ನನ್ನ ಹೋರಾಟ ವೈಯಕ್ತಿಕವಲ್ಲ
Team Udayavani, Apr 20, 2019, 6:00 AM IST
ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಿಂದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ವಿರುದ್ಧ ಸ್ಪರ್ಧೆಗೆ ಇಳಿದಿದ್ದಾರೆ. ಬಹು ಚರ್ಚಿತ ಮತ್ತು ವಿವಾದಾತ್ಮಕ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಅವರ ವಿರುದ್ಧ ಆರೋಪವಿದೆ. ಒಂಭತ್ತು ವರ್ಷ ಕಾಲ ಕಾರಾಗೃಹದಲ್ಲಿದ್ದ ಅವರಿಗೆ 2017ರಲ್ಲಿ ಜಾಮೀನು ನೀಡಲಾಯಿತು. “ಹಿಂದೂ ಭಯೋತ್ಪಾದನೆ’ ಎಂಬ ಹಣೆಪಟ್ಟಿ ತೊಡೆದು ಹಾಕಲು ಇದು ತಕ್ಕ ಸಮಯ, ಅಧಿಕಾರದಲ್ಲಿ ಉಳಿಯಲು ಕಾಂಗ್ರೆಸ್ ಹೊಸ ಪದ ಸೃಷ್ಟಿಸಿತ್ತು ಎಂದಿದ್ದಾರೆ.
ಯಾವ ವಿಚಾರಗಳನ್ನು ಚುನಾವಣೆಯಲ್ಲಿ ಪ್ರಸ್ತಾಪ ಮಾಡಲಿದ್ದೀರಿ?
ಹೊಸ ವಿಚಾರಗಳು ಏನೂ ಇಲ್ಲ. ಕಾಂಗ್ರೆಸ್ ಸಮಯದಿಂದ ಸಮಯಕ್ಕೆ ಏನು ಪ್ರಸ್ತಾಪ ಮಾಡಿತ್ತೋ ಅದರ ವಿರುದ್ಧ ಹೋರಾಟ ನಡೆಯಲಿದೆ. ಕೇಸರಿ ಮತ್ತು ಹಿಂದೂ ಭಯೋತ್ಪಾದನೆ ಎಂದು ಕಾಂಗ್ರೆಸ್ ತಂತ್ರಪೂರ್ವಕವಾಗಿ ಪ್ರಚಾರ ಮಾಡಿಕೊಂಡು ಬರುತ್ತಿದ್ದುದಕ್ಕೆ ಉತ್ತರ ನೀಡಲು ಇದು ಸಮಯವಾಗಿದೆ. ಸುಳ್ಳು ಆರೋಪಗಳನ್ನು ದಾಖಲಿಸಿ, ಜನರನ್ನು ಭಯೋತ್ಪಾದಕರು ಎಂದು ಬಿಂಬಿಸಿ ಹೇಗೆ ಕಾರಾಗೃಹಕ್ಕೆ ತಳ್ಳಲಾಗುತ್ತದೆ, ಯಾವ ರೀತಿಯಲ್ಲಿ ಕಾಂಗ್ರೆಸ್ ಅಧಿಕಾರ ದುರುಪಯೋಗ ಮಾಡುತ್ತದೆ, ನಿಯಮಗಳನ್ನು ಉಲ್ಲಂ ಸುತ್ತದೆ ಎನ್ನುವ ವಿಚಾರದ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಿದ್ದೇನೆ. ಸನಾತನ ಧರ್ಮ ಮತ್ತು ಕೇಸರಿ ಬಣ್ಣಕ್ಕೆ ಭಯೋತ್ಪಾದನೆಯ ನಂಟು ಇದೆ ಎಂದು ಕಾಂಗ್ರೆಸ್ ಯಾವ ರೀತಿ ಹೇಳಿಕೊಂಡು ಬಂದಿತ್ತು ಎನ್ನುವುದನ್ನು ಬಯಲಿಗೆ ಎಳೆಯಲಿದ್ದೇನೆ. ಕಾಂಗ್ರೆಸ್ ಅವಧಿಯಲ್ಲಿಯೇ ಹಿಂದೂ ಅಥವಾ ಕೇಸರಿ ಭಯೋತ್ಪಾದನೆ ಎಂಬ ಹೊಸ ಪದ ಸೃಷ್ಟಿಸ ಲಾಯಿತು. ರಾಜಕೀಯ ಲಾಭ ಪಡೆದು ಕೊಂಡು ಅಧಿಕಾರದಲ್ಲಿ ಉಳಿದುಕೊಳ್ಳಲು ಅದನ್ನು ಬಳಸಲಾಯಿತು.
ಗುರುವಾರದಿಂದ ಈಚೆಗೆ ಹಾಲಿ ಚುನಾವಣೆಯಲ್ಲಿ ಅಭಿವೃದ್ಧಿಯ ವಿಚಾರ ಮಾತ್ರ ಪ್ರಸ್ತಾಪವಾಗದು ಎಂದು ಹೇಳಿದ್ದಿರಿ. ಅದು ಸರಿಯೇ?
ಪ್ರಚಾರದ ಸಂದರ್ಭದಲ್ಲಿ ಅಭಿವೃದ್ಧಿ ಕಾಮ ಗಾರಿಗಳು ಪ್ರಧಾನ ವಿಚಾರ ಹೌದಾದರೂ, ಅದು ನಮ್ಮ ಗಡಿಗಳು ಭದ್ರವಾಗಿ ಇರುವಾಗ ಸರಿಯಾಗಿರುತ್ತದೆ. ದುರದೃಷ್ಟದ ವಿಚಾರ ವೆಂದರೆ ನಮ್ಮ ಸೇನೆಯ ವಿರುದ್ಧವಾಗಿಯೇ ಪ್ರಶ್ನೆಗಳನ್ನು ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕರು ನಮ್ಮ ದೇಶ ಸುರಕ್ಷಿತವಾಗಿಲ್ಲ ಎಂದು ಹೇಳುತ್ತಿದ್ದಾರೆ. ಅವರ ಈ ಹೇಳಿಕೆಯೇ ನಮ್ಮ ಶತ್ರು ರಾಷ್ಟ್ರಗಳಿಗೆ ವರದಾನವಾಗುತ್ತಿದೆ.
ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ನೀವು ಇನ್ನೂ ಆರೋಪ ಎದುರಿಸುತ್ತಿದ್ದೀರಿ. ಇದರ ಹೊರತಾಗಿಯೂ ಬಿಜೆಪಿ ನಿಮ್ಮನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಆಯ್ಕೆ ಮಾಡಿದೆಯಲ್ಲ?
ನಾನು ಭಯೋತ್ಪಾದಕಿಯಲ್ಲ. ಕಾಂಗ್ರೆಸ್‌ನ ಪಾಪಕೃತ್ಯಗಳಿಗೆ ಬಲಿಯಾಗಿರುವುದಕ್ಕೆ ನಾನೇ ಜೀವಂತ ಸಾಕ್ಷಿ. ನನ್ನ ವಿರುದ್ಧ ಹೊರಿಸಲಾಗಿರುವ ಆರೋಪಗಳ ವಿರುದ್ಧ ನನಗೆ ಕ್ಲೀನ್‌ಚಿಟ್ ಸಿಕ್ಕಿದೆ. ಯುಪಿಎ ಅವಧಿಯಲ್ಲಿ ರಚಿಸಲಾಗಿದ್ದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ವೇ ನನ್ನ ವಿರುದ್ಧ ಮಾಡಲಾಗಿರುವ ಆರೋಪಗಳು ಸರಿಯಾದ್ದಲ್ಲ ಎಂದು ಹೇಳಿದೆ. ಅಕ್ರಮವಾಗಿ ಜೈಲಿಗೆ ಹಾಕಿ, ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡಿದ್ದರು. ಅವರು ಸಂವಿಧಾನವನ್ನು, ಕಾನೂನನ್ನು ದುರುಪಯೋಗಮಾಡಿದ್ದಾರೆ. ಈಗ ಅದೆಲ್ಲದಕ್ಕೆ ಉತ್ತರ ನೀಡುವ ಸಮಯ ಬಂದಿದೆ. ಹೀಗಾಗಿಯೇ, ಕಾಂಗ್ರೆಸ್‌ಗೆ ಸಹಿಸಲು ಸಾಧ್ಯವಾಗುತ್ತಿಲ್ಲ.
ಹಾಗಿದ್ದರೆ ಹಿಂದುತ್ವ ವಿಚಾರ ಪ್ರಧಾನವಾಗಿ ಪ್ರಸ್ತಾಪವಾಗಲಿದೆ…
ಹಿಂದುತ್ವ ಎಂದರೆ ನಮ್ಮ ಜೀವನ ಕ್ರಮ ಮತ್ತು ನಂಬಿಕೆ. ಅದನ್ನು ಜೀವನದಿಂದ ಪ್ರತ್ಯೇಕ ಮಾಡಲು ಸಾಧ್ಯವೇ ಇಲ್ಲ. ಕೇಸರಿ ಬಣ್ಣ ಎನ್ನು ವುದು ಶಾಂತಿ ಮತ್ತು ಭಾರತೀಯ ಸಂಸ್ಕೃ ತಿಯ ಪ್ರತೀಕ. ಅದು ದೇಶದ ತ್ರಿವರ್ಣ ಧ್ವಜ ದಲ್ಲಿಯೂ ಕೂಡ ಇದೆ. ಅದನ್ನು ಭಯೋ ತ್ಪಾದನೆಯ ಜತೆಗೆ ಜೋಡಿಸಿದಾಗ ನಿಜವಾ ಗಿಯೂ ಮನಸ್ಸಿಗೆ ಘಾಸಿಯಾಗುತ್ತದೆ.
ಅಂದ ಹಾಗೆ ನಿಮ್ಮ ಆರೋಗ್ಯ ಹೇಗಿದೆ?
ನಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ. ತನಿಖೆಯ ವೇಳೆ ಪೊಲೀಸರು ನೀಡಿದ ಹಿಂಸೆಯಿಂದಾಗಿ ಬೆನ್ನುಹುರಿಯ ಮೇಲೆ ಗಾಯಗಳಾಗಿವೆ. ಮಹಿಳೆ ಎನ್ನುವುದನ್ನೂ ಗಮನಿಸದೆ ಪೊಲೀಸರು ನನಗೆ ಹಿಂಸೆ ನೀಡಿದ್ದಾರೆ. ಅವರು ನನ್ನನ್ನು ಕೊಲ್ಲಲು ಬಯಸಿದ್ದರೂ, ಉಳಿದುಕೊಂಡೆ. ಈ ಅಂಶಗಳನ್ನು ಜನರ ಮುಂದೆ ಇಡಲಿದ್ದೇನೆ.
ಆರೋಗ್ಯದ ಕಾರಣಕ್ಕಾಗಿ ನಿಮಗೆ ಜಾಮೀನು ನೀಡಲಾಗಿದೆ. ಈಗ ಚುನಾವಣೆಗೆ ಸ್ಪರ್ಧೆ ಮಾಡಿರುವುದರಿಂದ ಅದನ್ನು ರದ್ದು ಮಾಡಬೇಕೆಂದು ಒತ್ತಾಯವಿದೆ. ಅದಕ್ಕೇನು ಹೇಳುತ್ತೀರಿ?
ಯಾವತ್ತೂ ನಾನು ಕಾರಾಗೃಹದಲ್ಲಿ ಇರಬೇಕು ಎಂದು ಬಯಸುವವರ ಸಂಚಿನ ನುಡಿಗಳಿವು. ನನ್ನ ವಿರುದ್ಧ ಏನು ಆರೋಪಗಳನ್ನು ಮಾಡಿದ್ದಾರೋ, ಅದನ್ನು ಸಾಬೀತುಪಡಿಸಲು ಸಾಧ್ಯ ವಾಗಲಿಲ್ಲ. ಹೀಗಾಗಿ ಇಂಥ ಮಾತುಗಳು ಬಂದಿವೆ. ನಾನು ರಾಜಕೀಯಕ್ಕೆ ಸೇರಿದ್ದರಿಂದ ಸಂಚು ರೂಪಿಸಿದವರಿಗೆ ಭಯ ಉಂಟಾಗಿದೆ. ಹೀಗಾಗಿ, ನನಗೆ ನೀಡಲಾಗಿ ರುವ ಜಾಮೀನು ರದ್ದುಮಾಡಬೇಕು ಎಂದು ಬಯಸುತ್ತಿದ್ದಾರೆ ಅಷ್ಟೇ.
ಇಂಥ ಹೋರಾಟ ನಡೆಸಲು ಹತ್ತು ವರ್ಷಗಳಿಂದ ಕಾಯುತ್ತಿದ್ದೀರಿ ಎಂದು ಹೇಳಿದ್ದೀರಿ. ಮಾಲೇಗಾಂವ್ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರ ವಿರುದ್ಧ ವೈಯಕ್ತಿಕ ಹೋರಾಟವೇ?
ಇದು ವೈಯಕ್ತಿಕ ಹೋರಾಟವಲ್ಲ. ದೇಶಕ್ಕಾಗಿ ನನ್ನ ಜೀವನವನ್ನು ಮುಡಿಪಾಗಿ ಇರಿಸಿದ್ದೇನೆ. ರಾಷ್ಟ್ರೀಯವಾದಿಗಳು ಯಾವತ್ತೂ ವೈಯಕ್ತಿಕ ಹೋರಾಟ ಮಾಡುವುದಿಲ್ಲ. ಸಂಚುಕೋರರ ಕೈಯಲ್ಲಿ ಹತ್ತು ವರ್ಷಗಳ ಕಾಲ ನೋವು ಅನುಭವಿಸಿದ್ದೇನೆ. ಈ ಹೋರಾಟ ಏನಿದ್ದರೂ ಪ್ರತಿಯೊಬ್ಬ ಮಹಿಳೆಗಾಗಿ ಮತ್ತು ಸಮುದಾಯದಲ್ಲಿ ಕಾನೂನನ್ನು ಉಲ್ಲಂ ಸುವವರ ವಿರುದ್ಧ ನಡೆಸಲಿದ್ದೇನೆ.
(ಸಂದರ್ಶನ ಕೃಪೆ: ದ ಟೈಮ್ಸ್ ಆಫ್ ಇಂಡಿಯಾ, ದ ಹಿಂದುಸ್ತಾನ್ ಟೈಮ್ಸ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.