ಭಾರತದ ಆರ್ಥಿಕತೆಯ ಭದ್ರಕೋಟೆ ಎಂಎಸ್‌ಎಂಇ : ಇಂದು ವಿಶ್ವ ಎಂಎಸ್‌ಎಂಇ ದಿನ
Team Udayavani, Jun 27, 2022, 6:15 AM IST
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ) ದಿನವನ್ನು ಜೂನ್ 27ರಂದು ಆಚರಿಸಲಾಗುತ್ತದೆ. ಭಾರತೀಯ ಎಂಎಸ್‌ಎಂಇ ವಲಯವು ರಾಷ್ಟ್ರೀಯ ಆರ್ಥಿಕ ರಚನೆಯ ಬೆನ್ನೆಲು ಬಾಗಿದೆ ಮತ್ತು ಜಾಗತಿಕ ಆರ್ಥಿಕ ಆಘಾತ ಗಳು ಮತ್ತು ಪ್ರತಿಕೂಲಗಳನ್ನು ನಿವಾರಿಸಲು ಇದು ಸ್ಥಿತಿ ಸ್ಥಾಪಕತ್ವವನ್ನು ಒದಗಿ ಸುವ ಮೂಲಕ ಭಾರತೀಯ ಆರ್ಥಿಕತೆಯ ಭದ್ರ ಕೋಟೆ ಯಾಗಿ ಅವಿರತವಾಗಿ ಕಾರ್ಯ ನಿರ್ವಹಿಸುತ್ತಿದೆ.
ದೇಶದ ಭೌಗೋಳಿಕ ವಿಸ್ತಾರದಲ್ಲಿ ಸುಮಾರು 63.4 ಮಿಲಿಯ ಘಟಕಗಳೊಂದಿಗೆ ಎಂಎಸ್‌ಎಂಇ ಉತ್ಪಾದನ ಜಿಡಿಪಿಯ ಸುಮಾರು ಶೇ. 6.11 ಮತ್ತು ಸೇವಾ ಚಟುವಟಿಕೆಗಳಿಂದ ಜಿಡಿಪಿಯ ಶೇ. 24.63 ಮತ್ತು ಭಾರತದ ಉತ್ಪಾದನೆಯ ಶೇ. 33.4ರಷ್ಟು ಕೊಡುಗೆ ನೀಡುತ್ತಿವೆ. ಎಂಎಸ್‌ಎಂಇಗಳು ಸುಮಾರು 120 ಮಿಲಿಯ ಜನರಿಗೆ ಉದ್ಯೋಗ ಒದಗಿಸಲು ಸಮರ್ಥ ವಾಗಿವೆ ಮತ್ತು ಭಾರತದ ಒಟ್ಟಾರೆ ರಫ್ತಿನ ಶೇ. 45ರಷ್ಟು ಕೊಡುಗೆ ನೀಡುತ್ತಿವೆ. ವಲಯವು ಸತತವಾಗಿ ಶೇ. 10ಕ್ಕಿಂತ ಹೆಚ್ಚಿನ ಬೆಳವಣಿಗೆ ದರವನ್ನು ಕಾಯ್ದುಕೊಂಡಿದೆ. ಸುಮಾರು ಶೇ. 20 ಎಂಎಸ್‌ಎಂಇಗಳು ಗ್ರಾಮೀಣ ಪ್ರದೇಶಗಳಿಂದ ಹೊರಗಿವೆ. ಇದು ಎಂಎಸ್‌ಎಂಇ ವಲಯದಲ್ಲಿ ಗಮ ನಾರ್ಹವಾದ ಗ್ರಾಮೀಣ ಉದ್ಯೋಗಿಗಳ ನಿಯೋಜನೆಯನ್ನು ಸೂಚಿಸುತ್ತದೆ ಹಾಗೂ ಸುಸ್ಥಿರ ಮತ್ತು ಅಂತರ್ಗತ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಮತ್ತು ದೊಡ್ಡ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸುವಲ್ಲಿ ಈ ಉದ್ಯಮಗಳ ಪ್ರಾಮುಖ್ಯತೆಯ ಪ್ರದರ್ಶನ ವಾಗಿದೆ.
ಅಭಿವೃದ್ಧಿಗೆ 20 ಲಕ್ಷ ಕೋ. ರೂ. ಪ್ಯಾಕೇಜ್
ಕೇಂದ್ರ ಸರಕಾರವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಕಾರ್ಮಿಕರು, ಮಧ್ಯಮ ವರ್ಗ ಮತ್ತು ಇತರರು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತರಲು ಆತ್ಮನಿರ್ಭರ ಭಾರತ ಅಭಿಯಾನ (ಎಬಿಎ) ಅಡಿಯಲ್ಲಿ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಅನ್ನು ಘೋಷಿಸಿದೆ.
ಎಂಎಸ್‌ಎಂಇಗೆ ಹೊಸ ವ್ಯಾಖ್ಯಾನ (2020)
ಅತೀ ಸಣ್ಣ ಕೈಗಾರಿಕೆ: ಒಂದು ಕೋಟಿ ರೂಪಾಯಿ ವರೆಗಿನ ಹೂಡಿಕೆ ಮತ್ತು 5 ಕೋಟಿ ರೂಪಾಯಿ ವರೆಗಿನ ವಹಿವಾಟು ಹೊಂದಿರುವ ಕಂಪೆನಿ
ಸಣ್ಣ ಕೈಗಾರಿಕೆ: 10 ಕೋಟಿ ರೂಪಾಯಿ ವರೆಗಿನ ಹೂಡಿಕೆ ಹಾಗೂ 50 ಕೋಟಿ ರೂ. ವರೆಗಿನ ವಹಿವಾಟು ಹೊಂದಿರುವ ಕಂಪೆನಿ
ಮಧ್ಯಮ ಕೈಗಾರಿಕೆ: 20 ಕೋಟಿ ರೂಪಾಯಿ ವರೆಗಿನ ಹೂಡಿಕೆ ಹಾಗೂ 200 ಕೋಟಿ ರೂಪಾಯಿ ವರೆಗಿನ ವಹಿವಾಟನ್ನು ಹೊಂದಿರುವ ಕಂಪೆನಿ ಇದರ ಜತೆಗೆ ವಹಿವಾಟು ಮತ್ತು ಹೂಡಿಕೆ ಯ ಮಾನದಂಡಗಳು ಸಂಯೋಜಿತವಾಗಿವೆ.
ಉದ್ಯಮ ನೋಂದಣಿ ಮತ್ತು ನವೀಕರಣ
ಎಲ್ಲ ಪ್ರಸ್ತುತ ಉದ್ಯೋಗ್ ಆಧಾರ್ ನೋಂದಾಯಿಸಿದ ಘಟಕಗಳು ಉದ್ಯಮ್ ಆಧಾರ್ MSME ಪೋರ್ಟಲ್ https://udyamregistration.gov.in ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕು. 2021ರ ಎಪ್ರಿಲ್ 1ರಿಂದ ಉದ್ಯಮ ನೋಂದಣಿ ಸಂಖ್ಯೆಯನ್ನು ಹೊಂದಿರುವ ವ್ಯಕ್ತಿ ಅಥವಾ ಉದ್ಯಮವು ಪ್ರತೀ ಹಣಕಾಸು ವರ್ಷದ ಕೊನೆಯಲ್ಲಿ ಹೊಸದಾಗಿ ಆನ್‌ಲೈನ್‌ನಲ್ಲಿ ತನ್ನ ಮಾಹಿತಿಯನ್ನು ನವೀಕರಿಸುವುದು ಕಡ್ಡಾಯ. ಅಂತಹ ಉದ್ಯಮ ಅಥವಾ ವ್ಯಕ್ತಿಯು ತಮ್ಮ ಆದಾಯ ತೆರಿಗೆ ರಿಟರ್ನ್ ಮತ್ತು ಹಿಂದಿನ ಹಣಕಾಸು ವರ್ಷದ ಜಿಎಸ್‌ಟಿ ರಿಟರ್ನ್ ವಿವರಗಳನ್ನು ಮತ್ತು ಸ್ವಯಂ ಘೋಷಣೆಯ ಆಧಾರದ ಮೇಲೆ ಅಗತ್ಯವಿರುವ ಇತರ ಹೆಚ್ಚುವರಿ ಮಾಹಿತಿಯನ್ನು ನವೀಕರಿಸ ಬೇಕಾಗುತ್ತದೆ.
ಸರಕಾರದ ನೀತಿಗಳು ಎಂಎಸ್‌ಎಂಇ ವಲಯವನ್ನು ಹೇಗೆ ಸುಧಾರಿಸಬಹುದು
1. ವಲಯದೊಳಗೆ ಡಿಜಿಟಲ್ ಅಳ ವಡಿಕೆಗೆ ಉತ್ತೇಜನ ನೀಡುವುದು
2. ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿ ಸುವುದು
3. ಕೌಶಲದ ಸವಾಲುಗಳನ್ನು ಪರಿಹರಿ ಸುವುದು
4. ಜಿಎಸ್‌ಟಿ ಅನುಸರಣೆ ಸರಳವಾಗಿ ಸುವುದು
5. ಏಕಗವಾಕ್ಷಿ ತೆರವು ಸೌಲಭ್ಯದ ಮೂಲಕ ಎಲ್ಲ ವಿಧದ ಪರವಾನಿಗೆ ಮತ್ತು ಅನುಸರಣೆ ನಿಯಮಾವಳಿಗಳನ್ನು ಸರಾಗಗೊಳಿಸುವುದು
6. ಇ-ಕಾಮರ್ಸ್ ಮೂಲಕ ವಲಯವನ್ನು ವಿಶಾಲ ಮಾರುಕಟ್ಟೆಗಳಿಗೆ ಮಾರ್ಗದರ್ಶನ ಮಾಡುವ ಮಧ್ಯಸ್ಥಿಕೆಗಳನ್ನು ಮಾಡುವುದು
7. ಪರಿಣಾಮಕಾರಿ ನಿಧಿಯ ಮೂಲಕ ಹಣಕಾಸಿನ ನೆರವು
8. ಉತ್ತಮ ಮಾರುಕಟ್ಟೆ ಯೋಜನೆಗಳನ್ನು ಒದಗಿಸುವುದು.
– ಸಿಎ ನರಸಿಂಹ ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.