Pakistan ಮೋಸ್ಟ್ ವಾಂಟೆಡ್‌ಗಳ ನಿಗೂಢ ಹತ್ಯೆ!;ಮಾಹಿತಿ ಇಲ್ಲಿದೆ
ಪಾಕಿಸ್ಥಾನ ಮೌನವಾಗಿರುವುದಕ್ಕೆ ಕಾರಣವೂ ಇದೆ
Team Udayavani, Dec 11, 2023, 6:10 AM IST
ಪಾಕಿಸ್ಥಾನ ಸರಕಾರ ಕುತ್ಸಿತ ಬುದ್ಧಿಯಿಂದ ಜಮ್ಮು -ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಾ ಬಂದಿರುವುದು ಹೊಸ ವಿಷಯವಲ್ಲ. ವಿಧ್ವಂಸಕ ಕೃತ್ಯ ಎಸಗಿ ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಪಾಕ್ ಉಗ್ರರು ಈಗ ಪಾಕಿಸ್ಥಾನದ ನೆಲದಲ್ಲಿ ಒಬ್ಬೊಬ್ಬರಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಅವರು ಲಷ್ಕರ್, ಹಿಜ್ಬುಲ್, ಜೈಶ್, ಅಲ್ ಬದರ್ ಸೇರಿದಂತೆ ಹಲವು ಉಗ್ರ ಸಂಘಟನೆಗಳ ನಾಯಕರ ಜತೆಗೆ ಗುರುತಿಸಿಕೊಂಡವರು. ಪಾಕಿಸ್ಥಾನ ಸರಕಾರವಾಗಲೀ, ಮಾಧ್ಯಮಗಳಾಗಲೀ ಈ ಬಗ್ಗೆ ತುಟಿ ಪಿಟಿಕ್ ಎನ್ನುತ್ತಿಲ್ಲ. ಭಾರತದ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯ ಅನ್ವಯ ಅಂಥ 36 ಮಂದಿಯನ್ನು ಭಯೋತ್ಪಾದಕರು ಎಂದು ಘೋಷಿಸಲಾಗಿದೆ. ಅವರ ನಿಗೂಢ ಸಾವಿನ ಕುರಿತ ಮಾಹಿತಿ ಇಲ್ಲಿದೆ.
ಎರಡು ವರ್ಷ; 22 ಮಂದಿ
ಮೊನ್ನೆ ಮೊನ್ನೆಯವರೆಗೆ ಅಂದರೆ ಡಿ.5ರ ವರೆಗೆ ಉಗ್ರ ಅದ್ಮಾನ್ ತಾನ್‌ಜ್ಲಾವರೆಗೆ ಒಟ್ಟು 22 ಮಂದಿಯನ್ನು ಅನಾಮಧೇಯರು ಗುಂಡು ಹಾರಿಸಿ ಕೊಂದಿದ್ದಾರೆ. ಇಂಥ ಕೃತ್ಯ ಮಾಡುತ್ತಿರುವುದು ಯಾರು ಎಂಬ ಪ್ರಶ್ನೆಗೆ ಯಾರಲ್ಲಿಯೂ ಉತ್ತರವೇ ಇಲ್ಲ. ಕುತೂಹಲಕಾರಿ ವಿಚಾರವೆಂದರೆ, ತನ್ನ ದೇಶದಲ್ಲಿ ಏನಾದರೂ ಅನಾಹುತವಾದರೆ ಭಾರತ ಸರಕಾರವನ್ನೇ ಬೆಟ್ಟು ಮಾಡಿ ತೋರಿಸುವ ಪಾಕಿಸ್ಥಾನ ಕೂಡ ಈ ಬಗ್ಗೆ ಮೌನ ವಹಿಸಿದೆ ಎನ್ನುವುದು ಗಮನಾರ್ಹ ಅಂಶ.
ಒಂದೇ ಬಾರಿಗೆ ಮೂವರು ಅನುಚರರು
ಕಳೆದ ತಿಂಗಳ ಮೊದಲ ಎರಡು ವಾರಗಳಲ್ಲಿ ಜಮ್ಮು- ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯ ನಡೆಸುತ್ತಿದ್ದ ಲಷ್ಕರ್ ಮತ್ತು ಜೈಶ್ ಉಗ್ರ ಸಂಘಟನೆಗಳ ನಾಯಕರ ಜತೆಗೆ ಗುರುತಿಸಿಕೊಂಡಿದ್ದವರನ್ನು ರಹಸ್ಯವಾಗಿ ಮುಗಿಸಲಾಗಿತ್ತು. ಈ ಪೈಕಿ ಲಷ್ಕರ್ ಸಂಘಟನೆಯ ಮುಖ್ಯ ನೇಮಕದಾರ ಮೌಲಾನಾ ಮಸೂದ್ ಅಜರ್‌ನ ಪ್ರಧಾನ ಅನುಚರ ಮೌಲಾನಾ ರಹೀಮ್ ಉಲ್ಲಾ ತಾರೀಖ್‌ನನ್ನು ಅಪರಿ ಚಿತರು ಗುಂಡು ಹಾರಿಸಿ ಕೊಂದಿದ್ದರು. ನ.10ರಂದು ಲಷ್ಕರ್‌ನ ಮತ್ತೂಬ್ಬ ನಾಯಕ ಅಕ್ರಂ ಘಾಜಿ ಎಂಬಾತನನ್ನು ಗುಂಡು ಹಾರಿಸಿ ಮುಗಿಸಿದ್ದರು. ಅದಕ್ಕಿಂತ ಮೊದಲು ನ.6ರಂದು ಲಷ್ಕರ್‌ನ ಇನ್ನೊಬ್ಬ ಉಗ್ರ ಖ್ವಾಜಾ ಶಾಹಿದ್ ಎಂಬಾತನನ್ನು ಅಪಹರಿಸಲಾಗಿತ್ತು. ಅನಂತರ ಶಿರಚ್ಛೇದ ಗೊಳಿಸಲಾದ ಆತನ ದೇಹ ಪಾಕಿಸ್ಥಾನ ವ್ಯಾಪ್ತಿಯ ಎಲ್‌ಒಸಿಯಲ್ಲಿ ಪತ್ತೆಯಾಗಿತ್ತು.
ಯಾವಾಗಿನಿಂದ ಆರಂಭ, ಹೇಗೆ?
2008ರ ನ.26ರ ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನನ್ನು ಕೊಲ್ಲುವ ಪ್ರಯತ್ನ 2021ರಲ್ಲಿ ಲಾಹೋರ್‌ನಲ್ಲಿ ನಡೆದಿತ್ತು. ಆ ಘಟನೆಯ ಬಳಿಕ ದೇಶದಲ್ಲಿ ಮೋಸ್ಟ್ ವಾಂಟೆಡ್ ಉಗ್ರರು ಮತ್ತು ಘಾತಕ ಕೃತ್ಯಗಳಲ್ಲಿ ಪಾಲ್ಗೊಂಡವರನ್ನು ಗುರುತಿಸಿ ರಹಸ್ಯವಾಗಿ ಮುಗಿಸುವ ಕೆಲಸಗಳು ಆರಂಭವಾದವು ಎನ್ನಬಹುದು. ಅವರನ್ನು ಮುಗಿಸುವ ಕೆಲಸ ಕೂಡ ಹೆಚ್ಚಾ ಕಡಿಮೆ ಒಂದೇ ರೀತಿ ಇರುತ್ತದೆ. ಮೋಟರ್ ಸೈಕಲ್‌ನಲ್ಲಿ ಇಬ್ಬರು ಬರುತ್ತಾರೆ ಮತ್ತು ನಿಗದಿತ ಉಗ್ರನನ್ನು ಗುಂಡು ಹಾರಿಸಿ ಕೊಂದು ಪರಾರಿ ಯಾಗುತ್ತಾರೆ. ಕೆಲವೊಂದು ಹಂತದಲ್ಲಿ ಈ ರೀತಿ ಕೊಲ್ಲಲು ಬರುವವರು ನಾಲ್ಕರಿಂದ ಆರು ಮಂದಿ ಇರುತ್ತಾರೆ. ಎರಡು ವರ್ಷಗಳಿಂದ ಪಾಕಿಸ್ಥಾನದಲ್ಲಿ ನಿಗೂಢವಾಗಿ ಜೀವ ಕಳೆದುಕೊಂಡವರು ನಮ್ಮ ದೇಶದಲ್ಲಿ ಒಂದಲ್ಲ ಒಂದು ದುಷ್ಕೃತ್ಯ ಎಸಗಿದವರೇ ಆಗಿದ್ದಾರೆ.
ಪಾಕಿಸ್ಥಾನದ ಪ್ರತಿಕ್ರಿಯೆಯೇ ಇಲ್ಲ
ಇದುವರೆಗೆ ಒಟ್ಟು 22 ಮಂದಿ ನಿಗೂಢವಾಗಿ ಜೀವ ಕಳೆದುಕೊಂಡಿದ್ದರೂ, ಅದರ ಬಗ್ಗೆ ಪಾಕಿಸ್ಥಾನ ಸರಕಾರ ಮತ್ತು ಆ ದೇಶದ ಮಾಧ್ಯಮ ಪ್ರತಿಕ್ರಿಯೆ ಕೊಟ್ಟೇ ಇಲ್ಲ. ಇದೆಲ್ಲದಕ್ಕೆ ಅಪವಾದ ಎಂಬಂತೆ ಕರಾಚಿಯಲ್ಲಿ ನ.13ರಂದು ಉಗ್ರ ಮೌಲಾನಾ ಮಸೂದ್ ಅಜರ್‌ನ ಅನುಚರ ಮೌಲಾನಾ ರಹೀಮ್ ಉಲ್ಲಾ ತಾರೀಖ್ ಎಂಬಾತನನ್ನು ಕರಾಚಿಯಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಆ ಪ್ರಕರಣವನ್ನು ಅಲ್ಲಿನ ಮಾಧ್ಯಮಗಳು ಧಾರ್ಮಿಕ ಮುಖಂಡರೊಬ್ಬರ ಹತ್ಯೆ ಎಂದಷ್ಟೇ ಬಿಂಬಿಸಿ ವರದಿ ಮಾಡಿದ್ದವು. ನ.9ರಂದು ಅಕ್ರಂ ಖಾನ್ ಎಂಬ ಲಷ್ಕರ್‌ನ ನೇಮಕ ವಿಭಾಗದ ಉಗ್ರನನ್ನು ಖೈಬರ್ ಪಖು¤ಂಖ್ವಾದ ಬಜೌರ್ ಜಿಲ್ಲೆಯಲ್ಲಿ ಕೊಲ್ಲಲಾಗಿತ್ತು. ಅಲ್ಲಿನ ಪತ್ರಿಕೆಗಳಲ್ಲಿನ ವರದಿಗಳಲ್ಲಿ, ಸ್ಥಳೀಯ ಮಸೀದಿಯಲ್ಲಿ ಪ್ರಾರ್ಥನೆಗೆ ಕರೆ ನೀಡುವ ವ್ಯಕ್ತಿಯನ್ನು ಅಪರಿಚಿತರು ಹತ್ಯೆ ಮಾಡಿದ್ದಾರೆ ಎಂದು ಪ್ರಕಟಿಸಲಾಗಿತ್ತು.
ಪಾಕಿಸ್ಥಾನ ಮೌನವಾಗಿರುವುದಕ್ಕೆ ಕಾರಣವೂ ಇದೆ
ನಿಗೂಢವಾಗಿ ಪಾಕಿಸ್ಥಾನದಲ್ಲಿ ಜೀವ ಕಳೆದುಕೊಂಡ ಅಷ್ಟೂ ಮಂದಿಯ ಪೂರ್ಣ ವಿವರಗಳನ್ನು ಭಾರತ ಸರಕಾರ ಆ ದೇಶದ ಸರಕಾರಕ್ಕೆ ಹಿಂದಿನ ಹಲವು ಸಂದರ್ಭಗಳಲ್ಲಿ ಸಲ್ಲಿಸಿತ್ತು. ಅದನ್ನು ಸ್ವೀಕರಿಸುವುದರ ಬಗ್ಗೆ ಪಾಕಿಸ್ಥಾನ ಸರಕಾರ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಪ್ಯಾರಿಸ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಗ್ರ ಸಂಘಟನೆಗಳಿಗೆ ಸಿಗುವ ವಿತ್ತೀಯ ನೆರವಿಗೆ ತಡೆ ಹಾಕುವ ಕಾರ್ಯಪಡೆ (ಎಫ್ಎಟಿಎಫ್)ಯಿಂದ ಕಪ್ಪುಪಟ್ಟಿಗೆ ಸೇರ್ಪಡೆಯಾಗುವುದನ್ನು ತಪ್ಪಿಸಲು ಪಾಕ್ ಈ ಜಾಣ ನಡೆ ಅನುಸರಿಸುತ್ತಿದೆ ಎನ್ನುವುದು ಸ್ಪಷ್ಟ. ಜತೆಗೆ ಹತ್ಯೆಗೀಡಾದ ವ್ಯಕ್ತಿಗಳ ಹೆಸರು ಪಾಕಿಸ್ಥಾನ ಸರಕಾರದ ತನಿಖಾ ಸಂಸ್ಥೆಗಳಲ್ಲಿಯೂ ಕೂಡ ಯಾವ ರೀತಿಯಲ್ಲೂ ಉಲ್ಲೇಖಗೊಂಡಿಲ್ಲ.
ಹತ್ಯೆಗೀಡಾದ ಉಗ್ರರ ವಿವರ
1 ಖ್ವಾಜಾ ಸಾಹಿದ್, ನ.6: ಪಿಒಕೆಯಲ್ಲಿ ಆತನನ್ನು ಅಪಹರಿಸಿ ಶಿರಚ್ಛೇದ ಮಾಡಲಾಗಿತ್ತು. 2018ರಲ್ಲಿ ಜಮ್ಮುವಿನಲ್ಲಿ ಸೇನಾ ನೆಲೆಯ ಮೇಲೆ ನಡೆದ ದಾಳಿಯ ರೂವಾರಿ.
2 ಅಕ್ರಮ್ ಘಾಜಿ, ನ.10: ಖೈಬರ್ ಪಖ್ತು0ಖ್ವಾದಲ್ಲಿ ಗುಂಡು ಹಾರಿಸಿ ಹತ್ಯೆ. ಕಾಶ್ಮೀರ ಕಣಿವೆಯಲ್ಲಿ ಉಗ್ರರ ಒಳನುಸುಳುವಿಕೆಗೆ ನೆರವು ಆತನ ಪ್ರಧಾನ ಕೃತ್ಯ
3 ಮೌಲಾನಾ ರಹೀಮ್ ಉಲ್ಲಾ ತಾರೀಖ್, ನ.14: ಜೈಶ್‌ನ ಮೌಲಾನಾ ಮಸೂದ್ ಅಜರ್‌ನ ನಿಕಟವರ್ತಿ. ಕರಾಚಿಯಲ್ಲಿ ಅಪರಿಚಿತರಿಂದ ಹತ್ಯೆ.
4 ಮೌಲಾನಾ ಶೇರ್ ಬಹದ್ದೂರ್, ಡಿ.3: ಜೈಶ್ ಉಗ್ರ ಸಂಘಟನೆ ಬೆಂಬಲಿಗ.
5 ಲಖ್‌ಬೀರ್ ಸಿಂಗ್ ರೋಡೆ, ಡಿ.2: ಜರ್ನೈಲ್ ಸಿಂಗ್ ಬಿಂದ್ರನ್‌ವಾಲೆಯ ಸಂಬಂಧಿ.
ಪಂಜಾಬ್‌ಗ ಟಿಫಿನ್ ಬಾಂಬ್, ಮಾದಕ ವಸ್ತುಗಳ ಸಾಗಣೆಯಲ್ಲಿ ಭಾಗಿ.
6 ಅದ್ನಾನ್ ಅಹ್ಮದ್, ಡಿ.5: 2016ರಲ್ಲಿ ಪಾಂಪೋರ್ ಎಂಬಲ್ಲಿ ಸಿಆರ್‌ಪಿಎಫ್ ಕ್ಯಾಂಪ್ ಮೇಲೆ, ಉಧಾಂಪುರದಲ್ಲಿ ನಡೆದ ದಾಳಿಯ ರೂವಾರಿ.
7 ಶಾಹಿದ್ ಲತೀಫ್, ಅ.11: 2016ರಲ್ಲಿ ಪಠಾಣ್‌ಕೋಟ್ ದಾಳಿಯ ಸೂತ್ರಧಾರ. ಆತ ಜೈಶ್ ಉಗ್ರ ಸಂಘಟನೆ ಜತೆಗೆ ಗುರುತಿಸಿಕೊಂಡಿದ್ದ.
8 ಜಿಯಾ ಉರ್ ರೆಹಮಾನ್, ಸೆ.29: ದೇಶದಲ್ಲಿ ಜೆಹಾದ್ ಕೃತ್ಯ ನಡೆಸಲು ಪ್ರೇರೇಪಿಸುತ್ತಿದ್ದ. ಯುವಕ ರನ್ನು ಭಾರತದ ವಿರುದ್ಧ ಎತ್ತಿಕಟ್ಟುವಲ್ಲಿ ತರಬೇತಿ.
9 ಸುಖೂªಲ್ ಸಿಂಗ್, ಸೆ.21: ಕೆನಡಾದಲ್ಲಿರುವ ಖಲಿಸ್ಥಾನಿ ಉಗ್ರ ಅರ್ಶ್‌ದೀಪ್ ಸಿಂಗ್‌ನ ನಿಕಟವರ್ತಿ.
10 ಅಬು ಖಾಸಿಂ ಕಾಶ್ಮೀರಿ, ಸೆ.8: ಜ.1ರಂದು ರಜೌರಿಯ ಧಾಂಗ್ರಿಯಲ್ಲಿ ನಡೆದ ದಾಳಿಯ ರೂವಾರಿ.
11 ಸರ್ದಾರ್ ಹುಸೈನ್ ಅರೈನ್, ಆ.1: ಲಷ್ಕರ್ ಉಗ್ರ ಹಫೀಜ್ ಸಯೀದ್‌ನ ನಿಕಟವರ್ತಿ
12 ಅವತಾರ್ ಸಿಂಗ್ ಖಾಂಡಾ, ಜೂ.16: ಬರ್ಮಿಂಗ್‌ಹ್ಯಾಮ್ ಆಸ್ಪತ್ರೆಯಲ್ಲಿ ನಿಧನ.
13 ಹರ್‌ದೀಪ್ ಸಿಂಗ್ ನಿಜ್ಜರ್, ಜೂ.19: ಖಲಿಸ್ಥಾನ್ ಟೈಗರ್ ಫೋರ್ಸ್‌ನ ಸಂಸ್ಥಾಪಕ
14 ರಿಯಾಜ್ ಅಹ್ಮದ್, ಸೆಪ್ಟಂಬರ್: ಧಾಂಗ್ರಿಯಲ್ಲಿ ನಡೆದಿದ್ದ ದಾಳಿಯ ರೂವಾರಿ.
15 ಮೌಲಾನಾ ಜಿಯಾವುರ್ ರೆಹಮಾನ್, ಸೆಪ್ಟಂಬರ್: ಲಷ್ಕರ್ ಉಗ್ರ, ಕರಾಚಿಯಲ್ಲಿ ಹತ್ಯೆ
16 ಮುಫ್ತಿ ಖಾಸಿರ್ ಫಾರೂಕಿ, ಸೆಪ್ಟಂಬರ್: ಕರಾಚಿಯಲ್ಲಿ ನಿಗೂಢ ಸಾವು.
17 ಮುಲ್ಲಾ ಸರ್ದಾರ್ ಹುಸೇನ್ ಆರಿನ್, ಆಗಸ್ಟ್: ಸಿಂಧ್‌ನಲ್ಲಿ ಸಾವು.
18 ಪರಮ್‌ಜಿತ್ ಸಿಂಗ್ ಪಂಜ್ವಾರ್, ಮೇ: ಲಾಹೋರ್‌ನಲ್ಲಿ ಸಾವಿಗೀಡಾದ ಖಲಿಸ್ಥಾನ ಕಮಾಂಡರ್.
19 ಬಶೀರ್ ಅಹ್ಮದ್ ಪೀರ್, ಮಾರ್ಚ್: ಹಿಜ್ಬುಲ್ ಜತೆಗೆ ಗುರುತಿಸಿಕೊಂಡವ. ರಾವಲ್ಪಿಂಡಿಯಲ್ಲಿ ಸಾವು.
20 ಸಯ್ಯದ್ ನೂರ್, ಮಾರ್ಚ್:ಖೈಬರ್ ಜಿಲ್ಲೆಯಲ್ಲಿ ಸಾವು.
21 ಸಯ್ಯದ್ ಖಾಲಿದ್ ರಾಜಾ, ಫೆಬ್ರವರಿ: ಅಲ್-ಬದರ್ ಮುಜಾಹಿದೀನ್, ಕರಾಚಿಯಲ್ಲಿ ನಿಗೂಢ ಮರಣ.
22 ಮಿಸ್ತ್ರಿ ಝಹೂರ್ ಇಬ್ರಾಹಿಂ, ಫೆಬ್ರವರಿ: 1999ರ ಏರ್ ಇಂಡಿಯಾ ವಿಮಾನ ಅಪಹರಣಕಾರರಲ್ಲಿ ಒಬ್ಟಾತ. ಕರಾಚಿಯಲ್ಲಿ ಸಾವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.