ ಇವರಲ್ಲಿ ನಾಯಕತ್ವದ ಗುಣಗಳು, ಹೋರಾಟದ ಕೆಚ್ಚೆದೆಯ ಲಕ್ಷಣಗಳು ಪ್ರತಿಫಲಿಸುತ್ತಿತ್ತು. ಈ ವೇಳೆ ಸ್ವಾತಂತ್ರ್ಯ ಸಂಗ್ರಾಮದ ಕಾವು ಜೋರಾಗಿದ್ದ ಕಾರಣ ಶಿಕ್ಷಣಕ್ಕೆ ಪೂರ್ಣ ವಿರಾಮ ಹಾಕಿ, ಕೌಟುಂಬಿಕ ವ್ಯವಹಾರ ತ್ಯಜಿಸಿ, 18ನೇ ವಯಸ್ಸಿನಲ್ಲೇ ದೇಶ ಸೇವೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು. ಈ ಮುಖೇನ ದೇಶ- ಜನ ಸೇವೆಗೆ ತಮ್ಮ ಬದುಕನ್ನು ಮುಡಿ ಪಾಗಿಟ್ಟು ಅದ್ವಿತೀಯ ರಾಷ್ಟ್ರಭಕ್ತರೆನಿಸಿ ಕೊಂಡರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹಲವು ಬಾರಿ ಸೆರೆಮನೆವಾಸವನ್ನೂ ಅನುಭವಿಸಿದರು.
ರಾಜಕೀಯ ಜೀವನ: ಆರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯ ದರ್ಶಿಯಾದ ಮೇಲೆ ಅಲ್ಪ ಅವಧಿಯಲ್ಲೇ ಈ ಸಮಿತಿಯ ಅಧ್ಯಕ್ಷರಾದರು. ಆಮೇಲೆ ಪ್ರದೇಶ ಕಾಂಗ್ರೆಸ್ ಸಮಿತಿ, ದಿಲ್ಲಿಯ ಎಐಸಿಸಿಯಲ್ಲಿ ಸೇವೆ ಸಲ್ಲಿಸಿ ಸ್ವಾತಂತ್ರಾéನಂತರ ದಿಲ್ಲಿ ಹೌಸ್ ಆಫ್ ಪಾರ್ಲಿಮೆಂಟ್‌ನ ಸದಸ್ಯರಾದರು. 1952ರ ಪ್ರಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ದಕ್ಷಿಣ ಕನ್ನಡ-ಉತ್ತರ ಮತ್ತು 1962- 1967ರಲ್ಲಿ ಉಡುಪಿ ಭಾಗದ ಕ್ಷೇತ್ರದಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದರು. 1952-1960ರ ತನಕ ಕಾಂಗ್ರೆಸ್ ಪಾರ್ಲಿ ಮೆಂಟರಿ ಪಾರ್ಟಿಯ ಮುಖ್ಯ ಉಪ ವಿಪ್ ಆಗಿದ್ದರು. ಇವುಗಳ ಸಹಿತ ಇತರ ಕೆಲವು ಸಮಿತಿಗಳಲ್ಲೂ ಸೇವೆ ಸಲ್ಲಿಸಿರುವುದು ಇವರ ಸಮರ್ಥತೆ-ದಕ್ಷತೆಯ ಕೆೃಗನ್ನಡಿ ಇವು.
ಕೇಂದ್ರ ಸರಕಾರ-ರಾಜ್ಯ ಸರಕಾರಗಳ ನಡುವೆ ಮತ್ತು ನಾಯಕರುಗಳೊಳಗೆ ಭಿನ್ನಾಭಿಪ್ರಾಯಗಳು ತಲೆದೋರಿದಾಗ ನೆಹರೂ ಅವರು ಮಲ್ಯ ಅವರನ್ನು ಕಳುಹಿಸಿ ದ್ವಂದ್ವಗಳನ್ನು ಬಗೆಹರಿಸು ತ್ತಿದ್ದರಂತೆ. ಹೀಗೆ ಇವರು ಆ ಕಾಲದಲ್ಲಿ ಕಾಂಗ್ರೆಸ್‌ನ “ಟ್ರಬಲ್ ಶೂಟರ್’ ಎನಿಸಿ ಕೊಂಡಿದ್ದರು. ದೇಶದ ವಿವಿಧ ಭಾಗದ ರಾಜಕಾರಣಿ- ಮುಖ್ಯಮಂತ್ರಿಗಳು ಇವರಿಂದ ಹಲವು ವಿಷಯಗಳಲ್ಲಿ ಸಲಹೆ, ಮಾರ್ಗದರ್ಶನ ಪಡೆಯು ತ್ತಿದ್ದುದು ಉಳ್ಳಾಲ ಶ್ರೀನಿವಾಸ ಮಲ್ಯರ ರಾಜಕೀಯ ಮತ್ತು ಆಡಳಿತ ಮೇಧಾ ವಿತನಕ್ಕೆ ದ್ಯೋತಕವಾಗಿದೆ.
ಪ್ರಗತಿಪರ ಧೋರಣೆ: ಶ್ರೀನಿವಾಸ ಮಲ್ಯ ರು ಸರಳ ಸ್ವಭಾವದ ದೆೃವಭಕ್ತರಾಗಿ ಮಾನವೀಯ ಮೌಲ್ಯ ಹೊಂದಿದ್ದ ಧೀಮಂತ-ಅನೂಹ್ಯ ವರ್ಚಸ್ಸು ಹೊಂದಿದ್ದರು. ಪ್ರಗತಿಪರ ಧೋರಣೆ, ಪ್ರಬುದ್ಧ ನಿಲುವು, ಅಪ್ರತಿಮ ಇಚ್ಛಾಶಕ್ತಿ, ತೀಕ್ಷ್ಣ ದೂರಗಾಮಿ ಚಿಂತನೆ, ಮೇಧಾ ವಿತನ ಒಳಗೊಂಡ ದೂರದೃಷ್ಟಿ, ಅಕಳಂಕ -ಶುಭ್ರ- ಶುದ್ಧ ಹಸ್ತದ ವರ್ತನೆಗಳೇ ಅವರು ದೇಶ ಮತ್ತು ಸಮಾಜಕ್ಕೆ ನೀಡಿದ ಅತ್ಯಮೋಘ ಕೊಡುಗೆಗಳ ಮೂಲಾ ಧಾರಗಳಾಗಿದ್ದವು. ಜತೆಗೆ ಜಿಲ್ಲೆಯಿಂದ ಹಿಡಿದು ದಿಲ್ಲಿ ತನಕ ಅನೇಕಾನೇಕ ಗಣ್ಯ- ಪ್ರಭಾವಿ ನಾಯಕರೊಂದಿಗಿನ ಒಡ ನಾಟ, ಅನ್ಯೋನ್ಯ ಬಾಂಧವ್ಯ ಹೊಂದಿ ದ್ದುದು ಬೃಹತ್ ಯೋಜನೆಗಳನ್ನು ಸಾಕಾರಗೊಳಿಸಲು ಅವರಿಗೆ ಸಹಾಯ ಕವಾದವು. ಅವರ ಸಮಗ್ರ ಬದುಕಲ್ಲಿ ಪತ್ನಿ ಇಂದಿರಾ ಮಲ್ಯರ ಪಾತ್ರ, ಸಹ ಕಾರವೂ ಉಲ್ಲೇಖನೀಯ. “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬ ಗಾದೆ ಉಳ್ಳಾಲ ಶ್ರೀನಿವಾಸ ಮಲ್ಯರಿಗೆ ಅನ್ವರ್ಥವಾಗುತ್ತದೆ.
ಕೊಡುಗೆ-ಸಾಧನೆಗಳು: ನಾಲ್ಕು ದಶಕ ಗಳ ಸಾರ್ವಜನಿಕ ರಂಗದಲ್ಲಿ ಇವರ ಕೊಡುಗೆ- ಸಾಧನೆಗಳು ಹಲವಾರು. ಇವರು ಕರಾವಳಿ ಜಿಲ್ಲೆಗಳಿಗೆ ನೀಡಿದ ಕೆಲವು ಮಹತ್ತರ ಕೊಡುಗೆಗಳನ್ನು ಬೆಟ್ಟು ಮಾಡುವುದಾದರೆ ನವಮಂಗಳೂರು ಬಂದರು, ಬಜಪೆ ವಿಮಾನ ನಿಲ್ದಾಣ, ಇಂದಿನ ಸುರತ್ಕಲ್ ಎನ್‌ಐಟಿಕೆ, ಮಂಗ ಳೂರು-ಬೆಂಗಳೂರು ರೈಲು ಮಾರ್ಗ, ಉಳ್ಳಾಲ ಸೇತುವೆ, ಮಂಗಳೂರಿನ ಸರ್ಕಿಟ್ ಹೌಸ್ ಮತ್ತು ಪುರಭವನ, ಮಂಗಳೂರು ಆಕಾಶವಾಣಿ, ಮಂಗ ಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಮುಂಬಯಿ-ಕೊಚ್ಚಿ ರಾಷ್ಟ್ರೀ ಯ ಹೆದ್ದಾರಿ, ಕರಾವಳಿ ಜಿಲ್ಲೆಗಳಲ್ಲಿ ಹರಿ ಯುವ ಅನೇಕ ನದಿಗಳಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಗಳು… ಹೀಗೆ ಇವರು ಅವಿಭಜಿತ ಜಿಲ್ಲೆಯ ಓರ್ವ “ಅಭಿವೃದ್ಧಿಯ ಶಿಲ್ಪಿ’ಯಾಗಿ ಮೂಡಿ ಬಂದರು. ಈ ಎಲ್ಲ ಕಾಮಗಾರಿಗಳಿಗೆ ವಿವಿಧ ಕಾರಣಗಳಿಂದ ಅಡ್ಡಿ- ಆತಂಕ ಎದುರಾದಾಗ ಮಲ್ಯರು ಚಾಣಾ ಕ್ಷತನದಿಂದ, ಸಾತ್ವಿಕ ಹಠ ಸ್ವಭಾವದಿಂದ ಯೋಜನೆಗಳ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಗ್ಗೆ ಅನೇಕ ಹಿರಿಯರು ವ್ಯಕ್ತಪಡಿಸುವ ಅಭಿ ಪ್ರಾಯ, ಶ್ಲಾಘನೆಗಳು ಇವರ ಸಮಗ್ರ ವ್ಯಕ್ತಿತ್ವಕ್ಕೆ ಕಳಶಪ್ರಾಯವಾದವುಗಳು. ಸ್ವಾರ್ಥ, ಹಮ್ಮು- ಬಿಮ್ಮುಗಳಿಲ್ಲದೆ ದೇ ಶದ ಅಭಿವೃದ್ಧಿ ಪರ ಚಿಂತನೆಯನ್ನಷ್ಟೇ ತನ್ನ ಜನಸೇವೆಯ ಗುರಿ ಮತ್ತು ಉದ್ದೇಶ ವನ್ನಾಗಿರಿಸಿಕೊಂಡಿದ್ದರಿಂದಲೇ ಶ್ರೀನಿ ವಾಸ ಮಲ್ಯರಿಗೆ ಈ ಮಹೋನ್ನತ ಸಾಧ ನೆಗಳನ್ನು ಮಾಡಲು ಸಾಧ್ಯವಾಯಿತು. ಇಂತಹ ಅಸಾಮಾನ್ಯ ಚಾರಿತ್ರ್ಯ ವನ್ನು ಹೊಂದಿದ್ದ ಮಲ್ಯರು 1965ರ ಡಿಸೆಂ ಬರ್ 19ರಂದು ಇಹಲೋಕ ತ್ಯಜಿಸಿ ದರು. ಉಳ್ಳಾಲ ಶ್ರೀನಿವಾಸ ಮಲ್ಯ ಅವ ರು ಕೇವಲ ರಾಜಕೀಯ ನಾಯಕರಿಗೆ ಮಾತ್ರವಲ್ಲದೆ ನಮ್ಮೆಲ್ಲರಿಗೂ ಅನುನಿತ್ಯ ಸ್ಮರಣೀಯರೂ ಹೌದು, ಸಾರ್ವಕಾಲಿಕ ಅನುಸರಣೀಯ ವ್ಯಕ್ತಿತ್ವದ ಜನ ನಾಯಕರೂ ಹೌದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.