Naga Panchami ; ಶೇಷ ನಾಗ ಆರಾಧನೆ: ವಿಶ್ವವ್ಯಾಪಕ-ಶಕ್ತಿ ಪಾತ ಸಂಚಲನ


Team Udayavani, Aug 21, 2023, 5:45 AM IST

1-dsdas

ಶ್ರಾವಣ ಶುಕ್ಲ ಪಂಚಮಿಯಂದು ನಾಗರ ಪಂಚಮಿ ಯನ್ನು ಆಚರಿಸಲಾಗುತ್ತದೆ. ಪರೀಕ್ಷಿತ ಮಹಾರಾಜನ ಸಾವಿನ ಸೇಡಿಗಾಗಿ ಜನ ಮೇಜಯ ರಾಜನು ನಡೆಸಿದ ಸರ್ಪಯಾಗದಲ್ಲಿ ಆಸ್ತಿಕನ ಸಹಾಯದಿಂದ ನಾಗಕುಲವನ್ನು ರಕ್ಷಿಸಿ ದನು. ವಾಸುಕಿಯ ವ್ಯತ್ರಾಸುರ ಸಂಹಾರ ಕಾಲ ದಲ್ಲಿ ಮಂದರ ಪರ್ವತ ಎಂಬ ಕಡೆ ಗೋಲಿನ ಹಗ್ಗವಾಗಿ ಲೋಕೋ ಪಕಾರ ಗೈದನು. ಇಂತಹ ಲೋಕೋಪಕಾರದ ಕೃತಜ್ಞತಾ ಸಂಕೇತವೇ ಜನಮೇಜಯನು ಸರ್ಪಯಜ್ಞವನ್ನು ನಿಲ್ಲಿಸಿದ ದಿನವು ನಾಗರಪಂಚಮಿ ಎಂದು ಪ್ರಸಿದ್ಧಿ ಪಡೆಯಿತು.

ನಾಗರ ಸಾರ ಸೌರಭ

ಈ ಜಗತ್ತಿನಲ್ಲಿರುವ ಎಲ್ಲ ವಸ್ತುಗಳಿಗೆ ಇರಲು ಅವಕಾಶ ಮಾಡಿ ಕೊಟ್ಟಿರುವ ಆಕಾಶ ಅಥವಾ ಬಯಲು ಮಾತ್ರ ಎಲ್ಲ ಪ್ರದೇಶದಲ್ಲಿ ಎಲ್ಲ ಕಾಲದಲ್ಲಿದೆ. ಆ ಬಯಲಿಗೆ ಬಣ್ಣವಾಗಲಿ, ಆಕಾರವಾಗಲಿ ಇಲ್ಲದಿರುವು ದರಿಂದ ಅದು ಬಾಡುವ ಬೀಳುವ ಅಥವಾ ಹಾಳಾಗುವ ಪ್ರಶ್ನೆಯೇ ಇಲ್ಲ. ಈ ಆಕಾಶದಂತೆ ಸಮಸ್ತ ಪ್ರಪಂಚಕ್ಕೆಲ್ಲ ಪರಮಾಧಾರವಾಗಿರು ವುದೇ ಪರಮಾತ್ಮ. ಆ ಪರಮಾತ್ಮನ ಸೃಷ್ಟಿಯನ್ನು ಮಾನವರಾದ ನಾವು ಹಾಳು ಮಾಡುವ ಮೂಲಕ ಪ್ರಕೃತಿ ಮುನಿಯುವಂತಾಗಿದೆ.

ಶೇಷನಾಗನು ಪಾತಾಳದಲ್ಲಿ ವಾಸಿಸುತ್ತಾನೆ. ಅವನು ಹೆಡೆಯ ಮೇಲೆ ಪೃಥ್ವಿಯನ್ನು ಹೊತ್ತು ನಿಂತಿದ್ದಾನೆ. ಅವನಿಗೆ ಸಹಸ್ರ ಹೆಡೆಗಳಿವೆ. ಪ್ರತಿ ಯೊಂದು ಹೆಡೆಯ ಮೇಲೆ ಒಂದು ವಜ್ರವಿದೆ. ಅವನು ವಿಷ್ಣುವಿನ ತಪೋಗುಣದಿಂದ ಉತ್ಪನ್ನ ವಾಗಿದ್ದಾನೆ. ಪ್ರತಿಯೊಂದು ಕಲ್ಪದ ಅಂತ್ಯದಲ್ಲಿ ಶ್ರೀ ವಿಷ್ಣು ಮಹಾ ಸಾಗರದಲ್ಲಿ ಶೇಷಾಸನದ ಮೇಲೆ ಶಯನ ಮಾಡು ತ್ತಾನೆ ಎಂಬ ನಂಬಿ ಕೆಗಳು ಇವೆ. ಸರ್ಪಗಳು ಸಂಪತ್ತಿನ ಸಂರಕ್ಷಕಗಳು ಅವುಗಳ ನೆತ್ತಿಯ ಮೇಲೆ ದಿವ್ಯ ನಾಗಮಣಿ ಯಿದೆ. ಹಾವು ಪಾವಿತ್ರ್ಯದ ಸಂಕೇತ. ತ್ರೇತಾ ಯುಗದಲ್ಲಿ ವಿಷ್ಣು ರಾಮನ ಅವತಾರವನ್ನು ತೆಗೆದುಕೊಂಡಾಗ ಶೇಷನು ಲಕ್ಷ್ಮಣನ ಅವತಾರವನ್ನು ತೆಗೆದುಕೊಂಡಿದ್ದನು.

ದ್ವಾಪರ ಕಲಿಯುಗದ ಸಂಧಿಕಾಲದಲ್ಲಿ ಶ್ರೀ ಕೃಷ್ಣನ ಅವತಾರವಾದಾಗ ಶೇಷನು ಬಲ ರಾಮನಾಗಿದ್ದನು. ನಾಗಗ ಳಲ್ಲಿನ ಶ್ರೇಷ್ಠನಾದ ಅನಂತನೇ ನಾನು ಎಂದು ಭಗವದ್ಗೀತೆ ಯಲ್ಲಿ ಶ್ರೀ ಕೃಷ್ಣ ಹೇಳುತ್ತಾನೆ.

ಈ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ಸಹೋದರನಿಗೆ ಅಖಂಡ ಆಯುಷ್ಯ ದೊರ ಕಲಿ. ಅನೇಕ ಆಯುಧಗಳು ಪ್ರಾಪ್ತವಾಗಲಿ ಮತ್ತು ಅವನು ಪ್ರತಿಯೊಂದು ದುಃಖ ಮತ್ತು ಸಂಕಟಗಳಿಅದ ಪಾರಾಗಲಿ ಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ. ನಾಗರ ಪಂಚಮಿಯ ಹಿಂದಿನ ದಿನ ಪ್ರತಿಯೊಬ್ಬ ಸಹೋದರಿಯು ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ. ಅವನ ಪ್ರಾಣ ರಕ್ಷಣೆಯಾಗುತ್ತದೆ. ಆದ್ದರಿಂದಲೇ ಆ ದಿನ ಪ್ರತಿಯೊಬ್ಬ ಮಹಿಳೆಯು ನಾಗನ ಪೂಜೆ ಮಾಡಿ ಆಚರಿಸುತ್ತಾಳೆ.

ಅನುಗ್ರಹ ಶಕ್ತಿ

ಕೆಲವೊಂದು ಸಾತ್ವಿಕ ನಾಗಗಳು ಕೋಪಿಷ್ಟ ನಾಗಿದ್ದ ಬ್ರಹ್ಮನ ಶುಶ್ರೂಷೆ ಮಾಡಿ ದಾಗ ಸಂತಸನಾದ ಬ್ರಹ್ಮ ವರ ಕೊಟ್ಟು ಶ್ರಾವಣ ಪಂಚಮಿಯಂದು ಸಾತ್ವಿಕ ಸರ್ಪಗಳಾದ ನಿಮಗೆ ವಿಶೇಷ ಅನುಗ್ರಹ ಶಕ್ತಿ ಸಂಚಾರ ಪ್ರಾಪ್ತಿ ಯಾಗಲಿ ಎಂದು ಹರಸಿದ್ದರು. ಆ ಸಾತ್ವಿಕ ನಾಗ ಗಳಿಗೆ ಸರ್ಪ ಯಾಗದಿಂದ ಶಕ್ತಿಯ ಹ್ರಾಸ ವಾಗುತ್ತದೆ. ಆಗ ಅವುಗಳು ಜರತ್ಕಾರುವನ್ನೇ ಪ್ರಶ್ನಿಸಿದಾಗ, ಅವನು ಭೂಮಿ ಯಲ್ಲಿ ಮಂಡಲ ಮಾಡಿ ಅದರಲ್ಲಿ ಅನ್ನದ ಬಲಿ ಕೊಡುವ ಮೂಲಕ ಅವರಿಗೆ ಮತ್ತೆ ಬಲ ತಂದು ಕೊಡು ತ್ತಾನೆ. ಅಂದಿನಿಂದ ಆಶ್ಲೇಷ ನಕ್ಷತ್ರಕ್ಕೆ ಸರ್ಪಗಳ ಪೂಜೆಯಾದ ಬಳಿಕ ಆಶ್ಲೇಷಾ ಬಲಿ ಪ್ರಚ ಲಿತವಾಯಿತು. ಹೀಗೆ ನಾಗಗಳು ವಿಶೇಷವಾಗಿ ಶಕ್ತಿಯನ್ನು ಪಡೆಯುವ ದಿನವಾಗಿದೆ. ಭಗ ವಂತನ ದಯೆ ಅಗತ್ಯವಾದರೂ ಅಂತರಂಗದ ಬೆಳಕಿನ ಕಿಡಿಯಲ್ಲಿ ಎಲ್ಲರಿಗೂ ನಂದಾ ದೀಪದಂತೆ ಬೆಳಕು ನೀಡುವ ಭರವಸೆಯೇ ತುಂಬಬೇಕು. ಭಕ್ತ ಮತ್ತು ಭಗವಂತನನ್ನು ಕೂಡಿಸುವ ಕೊಂಡಿಗಳಾಗಬೇಕು.

ಅಂದಿನ ದಿನ ತನ್ನ ಮನೆಯಲ್ಲಿ ಕೂಳಿಲ್ಲ ದಿದ್ದರೂ ಆಚರಣೆ ಗೆ ಬರಿಗೈಯಲ್ಲಿ ಹೋಗಬಾರದು ಎನ್ನುತ ಪ್ರೀತಿಯಿಂದ ಭಕ್ತ ಅರ್ಪಿಸುವ ಪ್ರತಿಯೊಂದು ವಸ್ತುವೂ ದೇವರ ಪಾದಕ್ಕೆ ಸಮರ್ಪಿಸಲ್ಪಟ್ಟು ಮತ್ತೆ ಅದೇ ಭಕ್ತನ ಕೈ ಸೇರಬೇಕು. ಪಂಚಾಮೃತ, ಸಿಯಾಳ, ಸಂಪಿಗೆ ಹೂ, ಸಿಂಗಾರ, ಹಾಲು, ಅರಿಶಿನ, ತೆನೆ ಯೊಂದಿಗೆ ಅರಳು ನೈವೇದ್ಯ ಅರ್ಪಿಸಬೇಕು.

ವಿಶೇಷ ಸೂಚನೆ

ನಾಗರ ಪಂಚಮಿ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಹರಿಯಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಈ ದಿನ ಭೂಮಿಯನ್ನು ಅಗೆಯಬಾರದು ಎಂಬ ನಂಬಿಕೆ ಇದೆ. ಇಂದ್ರಿ ಯ ಬಲವು ಪಂಚ ಭೌತಿಕ ವಸ್ತುಗಳಿಂದ ಉಂಟಾಗುತ್ತದೆ. ಎಲ್ಲವನ್ನೂ ಒಳಗೊಂಡ ಕ್ಷೀರಾಭಿಷೇಕದಿಂದ ಇಂದ್ರಬಲವು ಚೇತನ ಪಡೆ ಯುತ್ತದೆ. ಚಂದ್ರ ದೋಷಗಳು ನಿವಾ ರಣೆ ಗೊಂಡು ಮನಃಶಾಂತಿ ಒದಗುತ್ತದೆ. ಆಯಾ ಮನೆತನದ ನಾಗ ಸಾನ್ನಿಧ್ಯಕ್ಕೆ ಅರ್ಪಿಸಿದ ಕ್ಷೀರಾಭಿಷೇಕ ತೀರ್ಥವನ್ನು ಸಮುದ್ರ ಮಹಾ ಸಾಗರದಲ್ಲಿ ಅರ್ಪಿಸುತ್ತಾರೆ. ಇದರಿಂದ ಕೌಟುಂ ಬಿಕ ಅಶುಭ ಸ್ಪಂದನೆಯ ತೀವ್ರತೆಯನ್ನು ಸ್ವಲ್ಪ ಕಡಿಮೆ ಮಾಡಬಲ್ಲವು. ದೇವರ ಅನುಗ್ರಹ ಪಡೆಯುವ ಉದ್ದೇಶದಿಂದ ಮಾಡುವ ಕ್ರಿಯೆ ತನ್ನಲ್ಲಿ ಹಾಗೂ ಸರ್ವಭೂತಗಳಲ್ಲೂ ಪರ ಮಾತ್ಮನನ್ನು ಕಾಣುವುದು. ಜೀವನದಲ್ಲಿ ಭರ ವಸೆಯ ದೀಪವು ಎಂದಿಗೂ ಆರಬಾರದು. ಶಾಂತಿ, ನಂಬಿಕೆ ಮತ್ತು ಪ್ರೇಮ ಅಲ್ಲದೇ ಭಗ ವಂತನ ಭಕ್ತಿ ಎಂಬ ದೀಪಗಳು ಉರಿಯುತ್ತಲೇ ಇರಬೇಕು.

ನಾಗದೇವತೆಯು ಸಂಪೂರ್ಣ ಬ್ರಹ್ಮಾಂಡದ ಕುಂಡಲಿನಿಯಾಗಿದ್ದಾನೆ. ಪಂಚ ಪ್ರಾಣವೆಂದರೆ ಪಂಚ ಭೌತಿಕ ತತ್ವದಿಂದ ಉಂಟಾದ ಶರೀರದ ಸೂಕ್ತ ರೂಪವಾಗಿದೆ. ಸ್ಥೂಲ ದೇಹವು ಪ್ರಾಣ ಹೀನವಾಗಿದೆ ಹಾಗೂ ಸ್ಥೂಲ ದೇಹದಲ್ಲಿ ಚಲಿ ಸುವ ಪ್ರಾಣವಾಯುವು ಪಂಚ ಪ್ರಾಣದಿಂದ ಬರುತ್ತದೆ.

ಯೋಗಕ್ಕೆ – ದೇಹ,
ಪ್ರಾಣಾಯಾಮಕ್ಕೆ – ಉಸಿರು
ಧ್ಯಾನಕ್ಕೆ – ಮನಸ್ಸು
ಕ್ರಮವಾಗಿ ಜೋಡಿಸಿಕೊಳ್ಳಬೇಕು.

ನಾಗವೆಂದರೆ ಯೋಗಿಗಳಿಗೆ ಗೋಚ ರವಾಗುವ ಕುಂಡಲಿನೀ ಅಥವಾ ಪ್ರಾಣಶಕ್ತಿ ಆಗಿದೆ. ಅದು ನಮ್ಮ ಮೂಲಾಧಾರ ಪ್ರದೇ ಶದಲ್ಲಿ ನಿದ್ರಿಸುತ್ತಿರುವ ಸರ್ಪದಂತಿದ್ದು ಆ ಶಕ್ತಿಯು ನಿ¨ªೆಯಿಂದ ಎಬ್ಬಿಸಲ್ಪಟ್ಟು ಸರ್ಪದಂತೆ ಹೆಡೆಯನ್ನು ಬಿಚ್ಚಿ ಮೇಲೆದ್ದು ಸಹಸ್ರ ಚಕ್ರದ ವರೆಗೂ ಆರೋಹಣ ಮಾಡಿ ಅಲ್ಲಿ ಪರ ಮಾನಂದ ಅಮೃತವನ್ನು ಉಣಿಸಿ ಮತ್ತೆ ಮೂಲಾಧಾರಕ್ಕೆ ಹಿಂದಿರುಗುತ್ತದೆ. ಈ ಕುಂಡಲಿ ನಿಯನ್ನೇ ಪುರಾಣಾದಿಗಳಲ್ಲಿ ಅನಂತ, ಆದಿ ಶೇಷ, ಸಂಕರ್ಷಣ ಮೊದಲಾದ ಹೆಸರುಗಳಿಂದ ಕರೆಯಲಾಗಿದೆ.

ಸಾತ್ವಿಕ ಗ್ರಹಿಕೆಗೆ ಉಪಯುಕ್ತ ಕಾಲ

ಪಂಚ ಪ್ರಾಣಗಳೇ ಪಂಚ ನಾಗಗಳಾಗಿವೆ. ನಾಗರ ಪಂಚಮಿ ದಿನದಂದು ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಈ ದಿನದಂದು ಶೇಷನಾಗ ಮತ್ತು ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸಬೇಕು. ದೇವತೆಗಳ ಶಕ್ತಿಯು ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾಷ್ಟ್ರರಕ್ಷಣೆಗಾಗಿ ಉಪ ಯೋಗವಾಗಲಿ. ನನ್ನ ಪಂಚ ಪ್ರಾಣದ ಶುದ್ಧಿ ಯಾಗಲಿ ಎಂದು ಪ್ರಾರ್ಥಿಸಬೇಕು.ಶ್ರಿ ಕೃಷ್ಣನು ಯಮುನಾ ನದಿಯ ಆಳದಲ್ಲಿದ್ದ ಕಾಳಿಂಗ ನಾಗನ ಮರ್ಧನ ಮಾಡಿದನು. ಆ ದಿನವು ಶ್ರಾವಣ ಶುಕ್ಲ ಪಂಚಮಿಯಾಗಿತ್ತು.

ಸಂದೇಶ

ಸರ್ಪದ ಬಗ್ಗೆ ಜನ ಸಾಮಾನ್ಯರಲ್ಲಿ ಇರುವ ಭಯದ ಕಾರಣದಿಂದಾಗಿ, ಹಲವಾರು ನಂಬಿಕೆಗಳು ಪ್ರಚಲಿತವಿದ್ದು ವಿಜ್ಞಾನ ಅವು ಗಳನ್ನು ಬೆಂಬಲಿಸದಿದ್ದರೂ, ನಂಬಿಕೆ ಮುಂದು ವರೆದಿದೆ. ವಿಜ್ಞಾನದಂತೆ ಅತ್ಯಂತ ಚಿಕ್ಕ ಮೆದುಳು ಇರುವ ಹಾವಿಗೆ ಹನ್ನೆರಡು ವರುಷ ಕಾಲ ನೆನಪಿ ಟ್ಟುಕೊಳ್ಳುವಷ್ಟು ಸಾಮರ್ಥ್ಯವಿಲ್ಲ. ಆತ್ಮ ರಕ್ಷಣೆ ಗಾಗಿ ಗಿಡಗಂಟಿ, ಪೊದೆಗಳಲ್ಲಿ ರಕ್ಷಣೆ ಬಯಸುವ ಸರ್ಪ ನಿಧಿಯ ಸಂರಕ್ಷಕ ಎನಿಸದು. ಕಿರು ಬಾಯಿಯ ಬುಟ್ಟಿ ಪುಂಗಿಯನ್ನು ಬಾರಿಸಿ ದಾಗ, ಹಾವು ಅಸಹನೆಯಿಂದ ಹೆಡೆ ಎತ್ತಿತು ಅಷ್ಟೇ. ಅದೇನೇ ಇದ್ದರೂ ಧನ್ಯತಾ ಭಾವದ ಸಾಂಕೇತಿ ಕತೆಯನ್ನು ಹೊಂದಿದ ನಾಗರಪಂಚಮಿಯಆಂತರ್ಯವನ್ನರಿತು ಆಚರಿಸಬೇಕು.

ಅನಿಲ್‌ ಎಸ್‌. ಪಿ. ರೈಕರ್‌, ಭಟ್ಕಳ

ಟಾಪ್ ನ್ಯೂಸ್

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.