ಪ್ಲಾಸ್ಟಿಕ್‌ ತಿಂದು ಕರಗಿಸಿಕೊಳ್ಳಲಿದೆ ಅಣಬೆ! 


Team Udayavani, Sep 16, 2021, 6:30 AM IST

ಪ್ಲಾಸ್ಟಿಕ್‌ ತಿಂದು ಕರಗಿಸಿಕೊಳ್ಳಲಿದೆ ಅಣಬೆ! 

1950ರ ಈಚೆಗೆ ನಾವು ಸೃಷ್ಟಿಸಿರುವುದು ಬರೋಬ್ಬರಿ 9 ಬಿಲಿ ಯನ್‌ ಟನ್‌ ಪ್ಲಾಸ್ಟಿಕ್‌. ಅದರಲ್ಲಿ ಕೇವಲ ಶೇ. 9ರಷ್ಟು ಮಾತ್ರ ಮರುಬಳಕೆಯಾಗಿದೆ. ಆದರೂ ಅದು ಮತ್ತೆ ಪ್ಲಾಸ್ಟಿಕ್‌ ರೂಪದಲ್ಲೇ ಕಾಣಿಸಿಕೊಂಡಿರುವುದರಿಂದ ಅದನ್ನು ನಾವು ಲೆಕ್ಕದಲ್ಲಿ ಪರಿಗಣಿಸುವಂತೆಯೇ ಇಲ್ಲ. ಶೇ. 12 ಪ್ಲಾಸಿಕ್‌ನ್ನು ನಾವೇ ಸುಟ್ಟು ಅದರ ವಿಷ ಗಾಳಿಯನ್ನು ಇಂದಿಗೂ ಸೇವಿಸುತ್ತಿದ್ದೇವೆ. ಸಮುದ್ರದೊಳಗಿರುವ ಶೇ. 93 ಮೀನುಗಳ ಹೊಟ್ಟೆಯೊಳಗೆ ಪ್ಲಾಸ್ಟಿಕ್‌ ಸೇರಿದೆ.

ಆದರೂ ನಾವೇನು ಮೀನು ತಿನ್ನುವುದನ್ನು ಕಡಿಮೆ ಮಾಡಿಲ್ಲ. ಇನ್ನೂ ನಿಖರವಾಗಿ ಹೇಳಬೇಕೆಂದರೆ ಇನ್ನು 20 ವರ್ಷಗಳಲ್ಲಿ ಯಾವುದೇ ಸಮು ದ್ರದಲ್ಲಿ ಮೀನೇ ಉಳಿದಿರುವುದಿಲ್ಲ. ಅಲ್ಲಿ ನಮಗೆ ಸಿಗಬಹುದಾದ ಏಕೈಕ ವಸ್ತು ಪ್ಲಾಸ್ಟಿಕ್‌ ಆಗಿರುತ್ತದೆ. ಮನುಷ್ಯರಾದ ನಾವು ಪ್ರತೀ ವರ್ಷ 400 ಮಿ. ಟನ್‌ ಪ್ಲಾಸ್ಟಿಕ್‌ ತಯಾರಿಸಿಕೊಂಡೇ ಬಂದಿದ್ದೇವೆ. ಈ ಸಂಖ್ಯೆ ಇನ್ನು 20 ವರ್ಷಗಳಲ್ಲಿ ಎರಡರಷ್ಟಾಗಲಿದೆ!

ಈ ಎಪ್ರಿಲ್‌ನಲ್ಲಿ ಒಂದು ಸುದ್ದಿ ಹರಿದಾಡಿತ್ತು. ಪೆಸ್ತಾಲೊಟಿಯೊಪ್ಸಿಸ್‌ ಮೈಕ್ರೋನ್ಪೊರಾ ಹೆಸರಿನ ಅಣಬೆ ಪ್ಲಾಸ್ಟಿಕ್‌ನಲ್ಲಿ ಅತ್ಯಂತ ಸಾಮಾನ್ಯ ಎನಿಸಿಕೊಂಡಿರುವ ಪಾಲಿಯುರಿಥೇನ್‌ ಅನ್ನು ಸಾವಯವ ವಸ್ತು (ಆರ್ಗಾನಿಕ್‌ ಕಾಂಪೋನೆಂಟ್) ಆಗಿ ಪರಿವರ್ತಿಸಬಹುದು ಎಂದು ಹೇಳಲಾಗಿತ್ತು. ಭೂಮಿಯೊಳಗಿನ ಅಥವಾ ಮರದೊಳಗಿನ ಶಿಲೀಂಧ್ರಗಳಿಂದ ಅಣಬೆಗಳು ಹುಟ್ಟಿಕೊಳ್ಳುತ್ತವೆ. ಸತ್ತ ಸಸ್ಯಗಳನ್ನು ಸುಲಭವಾಗಿ ಜೀರ್ಣವಾಗಿಸಿಕೊಳ್ಳುವ ಶಕ್ತಿ ಈ ಅಣಬೆಗಳಿಗಿರುತ್ತದೆ. ನಿರ್ಮಾಣ ಸಾಮಗ್ರಿಗಳಿಂದ ಹಿಡಿದು ಜೈವಿಕ ಇಂಧನದವರೆಗೆ, ಶಿಲೀಂಧ್ರಗಳ ಗುಪ್ತ ಸಾಮರ್ಥ್ಯ ಮಾತ್ರ ಇಂದಿಗೂ ಸಂಶೋಧಕರಿಗೆ ಸಂಪೂರ್ಣವಾಗಿ ಅರಿವಿಗೆ ಬಾರದ ಚಿದಂಬರ ರಹಸ್ಯ ಎಂದೇ ಹೇಳಬಹುದು. ಈವರೆಗೆ ಸುಮಾರು 2 ಮಿಲಿಯನ್‌ನಿಂದ 4 ಮಿಲಿಯನ್‌ ಅಷ್ಟು ಶಿಲೀಂಧ್ರ ಜಾತಿಗಳಿವೆ ಎಂದು ಅಂದಾಜಿಸಲಾಗಿದೆಯಾದರೂ ಅವುಗಳ ನಿಜ ಲೆಕ್ಕಾಚಾರ ಮಾತ್ರ ಅಂತ್ಯವಿಲ್ಲದ್ದು. ಈ ರೀತಿಯ ಅಣಬೆಗಳು ನಮ್ಮಿಂದ ಕರಗಿಸಲಾಗದ ಪ್ಲಾಸ್ಟಿಕ್‌ ಅನ್ನೂ ಕರಗಿಸಿ ಬೆಳೆಯುತ್ತವೆ ಎನ್ನುವ ಕುತೂಹಲಕಾರಿ ವಿಚಾರವೊಂದು ಹೊರಬಿದ್ದಿದೆ.

ಈ ಪ್ಲಾಸ್ಟಿಕ್‌ ತಿನ್ನುವ ಅಣಬೆಗಳ ಬಗ್ಗೆ ಇದೇ ಮೊದಲ ಬಾರಿಯಲ್ಲ; ಬಹಳ ಹಿಂದಿನಿಂದಲೂ ಸಂಶೋಧನೆಗಳು ನಡೆದು ಕೊಂಡು ಬಂದಿವೆ. ವಿಶೇಷ ಎಂದರೆ ಕೆಲವು ಅಪರೂಪದ ಜಾತಿಯ ಅಣಬೆಗಳ ಜತೆ ಈಗ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಕೆಲವು ಅಣಬೆಗಳೂ ಈ ಪ್ಲಾಸ್ಟಿಕ್‌ ತನ್ನುವ ಶಕ್ತಿ ಹೊಂದಿವೆಯಂತೆ. 2011ರಲ್ಲಿ ಯೇಲ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಮೆಜಾನ್‌ ಮಳೆಕಾಡಿನಲ್ಲಿ ಪೆಸ್ಟಲೋಟಿಯೊಪ್ಸಿಸ್‌ ಮೈಕ್ರೊನ್ಪೊರಾ ಹೆಸರಿನ ಒಂದು ಅಪರೂಪದ ಅಣಬೆ ಜಾತಿಯನ್ನು ಕಂಡುಹಿಡಿದರು.  ಪಾಲಿಯುರೆಥೇನ್‌ ಮೇಲೆ  ಬೆಳೆಯ ಬಹುದಾದ ಹಾಗೂ ಅದನ್ನೇ ತನ್ನ ಬೆಳವಣಿಗೆಗೆ ಇಂಗಾಲದ ಮೂಲವಾಗಿ ಬಳಸಿಕೊಳ್ಳಬಲ್ಲ ಅಣಬೆ ಅದಾಗಿತ್ತು. ವಿಶೇಷವೆಂದರೆ ಆ ಅಣಬೆ ಆಮ್ಲಜನಕವಿಲ್ಲದ ವಾತಾವರಣದಲ್ಲಿಯೂ ಬದುಕಬಲ್ಲದು! ಯಾವ ಪ್ರಮಾಣದಲ್ಲಿ ಈ ಅಣಬೆ ಪ್ಲಾಸ್ಟಿಕ್‌ ಅನ್ನು ಜೀರ್ಣ ಮಾಡಬಹುದು ಎಂದು ಪರೀಕ್ಷಿಸಿದಾಗ ಇನ್ನೂ ದೊಡ್ಡದೊಂದು ಆಶ್ಚರ್ಯ ಎದುರಾಗಿದೆ. ಕೇವಲ ಎರಡೇ ತಿಂಗಳಲ್ಲಿ ಅಣಬೆ ಪ್ಲಾಸ್ಟಿಕ್‌ ಅನ್ನು ತಿಂದು ಮುಗಿಸಿದೆ!

2014ರಲ್ಲಿ ಲಿವಿನ್‌ ಸ್ಟುಡಿಯೋದ ಡಿಸೈನರ್‌ ಕ್ಯಾಥರೀನಾ ಉಂಗರ್‌ ಮತ್ತು ನೆದರ್ಲೆಂಡಿನ ಉಟ್ರೆಕ್ಟ್ ವಿಶ್ವವಿದ್ಯಾನಿಲಯದ ಮೈಕ್ರೋಬಯಾಲಜಿ ಬೋಧನಾ ವಿಭಾಗದ ಸಹಯೋಗದಲ್ಲಿ ಎರಡು ಸಾಮಾನ್ಯ ಅಣಬೆಗಳ ಮೈಸಿಲಿಯಮ್‌ (ಸಸ್ಯದ ಬೇರಿನ ವ್ಯವಸ್ಥೆಯನ್ನು ಹೋಲುವ ಅಣಬೆಯ ಸಸ್ಯಕ ಭಾಗ) ಅನ್ನು ಬಳಸಿ ಸಂಶೋಧನೆಯೊಂದನ್ನು ನಡೆಸಿದರು. ಸಿಂಪಿ ಅಣಬೆ (ಪ್ಲೆರೋಟಸ್‌ ಒಸ್ಟ್ರೀಟಸ್‌ ) ಮತ್ತು ಸ್ಕಿಜೋಫಿಲಮ್‌ ಕಮ್ಯೂನ್‌ (ಸ್ಲಿಟ್‌ ಗಿಲ್‌ ಅಣಬೆ)ನ ಮೈಸಿಲಿಯಮ್‌ ಅನ್ನು ಯುವಿ- ಸಂಸ್ಕರಿಸಿದ ಪ್ಲಾಸ್ಟಿಕ್‌ ತುಂಬಿದ ಪಾಟ್‌ ಒಂದರಲ್ಲಿ ಹಾಕಲಾಯಿತು. ಆ ಪಾಟ್‌ನಲ್ಲಿ ಕೆಲವೇ ಕೆಲವು ತಿಂಗಳುಗಳಲ್ಲಿ ಮೈಸಿಲಿಯಮ್‌ ಭರಿತ ಅಣಬೆಗಳು ಹುಟ್ಟಿಕೊಂಡಿದ್ದವು. ಅದರಲ್ಲಿದ್ದ ಪ್ಲಾಸ್ಟಿಕ್‌ ಸಂಪೂರ್ಣವಾಗಿ ಜೀರ್ಣವಾಗಿತ್ತು.

ಅದೇ ರೀತಿ 2017ರಲ್ಲಿ ವಿಜ್ಞಾನಿಗಳು ತಂಡವು ಪಾಕಿಸ್ತಾನದ ಸಾಮಾನ್ಯ ನಗರವೊಂದರ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಪ್ಲಾಸ್ಟಿಕ್‌ ತಿನ್ನುವ ಅಣಬೆಯೊಂದನ್ನು ಪತ್ತೆ ಹಚ್ಚಿದ್ದಾರೆ. ಆಸ್ಪರ್ಗಿಲ್ಲಸ್‌ ಟ್ಯೂಬಿಂಜೆನ್ಸಿಸ್‌ ಹೆಸರಿನ ಅಣಬೆಯು ಕೇವಲ ಎರಡು ತಿಂಗಳ ಅವಧಿಯಲ್ಲಿ ಪಾಲಿಯೆಸ್ಟರ್‌ ಪಾಲಿಯುರೆಥೇನ್‌ ಅನ್ನು ಸಣ್ಣ ಸಣ್ಣ ತುಂಡುಗಳಾಗಿ ವಿಭಜಿಸಿರುವುದು ಕಂಡುಬಂದಿದೆ.

ಈ ರೀತಿ ಅಣಬೆ ಒಂದು ವಸ್ತುವನ್ನು ಸಂಪೂರ್ಣವಾಗಿ ನಾಶ ಮಾಡಿ ತನ್ನ ಅಸ್ತಿತ್ವವನ್ನು ಸಾಧಿಸಿಕೊಳ್ಳುವುದನ್ನು ಮೈಕೋರೆ ಮಿಡಿಯೇಶನ್‌ ಎಂದು ಕರೆಯಲಾಗುತ್ತದೆ. ಇದೊಂದು ನೈಸರ್ಗಿಕ ಪ್ರತಿಕ್ರಿಯೆ. ಇತ್ತೀಚಿನ ದಿನಗಳಲ್ಲಿ ಉದ್ದೇಶಪೂರ್ವಕ ವಾಗಿಯೂ ಮೈಕೋರೆಮಿಡಿಯೇಶನ್‌ ನಡೆಸಲಾಗುತ್ತಿದೆ. ಈ ಪ್ರಕ್ರಿಯೆ ತ್ಯಾಜ್ಯ ನಿರ್ಮೂಲನೆಗೆ ಸಹಕಾರಿ. ಕಳೆದ ಕೆಲವು ವರ್ಷಗಳಲ್ಲಿ ಸಂಶೋಧಕರು ಇದನ್ನು ಅಮೆಜಾನ್‌ ಕಾಡುಗಳಲ್ಲಿ ತೈಲ ಸೋರಿಕೆಯನ್ನು ಸ್ವತ್ಛ ಮಾಡಲು, ಡೆನ್‌ಮಾರ್ಕ್‌ನಲ್ಲಿ ಬೋಟ್‌ಗಳಲ್ಲಿ ಬಾಕಿ ಉಳಿದುಬಿಡುವ ತೈಲ ತೆಗೆದು ಶುದ್ಧ ಮಾಡಲು, ಹಾಗೆಯೇ ಕೆಲವು ನದಿಗಳಲ್ಲಿ ಸ್ವಚ್ಛತೆಗೂ ಬಳಸಿದ್ದಾರೆ. ಅಲ್ಲೆಲ್ಲ ಅಣಬೆಗಳನ್ನು ಬೆಳೆಸಿ ತ್ಯಾಜ್ಯ ನಿರ್ಮೂಲನೆ ಮಾಡಲಾಗುತ್ತಿದೆ. ಈ ಮೈಕೋರೆಮಿಡಿಯೇಶನ್‌ನಿಂದ ಭೂಮಿಯ ಫ‌ಲವತ್ತತೆಯೂ ಹೆಚ್ಚುವುದರಿಂದ ಈ ಪ್ರಕ್ರಿಯೆ ಹೆಚ್ಚು ಉಪಯುಕ್ತವೆನಿಸಿಕೊಂಡಿದೆ. ಅದರಲ್ಲೂ ಮೊದಲು ಹೇಳಿದ ಆಮ್ಲಜನಕವಿಲ್ಲದೆಯೂ ಬೆಳೆ ಯುವ ಪೆಸ್ಟಲೋಟಿಯೊಪ್ಸಿಸ್‌ ಮೈಕ್ರೊನ್ಪೊರಾ ವಿಶೇಷ ಪರಿ ಣಾಮ ಬೀರಬಹುದಾಗಿದೆ. ತ್ಯಾಜ್ಯ ಸಂಸ್ಕರಣ ಕೇಂದ್ರಗಳಲ್ಲಿ, ಪ್ರತೀ ಮನೆಗಳಲ್ಲೂ ಗೊಬ್ಬರ ತಯಾರಿಕೆಗೆ ಬಳಸಬಹುದು.

ಪ್ಲಾಸ್ಟಿಕ್‌ನಲ್ಲೇ ಬೆಳೆ‌ದದ್ದನ್ನು ನಾವೂ ತಿನ್ನಬಹುದು!

ಈ ರೀತಿ ಪ್ಲಾಸ್ಟಿಕ್‌ ಮೇಲೆಯೇ, ಅದನ್ನೇ ಬಳಸಿಕೊಂಡು ತಿನ್ನುವ ಅಣಬೆ ಮನುಷ್ಯನಿಗೆ ತಿನ್ನಲು ಯೋಗ್ಯವೇ ಎನ್ನುವ ಪ್ರಶ್ನೆ ಬರುವುದು ಸಾಮಾನ್ಯ. ಪ್ರಪಂಚದಲ್ಲಿ ಲಕ್ಷಾಂತರ ಬಗೆಯ ಅಣಬೆ ಗಳಿವೆ ಆದರೂ ಅದರಲ್ಲಿ ತಿನ್ನಲು ಯೋಗ್ಯ ಎನಿಸಿಕೊಂಡವು ಎಲ್ಲೋ ಕೆಲವು ಮಾತ್ರ. ಅದರಲ್ಲಿ ಈ ಪ್ಲಾಸ್ಟಿಕ್‌ ಮೇಲೆ ಬೆಳೆದ ಅಣಬೆಗಳೂ ಸೇರಿವೆ. ಉಜ್ರೆಕ್ಟ್ ವಿಶ್ವವಿದ್ಯಾಲಯ ಮಾಡಿದ ಸಂಶೋಧನೆಯ ಪ್ರಕಾರ ಪಿ-ಮೈಕ್ರೊನ್ಪೊರಾ ಅಣಬೆಯನ್ನು ಜನ ಸಾಮಾನ್ಯರು ಸೇವಿಸಬಹುದು. ಹಾಗೆಯೇ ಡಿಸೈನರ್‌ ಕ್ಯಾಥರೀನಾ ಉಂಗರ್‌ ಅವರು ಬೆಳೆಸಿದ ಎರಡು ಅಣಬೆ ಮಿಶ್ರಿತ ಅಣಬೆಯು ಸಿಹಿಯಾಗಿರುತ್ತದೆ ಮತ್ತು ನಾವು ಬಳಸುವ ಸೋಂಪು ಅಥವಾ ಮದ್ಯದ ವಾಸನೆಯನ್ನು ಹೊಂದಿರುತ್ತದೆಯಂತೆ. ಅದಕ್ಕೆ ನಿರ್ದಿಷ್ಟ ಒತ್ತಡ ನೀಡಿದರೆ ಮತ್ತಷ್ಟು ಸುವಾಸನೆಯನ್ನು ಅದರಲ್ಲಿ ಕಾಣಬಹುದು ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿಯೂ ಈ ಬಗ್ಗೆ ಸಂಶೋಧನೆ, ಅಧ್ಯಯನಗಳು ನಡೆದಿವೆ. ರಾಜಸ್ಥಾನ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ, ಪ್ಲಾಸ್ಟಿಕ್‌ ತಿನ್ನುವ ಅಣಬೆಗಳು ಕೆಲವೊಮ್ಮೆ ಹೆಚ್ಚು ಮಾಲಿನ್ಯಗಳನ್ನು ಹೀರಿಕೊಳ್ಳುವುದರಿಂದ ವಿಷಕಾರಿಯಾಗಿರುವ ಸಾಧ್ಯತೆಯೂ ಇದೆ. ಅದೇನೇ ಇರಲಿ, ಈ ಕುರಿತಾಗಿ ಇನ್ನಷ್ಟು ಅಧ್ಯಯನಗಳು ನಡೆದು, ಪ್ಲಾಸ್ಟಿಕ್‌ ಮೇಲೆ ಬೆಳೆಯುವ ಅಣಬೆಯ ಬಗ್ಗೆ ಸ್ಪಷ್ಟತೆ ಸಿಕ್ಕಿದ್ದೇ ಆದರೆ ಅದರಿಂದ ಎರಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಂತೆ ಆಗುತ್ತದೆ. ಮೊದಲ ನೆಯದು ತ್ಯಾಜ್ಯದ ಸಮಸ್ಯೆ ಎರಡನೆಯದು ಆಹಾರ ಕೊರತೆ.

ಸಾಧಕ ಬಾಧಕಗಳೇನು? :

ಅಣಬೆಗಳಿಂದ ಪ್ಲಾಸ್ಟಿಕ್‌ ಜೀರ್ಣ ಮಾಡಬಹುದು ಎನ್ನುವುದು ಇದೀಗ ತಿಳಿದುಬಂದಿದೆಯಾದರೂ ಅದು ಅಷ್ಟು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಜಲಚರಗಳಂತೆ ನೀರಿನೊಳಗೆ ತುಂಬಿಕೊಂಡಿರುವ ಪ್ಲಾಸ್ಟಿಕ್‌ ಮೇಲೆ ಅಣಬೆ ಬೆಳಸುವುದು ಹೇಗೆ ಎನ್ನುವ ಪ್ರಶ್ನೆಯೂ ಕಾಡಲಾರಂಭಿಸುತ್ತದೆ. ರಾಜಸ್ಥಾನ ವಿವಿ ಹೇಳಿದಂತೆ ಅಣಬೆ ವಿಷಕಾರಿಯಾಗಿ, ಅದರ ಅರಿವಿಲ್ಲದೆ ಮಾನವ ಸೇವಿಸಿಬಿಡುವ ಸಾಧ್ಯತೆಯೂ ಇದೆ.

ಈ ವಿಧಾನ ಎಲ್ಲ ರೀತಿಯಲ್ಲೂ ಧನಾತ್ಮಕ ಪರಿಣಾಮ ಬೀರಿದ್ದೇ ಆದರೆ ನಮ್ಮ ಪ್ರಪಂಚಕ್ಕೆ ಅಂಟಿರುವ ಬಹುದೊಡ್ಡ ಸಮಸ್ಯೆಗೆ ಒಂದೊಳ್ಳೆ ದಾರಿ ಸಿಕ್ಕಂತಾಗುತ್ತದೆ. ವಾರಗಳು ಅಥವಾ ತಿಂಗಳುಗಳಲ್ಲಿ ಅಣಬೆಗಳು ಪ್ಲಾಸ್ಟಿಕ್‌ ಅನ್ನು ತಿಂದು ಮುಗಿ ಸುವುದರಿಂದಾಗಿ ಎಲ್ಲ ತ್ಯಾಜ್ಯ ಸಂಸ್ಕರಣ ಘಟಕಗಳಲ್ಲಿ ಅಣಬೆ ಬೆಳೆಸಿ ಪ್ಲಾಸ್ಟಿಕ್‌ ನಿರ್ಮೂಲನೆ ಮಾಡಬಹುದು. ಅದಕ್ಕಿಂತ ಒಂದು ಹೆಜ್ಜೆ ಮುಂದುಹೋಗಿ ಪ್ರತೀ ಮನೆಯ ಪ್ಲಾಸ್ಟಿಕ್‌ ತ್ಯಾಜ್ಯದ ಮೇಲೂ ಮನೆಯಲ್ಲೇ ಈ ರೀತಿ ಅಣಬೆ ಬಳಸಿ, ಅದನ್ನು ಮನೆಯ ಅಡುಗೆಗೇ ಬಳಸಿಕೊಳ್ಳಬಹುದು.

ಸರಕಾರ ಮತ್ತು ವಿಜ್ಞಾನಿಗಳು ಇದರ ಬಗ್ಗೆ ಹೆಚ್ಚಿನ ಗಮನ ಕೊಡುವ ಅಗತ್ಯ ಇದೆ. ಹಾಗೆಯೇ ಯಾವುದೇ ಸವಾಲಿಗೂ ಸಿದ್ಧವೆನ್ನುವ ಈಗಿನ ಯುವ ಸಮಾಜ ಇದರತ್ತ ದೃಷ್ಟಿ ಹರಿಸಿ, ತ್ಯಾಜ್ಯ ನಿರ್ಮೂಲನೆಗೆ ಹೊಸ ಮಾರ್ಗವನ್ನು ಹುಡುಕುವ ಆವ ಶ್ಯಕತೆಯೂ ಇದೆ.

 

-ಮನೇಕಾ ಗಾಂಧಿ

ಟಾಪ್ ನ್ಯೂಸ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.