ಈಗ ಮೊದಲಿನಂತೆ ಇಲ್ಲ ಮೋದಿ…

Team Udayavani, Apr 12, 2019, 6:00 AM IST

h-31

ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ಐದನೇ ಬಾರಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ಬಿಜೆಪಿಯೇ ತಮ್ಮ ಪಕ್ಷದ‌ ಪ್ರಮುಖ ಎದುರಾಳಿ ಎನ್ನುತ್ತಿರುವ ಅವರು, ತಮ್ಮ ಹಳೆಯ ಸ್ನೇಹಿತ ನರೇಂದ್ರ ಮೋದಿ ಮೊದಲಿನಂತಿಲ್ಲ, ಬದಲಾಗಿಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ನವೀನ್‌ ಪಟ್ನಾಯಕ್‌ ಎಕನಾಮಿಕ್‌ ಟೈಮ್ಸ್‌ಗೆ ನೀಡಿದ ಸಂದರ್ಶನದ ಆಯ್ದಭಾಗ ಇಲ್ಲಿದೆ.

ಚುನಾವಣೆಗೆ ತಯ್ನಾರಿ ಹೇಗೆ ನಡೆದಿದೆ? ಎಷ್ಟು ಸೀಟುಗಳಲ್ಲಿ ಗೆಲ್ಲುವ ಭರವಸೆ ಇದೆ?
ಭರ್ಜರಿಯಾಗಿ ಈ ಬಾರಿ ಚುನಾವಣೆಯಲ್ಲಿ
ಗೆಲ್ಲುವ ಭರವಸೆಯಲ್ಲಿದ್ದೇವೆ. ರಾಜ್ಯದಲ್ಲಿ ಅದ್ಭುತ ಉತ್ಸಾಹವಿದೆ. ನಾನು ನಿಖರ ನಂಬರ್‌ಗಳನ್ನು ಕೊಡಲಾರೆನಾದರೂ, ನಾವೇ ಗೆಲ್ಲುತ್ತೇವೆ ಎಂದು ಮಾತ್ರ ಹೇಳಬಲ್ಲೆ.

ದೆಹಲಿಯಲ್ಲಿ ಕಿಂಗ್‌ ಮೇಕರ್‌ ಆಗುವಂಥ ಅವಕಾಶ ಎದುರಾದರೆ ಏನು ಮಾಡುತ್ತೀರಿ?
ಅಂಥ ಸನ್ನಿವೇಶ ಬಂದರೆ ನೋಡೋಣ. ಒಂದು ಪ್ರಾದೇಶಿಕ ಪಕ್ಷವಾಗಿ ನಮ್ಮ ಪಾರ್ಟಿಯ ಹಿತಾಸಕ್ತಿಯಂತೂ ಒಡಿಶಾ ಜನರ ಆಕಾಂಕ್ಷೆಗಳನ್ನು ಬೆಂಬಲಿಸುವುದೇ ಆಗಿದೆ.

ಒಡಿಶಾಗೂ ವಿಶೇಷ ಸ್ಥಾನಮಾನ ಸಿಗಬೇಕೆಂದು ಆಗ್ರಹಿಸುತ್ತೀರಾ?
ಖಂಡಿತ. ನಾವು ಮೊದಲಿನಿಂದಲೂ ಆಗ್ರಹಿಸುತ್ತಲೇ ಬಂದಿದ್ದೇವೆ. ವಿಚಿತ್ರವೆಂದರೆ, 2014ರಲ್ಲಿ ಬಿಜೆಪಿಯು ಒಡಿಶಾಗೆ ವಿಶೇಷ ಸ್ಥಾನಮಾನದ ಮನ್ನಣೆ ನೀಡುವುದನ್ನು ತನ್ನ ಆದ್ಯತೆಯೆಂದು ಹೇಳಿತ್ತು. ಆದರೆ ಅದು ತನ್ನ ಮಾತನ್ನು ಉಳಿಸಿಕೊಳ್ಳಲಿಲ್ಲ.

ನಿಮ್ಮ ಪ್ರಬಲ ಎದುರಾಳಿ ಯಾರು- ಬಿಜೆಪಿಯೋ ಅಥವಾ ಕಾಂಗ್ರೆಸ್ಸೋ?
ನಾವು ಇಬ್ಬರಿಂದಲೂ ಸಮಾನ ಅಂತರ ಕಾಯ್ದುಕೊಂಡಿದ್ದೇವೆ. ಆದರೂ ಬಿಜೆಪಿಯೇ ನಮ್ಮ ಪ್ರಮುಖ ಎದುರಾಳಿ.

ತಾನು ಕೇಂದ್ರೀಯ ಯೋಜನೆಗಳ ಮೂಲಕ ಒಡಿಶಾಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡುತ್ತಿರುವುದಾಗಿ ಬಿಜೆಪಿ ಹೇಳುತ್ತಿದೆ…
ನನಗೆ ಗೊತ್ತಿರುವ ಮಟ್ಟಿಗೆ, ಬಿಜೆಪಿಯು ಒಡಿಶಾದ ಅನೇಕ ಕಾರ್ಯಕ್ರಮಗಳ ಫ‌ಂಡಿಂಗ್‌ ಅನ್ನು ನಿಲ್ಲಿಸಿದೆ. ಇದು ನಿಜಕ್ಕೂ ಬೇಸರದ ಸಂಗತಿ.

ಒಟ್ಟು ಮೂವರು ಪ್ರಧಾನಿಗಳೊಂದಿಗೆ(ಅಟಲ್‌ ಬಿಹಾರಿ ವಾಜಪೇಯಿ, ಮನಮೋಹನ್‌ ಸಿಂಗ್‌ ಮತ್ತು ಈಗ ನರೇಂದ್ರ ಮೋದಿ…) ಕೆಲಸ ಮಾಡುವ ಅವಕಾಶ ನಿಮಗೆ ಸಿಕ್ಕಿತ್ತು…
ಐಕೆ ಗುಜರಾಲ್‌ ಜೊತೆಗೂ ಕೆಲಸ ಮಾಡಿದ್ದೇನೆ…

ಯಾರೊಂದಿಗೆ ನಿಮ್ಮ ಅನುಭವ ಉತ್ತಮವಾಗಿತ್ತು?
ವಾಜಪೇಯಿಯವರೊಂದಿಗೆ.

ಹಾಗಿದ್ದರೆ ವಾಜಪೇಯಿ ಮತ್ತು ಮೋದಿಯವರ ಕಾರ್ಯವೈಖರಿಯನ್ನು ನೀವು ಹೇಗೆ ತುಲನೆ ಮಾಡುತ್ತೀರಿ?
ಮೋದಿಯವರಿಗೆ ಒಡಿಶಾ ಬಗ್ಗೆ ಆಸಕ್ತಿ ಇಲ್ಲ ಎಂದಂತೂ ನನಗೆ ಅನಿಸುತ್ತದೆ.

ಪ್ರಧಾನಿಯಾಗಿ ಅವರ ಕಾರ್ಯವೈಖರಿ ಹೇಗಿದೆ?
ಮೋದಿಗಿಂತಲೂ ವಾಜಪೇಯಿಯವರದ್ದು ಎತ್ತರದ ವ್ಯಕ್ತಿತ್ವವಾಗಿತ್ತು. ಮೈತ್ರಿ ಸರ್ಕಾರವನ್ನು ಹೇಗೆ ಯಶಸ್ವಿಯಾಗಿ ನಡೆಸಬೇಕು ಎನ್ನುವುದು ಅವರಿಗೆ ತಿಳಿದಿತ್ತು.

ನೀವು, ನರೇಂದ್ರ ಮೋದಿ ಮತ್ತು ಜಯಲಲಿತಾ ಅವರು ಮುಖ್ಯಮಂತ್ರಿಗಳಾಗಿ ಉತ್ತಮ ಒಡನಾಡಿಗಳಾಗಿದ್ದವರು….ಮೋದಿ ಪ್ರಧಾನಿಯಾದ ನಂತರ ಸ್ಥಿತಿ ಬದಲಾಗಿದೆಯೇ?
ಹೌದು. ಇದು ನಿಜಕ್ಕೂ ನಿರಾಶಾದಾಯಕ ಸಂಗತಿ.

ಹಾಗಿದ್ದರೆ ಮೋದಿ ಬದಲಾಗಿದ್ದಾರಾ?
ಹೌದು

ವಿವರಿಸಿ ಹೇಳುತ್ತೀರಾ?
ನಾನು ಆಗಲೇ ಹೇಳಿದ್ದೇನೆ, ಅವರು ತಾವು ನೀಡಿದ ಭರವಸೆಗಳಾವುವನ್ನೂ ಈಡೇರಿಸಿಲ್ಲ.

ನೋಟ್‌ಬಂದಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನೋಡಿ ಅದು ಉತ್ತಮ ಕ್ರಮವಾಗಿತ್ತು, ಆದರೆ ಅನುಷ್ಠಾನದ ವಿಷಯದಲ್ಲಿ ಬಹಳ ವೈಫ‌ಲ್ಯ ಅನುಭವಿಸಿತು.

 ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಉದಾತ್ತ ಭರವಸೆಗಳ ಬಗ್ಗೆ ಏನನ್ನುತ್ತೀರಿ.
ಆ ಭರವಸೆಗಳು ಭರವಸೆಗಳಾಗಿಯೇ ಉಳಿದು ಹೋಗುತ್ತವೇನೋ ಎಂದೆನಿಸುತ್ತದೆ. ಈ ರೀತಿಯ ಭರವಸೆಗಳನ್ನು ಅನೇಕ ಪಕ್ಷಗಳು ನೀಡಿವೆ.

ಕಾಂಗ್ರೆಸ್‌ನ ಕನಿಷ್ಠ ಆದಾಯ ಯೋಜನೆ “ನ್ಯಾಯ್‌’ ಬಗ್ಗೆ ಏನಂತೀರಿ?
ಇದು ಒಳ್ಳೆಯ ಐಡಿಯಾ. ಆದರೆ ಯಾವ ಸರ್ಕಾರಕ್ಕೆ ಇದನ್ನು ನಿಭಾಯಿಸಲು ಸಾಧ್ಯ ಎನ್ನುವುದು ನನಗೆ ತಿಳಿದಿಲ್ಲ. ಮುಂದೆ ತಿಳಿಯಲಿದೆ.

ಕೇಂದ್ರದ ನೀತಿಗಳ ಬಗ್ಗೆ ನಿಮ್ಮ ನಿಲುವೇನು?
ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಅವರು ಹೇಳಿದರು. ಆದರೆ ಅವರ ಮಾತು ಈಡೇರಲೇ ಇಲ್ಲ.

ನಿಮ್ಮ ಪಕ್ಷ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 33 ಪ್ರತಿಶತ ಮಹಿಳಾ ಅಭ್ಯರ್ಥಿಗಳನ್ನು ನಿಲ್ಲಿಸಲು ನಿರ್ಧರಿಸಿದೆ. ಈ ವಿಚಾರದಲ್ಲಿ ಜನರ ಪ್ರತಿಕ್ರಿಯೆ ಹೇಗಿದೆ?
ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಒಡಿಶಾದ ಮಹಿಳೆಯರು ಸಂತಸಗೊಂಡಿದ್ದಾರೆ.

ಆದರೆ ಒಡಿಶಾದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಮತ್ತು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಲೇ ಇದೆ ಎನ್ನುತ್ತದಲ್ಲ ಪ್ರತಿಪಕ್ಷ?
ನಾವು 33 ಪ್ರತಿಶತ ಮಹಿಳಾ ಮೀಸಲಾತಿ ನೀಡಿರುವ ಸಂಗತಿಯನ್ನು ಬಿಜೆಪಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದರಲ್ಲೂ ನಮ್ಮ ನಿರ್ಧಾರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ, ಆ ಪಕ್ಷದವರು ನಿರಾಧಾರ ಆರೋಪಗಳನ್ನು ಮಾಡುತ್ತಿದ್ದಾರೆ.

ಇವಿಎಂ ಮತ್ತು ವಿವಿಪ್ಯಾಟ್‌ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನೇರವಾಗಿ ಹೇಳಬೇಕೆಂದರೆ, ನನಗೆ ಗೊತ್ತಿಲ್ಲ. ಬಹಳಷ್ಟು ಜನ ಇವುಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ, ಆದರೆ ಚುನಾವಣಾ ಆಯೋಗ ಏನೂ ಸಮಸ್ಯೆಯಿಲ್ಲ ಎನ್ನುತ್ತದೆ.

ನಿಮ್ಮ ಅನೇಕ ಸಹೋದ್ಯೋಗಿಗಳು ಪಕ್ಷ ತೊರೆದು ಬಿಜೆಪಿ ಸೇರಿದ್ದಾರಲ್ಲ?
ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಜನರು ನಮ್ಮ ಜೊತೆಗೆ ಇರುವವರೆಗೂ ನಮಗ್ಯಾವ ಸಮಸ್ಯೆಯೂ ಇಲ್ಲ. ರಾಜಕೀಯವಿರುವುದೇ ಹೀಗೆ, ಇಲ್ಲಿ ಏನೇನೆಲ್ಲವೂ ನಡೆಯುತ್ತಲೇ ಇರುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ರೀತಿಯ ವಿದ್ಯಮಾನಗಳನ್ನು ನಾನು ಅತಿ ಎನ್ನುವಷ್ಟು ನೋಡಿಬಿಟ್ಟಿದ್ದೇನೆ(ಅದರ ಬಗ್ಗೆ ಬೇಸರವೂ ಆಗುತ್ತದೆ)

ಪ್ರಧಾನ ಮಂತ್ರಿ ನರೇದ್ರ ಮೋದಿಯವರ ಅನೇಕ ಭಾಷಣಗಳು ರಾಷ್ಟ್ರೀಯತೆ, ಪುಲ್ವಾಮಾ ಮತ್ತು ಬಾಲ್ಕೋಟ್‌ನ ಮೇಲೆ ಕೇಂದ್ರೀಕೃತವಾಗಿವೆ…
ಇದೆಲ್ಲ ವಿಫ‌ಲವಾಗುತ್ತಿದೆ ಎಂದು ನನಗೆ ಅನಿಸುತ್ತದೆ.

(ಕೃಪೆ: ಎಕನಾಮಿಕ್‌ ಟೈಮ್ಸ್‌)

ಟಾಪ್ ನ್ಯೂಸ್

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

7-r-ashok

Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್‌. ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.