ಗಡಿನಾಡಿನಲ್ಲಿ ಕನ್ನಡದ ಕಂಪು ಅರಳಿಸಿದ ನಮ್ಮ ಶಾಲೆಯ ನೆನಪು


Team Udayavani, Sep 5, 2021, 2:40 PM IST

ಗಡಿನಾಡಿನಲ್ಲಿ ಕನ್ನಡದ ಕಂಪು ಅರಳಿಸಿದ ನಮ್ಮ ಶಾಲೆಯ ನೆನಪು

ನನ್ನದು ಗಡಿನಾಡ ಗೂಡು, ಕನ್ನಡಿಗರ ಬೀಡು, ಸಪ್ತ ಭಾಷೆಗಳ ಗೂಡೆಂದು ಕರೆಯಲ್ಪಡುವ ಕಾಸರಗೋಡು ಜಿಲ್ಲೆಯ ಬೇಕಲಕೋಟ ಯಿಂದ 4-5 ಕಿಲೋಮೀಟರ್ ನಷ್ಟು ದೂರದ ಒಂದು ಚಿಕ್ಕಗ್ರಾಮ. ಆ ಗ್ರಾಮದ ಹೆಸರು ಕೀಕಾನ. ನಾನು ಓದಿದ ಪ್ರಾಥಮಿಕ ಶಿಕ್ಷಣ ಕೇಂದ್ರ ಇರುವುದು ಇಲ್ಲೇ.

ನನ್ನಂತಹ ಮಧ್ಯಮವರ್ಗದ ಸಹಸ್ರಾರು ವಿದ್ಯಾರ್ಥಿಗಳಿಗೆ ಕನ್ನಡ ಬೋಧಿಸಿದ ಸುತ್ತಲ ಗ್ರಾಮದವರಿಗೆ ವಿದ್ಯೆ ಧಾರೆಯೆರೆದ ಕನ್ನಡ ಮಾಧ್ಯಮ ಶಾಲೆ ಕೀಕಾನ. ನನ್ನ ಮತ್ತು ಈ ಶಾಲೆಯ ಅನುಬಂಧ ಏಳೆಂಟು ವರ್ಷಗಳದ್ದು. ಶಿಕ್ಷಕರ ದಿನಾಚರಣೆ ಎಂದಾಕ್ಷಣ ಈ ಶಾಲೆಯಲ್ಲಿ ನಾನು ಕಳೆದ ದಿನಗಳ ಸವಿನೆನಪುಗಳು ಮನಸ್ಸಲ್ಲಿ ಹಾದುಹೋಗುತ್ತವೆ.

ಮಳೆಗಾಲ ನಮ್ಮ ಶಾಲಾ ದಿನಗಳಿಗೆ ರಂಗು ತುಂಬುತ್ತಿತ್ತು. ಬಿಡುವಿನ ವೇಳೆಯಲ್ಲಿ ಟೀಚರ್ ಕಣ್ಣುತಪ್ಪಿಸಿ ಮಳೆಯಲ್ಲಿ ನೆನೆದದ್ದು, ಹಂಚಿನ ಸೂರಿನ ಮಳೆಯ ನೀರಲ್ಲಿ ಬಟ್ಟಲು ತೊಳೆದದ್ದು, ಅಂಗಡಿಗೆ ಹೋಗಿ ತಡಮಾಡಿ ತರಗತಿಗೆ ಹಾಜರಾದದ್ದು, ಆಗ ಟೀಚರ್ ಪೆಟ್ಟುಕೊಟ್ಟದ್ದು, ಮರುದಿನ ಮನೆಯಲ್ಲೇ ತಲೆನೋವೆಂದು ಸುಮ್ಮನೆ ಮಲಗಿದ್ದು…ಹೀಗೆ ಹಲವು ಕೀಟಲೆಗಳು. ಕಾಪಿ ಪುಸ್ತಕಕ್ಕೆ ಟೀಚರ್ ಹಾಕಿದ್ದ ಕೆಂಪು ರೈಟನ್ನು ಉಜ್ಜಿ ದಿನಾಂಕವನ್ನು ಬದಲಾವಣೆ ಮಾಡಿದ್ದ ಭೂಪರು ನಾವು. ಪಾಪ, ಟೀಚರ್ಗೆ ಅದು ಗೊತ್ತೇ ಆಗಿರಲಿಲ್ಲ!

ನಮ್ಮ ಶಾಲೆಯಲ್ಲಿ ರಾಷ್ಟ್ರಹಬ್ಬದಿಂದ ಹಿಡಿದು ನಾಡಹಬ್ಬದ ತನಕ ಎಲ್ಲವನ್ನೂ ತುಂಬಾನೇ ಸಾಂಪ್ರದಾಯಿಕವಾಗಿ ಆಚರಿಸಿ ಸಂಭ್ರಮಿಸುತ್ತಿದ್ದೆವು. ವರ್ಷಕ್ಕೊಮ್ಮೆ ಬರುವ ಸ್ವಾತಂತ್ರ್ಯ ದಿನವೆಂದರೆ ನಮಗಂತೂ ತುಸು ಹೆಚ್ಚೇ ಸಡಗರ. ಹಿಂದಿನ ದಿನವೇ ತರಗತಿಗೆ ಅಲಂಕಾರ ಮಾಡಿ ಶಾಲೆಯನ್ನು ಮದುವಣಗಿತ್ತಿಯಂತೆ ರಂಗೇರಿಸುತ್ತಿದ್ದೆವು. ಆ ದಿನ ಟೀಚರ್ ಹೇಳುತ್ತಿದ್ದ ಮಾತು ಇಂದು ಕೂಡಾ ನೆನಪಲ್ಲಿದೆ. “ಮಕ್ಕಳೇ ಆದರೆ ನಾಳೆ ತೆಂಗಿನಕಾಯಿ ತನ್ನಿ,” ಎಂದು. ಆ ದಿನ ನಮಗೆ ಬಗೆಬಗೆಯ ಸಿಹಿ ತಿಂಡಿ, ರುಚಿಯಾದ ಹಾಲು ಪಾಯಸ ಸವಿಯುವುದೆಂದರೆ ಎಲ್ಲಿಲ್ಲದ ಆಸೆ.

ನೆನಪಿನ ಪುಟಗಳನ್ನು ಒಂದೊಂದಾಗಿ ತೆರೆಯುತ್ತಾ ಹೋದಂತೆ ನಲಿವಿನ ಕ್ಷಣಗಳು ದುಃಖದ ದಿನಗಳು ಎಲ್ಲವೂ ಕಣ್ಣ ಮುಂದೆ ಬರುತ್ತವೆ. ನನ್ನ ಅಕ್ಷರ ತಪ್ಪುಗಳನ್ನು ತಿದ್ದಿ ಏನಾದರೂ ತಪ್ಪು ಮಾಡಿದರೆ ಬುದ್ಧಿ ಹೇಳಿ, ಭಾವಗೀತೆ ಕಂಠಪಾಠ ಗಳನ್ನು ಹೇಳಿಕೊಟ್ಟು, ವೇದಿಕೆಯಲ್ಲಿ ಧೈರ್ಯವಾಗಿ ಹೇಳುವಂತೆ ಪ್ರೇರೇಪಿಸಿದವರು ನನ್ನ ಶಿಕ್ಷಕರು. ಅಲ್ಲಿ ಗೆದ್ದರೆ ನನಗಿಂತ ಸಂಭ್ರಮ ಅವರಿಗಾಗುತ್ತಿತ್ತು. ಸೋತರೆ ಇನ್ನು ಗೆಲ್ಲಲು ತುಂಬಾನೇ ಇದೆ ಎಂದು ಹೇಳಿ ನೋವು ಮರೆಸುತ್ತಿದ್ದರು!

ನನ್ನ ಮನದಲ್ಲಿ ಅಂದು ಎಂದೂ ಮರೆಯಲಾಗದ ದಿನ. ಏಳೆಂಟು ವರ್ಷಗಳ ಒಡನಾಟ ಮುಗಿದು ನಮ್ಮನ್ನು ಬೀಳ್ಕೊಟ್ಟ ಕ್ಷಣ. ಬೀಳ್ಕೊಡುಗೆಯ ದುಃಖ ಅಂದು ಶಾಲೆಯ ತುಂಬಾ ಮನೆಮಾಡಿತ್ತು. ತರಗತಿಗೆ ಕಾರ್ಮೋಡ ಕವಿದಂತಾಗಿತ್ತು. ಸುಖ ಪಯಣಕ್ಕೆ ವಿರಾಮ ಹಾಡುವ ಸಮಯ. ಒಬ್ಬರನ್ನೊಬ್ಬರು ಕೈ ಕುಲುಕುವಾಗ ಕಣ್ಣಿನಿಂದ ಕಂಬನಿ ಇಳಿಯುತ್ತಿತ್ತು. ಗದರಿ ಬುದ್ಧಿ ಹೇಳಿ ಪ್ರೋತ್ಸಾಹಿಸಿದ ಗುರುಗಳನ್ನು ಬಿಟ್ಟು ಹೋಗುವ ದುಃಖ ಕಾಡುತ್ತಿತ್ತು. ಕೀಕಾನ ಶಾಲೆಯಲ್ಲಿ ಇನ್ನೂ ನಾಲ್ಕೈದು ವರುಷ ಇರುತ್ತಿದ್ದರೆ ಎಂದೆನಿಸುತ್ತಿತ್ತು.

ನಿಜಕ್ಕೂ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಕಲಿತ ನಾವುಗಳೇ ಧನ್ಯರು. ನಮ್ಮ ಊರಿನ ವಿದ್ಯಾರ್ಥಿಗಳ ಬಾಳ ಬೆಳಗಿದ ಪಾಠ ಶಾಲೆ ಅದು. ಗಡಿನಾಡ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡದ ಪೂಜೆಯಲ್ಲಿ ತೊಡಗಿರುವವರೇ ಅಲ್ಲಿನ ಶಿಕ್ಷಕರು.

ಗಿರೀಶ್ ಪಿಎಂ

ದ್ವಿತೀಯ ಬಿಎ, ಪತ್ರಿಕೋದ್ಯಮ

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

ಟಾಪ್ ನ್ಯೂಸ್

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.