ಕೈ ಮುಗಿದು ಕೇಳುವೆ, ಮನೆಯಲ್ಲೇ ಇರಿ …


Team Udayavani, Mar 25, 2020, 6:48 AM IST

ಕೈ ಮುಗಿದು ಕೇಳುವೆ, ಮನೆಯಲ್ಲೇ ಇರಿ …

ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಮಾ.22ರಂದು ಜನತಾ ಕರ್ಫ್ಯೂ ವಿಧಿಸುವ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಕ್ಷಣದಿಂದಲೇ ದೇಶಾದ್ಯಂತ 21 ದಿನಗಳ ಸಂಪೂರ್ಣ ಲಾಕ್‌ಡೌನ್‌ ಘೋಷಣೆ ಮಾಡಿದ್ದಾರೆ. ಅದರ ಪೂರ್ಣ ಪಾಠ ಇಲ್ಲಿದೆ.

ಹಿರಿಯರು, ಯುವಕರು, ಮಕ್ಕಳು ಎಲ್ಲರೂ ಯೋಗದಾನ ನೀಡಿದ್ದಾರೆ. ಜನತಾ ಕರ್ಫ್ಯೂ ಸಫ‌ಲವಾಗಿಸಿದ್ದಾರೆ. ಒಂದು ದಿನದ ಜನತಾ ಕರ್ಫ್ಯೂ ಭಾರತೀಯರು, ದೇಶಕ್ಕೆ ಸಂಕಟ ಬಂದಾಗ ಹೇಗೆ ಒಗ್ಗೂಡಿ ಕೆಲಸ ಮಾಡುತ್ತೇವೆ ಎಂಬುದನ್ನು ತೋರಿಸಿದ್ದೇವೆ. ಅದರ ಯಶಸ್ಸಿಗೆ ನಿಮಗೆ ಅಭಿನಂದನೆಗಳು.
ಸಮರ್ಥವಾಗಿರುವ ದೇಶಗಳೂ ಕೋವಿಡ್-19ನಿಂದ ದುಸ್ತರವಾಗಿವೆ. ಅವು ಆರೋಗ್ಯ, ಸಾಮಾಜಿಕ ಸ್ವಾಸ್ಥ್ಯದಂಥ ವಿಚಾರಗಳಲ್ಲಿ ಸಕಲ ಸಮೃದಿಟಛಿಯಾಗಿದ್ದರೂ, ಕೊರೊನಾ ವಿರುದ್ಧ ಹೋರಾಡಲು ಸಾಕಷ್ಟು ಹೆಣಗಾಡುತ್ತಿವೆ. ಕಳೆದೆರಡು ತಿಂಗಳ ಅವಧಿಯಲ್ಲಿ ನಾವು ಗಮನಿಸಿದಂತೆ ಇದು ಸಾಬೀತಾಗಿದೆ. ಅಂಥ ದೇಶಗಳೇ ಹಾಗೆ ಹೆಣಗಾಡುತ್ತಿರುವಾಗ ನಮ್ಮ ಕತೆಯೇನು ಎಂಬುದನ್ನು ಒಮ್ಮೆ ಯೋಚಿಸಿ.

ನಮಗೆ ಸಾಮಾಜಿಕ ಅಂತರ ಅತ್ಯಂತ ಅವಶ್ಯ. ಇದು ರೋಗಿಗಳಿಗೆ ಮಾತ್ರ ಎನ್ನುವುದು ಸರಿಯಲ್ಲ. ಇದು ತಪ್ಪು. ಅದು ಎಲ್ಲಾ ನಾಗರಿಕನಿಗೂ, ಕುಟುಂಬಕ್ಕೂ ಬೇಕು. ಪ್ರಧಾನ ಮಂತ್ರಿಗೂ ಬೇಕು. ಕೆಲವರ ಬೇಜವಬ್ದಾರಿತನ, ತಪ್ಪು ಆಲೋಚನೆ, ನಿಮ್ಮ, ನಿಮ್ಮ ಕುಟುಂಬ, ಸ್ನೇಹಿತರು ಹಾಗೂ ದೇಶಕ್ಕೇ ಕಂಟಕ ತರಬಹುದು. ಇಂಥ ಬೇಜವಾಬ್ದಾರಿತನದಿಂದ ಭಾರತ ಅತಿ ದೊಡ್ಡ ಬೆಲೆ ತೆರಬೇಕಾಗುತ್ತದೆ. ಇದರ ಅಂದಾಜು ಯಾರಿಗೂ ಸಿಗಲಾರದು. ಎರಡು ದಿನಗಳಿಂದ ದೇಶದ ಅನೇಕ ಭಾಗಗಳು ಲಾಕ್‌ಡೌನ್‌ ಆಗಿವೆ. ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸೇಕು. ಜನರೂ ಇದರ ಹಿಂದಿನ ಉದ್ದೇಶ ಅರ್ಥ ಮಾಡಿಕೊಳ್ಳಬೇಕು.

ತಪ್ಪಿದರೆ 21 ವರ್ಷ ಹಿಂದಕ್ಕೆ!: ಇಂದು ರಾತ್ರಿ 12ರಿಂದ ಇಡೀ ದೇಶದಿಂದ ಸಂಪೂರ್ಣ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್‌ ಆಗಲಿದೆ. ಭಾರತದ ಎಲ್ಲಾ ನಾಗರಿಕರ ಸಂರಕ್ಷಣೆಗೆ ಇದು ಅತ್ಯವಶ್ಯಕ. ಪ್ರತಿ ರಾಜ್ಯದಲ್ಲಿ, ಕೇಂದ್ರಾಡಳಿತ ಪ್ರದೇಶಗಳಲ್ಲಿ, ನಗರ, ಹಳ್ಳಿ, ಪ್ರಾಂತ್ಯಗಳಲ್ಲಿ ಲಾಕ್‌ ಡೌನ್‌. ಜನತಾ ಕರ್ಫ್ಯೂಯೂಗಿಂತ ಹೆಚ್ಚಿನ ಮಟ್ಟದ ಕರ್ಫ್ಯೂ ಇದು. ಅತ್ಯಂತ ನಿರ್ಣಾಯಕ ಯುದ್ಧ ಇದು. ಆದರೆ, ಪ್ರತಿಯೊಬ್ಬ ದೇಶವಾಸಿಯನ್ನು ಕಾಪಾಡಲು ಪರಿವಾರಗಳನ್ನು ರಕ್ಷಿಸುವುದೇ ನನ್ನ, ನನ್ನ ಸರ್ಕಾರದ ಮೊದಲ ಆದ್ಯತೆಯಾಗಿದೆ. ಹಾಗಾಗಿ, ನಾನು ನಿಮ್ಮನ್ನು ಕೈ ಮುಗಿದು ಕೇಳಿಕೊಳ್ಳುವುದೇನೆಂದರೆ ನೀವು ಎಲ್ಲಿದ್ದರೂ ನೀವು ಅಲ್ಲೇ ಇರಿ. ಒಂದು ದೊಡ್ಡ ಮನವಿ ಮಾಡುತ್ತೇನೆ ಎಂದು ನಾನು ನಿಮ್ಮನ್ನು ಕಳೆದ ಬಾರಿ ಮಾತನಾಡುವಾಗಲೇ ಕೇಳಿದ್ದೆ. ಇದೇ ನನ್ನ ಮನವಿ. ವೈರಸ್‌ನ ಸಂಕ್ರಮಣ ಮುರಿಯಲು ಈ 21 ದಿನ ಅತ್ಯಂತ ಅವಶ್ಯಕ. ಇಷ್ಟರೊಳಗೆ ಇದು ವೈರಸ್‌ ಹರಡಿದ್ದರೆ 21 ವರ್ಷ ಹಿಂದೆ ಸರಿಯಲಿದೆ. ಎಲ್ಲಾ ಪರಿವಾರಗಳೂ ಹಾಳಾಗುತ್ತವೆ.

ನಿಮ್ಮ ಕುಟುಂಬ ಸದಸ್ಯನಾಗಿ ಕೇಳಿಕೊಳ್ಳುತ್ತಿರುವೆ!: 21 ದಿನಗಳ ಕಾಲ ಮನೆಯಲ್ಲಿರಿ ಎಂದು ನಾ
ನು ಒಬ್ಬ ಪ್ರಧಾನಿಯಾಗಿ ಅಲ್ಲ, ನಿಮ್ಮ ಪರಿವಾರದ ಸದಸ್ಯನಾಗಿ ಕೇಳಿಕೊಳ್ಳುತ್ತಿದ್ದೇನೆ. ಹಾಗಾಗಿ, ಮನೆಯಿಂದ ಹೊರಗೋವುಗನ್ನು ಮರೆತುಬಿಡಿ. ನಿಮ್ಮ ಮನೆಯಲ್ಲೇ ಇರಿ, ನಿಮ್ಮ ಮನೆಯಲ್ಲೇ ಇರಿ. ನಿಮ್ಮ ಮನೆಯಲ್ಲೇ ಇರಿ. ಇದೊಂದೇ ನಿಮ್ಮ ಮೂಲಮಂತ್ರವಾಗಿರಲಿ.

ಲಕ್ಷ್ಮಣರೇಖೆ ಹಾಕಿಕೊಳ್ಳಿ: ನಿಮ್ಮ ಮನೆ ಹೊಸ್ತಿಲಿಗೆ ಲಕ್ಷ್ಮಣ ರೇಖೆ ಹಾಕಿಕೊಳ್ಳಿ. ನಿಮ್ಮ ಒಂದು ಹೆಜ್ಜೆ ಕೊರೊನಾ ವೈರಸ್‌ ವಿರುದ್ಧ ಹೋರಾಡುವ ಶಕ್ತಿ ನೀಡಲಿದೆ. ನಿಮ್ಮ ಜೊತೆಗೆ ಆರಂಭದಲ್ಲಿ ಸ್ವಸ್ಥನಾಗಿ ಕಾಣಿಸುತ್ತಾನೆ. ಆದರೆ, ಇದರಿಂದ ಎಲ್ಲರೂ ಮೋಸ ಹೋಗುತ್ತಾರೆ. ಹಾಗಾಗಿ, ಸೋಷಿಯಲ್‌ ಮೀಡಿಯಾ, ಇನ್ನೋವೇಟಿವ್‌ ತಂತ್ರಗಳ ಮೂಲಕ ಜನರಲ್ಲಿ ಅರಿವು ಮೂಡಿಸಲು ಯತ್ನಿಸಿ. ಸಾಮಾಜಿಕ ಜಾಲತಾಣದಲ್ಲಿ ಬಂದ ಇದೊಂದು ಬ್ಯಾನರ್‌ ನನಗೆ ತುಂಬಾ ಇಷ್ಟವಾಯಿತು. ಅದರಲ್ಲಿ ಕ-ರೊ-ನಾ ಎನ್ನುವುದನ್ನು ಹಿಂದಿಯಲ್ಲಿ ರಸ್ತೆಗೆ ಇಳಿಯಬೇಡಿ ಎಂದು ಬಿಡಿಸಿ ಹೇಳಲಾಗಿದೆ. ಇಂಥ ಸೃಜನಾತ್ಮಕ ಬರಹಗಳ ಮೂಲಕ ಸಮಾಜದಲ್ಲಿ ಎಚ್ಚರಿಕೆಯನ್ನು ಪಸರಿಸಿ.

ವೇಗವಾಗಿ ಹರಡುತ್ತದೆ ಇದು!: ತಜ್ಞರ ಪ್ರಕಾರ, ಯಾರಾದರೂ ಕೊರೊನಾ ಇದ್ದರೆ ಅವರ ಶರೀರದಲ್ಲಿ ಅವುಗಳ ಗುಣಲಕ್ಷಣ ಕಾಣಲು ದಿನಗಳೇ ಬೇಕಾಗುತ್ತದೆ. ಇದು ಸಾಂಕ್ರಾಮಿಕಗೊಳ್ಳುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಒಬ್ಬ ವ್ಯಕ್ತಿಯಿಂದ 10 ದಿನಗಳಲ್ಲಿ 100 ಮಂದಿಗೆ ಹರಡಬಲ್ಲ. ಇದು ಕಾಡ್ಗಿಚ್ಚಿನಂತೆ ಹರಡುತ್ತದೆ. ವಿಶ್ವದಲ್ಲಿ ಕೊರೊನಾ ವೈರಸ್‌ 1,0000 ಸೋಂಕಿತರ ಸಂಕ್ಯೆಗೆ 67 ದಿನ ಆಗಿತ್ತು. 11 ದಿನಗಳಲ್ಲಿ 1 ಲಕ್ಷ ಹೊಸ ಸೋಂಕಿತರು. 2 ಸಾಂಕಾಮಿಕರಿಂದ 3 ಲಕ್ಷ ಸೋಂಕಿತರಾಗಲು 4 ದಿನ ಸಾಕಾಯ್ತು. ಇದರಿಂದ ಎಷ್ಟು ವೇಗವಾಗಿ ಹರಡುತ್ತದೆ ಎಂಬುದನ್ನು ನೀವು ಊಹಿಸಬಹುದು.

ನಮಗೂ ಇದೊಂದೇ ಮಾರ್ಗ: ಚೀನಾ, ಅಮೆರಿಕ, ಫ್ರಾನ್ಸ್‌, ಸ್ಪೇನ್‌, ಜರ್ಮನಿ, ಇಟಲಿ, ಇರಾನ್‌ ನಂಥ ದೇಶಗಳಲ್ಲಿ ಕೋವಿಡ್-19 ವೈರಸ್‌ ಹರಡಿದಾಗ ಅಲ್ಲಿನ ಪರಿಸ್ಥಿತಿ ಹದಗೆಟ್ಟಿತು. ಇಟಲಿ, ಅಮೆರಿಕದಲ್ಲಿ ಆರೋಗ್ಯ ವ್ಯವಸ್ಥೆ ತುಂಬಾ ಅಗ್ರಸ್ಥಾನದಲ್ಲಿವೆ. ಆದಾಗ್ಯೂ ಕೊರೊನಾ ಪ್ರಭಾವ ಕಡಿಮೆ ಮಾಡಲು ಸಾಧ್ಯವಾಗಲಿಲ್ಲ. ಇನ್ನೂ ಕೆಲವು ದೇಶಗಳ ಪ್ರಜೆಗಳು ಸರ್ಕಾರದ ನಿರ್ದೇಶನಗಳನ್ನು ಪಾಲಿಸಿದರು. ಹಾಗಾಗಿ, ಅವು ಇದರಿಂದ ಹೊರಬರುತ್ತಿವೆ. ನಮಗೂ ಇದೇ ಮಾರ್ಗ ಎನ್ನುವುದನ್ನು ಅರಿಯಬೇಕು.

ಕಳಕಳಿಯ ಮನವಿ: ಮತ್ತೂಮ್ಮೆ ಹೇಳುತ್ತಿದ್ದೇನೆ…. ಮನಯಿಂದ ಹೊರಬರಬೇಡಿ. ಜೀವವಿದ್ದರೆ ಜಗತ್ತು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ, ಸಾಮಾಜಿಕ ಅಂತರ ಪ್ರಧಾನಿಯಿಂದ ಹಳ್ಳಿಯ ಸಾಮಾನ್ಯ ನಾಗರಿಕನಿಗೂ ಅನ್ವಯವಾಗುತ್ತದೆ. ಲಕ್ಷ್ಮಣ ರೇಖೆ ದಾಟಬೇಡಿ. ವೈರಸ್‌ ಹರಡುವಿಕೆಯ ಸರಪಳಿ ಮುರಿಯಬೇಕಿದೆ. ವೈರಸ್‌ನ ಪ್ರಭಾವವನ್ನು ಭಾರತವು, ಎಷ್ಟು ಕಡಿಮೆ ಮಾಡಬಹುದು ಎಂಬುದನ್ನು ನಾವು ನೋಡಬೇಕಿದೆ. ಈ ಸಂದರ್ಭದಲ್ಲಿ ಹೆಜ್ಜೆ ಹೆಜ್ಜೆಗೂ ಸಂಯಮವನ್ನು ತಾಳಬೇಕು. ಸಂಕಲ್ಪ, ನಮ್ಮ ವಚನವನ್ನು ನಿಭಾಯಿಸಬೇಕು ಎಂದು ಕೈ ಮುಗಿದು ಕೇಳುತ್ತೇನೆ.

ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧ ಬೇಡ: ಜೀವನ ನಡೆಸಲು ಮಾಡುವ ಪ್ರಯತ್ನಕ್ಕಿಂತ ಜೀವನ ಕಾಪಾಡಲು ಮಾಡುವ ಪ್ರಯತ್ನಗಳಿಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಅಂಧ ವಿಶ್ವಾಸಗಳಿಂದ ದೂರವಿರಿ. ಸೋಂಕಿತರು ವೈದ್ಯರ ಸಲಹೆಯಿಲ್ಲದ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಬೇಡಿ. ಇದು ನಿಮ್ಮನ್ನು ಮತ್ತಷ್ಟು ಅಪಾಯಕ್ಕೆ ದೂಡಲಿದೆ. ಇದನ್ನು ಪಾಲಿಸುತ್ತೀರಿ ಎಂದು ತಿಳಿಯುತ್ತೇನೆ. 21 ದಿನ ಅತ್ಯಂತ ಕಷ್ಟ. ಆದರೆ, ಇದು ನಿಮ್ಮ ಆರೋಗ್ಯಕ್ಕಾಗಿ, ನಿಮ್ಮ ಸುರಕ್ಷೆಗಾಗಿ. ಇದನ್ನು ಎಲ್ಲಾ ಭಾರತೀಯನೂ ಅಚ್ಚುಕಟ್ಟಾಗಿ ಪಾಲಿಸುತ್ತಾನೆ. ಈ ಕಷ್ಟದ ದಿನದಿಂದ ಹೊರಬರುತ್ತಾನೆ, ದೇಶವನ್ನೂ ಹೊರತರುತ್ತಾನೆ ಎಂಬ ವಿಶ್ವಾಸವಿದೆ. ಕಾನೂನು ಪಾಲಿಸಿ, ವಿಜಯ ಸಂಕಲ್ಪ ಮಾಡಿ ಈ ಸವಾಲನ್ನು ಸ್ವೀಕರಿಸಬೇಕು.

ಜೀವವಿದ್ದರೆ ಜಗತ್ತು: ಮನೆಯಲ್ಲಿದಾಗಲೇ, ವೈದ್ಯರು, ಶುಶ್ರೂಷಕರು ಬಗ್ಗೆ ಹೋಲಿಸಿ, ಪ್ಯಾರಾಮೆಡಿಕಲ್‌ ಸಿಬ್ಬಂದಿ, ಬಗ್ಗೆ ಪ್ರಾರ್ಥಿಸಿ. ಕೊರೊನಾ ವಿರುದಟಛಿ ಹೋರಾಡಲು ಹಗಲು ರಾತ್ರಿ ಶ್ರಮಿಸುತ್ತಿರುವ ಈ ವ್ಯಕ್ತಿಗಳ ಬಗ್ಗೆ ಪ್ರಾರ್ಥಿಸಿ. ಆ್ಯಂಬುಲೆನ್ಸ್‌ ಡ್ರೈವರ್‌, ವಾರ್ಡ್‌ಬಾಯ್‌ಗಳು, ಸಫಾಯಿ ಕರ್ಮಚಾರಿಗಳು, ಇನ್ನೊಬ್ಬರ ಸೇವೆ ಮಾಡುವವರ ಬಗ್ಗೆ ಯೋಚಿಸಿ, ಅವರ ಬಗ್ಗೆ ಪ್ರಾರ್ಥಿಸಿ. ಸ್ಯಾನಿಟೈಸ್‌ ಮಾಡುತ್ತಿರುವ ಸಿಬ್ಬಂದಿ, ಅವರಿಂದಲೇ ನಾವು ಸ್ವಸ್ಥರಾಗುತ್ತೇವೆ. ಅಪಾಯಕಾರಿ ವಾತಾವರಣದ ನಡುವೆಯೂ ಬೀದಿಗಿಳಿದು ವರದಿ ಮಾಡುವ ಮಾಧ್ಯಮ ಮಂದಿಯ ಬಗ್ಗೆಯೂ ಯೋಚಿಸಿ. ಪೊಲೀಸರ ಬಗ್ಗೆ ಯೋಚಿಸಿ.

ಕೆಲವರ ಬೇಜವಾಬ್ದಾರಿತನ, ನಿಮ್ಮ, ನಿಮ್ಮ ಕುಟುಂಬ, ಸ್ನೇಹಿತರು ಹಾಗೂ ದೇಶಕ್ಕೇ ಕಂಟಕ ತರಬಹುದು.

ಸಾಮಾಜಿಕ ಜಾಲತಾಣದಲ್ಲಿ ಬಂದ ಇದೊಂದು ಬ್ಯಾನರ್‌ ನನಗೆ ತುಂಬಾ ಇಷ್ಟವಾಯಿತು.

ಕೆಲವು ದೇಶಗಳ ಪ್ರಜೆಗಳು ನಿರ್ದೇಶನ ಪಾಲಿಸಿದರು. ಹೀಗಾಗಿ ಅವುಗಳು ಈ ಸ್ಥಿತಿಯಿಂದ ಹೊರಬರುತ್ತಿವೆ.

ಅಪಾಯಕಾರಿ ಸ್ಥಿತಿ ನಡುವೆಯೂ ವರದಿ ಮಾಡುವ ಮಾಧ್ಯಮ ಮಂದಿಯ ಬಗ್ಗೆಯೂ ಯೋಚಿಸಿ.

15,000 ಕೋಟಿ ರೂ. ಮೀಸಲು
ವೈರಸ್‌ ನಿಗ್ರಹಕ್ಕಾಗಿ ಸರ್ಕಾರ ವೇಗವಾಗಿ ಕೆಲಸ ಮಾಡುತ್ತಿದೆ. ಕೋವಿಡ್-19 ನಿಗ್ರಹಕ್ಕಾಗಿ 15,000
ಕೋಟಿ ರೂ.ಗಳನ್ನು ಇದಕ್ಕಾಗಿ ಮೀಸಲಿಡಲಿದೆ. ಅಗತ್ಯ ವಸ್ತುಗಳ ಕೊರತೆಯಾಗಬಾರದೆಂದು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಪರೀಕ್ಷಾ ಸವಲ್ತತುಗಳು, ವೆಂಟಿಲೇಟರ್‌ಗಳು, ಐಸಿಯುಗಳನ್ನು ಹೆಚ್ಚಿಸುವತ್ತ ತುರ್ತು ಕ್ರಮಗಳನ್ನು ಕೈಗೊಳ್ಳಲಿದ್ದೇವೆ.

ಟಾಪ್ ನ್ಯೂಸ್

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.