ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

"ನಿನ್ನುದ್ಧಾರ ಎಷ್ಟಾಯಿತು' ಎಂಬ ಕಥಾ ಸಂಕಲನದಿಂದ ಅಕ್ಷರ ಕೃಷಿ ಆರಂಭ, ಮಲೆನಾಡಿಗೆ ಧಕ್ಕೆ ಆದಾಗ ಸಿಡಿದೇಳುತ್ತಿದ್ದ ಸಾಹಿತಿ, ಮಲೆನಾಡಿಗರ ಕೂಗನ್ನು ಕೇಂದ್ರ ಸರಕಾರ‌ಕ್ಕೂ ಮುಟ್ಟಿಸಿದ್ದರು ನಾ.ಡಿ

Team Udayavani, Jan 6, 2025, 7:45 AM IST

Na-Dsoza-Family

ಸಾಗರ: ಲೋಕೋಪಯೋಗಿ ಇಲಾಖೆಯ ಬೆರಳ­ಚ್ಚು­ಗಾರ, ಕನ್ನಡ ಸಾರಸ್ವತ ಲೋಕದ ಕಥೆಗಾರ, ಕಾದಂಬರಿಕಾರರಾದುದು ಒಂದು ಅಚ್ಚರಿಯಾದರೆ, ಸಾಹಿತ್ಯಕ್ಕೆ ಸೀಮಿತವಾಗದೆ ಮಲೆನಾಡಿನ ಜನರ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾದುದು ವಿಶಿಷ್ಟವೆನಿಸುತ್ತದೆ.

2013ರ ಮಡಿಕೇರಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಗಮನ ಸೆಳೆದಿದ್ದ ಡಾ| ನಾ.ಡಿ’ಸೋಜಾ ಅಂತಹ ಹೆಮ್ಮೆಗೆ ಪಾತ್ರರು. ಅವರನ್ನು ಅವರ ಪೂರ್ಣ ನಾಮಧೇಯವಾದ ನಾಬರ್ಟ್‌  ಡಿ’ಸೋಜಾ ಎಂದರೆ ಬಹುಜನರಿಗೆ ಪರಿಚಯವೇ ಆಗುವುದಿಲ್ಲ. ಟೈಪಿಸ್ಟ್‌ ಆಗಿ ಕಾರ್ಗಲ್‌, ಮಾಸ್ತಿಕಟ್ಟೆ, ತೀರ್ಥಹಳ್ಳಿ, ಸಾಗರದ ಭಾಗದಲ್ಲಿ ಕೆಲಸ ಮಾಡಿದ ಅವರು ಬಹುಕಾಲ ಮುಳುಗಡೆಯ ಸಂತ್ರಸ್ತರ ಸಮೀಪದಲ್ಲಿಯೇ ಕಾರ್ಯ ನಿರ್ವಹಿಸಿದ್ದು ಅವರ ಬದುಕನ್ನು ಪ್ರಭಾವಿಸಿತು. ಅವರ ಬರೆವಣಿಗೆಯ ಬದುಕಿಗೆ ಮೂಲಧಾತುವೂ ಆಗಿ ನಾ.ಡಿ’ಸೋಜಾ ಅವರನ್ನು ಮುಳುಗಡೆ ಸಾಹಿತಿ ಎಂದು ಕರೆಯುವಂತಾಯಿತು.

ಸಾಹಿತ್ಯ ಲೋಕದಲ್ಲಿ ಅವರದೇ ಶೈಲಿಯ ಬರಹಗಾರರಾಗಿ ಅವರು ಪರಿಚಿತರು. “ನಿನ್ನುದ್ಧಾರ ಎಷ್ಟಾಯಿತು’ ಎಂಬ ಕಥಾ ಸಂಕಲನದಿಂದ ಆರಂಭವಾದ ಅವರ ಬರೆವಣಿಗೆಯ ಕ್ಷೇತ್ರದಲ್ಲಿ ಅವರು ಮುಟ್ಟದ ಪ್ರಕಾರವೇ ಇಲ್ಲ ಎಂಬುದು ಇನ್ನೊಂದು ಪ್ರಮುಖ ಅಂಶ. ಆರಂಭಿಕ ದಿನಗಳಲ್ಲಿ ಮಂಜಿನ ಕಾನು, ನೆಲೆ, ಮಾನವ ತರಹದ ಕಾದಂಬರಿಗಳು, ದೇವರಿಗೆ ದಿಕ್ಕು, ಭರತಪ್ಪನ ಸಂಸಾರ, ಮುಂದೇನು ತರಹದ ನಾಟಕ ಬರೆದ ನಾಡಿ, ಮುಳುಗಡೆ ಎಂಬ ಲಿಂಗನಮಕ್ಕಿ ಅಣೆಕಟ್ಟೆಯಿಂದ ಸಂತ್ರಸ್ತರಾದ ಜನರ ಕಥೆ ಬರೆಯುವ ಮೂಲಕ ಜನರ ಮನ ಮುಟ್ಟಿದರು.

ಮುಳುಗಡೆ, ಕುಂಜಾಲು ಕಣಿವೆಯ ಕೆಂಪು ಹೂವು, ಕಾಡಿನ ಬೆಂಕಿ ಮೊದಲಾದ ಅವರ ಕಾದಂಬರಿಗಳು ಸಿನೆಮಾಗಳಾಗಿವೆ. ಕಾಡಿನಬೆಂಕಿ, ದ್ವೀಪ ಸಿನೆಮಾಗಳಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿವೆ. ಶಿಕಾರಿಪುರ ಸುವ್ವೀ  ಪ್ರಕಾಶನ ನಾಡಿಯವರ ಸಮಗ್ರ ಕಾದಂಬರಿಗಳ ಸಂಪುಟವನ್ನೇ ಹೊರತಂದಿದೆ. ಮಕ್ಕಳ ಸಾಹಿತ್ಯಕ್ಕೆ ವಿಪುಲ ಕೊಡುಗೆ ನೀಡಿದವರು ನಾಡಿಯವರು. ಮಕ್ಕಳ ನಾಟಕ, ಕಥೆ, ಕಾದಂಬರಿ ಬರೆದ ಅವರ ಮಕ್ಕಳ ನಾಟಕ “ಭೂತ’, ಹಕ್ಕಿಗೊಂದು ಗೂಡು ಕೊಡಿ ಮೊದಲಾದವು ಉಲ್ಲೇಖಾರ್ಹ. ಪತ್ರಿಕೆಗಳಲ್ಲಿ ಮಕ್ಕಳ ಕಾದಂಬರಿ ಬರೆಯುವ ವಿಶಿಷ್ಟ ಸಂಪ್ರದಾಯವನ್ನು ನಾಡಿಯವರು “ತರಂಗ’ ವಾರಪತ್ರಿಕೆಯಲ್ಲಿ ಮಾಡಿದ್ದರು.

ಮಕ್ಕಳ ಕಾದಂಬರಿ ಬರೆದಿದ್ದುದರಿಂದ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿತ್ತು. ಒಂದು ಹಂತದಲ್ಲಿ ಪತ್ರಿಕೆಗಳಲ್ಲಿ ಧಾರಾವಾಹಿ ಆಗುವಂತಹ ಕಾದಂಬರಿಗಳನ್ನು ನಾಡಿ ಬರೆಯುತ್ತಿದ್ದುದರಿಂದ ಸಾಗರದಲ್ಲಿ ಸಾಹಿತ್ಯಿಕ ಸಂಘಟನೆ “ಒಡನಾಟ’ ಕಟ್ಟಿ ಬೆಳೆಸಿದ್ದುದರಲ್ಲಿ ನಾಡಿಯವರ ಪಾತ್ರ ಅತ್ಯಂತ ಹಿರಿದು. ಅವರದರ ಅಧ್ಯಕ್ಷರಾಗಿ ನಾಡಿನ ಹಿರಿಯ ಸಾಹಿತಿಗಳನ್ನು ಸಾಗರಕ್ಕೆ ಇಲ್ಲಿನ ತಾಲೂಕು ಸಾಹಿತ್ಯ ಪರಿಷತ್‌ಗೆ ಪೈಪೋಟಿ ನೀಡಿ ಕರೆಸುತ್ತಿದ್ದರು. ಚೆನ್ನವೀರ ಕಣವಿ, ಚಂದ್ರಶೇಖರ್‌ ಪಾಟೀಲ್‌, ಕುರ್ತಕೋಟಿ, ನಾಗತಿಹಳ್ಳಿ ಚಂದ್ರಶೇಖರ್‌ ಮೊದಲಾದ ಹತ್ತಾರು ಸಾಹಿತಿಗಳನ್ನು ಕರೆಸಿ ಸಾಗರದ ಜನರಿಗೆ ಸಾಹಿತ್ಯ ರಸದೌತಣ ನೀಡಿದ್ದರು.

ಚಿನ್ನದ ಗಣಿ ವಿರೋಧಿಸಿದ್ದರು:
ಸಾಗರದ ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾಗುವ ಮೂಲಕ ನಾಡಿ, ನಾಡಿನ ಗಮನ ಸೆಳೆದಿದ್ದರು. ಸಾಗರ ತಾಲೂಕಿನಲ್ಲಿ ಚಿನ್ನದ ಗಣಿಗಾರಿಕೆ ಆರಂಭವಾಗುತ್ತದೆ ಎಂದಾಗ ಅವರು ಗಣಿ ವಿರೋಧಿ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿ ಸಾಹಿತಿಯಾದವರು ಕೇವಲ ಬರೆಹಗಳ ಮೂಲಕ ಜಾಗೃತಿ ಮಾಡಿದರೆ ಸಾಲದು. ಅವರು ಕ್ರಿಯಾಶೀಲವಾಗಿ ಹೋರಾಟಗಳಲ್ಲಿ ಪಾಲ್ಗೊಳ್ಳಬೇಕು ಎಂಬ ಮಾತನ್ನು ಪ್ರತಿಪಾದಿಸಿದ್ದರು.

ಅತ್ಯುತ್ತಮ ವಾಗ್ಮಿಯಾಗಿದ್ದ ಅವರು, ಸಾಗರದಾದ್ಯಂತ ಸಂಚರಿಸಿ ಜನಜಾಗೃತಿ ಮಾಡಿದ್ದರು. ಆ ವೇಳೆ ಸಾಗರ ಬಂದ್‌ ವೇಳೆ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ಹೆಗ್ಗೊàಡಿನ ನೀನಾಸಂನ ಕೆ.ವಿ.ಸುಬ್ಬಣ್ಣ “ಪ್ರತ್ಯೇಕ ಮಲೆನಾಡು ರಾಜ್ಯ’ದ ಆ ಕಾಲಕ್ಕೆ ಅಪರೂಪವಾಗಿದ್ದ ಘೋಷಣೆ ಮಾಡಿದಾಗ ಪಕ್ಕದಲ್ಲಿದ್ದ ನಾ.ಡಿ’ಸೋಜಾ ಮಲೆನಾಡಿನ ಹಿತಕ್ಕೆ ಧಕ್ಕೆ ಎಂತಾದಾಗಲೆಲ್ಲ ಹೋರಾಟಕ್ಕಿಳಿದ್ದಿದ್ದರು. ಇತ್ತೀಚೆಗೆ ಶರಾವತಿಯ ನೀರನ್ನು ಲಿಂಗನಮಕ್ಕಿ ಅಣೆಕಟ್ಟೆಯಿಂದ ರಾಜಧಾನಿ ಬೆಂಗಳೂರಿಗೆ ಒಯ್ಯುವ ಪ್ರಸ್ತಾವ ಬಂದಾಗ ಶಿವಮೊಗ್ಗ ಜಿಲ್ಲೆಯಲ್ಲಿ ವಿರೋಧಿಸಿ ನಡೆದ ಹೋರಾಟದಲ್ಲೂ ವಯೋಸಹಜ ಹಿಂಜರಿಕೆಯ ಹೊರತಾಗಿಯೂ ಮುಂಚೂಣಿಯಲ್ಲಿ ನಿಂತಿದ್ದರು.

ನಾಡಿ ಮಲೆನಾಡಿಗರ ಕೂಗನ್ನು ಕೇಂದ್ರ ಸರಕಾರಕ್ಕೆ ಗಾಂಧಿ ಮಾರ್ಗದಲ್ಲಿ ಮುಟ್ಟಿಸಿದ್ದು ಇನ್ನೊಂದು ಪ್ರಮುಖ ಅಂಶ. ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ರೈಲಿನ ಸೌಲಭ್ಯ ಸಾಗರ ತಾಲೂಕಿನ ತಾಳಗುಪ್ಪದವರೆಗೆ ಇತ್ತಾದರೂ ರೈಲ್ವೇ ಇಲಾಖೆಯ ನಿರ್ಲಕ್ಷ್ಯದಿಂದ ಇಲ್ಲಿನ ನ್ಯಾರೋಗೇಜ್‌ ರೈಲನ್ನು ನಿಲ್ಲಿಸಿ, ಹಳಿಗಳನ್ನೇ ಕಿತ್ತೂಯ್ಯುವ ಸನ್ನಾಹದಲ್ಲಿದ್ದಾಗ ಬ್ರಾಡ್‌ ಗೇಜ್‌ ರೈಲು ಹೋರಾಟ ಸಮಿತಿಯನ್ನು ರೂಪಿಸಿ, ಅದರ ನೇತೃತ್ವ ವಹಿಸಿ, ಪತ್ರ ಚಳವಳಿ, ಜನಪ್ರತಿನಿಧಿಗಳು ಹಾಗೂ ರೈಲ್ವೇ ಅಧಿಕಾರಿಗಳ ಭೇಟಿ, ಧರಣಿ, ಪ್ರತಿಭಟನೆ ಮೊದಲಾದ ಜನತಾಂತ್ರಿಕ ವಿಧಾನಗಳ ಮೂಲಕವೇ ಸಾಗರ, ತಾಳಗುಪ್ಪಕ್ಕೆ ರೈಲು ಉಳಿಸಿಕೊಟ್ಟಿದ್ದು ಚರಿತ್ರಾರ್ಹ.

ಇವತ್ತು ತಾಳಗುಪ್ಪದಿಂದ ಬೆಂಗಳೂರಿಗೆ ಇಂಟರ್‌ಸಿಟಿ ರೈಲು ಸೇರಿದಂತೆ ಹತ್ತಾರು ಟ್ರೈನ್‌ಗಳು ಜನದಟ್ಟಣೆಯಿಂದ ಸಂಚರಿಸುತ್ತಿದ್ದರೆ ನಾಡಿಯವರ ಆತ್ಮ ಸಮಾಧಾನದ ನಿಟ್ಟುಸಿರು ಬಿಡುತ್ತದೆನ್ನಬಹುದು. ನಾಡಿ ಸಾಗರದ ಸಹಜ ಉಸಿರಾಟವಾಗಿದ್ದರು. ಸಣ್ಣಪುಟ್ಟ ಕಾರ್ಯಕ್ರಮ ಗಳಿಂದ ಹಿಡಿದು ಸಾಗರದ ಎಲ್ಲ ಸಾಹಿತ್ಯಿಕ, ಕಲಾ ಕಾರ್ಯಕ್ರಮಗಳಿಗೆ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗುತ್ತಿತ್ತು. ಅವರು ಯಾವುದೇ ಅಹಂ ಇಲ್ಲದೆ ಭಾಗವಾಗುತ್ತಿದ್ದರು.

ಅವರಲ್ಲಿ ವಿಚಾರ ಶ್ರೀಮಂತಿಕೆ ಇತ್ತೇ ವಿನಾ ಈಗಲೂ ಸಾಗರದ ನೆಹರೂ ನಗರದ ಪುಟ್ಟ ಮನೆಯಲ್ಲಿಯೇ ವಾಸವಾಗಿದ್ದರು. ಕೆಲವು ತಿಂಗಳ ಹಿಂದೆ ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಮಗಳ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಅವರ ನಿರ್ಗಮನದಿಂದ ಕನ್ನಡದ ಸಾಹಿತ್ಯ ಕ್ಷೇತ್ರ ಅನಾಥವಾದರೆ ಸಾಗರದ ಜನತೆ ಒಬ್ಬ ನಿಜ ಅರ್ಥದ ಜನನಾಯಕನನ್ನು ಕಳೆದುಕೊಂಡಂತಾಗಿದೆ.

– ಮಾ.ವೆಂ.ಸ.ಪ್ರಸಾದ್‌

ಟಾಪ್ ನ್ಯೂಸ್

Udupi: ಜ. 9-15: ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ ಸಂಭ್ರಮ

Udupi: ಜ. 9-15: ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ ಸಂಭ್ರಮ

Ajit-Car-Accident

Car Crash: ಕಾರು ರೇಸ್‌ ತರಬೇತಿ ವೇಳೆ ನಟ ಅಜಿತ್‌ ಕುಮಾರ್‌ ಕಾರು ಅಪಘಾತ!

Ramamandir-Glaas

Ayodhya: ಕನ್ನಡಕದಲ್ಲಿ ರಹಸ್ಯ ಕ್ಯಾಮರಾ ಬಳಸಿ ರಾಮಮಂದಿರದ ಒಳದೃಶ್ಯಗಳ ಸೆರೆಹಿಡಿದ ಯುವಕ!

Satish Jarkiholi

Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ

Jaiswal in the Champions Trophy; debut in the England series?

Jaiswal: ಚಾಂಪಿಯನ್ಸ್‌ ಟ್ರೋಫಿಗೆ ಯಶಸ್ವಿ ಜೈಸ್ವಾಲ್;‌ ಇಂಗ್ಲೆಂಡ್‌ ಸರಣಿಯಲ್ಲೇ ಪದಾರ್ಪಣೆ?

Maha Kumbh Mela 2025: 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ- ಇದರ ಹಿಂದಿದೆ ರೋಚಕ ಸಂಗತಿ!

Maha Kumbh Mela 2025: 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ- ಇದರ ಹಿಂದಿದೆ ರೋಚಕ ಸಂಗತಿ!

BSY POCSO case: Dharwad High Court adjourns hearing to January 10

BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

1-asssaa

ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sullia ಮಾನಸಿಕ ಖಿನ್ನತೆ: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Sullia ಮಾನಸಿಕ ಖಿನ್ನತೆ: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Udupi: ಜ. 9-15: ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ ಸಂಭ್ರಮ

Udupi: ಜ. 9-15: ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ ಸಂಭ್ರಮ

Surathkal; ಗೋ ಅಕ್ರಮ ಸಾಗಾಟ ಪತ್ತೆ

Surathkal; ಅಕ್ರಮ ಗೋ ಸಾಗಾಟ ಪತ್ತೆ; ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

Ajit-Car-Accident

Car Crash: ಕಾರು ರೇಸ್‌ ತರಬೇತಿ ವೇಳೆ ನಟ ಅಜಿತ್‌ ಕುಮಾರ್‌ ಕಾರು ಅಪಘಾತ!

Mangaluru: ಮಾದಕ ವಸ್ತು ಸೇವನೆ ಆರೋಪ: ಯುವಕ ವಶಕ್ಕೆ

Mangaluru: ಮಾದಕ ವಸ್ತು ಸೇವನೆ ಆರೋಪ: ಯುವಕ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.