ದುಡ್ಡಿನ ಮರಗಳು !
Team Udayavani, May 19, 2021, 2:17 PM IST
“ಅವರಿಗೇನಪ್ಪ, ಫಾರಿನಾದಾಗ ಬೇಕಾದಷ್ಟು ದುಡ್ಡು ಇರುತ್ತದೆ!
ಇಂಥ ಮಾತು ಇತ್ತೀಚೆಗೆ ಕೇಳಿ ಬರುತ್ತಿದೆಯೋ ಏನೊ ಗೊತ್ತಿಲ್ಲ.”ದುಡ್ಡೇನು, ಮರದಾಗ ಬೆಳಿತದ ಏನು?’ ಅನ್ನುವ ಮಾತಂತೂ ಸುಳ್ಳೇ ಆದರೂ ನಾನಿರುವ ಯು.ಕೆ. ಯ ಹತ್ತಾರು ಕಡೆ ನಿಜವಾಗಿಯೂ ದುಡ್ಡಿರುವ ಮರಗಳು ಇವೆ ಅಂದರೆ ಆಶ್ಚರ್ಯವಾಗಬಹುದು.
ಇಂಥ ಒಂದು ಮರವನ್ನು ಕಳೆದ ವಾರವಷ್ಟೇ ಯಾರ್ಕ್ ಶೈರ್ ಹತ್ತಿರದ ಪೀಕ್ ಡಿಸ್ಟ್ರಿಕ್ಟ್ ನ್ಯಾಷನಲ್ ಪಾರ್ಕ್‌ನ ಪಾಡ್ಲಿ ಕಣಿವೆಯಲ್ಲಿ ನೋಡಿದೆ. ಜುಳು ಜುಳು ಹರಿಯುವ, ಕಂದರಗಳಲ್ಲಿ ಧುಮುಕುವ ಬರ್ಬೇಜ್ ತೊರೆಯ ಅಂಚಿನಗುಂಟ ಸಾಗುವ Padley Gorge ಒಂದು ರಮಣೀಯ ಸ್ಥಳ. ಇಲ್ಲಿ ಪ್ರಕೃತಿ ಪ್ರತಿಯೊಂದು ಋತುವಿನಲ್ಲಿಯೂ ನವನ್ಮೆàಷಶಾಲಿಯಾಗಿ ರಂಗು ರಂಗಿನ ಉಡುಗೆಯನ್ನುಟ್ಟು ಶಿಶಿರದಲ್ಲಿ ಬಿಚ್ಚಿ ಕಂಗೊಳಿಸುತ್ತಾಳೆ.
ಹಳೆಯ ಕಾಲದಲ್ಲಿ ನಮ್ಮ ದೇಶದಲ್ಲಿದ್ದ ತಾಮ್ರದ ದುಡ್ಡಿನಂತೆ ಕಾಣುವ ನಾಣ್ಯಗಳು ತುಂಬಿ ಮರಗಳು ಇಂಗ್ಲೆಂಡ್, ಸ್ಕಾಟ್ಲಂಡ್ ಮತ್ತು ವೇಲ್ಸ್ ಪ್ರದೇಶಗಳಲ್ಲಿ ನೋಡಲು ಸಿಗುತ್ತವೆ. ಮರದ ಬೊಡ್ಡೆಯಲ್ಲಿ ಜನರು ಸುತ್ತಿಗೆಯಿಂದಲೋ ಕಲ್ಲಿನಿಂದಲೋ ಬಡಿದು ಹೂತ ನಾಣ್ಯಗಳಿವು. ಕೆಲವೆಡೆ ಹತ್ತೂಂಬತ್ತನೆಯ ಶತಮಾನದ ಫ್ಲೋರಿನ್ ಎನ್ನುವ ನಾಣ್ಯಗಳನ್ನೂ ಗುರುತಿಸಿದ್ದಾರೆ ಎಂದ ಮೇಲೆ ಇದೊಂದು ಬಹಳ ಹಳೆಯ ಪದ್ಧತಿಯಿರಬೇಕು. ಕೆಲವರು ಇದನ್ನು ಅಧಾರ್ಮಿಕ ಸಂಸ್ಕಾರ ಅನ್ನುವುದುಂಟು ಅಥವಾ ಮೂಢ ನಂಬಿಕೆಯೂ ಇರಬಹುದು.
ಇಂಥ ಮರಗಳಿಗೆ “ಇಚ್ಛಾ ವೃಕ್ಷ’ಗಳೆಂದೂ ಕರೆಯುತ್ತಾರೆ. ಕಲ್ಪತರುವಿನಂತೆ ತಮ್ಮ ಇಚ್ಛೆಯನ್ನು ಪೂರ್ತಿ ಮಾಡಲು ರೋಗಗ್ರಸ್ತರು ಅಡವಿಯಲ್ಲಿ ಹೋಗಿ ಬೇಡಿಕೊಂಡು ಮರದಲ್ಲಿ ನಾಣ್ಯ ಬಿಟ್ಟು ಬಂದರೆ ಅವರು ಗುಣಮುಖರಾಗುತ್ತರೆಂತಲೂ, ಅಕಸ್ಮಾತ್ತಾಗಿ ಯಾರಾದರೂ ಆ ನಾಣ್ಯವನ್ನು ಕಿತ್ತುಕೊಂಡು ಒಯ್ದರೆ ಅವರಿಗೆ ಆ ರೋಗ ಬಡಿಯುತ್ತದೆ ಎನ್ನುವ ಮೂಢ ನಂಬಿಕೆ ಅಥವಾ ವಿಶ್ವಾಸ ಈ ದೇಶದಲ್ಲೂ ಇತ್ತು ಎನ್ನಲು ಪುರಾವೆಗಳಿವೆ.
ಭಾರತದಲ್ಲಿಯೂ ನದಿ, ಬಾವಿಗಳಲ್ಲಿ ಕೆರೆಗಳಲ್ಲಿ ದುಡ್ಡನ್ನು ಹಾಕುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇದು ಮೂಢನಂಬಿಕೆ ಅನ್ನುವುದಕ್ಕಿಂತ ಸಂಪ್ರದಾಯ ಎನ್ನ ಬಹುದು. ಮೊದಲಿನಿಂದಲೂ ತಾಮ್ರದ ಪಾತ್ರೆಯಲ್ಲಿಯ ನೀರನ್ನು ಕುಡಿದರೆ ಆರೋಗ್ಯಕರವೆನ್ನುವ ಮಾತು ಕೇಳಿದ್ದೇವೆ. ಅದೇ ರೀತಿಯಲ್ಲಿ ಹಿಂದೆ ತಾಮ್ರದ ನಾಣ್ಯಗಳೇ ಹೆಚ್ಚು ಇದ್ದ ಕಾಲದಲ್ಲಿ ಅವನ್ನು ತಂದೆ ಅಥವಾ ತಾಯಿಯಿಂದ ಇಸಿದುಕೊಂಡ ದುಡ್ಡುಗಳನ್ನು ರೇಲ್ವೆ ಗಾಡಿಯ ಕಿಟಕಿಯಿಂದ ಎಸೆಯುವ ಮಕ್ಕಳಂತೆ ನಾನು ಸಹ ಕೃಷ್ಣಾ, ಮಲಪ್ರಭಾ, ತುಂಗಭದ್ರಾ ನದಿಗಳಲ್ಲಿ ಒಗೆದದ್ದು ನೆನಪಿದೆ. ಆದರೆ ಈಗಿನ ಕಾಲದ ದುಡ್ಡಿನ ಬಿಲ್ಲೆಗಳಲ್ಲಿ ಒಂದೆರಡನ್ನು ಬಿಟ್ಟರೆ ತಾಮ್ರದ ಅಂಶ ಇಲ್ಲವೇ ಇಲ್ಲ ಎನ್ನಬಹುದು.
ನಾನು ನೋಡಿದ ಒಂದು ದಾಖಲೆಯ ಪ್ರಕಾರ ಕಡಿಮೆ ಮೊತ್ತದ ಬಿಳಿ ನಾಣ್ಯಗಳಲ್ಲಿ 83 ಶತಾಂಶ ಕಬ್ಬಿಣ ಮತ್ತು ಬಾಕಿ 17ರಷ್ಟು ಕ್ರೋಮಿಯಂ ಇರುವುದರಿಂದ ಅದರಿಂದ ಆರೋಗ್ಯವರ್ಧನೆಗಿಂತ ಹಾನಿಯೇ ಆಗುತ್ತಿರಬೇಕು. ಇನ್ನುಳಿದವುಗಳಲ್ಲಿ ಸತು ಮತ್ತು ಅಲ್ಯುಮಿನಿಯಂ ಸೇರಿರುತ್ತದೆ. ಆದುದರಿಂದ ಇಂಥ ಪದ್ಧತಿಯನ್ನು ಕೈಬಿಡುವುದೇ ಒಳ್ಳೆಯದೇನೋ.
ಈಗಿನ ಇಂಗ್ಲೆಂಡಿನ “ತಾಮ್ರದ’ ಪೆನ್ನಿಗಳಲ್ಲಿ ನೂರರಲ್ಲಿ ಬರೀ 6 ರಷ್ಟು ಅಂಶ ಮಾತ್ರ ತಾಮ್ರವಾಗಿದ್ದು, ಉಳಿದದ್ದು “ಕೋಟೆಡ್ ಸ್ಟೀಲ್” ಇರುವುದರಿಂದ ಈ ದುಡ್ಡಿನ ಮರಗಳ ಫೋಟೋಗಳನ್ನು ನೋಡಿದರೆ ಅವೆಲ್ಲ ವಿವಿಧ ಲೋಹಗಳ ನಂಜಿನಿದ್ದ ಸತ್ತು ಕೊರಡಾಗಿರುವುದನ್ನು ಕಾಣುತ್ತೇವೆ. ನಾನು ಮೊನ್ನೆ ನೋಡಿದ ಮರವೂ ಹಾಗೆಯೇ ಇದೆ! ದುಡ್ಡು ದೊಡ್ಡಪ್ಪ ಆಗಿರದಿದ್ದರೂ ಮರಗಳಿಗೆ ವಿಷವಪ್ಪ!
ಡಾ| ಶ್ರೀವತ್ಸ ದೇಸಾಯಿ,
ಡೋಂಕಾ ಸ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.