ಮಂಕಿಪಾಕ್ಸ್ ಅಪಾಯಕಾರಿಯೇ? ಏನಿದು ಮಂಕಿಪಾಕ್ಸ್?
Team Udayavani, Jul 19, 2022, 10:20 AM IST
ಅಮೆರಿಕ, ಬ್ರಿಟನ್, ಸ್ಪೇನ್ ಸೇರಿದಂತೆ ಹಲವಾರು ದೇಶಗಳಲ್ಲಿ ಕಾಣಿಸಿಕೊಂಡಿದ್ದ ಮಂಕಿಪಾಕ್ಸ್, ಈಗ ಭಾರತಕ್ಕೂ ಬಂದಿದೆ. ವಿದೇಶದಿಂದ ಕೇರಳಕ್ಕೆ ಬಂದ ಇಬ್ಬರಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾ ಗಿದೆ. ಸದ್ಯ ಕೇರಳದ 14 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಏನಿದು ಮಂಕಿಪಾಕ್ಸ್?
ಇದೊಂದು ವಿರಳಾತಿ ವಿರಳ ರೋಗವಾ ಗಿದ್ದು, ಮಂಕಿಪಾಕ್ಸ್ ಎಂಬ ವೈರಸ್‌ನಿಂದ ಬರುತ್ತದೆ. ಈ ವೈರಸ್ ಕೂಡ ಸ್ಮಾಲ್ ಪಾಕ್ಸ್‌ನ ಕುಟುಂಬದ್ದೇ ಆಗಿದೆ. ಸ್ಮಾಲ್ ಪಾಕ್ಸ್‌ನಲ್ಲಿರುವ ಲಕ್ಷಣಗಳೇ ಮಂಕಿಪಾಕ್ಸ್ ನಲ್ಲೂ ಕಾಣಿಸಿಕೊಳ್ಳುತ್ತವೆ. ಆದರೆ ಇದು ಅಷ್ಟೇನೂ ಅಪಾಯಕಾರಿಯಲ್ಲದ ರೋಗ.
ಮಂಕಿಪಾಕ್ಸ್‌ನ ಲಕ್ಷಣಗಳೇನು?
ಜ್ವರ, ತಲೆನೋವು, ಸ್ನಾಯುಗಳ ಸೆಳೆತ, ಬೆನ್ನು ನೋವು, ಬಳಲಿಕೆ, ಚಳಿ, ಮುಖ, ಬಾಯಿ ಸೇರಿದಂತೆ ದೇಹದ ಎಲ್ಲ ಭಾಗ ಗಳಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುವುದು.
ಇದು ಅಪಾಯಕಾರಿಯೇ?
ಇಲ್ಲ. ಈ ರೋಗವನ್ನು ಗುಣಪಡಿಸಬಹುದು. ಇದರಿಂದ ಪ್ರಾಣಕ್ಕೆ ಅಪಾಯವೇನೂ ಆಗುವು ದಿಲ್ಲ. ಲಕ್ಷಣಗಳು ಕಾಣಿಸಿಕೊಂಡು ಎರಡು ವಾರ ಗಳ ಬಳಿಕ ದೇಹದಲ್ಲಿ ಗುಳ್ಳೆ ಕಾಣಿಸಿಕೊಳ್ಳಬ ಹುದು. ಹಾಗೆಯೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದು ಗುಣಮುಖರಾಗಬಹುದು.
ಇದಕ್ಕೆ ಔಷಧ ಇದೆಯೇ?
ಸದ್ಯ ಈ ಮಂಕಿಪಾಕ್ಸ್‌ಗೆ ಇಂಥದ್ದೇ ಔಷಧ ನೀಡಬೇಕು ಎಂದೇನೂ ಇಲ್ಲ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಪ್ರಕಾರ, ರೋಗ ಲಕ್ಷಣಗಳನ್ನು ಆಧರಿಸಿ ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಚರ್ಮದ ಮೇಲೆ ಉಂಟಾದ ಗುಳ್ಳೆಗಳನ್ನು ಆ್ಯಂಟಿಸೆಫ್ಟಿಕ್ ಮೂಲಕ ತೊಳೆಯಬಹುದು. ಹಾಗೆಯೇ ಮೆದುಬಟ್ಟೆ ಧರಿಸಬೇಕು, ಬಾಯಿಯಲ್ಲಿ ಅಲ್ಸರ್ ಆಗಿದ್ದರೆ, ವಾರ್ಮ್ ಸೆಲೈನ್ ಗಾಗಲ್ ಮಾಡಬೇಕು.
ಎಲ್ಲೆಲ್ಲಿ ಕಾಣಿಸಿಕೊಂಡಿದೆ?
ಸದ್ಯ ಭಾರತದಲ್ಲಿ ಕೇವಲ 2 ಪ್ರಕರಣಗಳು ಪತ್ತೆಯಾ ಗಿವೆ. ಒಬ್ಬರು ಯುಎಇಯಿಂದ ಮತ್ತೂಬ್ಬರು ದುಬಾೖಯಿಂದ ಆಗಮಿಸಿದ್ದಾರೆ. ಜು. 12 ಮತ್ತು ಜು. 18ರಂದು ಪತ್ತೆಯಾಗಿದೆ. ಸದ್ಯ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಗತ್ತಿನಾದ್ಯಂತ ಒಟ್ಟು 11 ಸಾವಿರಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗಿವೆ. ಸ್ಪೇನ್‌ನಲ್ಲೇ 2,500, ಅಮೆರಿಕದಲ್ಲಿ 1,469, ಇಂಗ್ಲೆಂಡ್‌ನಲ್ಲಿ 1,856 ಪ್ರಕರಣ ಪತ್ತೆಯಾಗಿವೆ. ಯೂರೋಪ್‌ನಲ್ಲೇ 7 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿವೆ.
ಭಾರತದಲ್ಲಿ ಏಕೆ ಕಾಣಿಸಿಕೊಂಡಿಲ್ಲ?
ಭಾರತದಲ್ಲಿ ಚಿಕ್ಕ ಮಕ್ಕಳು ಇರುವಾಗಲೇ ಎಲ್ಲರಿಗೂ ಸ್ಮಾಲ್‌ಪಾಕ್ಸ್ ಅನ್ನು ತಡೆಯುವ ಲಸಿಕೆಯನ್ನು ಹಾಕಲಾಗಿದೆ. ಹೀಗಾಗಿ ಈ ಮಂಕಿಪಾಕ್ಸ್ ವಿರುದ್ಧ ಹೋರಾಡುವ ಶಕ್ತಿ ಭಾರತೀಯರಿಗೆ ಇದೆ. ಇದರಿಂದ ಹೆಚ್ಚು ಪ್ರಕರಣ ಕಾಣಿಸಿಕೊಂಡಿಲ್ಲ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ ಕಾಣಿಸಿಕೊಂಡರೂ ಹೆದರಬೇಕಾಗಿಲ್ಲ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.