ಇಂದು ನರಕ ಚತುರ್ದಶಿ ದೀಪವೇ ಬದುಕು ದೀಪವೇ ಚೈತನ್ಯ


Team Udayavani, Oct 24, 2022, 6:15 AM IST

ಇಂದು ನರಕ ಚತುರ್ದಶಿ ದೀಪವೇ ಬದುಕು ದೀಪವೇ ಚೈತನ್ಯ

ಪರಮಪವಿತ್ರವಾದ ಭಾರತ ಭೂಮಿಯಲ್ಲಿ ಸನಾತನ ಧರ್ಮವು ಜನ್ಮ ತಳೆದು, ಬೆಳೆದು, ಜಗತ್ತಿಡೀ ಪಸರಿಸಿದೆ. ಸರ್ವರ ಇಹ ಸುಖ ಮತ್ತು ಪರಸುಖವನ್ನು ಕಾಪಾಡುತ್ತಲೇ ಬಂದಿದೆ. ಸನಾತನ ಎಂದರೆ ಸದಾ ಇರುವಂಥದ್ದು, ನಿತ್ಯ ಸತ್ಯವಾದುದು ಎಂಬ ಅರ್ಥವಿದೆ. ಸನಾತನ ಎಂಬ ಶಬ್ದವೂ ಪರಮಾತ್ಮನದ್ದೇ ಆಗಿದೆ. ಪುಣ್ಯ ಕರ್ಮದಿಂದ ಸುಖ ಪ್ರಾಪ್ತಿಯೂ ಪಾಪಕರ್ಮದಿಂದ ದುಃಖಪ್ರಾಪ್ತಿಯೂ ಉಂಟಾಗುವುದೆಂಬುದು ಸನಾತನ ಧರ್ಮದ ವಿವರಣೆ. ಭಾರತೀಯ ಸಂಸ್ಕೃತಿ ಧರ್ಮಗಳ ಮೂಲಾಧಾರಗಳು, ವೇದಶಾಸ್ತ್ರ, ಪುರಾಣಗಳು ಇದರ ತಳಹದಿ. ಪುರಾಣಗಳಲ್ಲಿ ಉಲ್ಲೇಖೀಸಿದಂತೆ ಜನಜೀವನಕ್ಕೆ ಅತ್ಯಂತ ಉಪಯುಕ್ತವಾದದ್ದು ಹಬ್ಬ. ಹಬ್ಬದ ಆಚರಣೆಗಳ ವಿಧಿವಿಧಾನಗಳನ್ನು ಪುರಾಣ, ಉಪಪುರಾಣಗಳಲ್ಲಿ ವಿಸ್ತಾರವಾಗಿ ತಿಳಿಸಲಾಗಿದೆ.

ನಮ್ಮ ದೇಶ ಭಾರತ; “ಭಾ’ ಎಂದರೆ ಜ್ಞಾನ ಅದರಲ್ಲಿ “ರತ’ ಎಂದರೆ ಆಸಕ್ತ. ಎಲ್ಲ ತೆರನಾದ ಜ್ಞಾನವನ್ನು ಹೊಂದು ವುದರಲ್ಲಿ ಆಸಕ್ತರಾದವರು ಭಾರತೀಯರು. ಪ್ರಪಂಚದಲ್ಲಿ ಪ್ರತೀ ದೇಶಕ್ಕೂ ತನ್ನದೇ ಆದ ನಂಬಿಕೆಗಳು, ಶಾಸ್ತ್ರಗಳು, ಆಚರಣೆಗಳು, ಆಚಾರಗಳು ಬಹುಕಾಲದಿಂದಿವೆ. ತುಳು ನಾಡಿನ ಜಾನಪದ ಜಗತ್ತಿಗೆ ವೈವಿಧ್ಯ ಪ್ರಾಪ್ತ ವಾಗುವುದು ಪುರಾಣಗಳಿಂದ ಮತ್ತು ಹಬ್ಬಗಳ ಆಚರಣೆಯಿಂದ. ಮಾಸ, ತಿಥಿ, ವಿಶೇಷಗಳಿಂದ ಬೇರೆ ದೇವತೆಗಳನ್ನು ಆಯಾಯ ಕಾಲದಲ್ಲಿ ಪೂಜಿಸುವ ಸಂಪ್ರದಾಯ ನಮ್ಮಲ್ಲಿದೆ.

ಭಾರತ ತನ್ನದೇ ಆದ ಸಂಸ್ಕಾರಗಳಿಗೆ ಹೆಸರು ಪಡೆದಿದೆ. ವೈಜ್ಞಾನಿಕವಾಗಿ ಮುಂದುವರಿದ ರಾಷ್ಟ್ರಗಳು ಕೂಡ, ಹಿಂದೂ ದೇಶದ ಆಚರಣೆಗಳು ಮತ್ತು ಪದ್ಧತಿಗಳಿಗೆ ಮಾರು ಹೋಗಿವೆ ಎನ್ನುವುದು ಪ್ರತಿಯೊಬ್ಬ ಭಾರ ತೀಯ ಅಭಿಮಾನ ಪಡುವ ವಿಷಯ. ಅಂತಹ ಶ್ರೇಷ್ಠತೆ ಹಿಂದೂ ಧರ್ಮದ ಆಚರಣೆಗಳಲ್ಲಿವೆ. ಭಾರತದಲ್ಲಿನ ಅನೇಕ ಆರಾ ಧನೆ, ಸಂಪ್ರದಾಯ, ಆಚರಣೆ, ಭಾಷೆಗಳು ಸೇರಿ ಸಂಸ್ಕೃತಿ ಎಂದಾಗಿದೆ. ಅಂತಹ ಹಬ್ಬಗಳಲ್ಲಿ ಶ್ರೇಷ್ಠವಾದ ಮತ್ತು ವೈಶಿಷ್ಟéಪೂರ್ಣವಾದ ಹಬ್ಬ ದೀಪಾವಳಿ. ಹಿಂದೂಗಳಿಗೆ ಆಶ್ವಿ‌ಜ ಮಾಸದ ಕೃಷ್ಣಪಕ್ಷ ದ್ವಾದಶಿಯಿಂದ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತನಕ ಹಬ್ಬಗಳ ಸಡಗರ. ಮನೆಮಂದಿಗೆಲ್ಲ ಸಂತೋಷ. ಬಾಲಕರಿಂದ ವೃದ್ಧರ ತನಕ ಸಂತೋಷದಿಂದ ಕುಣಿದು-ಕುಪ್ಪಳಿಸುವ ಹಬ್ಬ. ದೀಪವು ಜ್ಞಾನದ ಸಂಕೇತ. ಸುತ್ತ ವಸ್ತುವಿನ ಅರಿಯುವಿಕೆ ಆಗುವುದು ದೀಪದಿಂದಲೇ, ದೀಪದ ನೆರವಿಲ್ಲದೆ ಯಾವ ಕಾರ್ಯಗಳೂ ಸಾಗದು. ದೀಪವೇ ಬದುಕು, ದೀಪವೇ ಚೈತನ್ಯ. ಆದುದರಿಂದ ದೀಪ ಅತ್ಯಂತ ಪೂಜನೀಯ. ಮಹಾದೇವ ತಾತ್ಮವಾದ ದೀಪವು ಸರ್ವವಿಧ ಶಾಶ್ವತ ಫ‌ಲವನ್ನು ನೀಡುತ್ತದೆ.

ಚೈತ್ರಾದಿ ಹನ್ನೆರಡು ಮಾಸಗಳಲ್ಲಿ ಆಶ್ವಿ‌ಜ ಮಾಸ ಮತ್ತು ಕಾರ್ತಿಕ ಮಾಸಕ್ಕೆ ವಿಶೇಷವಾದ ಮಹತ್ವವಿದೆ.

ನರಕ ಚತುರ್ದಶಿ
ಶಾಸ್ತ್ರದಲ್ಲಿ ತಿಳಿಸಿದಂತೆ ಪ್ರಾಗ್‌ಜ್ಯೋತಿಷ ಪುರ ಎಂಬಲ್ಲಿ ನರಕಾಸುರನೆಂಬ ಬಲಾಡ್ಯ ರಾಕ್ಷಸನಿದ್ದನು. ಅವನು ಅಲ್ಲಿಯ ರಾಜ್ಯಭಾರವನ್ನು ಮಾಡುತ್ತಿದ್ದನು. ಅವನು ದೇವತೆಗಳಿಗೆ ಮತ್ತು ಮನುಷ್ಯರಿಗೆ ತೊಂದರೆ ಕೊಡುತ್ತಿದ್ದು ಅಲ್ಲಿನ ಹದಿ ನಾರು ಸಾವಿರ ವಿವಾಹಯೋಗ್ಯ ರಾಜಕನ್ಯೆಯರನ್ನು ತನ್ನ ವಶ ದಲ್ಲಿರಿಸಿಕೊಂಡು ವಿವಾಹವಾಗುವ ಹುನ್ನಾರ ಮಾಡಿದನು ಮತ್ತು ಸೆರೆವಾಸದಲ್ಲಿಟ್ಟನು. ಆವಾಗ ಎಲ್ಲ ಕಡೆ ಸ್ತ್ರೀಯರ ಹಾಹಾಕಾರವೆದ್ದಿತು. ಸತ್ಯಭಾಮೆಗೆ ಈ ವಿಷಯ ತಿಳಿದು ನರಕಾಸುರನನ್ನು ಸಂಹಾರ ಮಾಡುವಂತೆ ಶ್ರೀಕೃಷ್ಣನಲ್ಲಿ ಭಿನ್ನ ವಿಸಿಕೊಂಡಳು. ಅದರಂತೆ ಶ್ರೀ ಕೃಷ್ಣ ನರಕಾಸುರನೊಂದಿಗೆ ಯುದ್ಧ ಮಾಡಿ ಅವನನ್ನು ವಧಿಸಿ ಆತನ ಸೆರೆಯಲ್ಲಿದ್ದ 16 ಸಾವಿರ ಕನ್ಯೆಯರನ್ನು ಮುಕ್ತಗೊಳಿಸಿದನು. ಸಾಯುವಾಗ ನರಕಾಸುರನು ಈ ದಿನದಂದು ಯಾರು ಮಂಗಲಸ್ನಾನ ಮಾಡುವರೋ ಅವರಿಗೆ ನರಕದ ತೊಂದರೆ ಬಾರದಿರಲಿ ಎಂಬ ವರವನ್ನು ಕೇಳಿದಾಗ ಶ್ರೀಕೃಷ್ಣನು ಆ ವರವನ್ನು ನರಕಾ ಸುರನಿಗೆ ದಯಪಾಲಿಸಿದನು. ಅಂದಿನಿಂದ ಆಶ್ವಿ‌àಜ ಕೃಷ್ಣ ಚತುರ್ದಶಿ ನರಕ ಚತುರ್ದಶಿ ಎಂದು ಪರಿಗಣಿಸಲ್ಪಟ್ಟಿತು.

ಬೆಳಗಿನ ಜಾವ ನರಕಾಸುರನನ್ನು ವಧಿಸಿದ ಕಾರಣ ಅವನ ರಕ್ತದ ತಿಲಕವನ್ನು ಹಣೆಗೆ ಹಚ್ಚಿಕೊಂಡು ಬಂದ ಶ್ರೀಕೃಷ್ಣನನ್ನು ರಾಜಕನ್ಯೆಯರು ದೀಪ ಬೆಳಗಿ, ಆರತಿ ಎತ್ತಿ, ಆನಂದವನ್ನು ಪಡೆದರು ಎಂಬ ಕಥೆ ಪುರಾಣದಲ್ಲಿದೆ.

ತೈಲಾಭ್ಯಂಗ
ನರಕಚತುರ್ದಶಿಯಂದು ಬೆಳಗ್ಗೆ ಬ್ರಾಹ್ಮಿಮುಹೂರ್ತ ದಲ್ಲಿ ಶೌಚ ಕಾರ್ಯಗಳನ್ನೆಲ್ಲ ಮುಗಿಸಿ, ಕೈ-ಕಾಲು, ಮುಖ ತೊಳೆದುಕೊಂಡು ದೇವರ ಎದುರು ಒಂದೊಂದು ತಂಬಿಗೆ ಯಲ್ಲಿ ಬಿಸಿ ನೀರು ಮತ್ತು ತಣ್ಣೀರು ತಂದಿಟ್ಟು ಅಭ್ಯಂಗಕ್ಕೆ ಬೇಕಾದ ಎಣ್ಣೆಯನ್ನು ತಂದು ಎಣ್ಣೆಯಲ್ಲಿ ಲಕ್ಷ್ಮೀಯನ್ನು, ನೀರಿನಲ್ಲಿ ಗಂಗೆಯನ್ನು ಸ್ಮರಿಸಿ ದೇವರ ಪ್ರಾರ್ಥನೆ ಮಾಡು ವುದು. ಈ ದಿನ ಮಹಾಲಕ್ಷ್ಮೀಯು ಹಾಸಿಗೆಯಿಂದ ಏಳು ತ್ತಾಳೆ. ಅವಳನ್ನು ವಿಧಿಪೂರ್ವಕವಾಗಿ ಮನಸ್ಸಿನಲ್ಲಿ ಸ್ಮರಿಸಿ ಪೂಜಿಸಬೇಕು. ಇಲ್ಲದಿದ್ದರೆ ಕುಪಿತಗೊಳ್ಳುವಳು. ಈ ದಿನ ಕುಟುಂಬದವರೆಲ್ಲರೂ ಜತೆ ಸೇರಿ ತೈಲಾಭ್ಯಂಗ ಮಾಡಬೇಕು. ತೈಲಾಭ್ಯಂಗದಿಂದ ತೃಪ್ತರಾದ ಪಿತೃ ದೇವತೆಗಳು ನಮ್ಮನ್ನು ಅನುಗ್ರಹಿಸುತ್ತಾರೆ. ನರಕ ಚತುರ್ದಶಿ ತಿಥಿಯು ಯಾವ ದಿನದಲ್ಲಿ ಇದೆಯೋ ಆ ದಿನದ ಚಂದ್ರೋದಯ ಕಾಲದಲ್ಲಿ ಸ್ನಾನ ಮಾಡಬೇಕೆಂದು ವರಾಹ ಪುರಾಣ ತಿಳಿಸಿದೆ. ಅಭ್ಯಂಗದ ಮೊದಲು ಉತ್ತರಣೆಯ ಕಡ್ಡಿ ಅಲ್ಲದೆ ಎಲೆಯನ್ನು ಮೂರು ಸುತ್ತು ತಲೆಗೆ ನಿವಾಳಿಸಿ, ಎಸೆದು, ಅನಂತರ ಸ್ನಾನ ಮಾಡುವ ಕ್ರಮವಿದೆ. ಸ್ನಾನ ಆದ ಕೂಡಲೇ ತಿಲಕ ಧಾರಣೆ ಮಾಡಿ ಕೊಂಡು ನಿತ್ಯಾಹಿ°ಕ ದೇವರ ಪ್ರಾರ್ಥನೆ ಮಾಡುವುದು.

ಈ ದಿನ ನಮ್ಮ ಕಾಲದಲ್ಲಿ ಹುಟ್ಟಿ ಬೆಂಕಿಯಲ್ಲಿ ಬಿದ್ದು, ಸಿಡಿಲು ಬಡಿದು ತೀರಿಹೋದ, ಪ್ರಬಲಾಗ್ನಿಯಿಂದ ತೀರಿ ಹೋದವರ ಆತ್ಮ ತೃಪ್ತಿಗಲ್ಲದೇ, ನಮ್ಮ ಕುಟುಂಬದ ಸಮಸ್ತ ಪಿತೃಗಳು ಮಹಾಲಯಕ್ಕಾಗಿ ಯಮಲೋಕದಿಂದ ಬಂದವ ರಿಗೆ ಹಿಂದಿರುಗಿ ಹೋಗುವಾಗ ಹಾದಿ ತಿಳಿಯುವುದಕ್ಕಾಗಿ ಅಂಗಳದಲ್ಲಿ ದೀಪ ಹಚ್ಚಬೇಕು. ಇದನ್ನು ಕಂಡ ಹಿರಿಯರು ನಾವು ಕೊಟ್ಟ ಆಹಾರವನ್ನು ದೃಷ್ಟಿಯಿಂದ ಸ್ವೀಕರಿಸಿ, ನಮ್ಮನ್ನು ಆಶೀರ್ವದಿಸಿ, ಕುಟುಂಬದವರಿಗೆ ಸಂತತಿ ಸಂಪತ್ತನ್ನು ಅನುಗ್ರಹಿಸಿ, ತೆರಳುವರು ಎನ್ನುವ ವಾಡಿಕೆ ನಮ್ಮಲ್ಲಿದೆ.

ದೀಪ
ದೀಪ ಪಾತ್ರ, ಎಣ್ಣೆ, ಬತ್ತಿ, ಅಗ್ನಿ ಇವುಗಳ ಸಂಯೋಜನೆಗೆ ದೀಪವೆಂದು ಹೆಸರು. ದೀಪವು ದೀರ್ಘಾಯುಷ್ಯವನ್ನು ಸೂಚಿಸುತ್ತದೆ. ಹಿರಣ್ಯ, ಕನಕ, ರಕ್ತಾ, ಕೃಷ್ಣಾ, ಸುಪ್ರಭಾ, ಬಹು ರೂಪಾ, ಅತಿರಿಕ್ತ ಎಂಬ ಏಳು ನಾಲಗೆಗಳಿವೆ. ದೀಪದಲ್ಲಿರುವ ಎಣ್ಣೆ ದೇಹವನ್ನು, ಬತ್ತಿಗಳು ದೇವತಾ ಸಾನ್ನಿಧ್ಯವನ್ನು, ಜ್ವಾಲೆಯು ಚೈತನ್ಯವನ್ನು, ಪಾತ್ರವು ಮನೆಯನ್ನು ಸೂಚಿಸುತ್ತದೆ. ಇವೆಲ್ಲವೂ ನಿರ್ಮಲ ವಾಗಿದ್ದರೆ ಶುಭವೂ ದೀಪದ ಚಲನೆ ಬಂಧು-ಶತ್ರುಗಳನ್ನೂ ಅಂತಹ ಮಹತ್ತರ ದೀಪ ದೇವತಾ ದೀಪವಾಗಿದ್ದು ದೀಪಾ ವಳಿಯ ಸಂದರ್ಭದಲ್ಲಿ ದೀಪಗಳನ್ನು ಕ್ಷೇತ್ರ ವೃದ್ಧಿಯಾಗಲಿದೆ ಎಂಬುದು ಪ್ರತೀತಿ.

ದೀಪಾವಳಿ ದಿನದಿಂದ ಒಂದು ತಿಂಗಳು ಅಂಗಳದಲ್ಲಿ ಬಿದರಿನ ಅಷ್ಟಪಟ್ಟಿಯ ಮಂಟಪದ ಗೂಡಿನಲ್ಲಿ ಎಳ್ಳೆಣ್ಣೆಯ ದೀಪವನ್ನು ಪೂರ್ವಕ್ಕೆ ಮುಖಮಾಡಿ ಬೆಳಗಬೇಕು. ಇದರಿಂದ ರೂಪ, ಸೌಭಾಗ್ಯ, ಸಂಪತ್ತಿನ ಅನುಗ್ರಹ ಪ್ರಾಪ್ತವಾಗುವುದು. ದೀಪಾವಳಿ ಆಚರಿಸಿ ಸಂಭ್ರಮಪಟ್ಟರೆ ವರ್ಷಪೂರ್ತಿ ಜನರು ಸಂತಸ ಪಡುವರು ಎಂದು ವರಾಹ ಪುರಾಣ ತಿಳಿಸಿದೆ. ದೀಪಾವಳಿಯ ಆಚರಣೆಯಿಂದ ದುರ್ಗಮ ದುರಿತಗಳು ಪರಿಹಾರವಾಗಿ, ನಾವು ಹಚ್ಚುವ ದೀಪ ಜ್ಞಾನದ ಬೆಳಕಾಗಿ ಆವರಿಸಿ, ಸರ್ವದೋಷಗಳು ನಿವಾರಣೆಯಾಗಿ, ನಾಡಿಗೆ ಶ್ರೇಯಸ್ಸಾಗಿ ಹಚ್ಚುವ ದೀಪ ಅನಂತವಾಗಿ ದೇಶಕ್ಕೆ ಬಂದ ರೋಗರುಜಿನಗಳು ಕೊನೆಗೊಂಡು ದೇಶಕ್ಕೆ ಕಾಲಕಾಲಕ್ಕೆ ಮಳೆ-ಬೆಳೆ-ತನ್ಮೂಲಕ ರಾಜ್ಯ-ರಾಷ್ಟ್ರಕ್ಕೆ ಶ್ರೇಯೋಭಿವೃದ್ಧಿಯಾಗಲಿ, ಲೋಕ ಸುಭಿಕ್ಷೆಯಿಂದ ಕೂಡಿರಲಿ ಎಂದು ನಾವೆಲ್ಲರೂ ಸಮುಷ್ಠಿಯಾಗಿ ದೇವರಲ್ಲಿ ಪ್ರಾರ್ಥಿಸೋಣ.

-ಕುತ್ಯಾರು ಕೇಂಜ ಶ್ರೀಧರ ತಂತ್ರಿ

ಟಾಪ್ ನ್ಯೂಸ್

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.