Nag Panchami ; ಪ್ರತ್ಯಕ್ಷ ದೇವನಿಗೆ ಪ್ರಥಮ ಪೂಜೆ
ಕುಟುಂಬ ಸಂಬಂಧವನ್ನು ಗಟ್ಟಿಗೊಳಿಸುವ ಹಬ್ಬ
Team Udayavani, Aug 9, 2024, 12:10 AM IST
ಕಲಿಯುಗದಲ್ಲಿ ದೇವರುಗಳು ಪ್ರತ್ಯಕ್ಷವಾಗಿ ಮಾನವನ ಕಣ್ಣಿಗೆ ಕಾಣುವುದಿಲ್ಲ. ವಿಗ್ರಹ ರೂಪದಲ್ಲಿ, ಶಿಲ್ಪರೂಪದಲ್ಲಿ, ಚಿತ್ರರೂಪದಲ್ಲಿ ಆರಾಧನೆಗೊಳ್ಳುತ್ತಾರೆ. ಆದರೆ ನಾಗದೇವರು ಮಾತ್ರ ಬಿಂಬ-ಪ್ರತಿಬಿಂಬ ರೂಪದಲ್ಲಿ ನಮ್ಮ ಕಣ್ಣಿಗೆ ಪ್ರತ್ಯಕ್ಷವಾಗಿ ಕಾಣುತ್ತಾರೆ. ಹಾಗಾಗಿ ಪ್ರತ್ಯಕ್ಷ ದೇವನಿಗೆ ಪ್ರಥಮ ಪೂಜೆ ಸಲ್ಲುತ್ತದೆ. ಹಿಂದೂಗಳಿಗೆ ನಾಗರ ಪಂಚಮಿ ಪ್ರಥಮ ಹಬ್ಬವಾಗುತ್ತದೆ.
ಕವಿಗಳು “ನಾಗರ ಪಂಚಮಿ ನಾಡಿಗೆ ದೊಡ್ಡದು’ ಎಂದಿದ್ದಾರೆ. ಆಷಾಢದ ಮೌಡ್ಯ ಕಳೆದು ಬರುವ ಶ್ರಾವಣ ಮಾಸದಲ್ಲಿ ಮಳೆಗಾಲದ ಕಾರ್ಮೋಡ ಗಳ ನೀರುಣಿಸುವಿಕೆಯಿಂದ ಹಚ್ಚಹಸುರಾಗಿ ಅರಳಿರುವ ಪ್ರಕೃತಿಯ ಮೋಹಕ ರೂಪದೆದುರು ಈ ಹಾಲು ಎರೆಯುವ-ಹಳದಿ ಲೇಪಿಸುವ ಹಬ್ಬ ವಿಜೃಂಭಣೆಯಿಂದ ನಡೆಯುತ್ತದೆ. ನಾಗರ ಪಂಚಮಿ ಮೊದಲ್ಗೊಂಡು ಇತರ ಹಬ್ಬಗಳು ಸರತಿಯಾಗಿ ಬರುತ್ತಿರುತ್ತವೆ.
ನಾಗಾರಾಧನೆ ಕೇವಲ ಶಿಲಾಪೂಜೆಯಲ್ಲ. ಪ್ರಕೃತಿಯ ಆರಾಧನೆಯಾಗಿದೆ. ನಿಸರ್ಗ ಪ್ರೀತಿಯನ್ನು ಜಾಗೃತಗೊಳಿಸುವ ಪರ್ವವಾಗಿದೆ. ಕುಟುಂಬ ಸಂಬಂಧವನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ.
ನಾಗ ಎಂಬ ಪದ ಭಯ-ಭಕ್ತಿಯ ದ್ಯೋತಕವಾಗಿದೆ. ಯಾವುದೇ ವಿಷಯದಲ್ಲಾಗಲೀ ಮನುಷ್ಯನಿಗೆ ಭಯ-ಭಕ್ತಿಗಳಿಲ್ಲದೆ ಹೋದರೆ ಆತ ರಾಕ್ಷಸನಾಗುತ್ತಾನೆ ಎಂದು ಹಿರಿಯರು ಹೇಳುತ್ತಾರೆ. ಆ ದೃಷ್ಟಿಯಿಂದ ಗಮನಿಸುವಾಗ ಮನುಷ್ಯನ ಮನಸ್ಸಿನಾಳದ ಭಯವೇ ಭಕ್ತಿಯಾಗಿ ರೂಪುಗೊಂಡು ಆ ಮೂಲಕ ದೇವರ ಮೂರ್ತಸ್ವರೂಪಕ್ಕೆ ಕಾರಣವಾಯಿತು ಎನ್ನಬಹುದು. ಮನುಷ್ಯನಿಗೆ ಯಾವುದೇ ಜೀವಿಯ ಬಗ್ಗೆ ಅತಿಯಾದ ಭಯವಾದಾಗ ಸಹಜವಾಗಿಯೇ ಆತ ಆ ಜೀವಿಗೆ ಶರಣಾಗುತ್ತಾನೆ. ಪ್ರಾಚೀನ ಕಾಲದಲ್ಲಿ ಕಾಡಿನಲ್ಲಿ ವಾಸಿಸುತ್ತಿದ್ದ ಮನುಷ್ಯನಿಗೆ ನೆಲದಲ್ಲಿ ಹರಿದಾಡುವ ಹಾವು, ಅದರ ಸುವರ್ಣಸುಂದರವಾದ ದೇಹ, ಮಂದಗತಿಯ ಚಲನೆ, ಹೆಡೆಯೆತ್ತುವ ಸೊಬಗು, ವಿಷಪ್ರಭಾವ ಇವೆಲ್ಲವೂ ಆಕರ್ಷಿತವಾಗಿ ನಾಗಶಿಲೆಯ ರೂಪಗೊಂಡು ಅಲ್ಲಲ್ಲಿ ನಾಗಬನಗಳಾದವು. ಅದೇರೀತಿ ಭಯಂಕರ ರೂಪದ ಹುಲಿ, ಗೂಳಿ, ಹಂದಿ ಮುಂತಾದುವುಗಳನ್ನು ಸಹಾ ದೈವಗಳಾಗಿ ಆರಾಧಿಸತೊಡಗಿದ. ಹುಲಿಚಾಮುಂಡಿ, ಹಾಯೂYಳಿ, ನಂದಿಕೇಶ್ವರ, ಧೂಮಾವತಿ, ಪಂಜುರ್ಲಿ ಮುಂತಾದ ಹೆಸರಲ್ಲಿ ಅವು ಪೂಜೆಗೊಂಡವು. ಭಕ್ತಿಭಾವದಿಂದ ಕೊಟ್ಟ ಪೂಜೆ ಫಲಪ್ರದವಾಗಿ ಇಷ್ಟಾರ್ಥ ನೆರವೇರಿದಾಗ ಅವುಗಳ ಆರಾಧನೆ ಗಟ್ಟಿಗೊಂಡು ಬೆಳೆಯುತ್ತಾ ಬಂತು.
ಕರಾವಳಿಯ ಜನಜೀವನದಲ್ಲಿ ನಾಗಾರಾಧನೆ ಹಾಸುಹೊಕ್ಕಾದ ಒಂದು ಆಚರಣೆಯಾಗಿದೆ. ಕಾಲದ ಆಳಕ್ಕಿಳಿದು ನೋಡಿದರೆ ನಾಗರಾಜ ಪ್ರಪಂಚದ ಬಹುತೇಕ ಸಂಸ್ಕೃತಿಗಳಲ್ಲಿ ಪೂಜಾರ್ಹ ದೇವನಾಗಿದ್ದಾನೆ. ಆದಿಮ ಕಾಲದಿಂದ ಹಿಡಿದು ಇಂದಿನವರೆಗೆ ನಾಗಾರಾಧನೆಯು ಎಲ್ಲ ಹಂತಗಳಲ್ಲಿಯೂ ಕಂಡುಬರುತ್ತದೆ. ನಾಗರಾಜನು ಮಂದಿರಗಳಲ್ಲಿ ಆರಾಧನಾ ಮೂರ್ತಿಯಾಗಿಯೂ, ದೇವತೆಗಳ ಆಯುಧವಾಗಿಯೂ, ವಾಸ್ತುಶಿಲ್ಪಗಳಲ್ಲಿ ವಿನ್ಯಾಸರೂಪವಾಗಿಯೂ, ರಾಜಮುದ್ರೆ-ಕಿರೀಟಗಳಲ್ಲಿ ಅಧಿಕಾರಸೂಚಕವಾಗಿಯೂ, ವೈದ್ಯವಿಜ್ಞಾನದ ಲಾಂಛನವಾಗಿಯೂ ಮೂಡಿಬಂದಿದ್ದಾನೆ. ಅಂತೆಯೇ ಕುಲಪಂಗಡಗಳ ಚಿಹ್ನೆಯಾಗಿಯೂ, ಮಳೆ-ಬೆಳೆ-ಫಲವತ್ತತೆ ಸೂಚಕನಾಗಿಯೂ, ಗಶಮನಕಾರಕನಾಗಿಯೂ, ಸಂತಾನಾಭಿವೃದ್ಧಿಪೋಷಕನಾಗಿಯೂ ಇದ್ದಾನೆ. ಮನುಕುಲದ ರಕ್ಷಕ ಭೂಮಿಯನ್ನು ಎತ್ತಿ ಹಿಡಿದವ ನಿಸರ್ಗದ ಒಡೆಯ ಎಂಬ ಕೀರ್ತಿಗೂ ಪಾತ್ರವಾಗಿದ್ದಾನೆ. ಕಲಾವಿದರಿಗಂತೂ ನಾಗರೂಪ ಅಚ್ಚುಮೆಚ್ಚು. ಆಧುನಿಕ ಕಲಾಸಂಸ್ಕೃತಿ ಯಲ್ಲಿ ನಡೆಯುವ ನಾಗಮಂಡಲ ದಂತಹ ಆಚರಣೆ ಗಳು ವಿವಿಧ ವರ್ಗ ದವರಿಗೆ ಉದ್ಯೋಗವನ್ನು ಒದಗಿಸುತ್ತಿದೆ. ಶೂನ್ಯದಂತೆ ಸುರುಳಿ ಸುತ್ತುವ ನಾಗ, ಬಳ್ಳಿಯಂತೆ ಬಳುಕುವ ನಾಗ ಎಲ್ಲರಿಗೂ ಚಿತ್ತಾಕರ್ಷಕನಾಗಿದ್ದಾನೆ. ಆತ ಆದಿಶೇಷನಾಗಿದ್ದು ಈ ಭೂಮಂಡಲವನ್ನು ಎತ್ತಿ ಹಿಡಿದಿದ್ದಾನೆ. ಸಾವಿರ ಹೆಡೆಗಳ ಈ ಆದಿಶೇಷನು ತನ್ನ ಒಂದು ತಲೆಯಿಂದ ಇನ್ನೊಂದು ತಲೆಗೆ ಭೂಮಿಯನ್ನು ಬದಲಿಸುವಾಗ ಭೂಕಂಪಗಳು ಸಂಭವಿಸುತ್ತವೆ ಎಂಬುದು ಜನಪದರ ನಂಬಿಕೆ. ರೋಗನಿವಾರಕನಾದ ನಾಗನು ನಮ್ಮ ದೇಹದ ರಕ್ತನಾಳಗಳಿಗೆ ಸಂವೇದಿಯಾಗಿದ್ದಾನೆ.
ಹಾಗಾಗಿ ರೋಗ ಗುಣಪಡಿಸಲು ಜನಪದರು ನಾಗನಿಗೆ ಮೊರೆಹೋಗುತ್ತಾರೆ. ತಮಗೆ ಕಷ್ಟಕಾರ್ಪಣ್ಯಗಳು ಬಂದಾಗ ನಾಗಪೂಜೆ ಮಾಡಿ, ನಾಗಸಂದರ್ಶನ ಮಾಡಿಸಿ ಪರಿಹಾರ ಪಡೆಯುತ್ತಾರೆ. ನಾಗನಿಗೆ ಪ್ರೀತ್ಯರ್ಥವಾಗಿ ನಾಗಮಂಡಲ ನಡೆಸಿ ಪ್ರಸಾದ ಸ್ವೀಕರಿಸುತ್ತಾರೆ. ಕೊನೆಪಕ್ಷ ವರ್ಷಕ್ಕೊಮ್ಮೆಯಾದರೂ ನಾಗರ ಪಂಚಮಿಯಂದು ನಾಗತನು ಪೂಜೆ ಮಾಡಿಸದವರಿಲ್ಲ. ಜನರು ನಾಗನ ಮೇಲೆ ಇಟ್ಟಿರುವ ನಂಬಿಕೆ-ನಡವಳಿಕೆ ಮಹತ್ತರವಾದುದು.
ಡಾ| ಉಪಾಧ್ಯಾಯ, ಮೂಡುಬೆಳ್ಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.