Mysore Dasara: ಕಾಣ ಬನ್ನಿ … ಬೆಳಕಿನರಮನೆ
Team Udayavani, Oct 10, 2024, 6:03 PM IST
ಜಗದ್ವಿಖ್ಯಾತ ನಾಡಹಬ್ಬ ದಸರೆ ಬಂದಾಗ ಮೈಸೂರು ಸಿಂಗಾರಗೊಳ್ಳುವುದೇ ಒಂದು ಚೆಂದ. ಎಲ್ಲಿ ನೋಡಿ ದರೂ ಹೊಂಬೆಳಕು ಸೂಸುವ ದೀಪಾಲಂಕಾರ. ಅದ್ದೂರಿ ಮತ್ತು ಆಕರ್ಷಕ ಚೆಲುವನ್ನು ಹೊದ್ದು ನಿಂತ ಕಳೆ. ಅರಮನೆ ನಗರಿಯ ಈ ಸಡಗರವನ್ನು ಮದುವಣಗಿತ್ತಿಯ ಸಂಭ್ರಮಕ್ಕೆ ಹೋಲಿಸುವುದೂ ಅದಕ್ಕಾಗಿಯೇ… ದಸರಾ ಉತ್ಸವ ಎಂದರೆ ಸಣ್ಣ ಹಬ್ಬ ಎನ್ನುವಾ ಮಾತೇ ಇಲ್ಲ. ಝಗಮಗ, ವೈಭಯುತ, ಅದ್ದೂರಿ ಮತ್ತು ಆಕರ್ಷಕ. ಈ ಎಲ್ಲಾ ವಿಶೇಷಣಗಳನ್ನು ಧರಿಸಿದ ಐತಿಹಾಸಿಕ ಮೈಸೂರು ನಗರಿಯಲ್ಲಿ ದಸರಾವೆಂದರೆ ಅದು ಅತ್ಯಂತ ಸಂಭ್ರಮದ ಸಮಾರಾಧನೆ. ವಿದ್ಯುದ್ದೀಪಾಲಂಕಾರದಿಂದ ಝಗಮಗಿಸುವ ಮೈಸೂರು ಅರಮನೆ, ಪ್ರಜ್ವಲಿಸುವ ಇಡೀ ಮೈಸೂರು ನಗರ ನಾಡಹಬ್ಬಕ್ಕೆ ನವ ವಧುವಿನಂತೆ ಸಿಂಗಾರಗೊಂಡಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ ಎಂದರೆ ತಪ್ಪಾಗಲಾರದು.
10 ದಿನ ನಡೆಯುವ ಮೈಸೂರು ದಸರೆ: ನಾಡ ಅದಿದೇವತೆ ದೇವಿ ಚಾಮುಂಡೇಶ್ವರಿ ಅಗ್ರಪೂಜೆಯೊಂದಿಗೆ ಈ ವರ್ಷದ ದಸರಾ ಮಹೋತ್ಸವಕ್ಕೆ ಹಿರಿಯ ಸಾಹಿತಿ ನಾಡೋಜ ಡಾ. ಹಂಪ ನಾಗರಾಜಯ್ಯ ಅವರಿಂದ ಚಾಲನೆ ಸಿಕ್ಕಿದ್ದು, 10 ದಿನಗಳ ಕಾಲ ನಡೆಯುವ ಮೈಸೂರು ದಸರೆಯನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿಯೇ ನಾಡಿನ ಎಲ್ಲಾ ರಸ್ತೆಗಳು ಮೈಸೂರಿನತ್ತ ಮುಖಮಾಡುತ್ತವೆ. ಮೈಸೂರಿಗೆ ಬರುವವರು-ಹೋಗುವವರ ಗಿಜಿಗಿಜಿಯಲ್ಲಿ ನಗರದ ಇಡೀ ರಸ್ತೆಗಳು, ಪ್ರವಾಸಿ ತಾಣಗಳಲ್ಲಿ ಎಲ್ಲಿ ನೋಡಿ ದರೂ ಜನವೋ ಜನ.
ಹೊಂಬೆಳಕಿನಲ್ಲಿ ಮಿಂದೇಳುವ ಪ್ಯಾಲೇಸ್: ಆಕಾಶದ ನಕ್ಷತ್ರಗಳೇ ನಾಚುವಂಥ ಬೆರಗು, ಅರಮ ನೆಯ ದೀಪಾಲಂಕಾರವಾಗಿದ್ದು, ದಸರಾ ವೇಳೆ ಮೈಸೂರು ನೋಡುವ ಯಾರ ಕಣ್ಣಲ್ಲೂ, ಆ ಚಿತ್ರ ಅಚ್ಚಳಿಯದಂತೆ ಉಳಿಯುತ್ತದೆ. ಸುಮಾರು ಒಂದು ಲಕ್ಷ ವಿದ್ಯುತ್ ದೀಪಗಳಿಂದ ಸ್ವರ್ಣ ವರ್ಣದಲ್ಲಿ ಝಗಮಗಿಸುವ ಅರಮನೆಯನ್ನು ನೋಡುವುದೇ ಕಣ್ಣಿಗಾನಂದ. ಕೇವಲ ಅರಮನೆ ಮಾತ್ರವೇ ಅಲ್ಲ. ನವರಾತ್ರಿ ಸಂದರ್ಭದಲ್ಲಿ ಮೈಸೂರು ನಗರದ ಪ್ರಮುಖ ವೃತ್ತಗಳು, ರಸ್ತೆಗಳು, ಪಾರಂಪರಿಕ ಕಟ್ಟಡಗಳು, ಬಣ್ಣ ಬಣ್ಣದ ಎಲ್‌ಇಡಿ ಬಲ್ಬ್ಗಳ ದೀಪಾಲಂಕಾರದಿಂದ ಕಂಗೊಳಿಸುತ್ತವೆ. ಈ ವರ್ಷದ ದಸರೆಗೆ ಅರಮನೆ ಸುತ್ತಲಿನ ರಸ್ತೆಗಳು ಸೇರಿದಂತೆ ಸಯ್ನಾಜಿರಾವ್ ರಸ್ತೆ, ಬಿಎನ್ ರಸ್ತೆ, ಇರ್ವಿನ್ ರಸ್ತೆ, ಅಲ್ಬರ್ಟ್ ವಿಕ್ಟರ್ ರಸ್ತೆ, ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿ ರಸ್ತೆ ಸೇರಿದಂತೆ ಸುಮಾರು 130 ಕಿ.ಮೀ. ಉದ್ದಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಹಾಗೆಯೇ ನಗರದ ಹೃದಯ ಭಾಗದ ಪ್ರಮುಖ ರಸ್ತೆಗಳು ಮಾತ್ರವಲ್ಲದೆ, ದೊಡ್ಡಕೆರೆ ಮೈದಾನ, ಕೆ.ಆರ್. ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ವೃತ್ತ(ಹಾರ್ಡಿಂಜ್), ರಾಮಸ್ವಾಮಿ ವೃತ್ತ, ರೈಲ್ವೆ ನಿಲ್ದಾಣ ಸಮೀಪ, ಗನ್‌ಹೌಸ್, ಎಲ್‌ಐಸಿ ವೃತ್ತ ಸೇರಿದಂತೆ 100 ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಭುವನೇಶ್ವರಿ ದೇವಿ, ಸೋಮನಾಥೇಶ್ವರ ದೇವಾಲಯ, ಮೈಸೂರು ರಾಜಮನೆತನದ ಪ್ರಮುಖರು ಸೇರಿದಂತೆ 65 ಪ್ರತಿಕೃತಿಗಳನ್ನು ಸ್ಥಾಪಿಸಲಾಗಿದೆ. ಒಟ್ಟಾರೆ, ಮೈಸೂರಿನ ದಸರೆ ವಿದ್ಯುತ್ ದೀಪಾಲಂಕಾರಕ್ಕೆ 2 ಲಕ್ಷದ 42 ಸಾವಿರದ 12 ಯೂನಿಟ್ ಬಳಕೆಯಾಗಲಿದೆ. ಇದೇ ಮೊದಲ ಬಾರಿಗೆ ದಸರಾ ವಿದ್ಯುತ್ ದೀಪಾಲಂಕಾರ ಉಪಸಮಿತಿಯಿಂದ ಆಯೋಜಿಸಿರುವ ಡ್ರೋನ್ ಶೋ ನವರಾತ್ರಿ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಿದೆ. ದಸರಾ ದಿನಗಳಲ್ಲಿ ರಾತ್ರಿ ವೇಳೆಯಲ್ಲಿ ದೀಪಾಲಂಕಾರ ವ್ಯವಸ್ಥೆಯನ್ನು ವೀಕ್ಷಿಸಲು ದೇಶ- ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ರಾತ್ರಿ ಹೊತ್ತು ಅರಮನೆಯ, ಮೈಸೂರು ಬೀದಿಗಳ ಫೋಟೊಗ್ರಫಿ ಮಾಡುವ ದೃಶ್ಯಗಳು ಇಲ್ಲಿ ಸಾಮಾನ್ಯ.
– ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.