ವಿಜಯ ಬ್ಯಾಂಕ್‌ ಬೆಳೆಸಿದ ಮೂಲ್ಕಿ ಸುಂದರರಾಮ್‌ ಶೆಟ್ಟಿ


Team Udayavani, Apr 30, 2017, 8:02 AM IST

shetty.jpg

ಕೃಷಿಕರಿಂದ ಸ್ಥಾಪನೆಗೊಂಡು ವಿಜಯಾ ಬ್ಯಾಂಕನ್ನು ಬೃಹದಾಕಾರಕ್ಕೆ ಬೆಳೆಸಿ ರಾಷ್ಟ್ರೀಕರಣಗೊಳ್ಳುವಂತಹ ಉಚ್ಛಾ†ಯ ಸ್ಥಿತಿಗೆ ಪರಿವರ್ತಿಸಿದವರು ಈ ಬ್ಯಾಂಕಿನ ಅಧ್ಯಕ್ಷರಾಗಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ ಮೂಲ್ಕಿ ಸುಂದರರಾಮ್‌ ಶೆಟ್ಟಿ. ಇಂದು ಅವರ 102ನೇ ಜನ್ಮದಿನ.

ರೈತರ ಅಭ್ಯುದಯದ ದೃಷ್ಟಿಯಿಂದ ಹುಟ್ಟಿದ ವಿಜಯ ಬ್ಯಾಂಕ್‌ನಲ್ಲಿ ಆಸ್ತಿ ಕಳಕೊಂಡ ಯುವಕ- ಯುವತಿಯರಿಗೆ ಜಾತಿಮತ ಭೇದವಿಲ್ಲದೆ ಉದ್ಯೋಗ ಕೊಟ್ಟು ಸಮಾಜದಲ್ಲಿ ಉತ್ತಮ ಸ್ಥಾನಮಾನಕ್ಕೆ ಕಾರಣರಾಗಿ ವಿಜಯಾ ಬ್ಯಾಂಕಿನ ಕೀರ್ತಿಯನ್ನು ಶಿಖರಕ್ಕೇರಿಸಿದವರು ಮೂಲ್ಕಿ ಸುಂದರರಾಮ್‌ ಶೆಟ್ಟಿ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಎಲ್ಲೆಡೆ ಮೂಲ್ಕಿ ಸುಂದರರಾಮ್‌ ಶೆಟ್ಟಿಯವರು ಇಂದಿಗೂ ಮನೆಮಾತಾಗಿದ್ದಾರೆ. ಶ್ರೇಷ್ಠ ಚಿಂತಕರಾಗಿ, ದೂರದೃಷ್ಟಿಯ ಬ್ಯಾಂಕರ್‌ ಆಗಿ, ಸಾಹಸಮಯಿಯಾಗಿ, ನುಡಿದಂತೆ ನಡೆದ ಈ ಮಹಾನ್‌ ವ್ಯಕ್ತಿಯ ಬದುಕು ಮತ್ತು ಅವರು ಕೈಗೊಂಡ ಕೆಲಸಗಳ ಸಾಧನೆಗಳು ರೋಚಕವಾಗಿವೆ.

86 ವರ್ಷಗಳ ಹಿಂದೆ ಅಂದರೆ 1931ನೇ ಇಸವಿಯಲ್ಲಿ ಸಣ್ಣ ಬಂಡವಾಳದಿಂದ, ಕೆಲವು ಕೃಷಿಕರಿಂದ ಸ್ಥಾಪನೆಯಾದ ವಿಜಯ ಬ್ಯಾಂಕ್‌ ಇಂದು ಅತ್ಯದ್ಭುತ ಪ್ರಗತಿ ಸಾಧಿಸಿದೆ, ದೇಶದಾದ್ಯಂತ 2,030 ಶಾಖೆಗಳನ್ನೂ 15,000ಕ್ಕೂ ಮೇಲ್ಪಟ್ಟು ಸಿಬಂದಿಯನ್ನು ಹೊಂದಿದ್ದು ಮಹದೆತ್ತರಕ್ಕೆ ಬೆಳೆದು ನಿಂತಿದೆ. ಒಂದೊಮ್ಮೆ ಸಣ್ಣದಾಗಿದ್ದ ಈ ಬ್ಯಾಂಕನ್ನು ಬೃಹದಾಕಾರಕ್ಕೆ ಬೆಳೆಸಿ ರಾಷ್ಟ್ರೀಕರಣವಾಗುವ ಮಟ್ಟಿಗೆ ಪರಿವರ್ತಿಸಿದವರು ಈ ಬ್ಯಾಂಕಿನ ಅಧ್ಯಕ್ಷರಾಗಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ ಮೂಲ್ಕಿ ಸುಂದರರಾಮ್‌ ಶೆಟ್ಟಿ. ಸುಂದರರಾಮ್‌ ಶೆಟ್ಟಿಯವರು ಹಿರಿಯಡ್ಕ ಬೊಮ್ಮರಬೆಟ್ಟು ಮುದ್ದಣ್ಣ ಶೆಟ್ಟಿ ಮತ್ತು ಮೂಲ್ಕಿ ಕಕ್ವಗುತ್ತು ಸೀತಮ್ಮ ಶೆಟ್ಟಿ ದಂಪತಿಗೆ ಒಬ್ಬನೇ ಮಗನಾಗಿ 1915ರ ಎಪ್ರಿಲ್‌ 30ರಂದು ಜನಿಸಿದರು. 1915ರಿಂದ 1981ರವರೆಗೆ ಅವರ ಜೀವಿತಾವಧಿಯಲ್ಲಿ ಅವರು ಗೈದ ಸಾಧನೆ, ಸತ್ಕಾರ್ಯ ಮಹಾನುಭಾವರಿಗಷ್ಟೇ ಸಾಧ್ಯವಾಗುವಂಥದ್ದು. 

1931ನೇ ಇಸವಿಯಲ್ಲಿ ಸ್ಥಾಪನೆಯಾದ ವಿಜಯಾ ಬ್ಯಾಂಕಿಗೆ ಮದ್ರಾಸ್‌ ಮತ್ತು ಮೈಸೂರು ರಾಜ್ಯಗಳ ಮಾಜಿ ಸಚಿವ ಎ. ಬಾಲಕೃಷ್ಣ ಶೆಟ್ಟಿಯವರು ಸ್ಥಾಪಕಾಧ್ಯಕ್ಷರಾಗಿ 1936ರವರೆಗೆ ಕಾರ್ಯನಿರ್ವಹಿಸಿದರು.  1937ರಲ್ಲಿ ಮಂಜಯ್ಯ ಹೆಗ್ಡೆಯವರು ಅಧ್ಯಕ್ಷರಾಗಿ ಸುಮಾರು 16 ವರ್ಷಗಳ ಕಾಲ ಬ್ಯಾಂಕನ್ನು ಮುನ್ನಡೆಸಿದರು. 1953ರಿಂದ 1961ರವರೆಗೆ ನ್ಯಾಯವಾದಿ ಕೆ. ಸುಂದರ್‌ರಾಮ್‌ ಶೆಟ್ಟಿಯವರು ಅಧ್ಯಕ್ಷರಾಗಿದ್ದರು. 1956ರಲ್ಲಿ ಬ್ಯಾಂಕ್‌ ತನ್ನ ರಜತ ಮಹೋತ್ಸವವನ್ನು ಆಚರಿಸಿತು. ಆದರೆ ಈ ವರೆಗಿನ ಅವಧಿಯಲ್ಲಿ ಬ್ಯಾಂಕಿನ ಅಭಿವೃದ್ಧಿ ಬಹಳ ಸೀಮಿತವಾಗಿತ್ತು.

1961ರಲ್ಲಿ ಡಾ| ಬಾಳಪ್ಪ ಶೆಟ್ಟಿಯವರು ಅಧ್ಯಕ್ಷರಾದರು. ಆಗ ಬ್ಯಾಂಕಿನ 21 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದವು. ಅನಂತರ ಮೂಲ್ಕಿ ಸುಂದರರಾಮ್‌ ಶೆಟ್ಟಿಯವರು 1962ನೇ ಇಸವಿಯಲ್ಲಿ ಬ್ಯಾಂಕಿನ ಗೌರವಾಧ್ಯಕ್ಷರಾಗಿ ನೇಮಕಗೊಂಡು ಆಧುನಿಕ ವಿಜಯಾ ಬ್ಯಾಂಕಿನ ವಿಜಯಶಿಲ್ಪಿಯಾಗಿ ಮೂಡಿಬಂದರು. ಅವರು ಗೌರವ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 1963 ಹಾಗೂ 1967ನೇ ಇಸವಿಯ ನಡುವೆ 42 ಶಾಖೆಗಳನ್ನು ಒಳಗೊಂಡ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಮೂಲದ ಒಂಬತ್ತು ಸಣ್ಣ ಸಣ್ಣ ಬ್ಯಾಂಕುಗಳನ್ನು ವಿಜಯಾ ಬ್ಯಾಂಕಿನೊಂದಿಗೆ ವಿಲಯನಗೊಳಿಸಿಕೊಂಡರು. ತನ್ಮೂಲಕ ಆಗಿನ ಅತ್ಯಂತ ಸ್ಪರ್ಧಾತ್ಮಕ ಬ್ಯಾಂಕಿಂಗ್‌ ವಲಯದಲ್ಲಿ ವಿಜಯಾ ಬ್ಯಾಂಕಿನ ಸ್ಥಾನವನ್ನು ಸುಧಾರಿಸಲು ನೆರವಾದರು.

1969ರ ಜುಲೈ ತಿಂಗಳಿನಲ್ಲಿ ದೇಶದ 14 ದೊಡ್ಡ ದೊಡ್ಡ ಖಾಸಗೀ ಬ್ಯಾಂಕ್‌ಗಳು ರಾಷ್ಟ್ರೀಕರಣಗೊಂಡ ಸಮಯದಲ್ಲಿ ರಾಷ್ಟ್ರೀಕರಣವಾಗದ ವಿಜಯಾ ಬ್ಯಾಂಕಿನ ಪೂರ್ಣಾವಧಿಯ ಅಧ್ಯಕ್ಷರಾಗಿ 1969 ರಿಂದ 1979ರ ತನಕ ಸೇವೆ ಸಲ್ಲಿಸಿದ ಸುಂದರರಾಮ್‌ ಶೆಟ್ಟಿಯವರು ಬ್ಯಾಂಕಿನ ಅತ್ಯದ್ಭುತ ಯಶಸ್ಸಿಗೆ ಕಾರಣಕರ್ತರಾದರು. ಅವರ ಅಧ್ಯಕ್ಷಾವಧಿ ಬ್ಯಾಂಕಿನ ಇತಿಹಾಸದಲ್ಲಿ ಸುವರ್ಣಾಕ್ಷರದಿಂದ ಬರೆಯುವಂತಹದು. ಬ್ಯಾಂಕಿನ ಅಭಿವೃದ್ಧಿಯ ಅನುಕೂಲತೆಗಾಗಿ ಬ್ಯಾಂಕಿನ ಪ್ರಧಾನ ಕಚೇರಿಯನ್ನು ಮಂಗಳೂರಿನಿಂದ ಬೆಂಗಳೂರಿಗೆ ಸ್ಥಳಾಂತರಿಸಿದ ಸುಂದರರಾಮ್‌ ಶೆಟ್ಟಿಯವರು ಈ ಅವಧಿಯಲ್ಲಿ 550 ಹೊಸ ಬ್ಯಾಂಕ್‌ ಶಾಖೆಗಳನ್ನು ದೇಶಾದ್ಯಂತ ತೆರೆದು ಬ್ಯಾಂಕಿನ ಸಿಬಂದಿ ಸಂಖ್ಯೆಯನ್ನು 9,000ಕ್ಕೆ ಏರಿಸಿದರು. ದಕ್ಷಿಣಕನ್ನಡ ಜಿಲ್ಲೆಯ ಸಣ್ಣ ಬ್ಯಾಂಕ್‌ ಎಂಬುದಾಗಿ ಪರಿಗಣಿಸಲ್ಪಡುತ್ತಿದ್ದ ವಿಜಯ ಬ್ಯಾಂಕ್‌ನ ಶಾಖೆಗಳನ್ನು ದೇಶದ ಉದ್ದಗಲಕ್ಕೂ ಪಸರಿಸಿ, ಬೆಳೆಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದು ಸುಂದರರಾಮ್‌ ಶೆಟ್ಟಿಯವರ ಬಹುದೊಡ್ಡ ಸಾಧನೆ. ಭೂ ಸುಧಾರಣಾ ಕಾಯ್ದೆ ಅನ್ವಯ ದಕ್ಷಿಣಕನ್ನಡದಲ್ಲಿ ಸಾವಿರಾರು ಜನ ತಮ್ಮ ಕೃಷಿ ಭೂಮಿ ಕಳೆದುಕೊಂಡು ಯಾವ ಆದಾಯದ ಮೂಲವೂ ಇಲ್ಲದೆಯೇ ನಿರ್ಗತಿಕರಾದಾಗ ಸಂಕಷ್ಟದಲ್ಲಿದ್ದ ಅಂತಹ ಕುಟುಂಬಗಳಿಗೆ, ಬಡ ಕುಟುಂಬಗಳ ಯುವಕ-ಯುವತಿಯರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಬ್ಯಾಂಕಿನಲ್ಲಿ ಉದ್ಯೋಗ ನೀಡಿದ್ದರ ಫ‌ಲವಾಗಿ ಅವರೆಲ್ಲರ ಆರ್ಥಿಕ ಚೈತನ್ಯ ಪಡೆಯುವಲ್ಲಿ ಸುಂದರರಾಮ್‌ ಶೆಟ್ಟಿಯವರು ಮಹತ್ತರ ಪಾತ್ರ ವಹಿಸಿದರು. ಹಲವಾರು ಕುಗ್ರಾಮಗಳಲ್ಲಿ ಕೂಡ ವಿಜಯಾ ಬ್ಯಾಂಕಿನ ಶಾಖೆಗಳನ್ನು ತೆರೆದು ಕೃಷಿವಲಯದಲ್ಲಿ ಗ್ರಾಮೀಣ ಜನರ ಬದುಕು ಹಸನಾಗುವುದರಲ್ಲಿ ನೆರವಾಗಿ ದೀನರ ಬದುಕಿನ ಬಗ್ಗೆ ತಮಗಿದ್ದ ಕಾಳಜಿಯಿಂದ ಸಮಾಜವನ್ನು ಎತ್ತಿ ಹಿಡಿಯುವ ಶಕ್ತಿಯಾದರು. ಸುಂದರರಾಮ್‌ ಶೆಟ್ಟಿಯವರು ಅಜಾನುಬಾಹು, ಸುರೂಪಿ. ಅವರ ಒಟ್ಟು ವ್ಯಕ್ತಿತ್ವದಲ್ಲಿ ಘನತೆ, ಗಾಂಭೀರ್ಯಗಳು ಅಚ್ಚೊತ್ತಿದ್ದವು. ಯಾರಿಗೇ ಆದರೂ ಅವರ ಮೊದಲ ಭೇಟಿಯಲ್ಲಿಯೇ ಮಹಾನ್‌ ವ್ಯಕ್ತಿಯನ್ನು ಕಂಡ ಅನುಭೂತಿಯಾಗುತ್ತಿತ್ತು. ಈ ಕಾಲದಲ್ಲಿ ಅನೇಕರು ಹೇಗೋ ದಕ್ಕಿಸಿಕೊಂಡ ಸ್ಥಾನದಿಂದ ದೊಡ್ಡವರು ಅನಿಸಿಕೊಳ್ಳುತ್ತಾರೆ. ಆದರೆ ಸುಂದರರಾಮ್‌ ಶೆಟ್ಟಿಯವರ ವ್ಯಕ್ತಿತ್ವದ ಹಿರಿಮೆಯಿಂದ ಸಮಾಜದ ಗೌರವಯುತ ಸ್ಥಾನಮಾನಗಳು ಅವರನ್ನು ಅರಸಿಕೊಂಡು ಬರುತ್ತಿದ್ದವು.

ಸ್ಥಿತಪ್ರಜ್ಞ ಸುಂದರ್‌ರಾಮ್‌ ಶೆಟ್ಟಿ: ಮಣಿಪಾಲದ ಪೈ ಕುಟುಂಬದ ಶ್ರೇಷ್ಠ ವ್ಯಕ್ತಿಗಳಾದ ಡಾ| ಟಿ.ಎಂ.ಎ. ಪೈ, ಟಿ. ಎ. ಪೈ ಮತ್ತು ಕೆ. ಕೆ. ಪೈ ಅವರೊಂದಿಗೆ ಅತ್ಯಂತ ಅನ್ಯೋನ್ಯ ಸಂಬಂಧವಿಟ್ಟುಕೊಂಡಿದ್ದ ಸುಂದರರಾಮ್‌ ಶೆಟ್ಟಿಯವರು ಟಿ. ಎ. ಪೈ ಮತ್ತು ಕೆ.ಕೆ. ಪೈ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದರು. ಇಂತಹ ಅನ್ಯೋನ್ಯತೆಯ ಸಂದರ್ಭದಲ್ಲಿ ಒಮ್ಮೆ ಅಗ್ನಿ ಪರೀಕ್ಷೆಯನ್ನು ಅವರು ಎದುರಿಸಬೇಕಾಯಿತು. ತುರ್ತು ಪರಿಸ್ಥಿತಿಯ ಅತಿರೇಕಗಳಿಂದ ಪ್ರಧಾನಿ ಪಟ್ಟವನ್ನು ಕಳಕೊಂಡು ಮರಳಿ ಪ್ರಧಾನಿಯಾಗಲು ಪ್ರಯತ್ನಿಸುತ್ತಿದ್ದ ಇಂದಿರಾ ಗಾಂಧಿಯವರು 1980ರ ಲೋಕಸಭಾ ಚುನಾವಣೆಯ ತಯಾರಿ ನಡೆಸುವಾಗ ಸುಂದರರಾಮ್‌ ಶೆಟ್ಟಿಯವರನ್ನು ಉಡುಪಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿಸಲು ಆಗಿನ ಕರ್ನಾಟಕದ ಮುಖ್ಯಮಂತ್ರಿ ಗುಂಡುರಾಯರ ಮೂಲಕ ಸೂಚನೆ ಕಳುಹಿಸಿದರು. ಇಂದಿರಾ ಕಾಂಗ್ರೆಸ್‌ನ ವಿರುದ್ಧ  ಟಿ. ಎ. ಪೈಯವರು ಉಡುಪಿ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಲಿದ್ದು, ಅವರನ್ನು ಎದುರಿಸಲು ಸುಂದರರಾಮ್‌ ಶೆಟ್ಟಿಯವರೇ ಸೂಕ್ತ ವ್ಯಕ್ತಿ ಎಂಬುದು ಇಂದಿರಾ ಗಾಂಧಿಯವರ ಅಭಿಪ್ರಾಯವಾಗಿತ್ತು. ಗೆದ್ದರೆ ಮುಂದೆ ಅಧಿಕಾರಕ್ಕೆ ಬರಬಹುದಾದ ಕೇಂದ್ರದ ತನ್ನ ಮಂತ್ರಿ ಮಂಡಳದಲ್ಲಿ ಸ್ಥಾನ ನೀಡುವುದಾಗಿಯೂ ಸೂಚನೆ ನೀಡಿದ್ದರು. ಆದರೆ ಸುಂದರರಾಮ್‌ ಶೆಟ್ಟಿಯವರು ಸ್ಥಿಪ್ರಜ್ಞತೆ ಪ್ರದರ್ಶಿಸಿದ, ತನ್ನ ಮಿತ್ರ ಟಿ.ಎ. ಪೈಯವರ ಎದುರು ತಾನು ಸ್ಪರ್ಧಿಸಲಾರೆ ಎಂದು ಇಂದಿರಾರ ಸೂಚನೆಯನ್ನು ನಯವಾಗಿ ತಿರಸ್ಕರಿಸಿದರು. ಬಹುಷಃ ಆಗ ಇಂದಿರಾ ಗಾಂಧಿಯವರ ಚುನಾವಣಾ ಕೊಡುಗೆಯನ್ನು ಸ್ವೀಕರಿಸಿದ್ದರೆ ಶೆಟ್ಟಿಯವರು ಕೇಂದ್ರ ಮಂತ್ರಿ ಮಂಡಳ ಸೇರಿ ಚಟುವಟಿಕೆಯಿಂದಿದ್ದು ಇನ್ನಷ್ಟು ಕಾಲ ಬದುಕಿ ಜನಸೇವೆ ಮಾಡುವಲ್ಲಿ ಸಫ‌ಲರಾಗುತ್ತಿದ್ದರು. ಬ್ಯಾಂಕಿನಿಂದ ನಿವೃತ್ತರಾಗಿ ಸುಮ್ಮನೆ ಕಾಲ ಕಳೆಯಲಾಗದ ಈ ವ್ಯಕ್ತಿ ನವಂಬರ್‌ 1, 1981ರಂದು ತಮ್ಮ 66ನೇ ವಯಸ್ಸಿನಲ್ಲಿ ಅಮೆರಿಕದಲ್ಲಿ ನಡೆದ ಒಂದು ಸಣ್ಣ ಶಸ್ತ್ರಚಿಕಿತ್ಸೆ ಸಫ‌ಲವಾಗದೆ ವಿಧಿವಶರಾದರು.

ಸುಂದರರಾಮ್‌ ಶೆಟ್ಟಿಯವರಿಂದ ಜೀವನದ ದಾರಿ ಕಂಡುಕೊಂಡ ಸಾವಿರಾರು ಮನೆಗಳಿವೆ. ಈ ಮಹಾ ಸಾಧಕನ ಮಹತ್ಕಾರ್ಯಗಳು, ಅವರ ಆದರ್ಶಗಳ ಅರಿವನ್ನು ಇಂದಿನ ಮತ್ತು ಮುಂದಿನ ತಲೆಮಾರಿಗೆ ಮೂಡಿಸುವ ಸಲುವಾಗಿ ಅವರ ಹುಟ್ಟೂರು ಮೂಲ್ಕಿಯ ಕೊಲಾ°ಡಿನಲ್ಲಿ ಸುಂದರರಾಮ್‌ ಶೆಟ್ಟಿ ಸ್ಮಾರಕ ಸಮುಚ್ಚಯವನ್ನು ಅವರ ಅಭಿಮಾನಿಗಳು ನಿರ್ಮಿಸುತ್ತಿದ್ದಾರೆ. 

– ಸತ್ಯೋದಯ ಹೆಗ್ಡೆ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.