ಮನಿ ಬಿಟ್ರ ಮನೆತನಾ ಹೆಂಗ ಉಳಿತೈತಿ?


Team Udayavani, Aug 13, 2017, 12:55 AM IST

ss.jpg

ಬ್ಯಾರ್ಯಾದ ಮ್ಯಾಲ ಬ್ಯಾರೇ ಧರ್ಮದ ಹೆಸರ್‌ ಹೇಳಿದ್ರ ಹೆಂಗ್‌?
ಸಾಲಿ ಕಲತ ಮಕ್ಕಳು ಅಪ್ಪಾ ಅವ್ವ ಅನಿಷ್ಠ ಪದ್ಧತಿ ಆಚರಣೆ ಮಾಡಾಕತ್ತಿದ್ರ ಅವರ ಜೋಡಿ ಇದ್ದಕೊಂಡು ಬಿಡಸ್ಬೇಕು, ಅದನ್ನ ಬಿಟ್ಟು ಅಪ್ಪಾ ಅವ್ವನ ಬಿಟ್ಟು ಹೋದ್ರ, ಅವರೆಂತಾ ಆದರ್ಶ ಮಕ್ಕಳಕ್ಕಾರು? ಬಸವಣ್ಣ ಯಾಕ್‌ ಇನ್ನೂ ಸಾಮಾನ್ಯ ಜನರ ಬಾಯಾಗ ಜೀವಂತ ಅದಾನು ಅಂದ್ರ ವ್ಯವಸ್ಥೆಯೊಳಗ ಇದ್ದಕೊಂಡು ಹೋರಾಟ ಮಾಡಿದ.

ಪಂಚಮಿ ಹಬ್ಬಕ್ಕ ಊರಿಗೆ ಹೋದಾಗಗೆಳಾನ ಫ್ಯಾಮಿಲಿ ಕರಕೊಂಡು ಲೋಕಲ್‌ ಟೂರ್‌ ಮಾಡೋಣು ಅಂತ ಯಜಮಾನಿ¤ಗೆ ಹೇಳಿದ್ದೆ, ಅದರ ಸಲುವಾಗಿ ಅಕಿತವರ ಮನಿಗೂ ಭಾಳ ಹೊತ್ತು ಹೋಗದ ಮಧ್ಯಾಹ್ನ ಹೋಗಿ ಸಂಜಿಕ ವಾಪಸ್‌ ಬಂದಿದು. ಆದ್ರ ನಮ್ಮ ಪ್ಲಾನ್‌ ರಾತ್ರಿಯಾಗೋಡದ ಬದಲಾಗಿತ್ತು. ಅವರನ್ನ ಬಿಟ್ಟು ನಾವಷ್ಟ ಅಂಬೋಲಿ ಫಾಲ್ಸ್‌ ನೋಡಾಕ ಹೋದ್ವಿ, ವಾಪಸ್‌ ಬರುದ್ರಾಗ ನಾವು ಜಾಸ್ತಿ ಮಾತಾಡು ಸೀನ್‌ ಇರಲಿಲ್ಲ. ನಾವೂ ಪರಿಸ್ಥಿತಿ ನೋಡಿಕೊಂಡು ಸುಮ್ಮನಿರೋದ ಚೊಲೊ ಅಂತೇಳಿ ಮೌನಕ್ಕ ಶರಣಾದ್ವಿ.

ಊರಿಂದ ವಾಪಸ್‌ ಬರುಮುಂದ ಊರ ಅಗಸ್ಯಾಗ ಹೊಸದಾಗಿ ನಾಕ್‌ ಮನಿಯಾಗಿದ್ದು ನೋಡಿದೆ, ಯಾರು ಮನಿ ಅಂತ ಕೇಳಿದಾಗ, ಅಣ್ಣ ಮಲ್ಲಪ್ಪನ ಮಕ್ಕಳು ಬ್ಯಾರ್ಯಾಗ್ಯಾರು ಅಂದ. ಮಾರನೇ ದಿನ ಬೆಂಗಳೂರಿಗೆ ಬರಗೋಡದ ವೀರಶೈವರು, ಲಿಂಗಾಯತರು ಬ್ಯಾರೆ ಧರ್ಮ ಬೇಕು ಅಂತ ಹೋರಾಟ ಶುರು ಮಾಡಿದ್ರು. 

ಅದಕ್ಕ ಸಿಎಂ ಸಿದ್ರಾಮಯ್ಯನೂ ಕೇಳಿ ಕೊಟ್ಟ ಬಿಡ್ತೇನಿ ಅಂತ ಎಲೆಕ್ಷನ್ಯಾಗ ಭರವಸೆ ಕೊಟ್ಟಂಗ ಕೊಟ್ಟ ಬಿಟ್ರಾ . ರಾತ್ರೋರಾತ್ರಿ ಧರ್ಮ ಸಂಸ್ಥಾಪನೆಗೆ ಸಚಿವರೆಲ್ಲಾ ಎದ್ದು ಯುದ್ದಕ್ಕ ಹೊಂಟಂಗ ಹೊಂಟಬಿಟ್ರಾ. ರಾಯರೆಡ್ಡಿ ಸಾಹೇಬ್ರು ನಡ್ಯಾಕ ಬರದಂಗ ಕಾಲು ನೋವಾಗಿದ್ರೂ, ಗಾಲಿ ಕುರ್ಚಿದಾಗ ವಿಧಾನಸೌಧಕ್ಕ ಬಂದು ಲಿಂಗಾಯತ ಸಚಿವರೆಲ್ಲ ಧರ್ಮ ಸ್ಥಾಪನೆಗೆ ದಂಡಯಾತ್ರೆ ಹೊಕ್ಕೇವಿ ಅಂತ ಘೋಷಣೆ ಮಾಡೇ ಬಿಟ್ರಾ. ಪಾಟೀಲರೂ ಧರ್ಮಯುದ್ಧ ಸಾರೇ ಬಿಟ್ರಾ. ವೀರಶೈವರು ನಮ್ಮದ ಧರ್ಮ ಅಂತಾರು ಲಿಂಗಾಯತರು ನಮ್ಮದ ನಿಜವಾದ ಬಸವಣ್ಣನ ಧರ್ಮ ಅಂತಾರು. ಯಾಡೂ ಧರ್ಮಾನ ಅಲ್ಲಾ ಹಿಂದೂ ಧರ್ಮದ ಭಾಗ ಅಂತ ಚಿಮೂ ಅಂತಾರು. ಇದರಾಗ ಹೊಸ ಧರ್ಮ ಯಾರಿಗೆ ಬೇಕಾಗೇತಿ? ಯಾಕ್‌ ಬೇಕಾಗೇತಿ ಅನ್ನೋದ ದೊಡ್ಡ ಪ್ರಶ್ನೆ? ಹನ್ನೆರಡನೆ ಶತಮಾನದಾಗ ಬಸವಣ್ಣ ಹಿಂದೂ ಧರ್ಮದಾಗಿನ ಕೆಟ್ಟ ಪದ್ಧತಿ ಹೋಗಲಾಡಿಸಬೇಕು ಅಂತ ಅದರ ವಿರುದ್ಧ ಹೋರಾಡಿದ. ತನ್ನ ಹೋರಾಟಕ ಜಾತಿ ಮೀರಿ ಎಲ್ಲಾರೂ ಸೇರಿಸಿಕೊಂಡು ಅನುಭವ ಮಂಟಪ ಕಟ್ಟಿದ.

ಬಸವಣ್ಣ ಜಾತಿ ಪದ್ಧತಿ, ಅಸಮಾನತೆ, ಮೂಢ ನಂಬಿಕೆ ವಿರುದ್ಧ ಹೋರಾಟ ಮಾಡಿದ. ಬಸವಾದಿ ಶರಣರು ಯಾವುದನ್ನು ಹೊಡದು ಹಾಕಬೇಕು ಅಂತ ಆವಾಗ ಹೋರಾಟ ಮಾಡಿದ್ರೋ, ಈಗ ಅವರ ಹೆಸರು ಹೇಳಾರು ಎಲ್ಲಾರೂ, ಅದ ಜಾತಿ ವ್ಯವಸ್ಥೆ, ಅಸಮಾನತೆ, ಮೂಢ ನಂಬಿಕೆನ ಬೆಳಸಿಕೊಂಡು ಹೊಂಟಾರು.

ಈಗ ನಡದಿರೋದು ಪಂಚ ಪೀಠಾಧೀಶರು ಮತ್ತ ವಿರಕ್ತ ಮಠದ ಸ್ವಾಮೀಜಿಗಳ ನಡುವಿನ ಹೋರಾಟೋ ಅಥವಾ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರ ನಡುವಿನ ಹೋರಾಟೋ ಅನ್ನೋದ ದೊಡ್ಡ ಪ್ರಶ್ನೆಯಾಗೇತಿ. ಹಿಂದೂ ಧರ್ಮ ಸರಿ ಇಲ್ಲಾ ಅಂತ ಹೋರಾಟ ನಡ್ಯಾಕತ್ತಿದ್ದು ಈಗಿಂದೇನಲ್ಲಾ, ಬುದಟಛಿ, ಮಹಾವೀರ, ಗುರುನಾನಕರು ಎಲ್ಲಾರೂ ಇದನ್ನಾ ಬೊಧನೆ ಮಾಡಿದರು. ಆ
ಮ್ಯಾಲ ಶರಣರು ಬಂದು ಧರ್ಮದಾಗಿನ ಕೆಟ್ಟದನ್ನ ಹೊಡದ ಓಡಸಾಕ್‌ ಹೋರಾಟ ಮಾಡಿದ್ರು. ಬಸವಣ್ಣ ಯಾವಾಗ್ಲೂ ಹಿಂದೂ ಧರ್ಮ ಬಿಟ್ಟು ಹೊರಗ ಬರ್ರಿ ಅನಲಿಲ್ಲ. ಆ ಧರ್ಮದಾಗಿ ಇರೋ ಕೆಟ್ಟ ಪದ್ಧತಿ ಬಿಟ್ಟು ಬಿಡ್ರಿ ಅಂದ. ಆದ್ರ, ಹಿಂದೂ ಧರ್ಮದಾಗಿನ ಕೆಟ್ಟ ಪದ್ಧತಿ ಏನದಾವು ಅವೆಲ್ಲಾ ಈಗ್ಲೂ ಲಿಂಗಾಯತರು, ವೀರಶೈವರು ಎಲ್ಲಾರೂ ಆಚರಿಸಿಕೊಂಡು ಹೊಂಟಾರು.

ಲಿಂಗಾ ಕಟ್ಟಾರೆಲ್ಲ ಲಿಂಗಾಯತರು ಅನ್ನೋದಾದ್ರ, ಉತ್ತರ ಕರ್ನಾಟಕದಾಗ ಹುಟ್ಟಿದ ಮಕ್ಕಳಿಗೆ ದಲಿತರು, ನಾಯಕರು, ಮರಾಠರು ಎಲ್ಲಾರೂ ಸಣ್ಣಾರಿದ್ದಾಗ ಲಿಂಗಾ ಕಟ್ಟತಾರು. ಜಾತಿ ಮೀರಿ ಬಸವಣ್ಣನ ಪೂಜೆ ಮಾಡ್ತಾರು. ಜಾತಿ ವ್ಯವಸ್ಥೆ ಬಿಡ್ರಿ ಅಂತ ಹೇಳಿದ ಬಸವಣ್ಣನ ಅನುಯಾಯಿಗೋಳು, ಬ್ಯಾರೇ ಜಾತ್ಯಾರ್ನ ಬಿಡ್ರಿ, ಲಿಂಗಾಯತ್ರಾಗ ಒಳ ಜಾತ್ಯಾಗ ಒಬ್ಬರಿಗೊಬ್ಬರು ಕೊಡು ಕೊಳ್ಳುದು ನಡ್ಯುದಿಲ್ಲ. ಜಾತಿ ಹೋಗಲಾಡಿಸಾಕ ಹೋರಾಡಿದ ಬಸವಣ್ಣನ ಹೆಸರು ಹೇಳಾರು, ನಾವೂ ಆ ಮಹಾಪುರುಷನ ಆದರ್ಶ ಪಾಲಿಸಬೇಕಲ್ಲಾ.

ಹಿಂದೂ ಧರ್ಮದಾಗ ಜಾತಿ ವ್ಯವಸ್ಥೆ ಜೀವಂತ ಇರಬೇಕು ಅಂತ ಯಾರು ಬಯಸ್ಯಾರು. ಜಾತ್ಯಾತೀತ ರಾಷ್ಟ್ರ ಅಂತ ಹೇಳಿ ಎಪ್ಪತ್ತು ವರ್ಷ ಆದ್ರೂ ಜಾತಿ ವ್ಯವಸ್ಥೆ ಜೀವಂತ ಉಳದೈತಿ ಅಂದ್ರ ಯಾರ ಅನುಕೂಲಕ್ಕ ಇನ್ನೂ ಉಳಕೊಂಡು ಹೊಂಟೇತಿ ಅನ್ನೋದು ಯೋಚನೆ ಮಾಡಬೇಕು. ಹಿಂದೂ ಧರ್ಮದಾಗ ಇದ್ದಕೊಂಡು ಅಂತರ್‌ಜಾತಿ ಮದುವಿ ಮಾಡಾಕ್‌ ಬ್ಯಾಡ ಅಂದಾರ್‌ ಯಾರು? ಬಸವಣ್ಣನ ತತ್ವ ಲಿಂಗಾಯತರಿಗಷ್ಟ ಅಲ್ಲ ಸಮಾಜ ಬದಲಾವಣೆ ಆಗಬೇಕು ಅನ್ನಾರು ಎಲ್ಲಾರಿಗೂ ಬೇಕಾಗೇತಿ. ಅದನ್ನು ವ್ಯವಸ್ಥೆಯೊಳಗ ಇದ್ದಕೊಂಡು ಬದಲಾಯಿಸಬೇಕು. ಅದನ್ನ ಬಿಟ್ಟು ಮದುವಿ ಆದ ಮ್ಯಾಲ ಇರು ಮನಿ ಸರಿ ಇಲ್ಲಾ, ಅಪ್ಪಾ ಅವ್ವಗ ಬುದಿಟಛಿ ಇಲ್ಲಾ, ಅವರು ಸಾಲಿ ಕಲಿತಿಲ್ಲಾ ಅಂದ್ರ ಹೆಂಗ ? ಹೊಸಾ ಹೆಂಡ್ತಿ ಬಂದ್ಲ ಅಂತ ಬ್ಯಾರೇ ಮನಿ ಮಾಡಿಕೊಂಡ್ರ ಮನೆತಾನದ ಹೆಸರು ಬಿಡಾಕ ಅಕ್ಕೇತಿ? ಸಾಲಿ ಕಲತ ಮಕ್ಕಳು ಅಪ್ಪಾ ಅವ್ವ ಅನಿಷ್ಠ ಪದ್ಧತಿ ಆಚರಣೆ ಮಾಡಾಕತ್ತಿದ್ರ ಅವರ ಜೋಡಿ ಇದೊಡು ಬಿಡಸ್ಬೇಕು,ಅದನ್ನ ಬಿಟ್ಟು ಅಪ್ಪಾ ಅವ್ವನ ಬಿಟ್ಟು ಹೋದ್ರ, ಅವರೆಂತಾ ಆದರ್ಶ ಮಕ್ಕಳಕ್ಕಾರು? ಬಸವಣ್ಣ ಯಾಕ್‌ ಇನ್ನೂ ಸಾಮಾನ್ಯ ಜನರ ಬಾಯಾಗ ಜೀವಂತ ಅದಾನು ಅಂದ್ರ ವ್ಯವಸ್ಥೆಯೊಳಗ ಇದ್ದಕೊಂಡು ಹೋರಾಟ ಮಾಡಿದ.

ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಬೇಕು ಅಂತ ಹೋರಾಟ ಮಾಡಾಕ ಸಭೆ ಸೇರಿದ ಮಠಾಧೀಶರು, ಮೌಡ್ಯ ವಿರೋಧಿ ಕಾಯ್ದೆ ಜಾರಿಗೆ ಒತ್ತಾಯಿಸಿದ್ರ, ಬಸವಣ್ಣನ ಆದರ್ಶನ ಲಿಂಗಾಯತ್ರಷ್ಟ ಯಾಕ ಇಡೀ ಸಮಾಜಕ್ಕ ಹಂಚಿದಂಗ ಅಕ್ಕಿತ್ತು. ಹಿಂದೂ ಅನ್ನೋದು ಧರ್ಮಾನೋ ಜೀವನ ಪದ್ಧತಿನೋ ಅನ್ನೋದ ದೊಡ್ಡ ಚರ್ಚೆ ನದಡೈತಿ,ಯಾಕಂದ್ರ ಈ ದೇಶದ ಮ್ಯಾಲ ಮುಸ್ಲಿಮರು,ಕ್ರಿಶ್ಚಿಯನೂ ದಾಳಿ ಮಾಡಿದ್ರು, ಆದ್ರ ಜನರ ಜೀವನ ಪದ್ಧತಿ ಮಾತ್ರ ಬದಲಿ ಮಾಡಾಕ್‌ ಆಗ್ಲಿಲ್ಲಾ. ಲಿಂಗಾಯತ ಧರ್ಮಕ್ಕೂ, ಹಿಂದೂ ಧರ್ಮಕ್ಕೂ ಭಾಳ ಫ‌ರಕ್‌ ಐತಿ ಅಂತ ಹೊಸ ಧರ್ಮ ಪ್ರತಿಪಾದಕರು ಹೇಳ್ಳೋದು ನೋಡಿದ್ರ ನಗಿ ಬರತೈತಿ. ನಾವು ಈಬತ್ತಿ ಹಚ್ಚತೇವಿ,
ಬ್ಯಾರೇದಾರು ಕುಂಕುಮ ಹಚ್ಚತಾರು, ನಾವು ಲಿಂಗಾ ಪೂಜೆ ಮಾಡ್ತೇವಿ, ಬ್ಯಾರೇದಾರು ಶಿವನ ಪೂಜೆ ಮಾಡ್ತಾರು ಅಂತಾರು, ಮಠದಾಗ ಓಂ ನಮ ಶಿವಾಯ ಅಂತ ಭಜನಿ ಮಾಡಾಕತ್ತಾರು ಯಾರು ? ಬ್ರಾಹ್ಮಣರು ಮಂತ್ರಾ ಹೇಳ್ತಾರು, ದಲಿತರು ಮಾಂಸ ತಿಂತಾರು ಅಂದ್ರ ಧರ್ಮ ಬ್ಯಾರೇ ಅಕ್ಕೇತನ? ಯಾರಿಗೆ ವೈರಿಗೋಳು ಜಾಸ್ತಿ ಇರತಾರೋ ಅವರು ಹೆಚ್ಚು ಸ್ಟ್ರಾಂಗ್‌ ಅಕ್ಕಾರಂತ. ಹಂಗಾಗೇ ಮೋದಿ ಈ ದೇಶದ ಪ್ರಧಾನಿ ಆಗಿದ್ದು, ಈಗ ಡಿಕೆಶಿನೂ ಕಾಂಗ್ರೆಸ್ಸಿನ್ಯಾಗ ಪ್ರಭಾವ ಬೆಳಿಸಿಕೊಳ್ಳಾಕತ್ತಿದ್ದು. 

ಹಿಂದೂ ಧರ್ಮಕ್ಕ ಶತಮಾನಗಳಿಂದೂ ವೈರಿಗೋಳು ಭಾಳ ಅದಾರು, ಈ ಧರ್ಮಾನ ಬ್ಯಾಡ ಅಂತ ಬಿಟ್ಟು ಹೋದಾರು ಅದಾರು. ಆದ್ರ, ಮನ್ಯಾಗ ಸರಿ ಇಲ್ಲದಿರೋದ್ನ ಸರಿ ಪಡಿಸಬೇಕು. ಅದ್ನ ಬಿಟ್ಟು ನಾವ ಮನಿ ಬಿಟ್ಟು ಹೋದ್ರ ಮನೆತನಾ ಹೆಂಗ ಉಳಿತೈತಿ? ಹಿಂದೂ ಧರ್ಮ ಸರಿ ಇಲ್ಲಾ ಅಂತ ನಾವು ಒಳಗಿದೊಡು ಹೊಡದ್ಯಾಡಾಕತ್ತೇವಿ. ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಬೇಕಂತೇಳಿ ಪಾಶ್ಚಾತ್ಯರು ಹಿಂದೂ ಧರ್ಮಾಚರಣೆ ಮಾಡಾಕತ್ತಾರು.

ನಾವು ಯಾವ ಧರ್ಮಾ ಸರಿ ಇಲ್ಲಾ ಅಂತ ವಿರೋಧಾ ಮಾಡಾಕತ್ತೇವೋ ಆ ಧರ್ಮದಾಗ ಹುಟ್ಟಿರೋ ಯೋಗಾನ ಇಡಿ ಜಗತ್ತು ಆಚರಣೆ ಮಾಡಾಕತ್ತೇತಿ. ಯುರೋಪಿನ ಜೆಕ್‌ ಗಣರಾಜ್ಯದಾಗ ಜನರು ದಿನಾ ಮುಂಜಾನೆದ್ದು ಯೋಗ, ಧ್ಯಾನ ಮಾಡಾಕತ್ತಾರಂತ, ಹೆಣ್ಮಕ್ಕಳು ಸೀರಿ ಉಟ್ಟು, ಕುಂಕುಮಾ ಹಚಕೊಂಡು ಹಬ್ಟಾ ಮಾಡ್ತಾರಂತ. ಇದ್ನ ನೋಡಿದ್ರ ಯಾರಿಗೆ ಯಾವುದು ಬ್ಯಾಡಾಗೇತಿ, ಏನ್‌ ಬೇಕಾಗೇತಿ ಅನ್ನೋದ ತಿಳಿದಂಗ ಆಗೇತಿ.

ಈಗ ನಡ್ಯಾಕತ್ತಿರೋ ಹೋರಾಟ ನೋಡಿದ್ರ ಎಲೆಕ್ಷನ್ನ ಮಟಾ ಇನ್ನೂ ಜೋರ್‌ ಅಕ್ಕೇತಿ ಅನಸೆôತಿ, ಈ ಗದ್ಲಾ ನೋಡಿದ್ರ, ವೀರಶೈವರು ಬಿಜೆಪಿ ಕಡೆ, ಲಿಂಗಾಯತರು ಕಾಂಗ್ರೆಸ್‌ ಕಡೆ ಅನ್ನೋ ಹಂಗ ಕಾಣಾಕತ್ತೇತಿ. ಬಿಜೆಪ್ಯಾರು ಇಬ್ಬರೂ ನಮ್ಮ ಜೋಡಿನ ಇರಲಿ ಅಂತ ಈ ವಿಷಯದಾಗ ಬಾಯಿ ಬಿಡು ಬದಲು ಭ್ರಷ್ಟಾಚಾರದ ಬೆನ್ನು ಹತ್ತಿದ್ರ ಅಧಿಕಾರಕ್ಕ ಬರಬಹದು ಅನ್ನೋ ಲೆಕ್ಕಾಚಾರ ಇದ್ದಂಗೈತಿ. 

ಹಿಂಗಾಗೇ ಶಾ ಸಾಹೇಬ್ರು ಬಂದು ಬೆಂಗಳೂರಾಗ ಠಿಕಾಣಿ ಹೂಡ್ಯಾರು. ಸಿದ್ರಾಮಯ್ಯನ ಧರ್ಮ, ಧ್ವಜದ ರಾಜಕೀಯಕ್ಕ ಹೆಂಗ್‌ ಟಾಂಗ್‌ ಕೊಡಬೇಕು ಅಂತ ತಂತ್ರ ರೂಪಿಸಾಕತ್ತಾರು ಅನಸೆôತಿ.ಪ್ರತ್ಯೇಕ ಧರ್ಮ ಆಗಬೇಕು ಅನ್ನಾರ ಲೆಕ್ಕಾಚಾರ
ನೋಡಿದ್ರ, ಸಮಾಜದ ಕೆಟ್ಟ ವ್ಯವಸ್ಥೆಯಿಂದ ಹೊರಗ ಬಂದು ಬಸವಣ್ಣನ ಸಿದ್ದಾಂತದ ಧರ್ಮ ಸ್ಥಾಪನೆ ಮಾಡಬೇಕು ಅನ್ನೋದ್ಕಿಂತ, ಮೀಸಲಾತಿ ಹೆಚ್ಚಿಗಿ ಬರತೈತಿ ಅನ್ನೋದ ಕಡೆಗೆ ಜಾಸ್ತಿ ತಲಿ ಕೆಡಿಸಿಕೊಂಡಂಗ ಕಾಣತೈತಿ. ಈ ಧರ್ಮ ರಾಜಕೀಯದ ಹಿಂದ ವ್ಯಾಪಾರಿ ಲೆಕ್ಕಾಚಾರಾನೂ ಇರಬೌದು, ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಆದ್ರ, ರಾಜ್ಯದಾಗ ಲಾಸ್‌ ಆಗೋದು ಹಿಂದು ಧರ್ಮಕ್ಕ ಅಲ್ಲಾ. ಮುಸ್ಲಿàಮ್‌ರಿಗೆ. ಅಲ್ಪ ಸಂಖ್ಯಾತರ ಹೆಸರಿನ್ಯಾಗ ಇಷ್ಟು ದಿನಾ ಮುಸ್ಲಿàಮರು, ಲಾಭಾ ತೊಗೊತಿದ್ರು, ಇನ್ನ ಲಿಂಗಾಯಿತರು ಪಡಕೋತಾರು ಅಷ್ಟ.ಮನ್ಯಾಗ ವ್ಯವಸ್ಥೆ ಸರಿ ಇಲ್ಲಾ ಅಂತ ಬ್ಯಾರೇ ಮನಿ ಮಾಡಿದ್ರ, ಮಕ್ಕಳು ಮನೆತಾನದ ಹೆಸರು ಬಿಟ್ಟು ಬ್ಯಾರೇದಾರ ಹೆಸರು ಹೇಳಾಕಕ್ಕೇತಿ ? ಸಮಾಜಕ್ಕ ಬೇಕಾಗಿರೋದು ಬ್ಯಾರೇ ಧರ್ಮ ಅಲ್ಲ. ಶರಣರ ತತ್ವಗೋಳು. ಅವರ ಹೆಸರಿನ ಧರ್ಮ ಅಲ್ಲಾ. ಶರಣು ಅಂದ್ರ ಶರಣು ಶರಣಾರ್ಥಿ ಅಂದಿದ್ರಂತ ಬಸವಣ್ಣ.

– ಶಂಕರ ಪಾಗೋಜಿ

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.