ಕೃಷಿತೋನಾಸ್ತಿ ದುರ್ಭಿಕ್ಷಂ ಮಾತು ಸತ್ಯವಾಗಲಿ


Team Udayavani, Dec 23, 2021, 7:20 AM IST

ಕೃಷಿತೋನಾಸ್ತಿ ದುರ್ಭಿಕ್ಷಂ ಮಾತು ಸತ್ಯವಾಗಲಿ

ಕೃಷಿ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಆಗದಿರುವುದೇ ರೈತರ ಈ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಹವಾಮಾನ ಮತ್ತು ಮಣ್ಣಿನ ಗುಣದಿಂದಾಗಿ ಇಳುವರಿಯಲ್ಲಿ ಊರಿನಿಂದ ಊರಿಗೆ ವ್ಯತ್ಯಾಸವಿರುತ್ತದೆ. ಪರಿಸರವನ್ನು ಹೊಂದಿಕೊಂಡು ಬೆಲೆಯನ್ನು ನಿರ್ಧರಿಸಬಹುದು. ಯಾವುದೇ ಕಾರಣಕ್ಕೂ ಉತ್ಪಾದನ ಖರ್ಚಿಗಿಂತ ಕಡಿಮೆ ಬೆಲೆಗೆ ಉತ್ಪನ್ನಗಳ ವ್ಯವಹಾರ ನಡೆಯುವಂತಿದ್ದರೆ ಅಂತಹ ಸಂದರ್ಭದಲ್ಲಿ ಸರಕಾರಗಳು ಮಧ್ಯಪ್ರವೇಶಿಸಿ ರೈತರನ್ನು ಕಾಪಾಡಬಹುದು.

ಇಂದು ಅಂದರೆ ಡಿ. 23ರಂದು ರಾಷ್ಟ್ರೀಯ ರೈತರ ದಿನ. ಈ ದಿನದಂದು ಎಲ್ಲರೂ ರೈತರ ಬಗ್ಗೆ ಒಂದಿಷ್ಟು ಅನುಕಂಪ, ಸಹಾನುಭೂತಿಯ ಮಾತುಗಳನ್ನಾಡು ವವರೇ. ಅಷ್ಟು ಮಾತ್ರವಲ್ಲದೆ ಸರಕಾರ ಕೂಡ ರೈತರಿಗಾಗಿ ಕೆಲವೊಂದು ಹೊಸ ಯೋಜನೆಗಳನ್ನು ಘೋಷಿಸಲು ಮರೆಯುವುದಿಲ್ಲ. ರೈತರೇ ದೇಶದ ಬೆನ್ನೆಲುಬು,ಅನ್ನದಾತ, 130 ಕೋಟಿ ಜನರ ಹೊಟ್ಟೆ ತುಂಬಿ ಸುವ ಜವಾಬ್ದಾರಿ ರೈತನಿಗೆ ಇದೆ. ಕೃಷಿತೋನಾಸ್ತಿ ದುರ್ಭಿಕ್ಷಂ ಮುಂತಾದ ಹೇಳಿಕೆಗಳು ಪುಂಖಾನು ಪುಂಖವಾಗಿ ಕೇಳಿಬರುತ್ತವೆ. ರೈತರ ದಿನದ ಹಿನ್ನೆಲೆಯಲ್ಲಿ ಸಭೆಗಳು, ಭಾಷಣಗಳು, ಕೆಲವು ಸಮ್ಮಾನಗಳು ನಡೆದು ರೈತರ ದಿನ ಮುಕ್ತಾಯವಾಗುತ್ತದೆ. ಮತ್ತೆ ರೈತರ ನೆನಪಾಗುವುದು ಮುಂದಿನ ವರ್ಷ ಮತ್ತೂಂದು ರೈತರ ದಿನ ಬಂದಾಗಲೇ.

40 ವರ್ಷಗಳ ಹಿಂದಿನಿಂದಲೇ ಕೃಷಿ ಅಭಿವೃದ್ಧಿಗಾಗಿ, ಕೃಷಿಕನ ಆದಾಯ ವೃದ್ಧಿಗಾಗಿ, ಅಧಿಕ ಇಳುವರಿಗಾಗಿ ರಾಸಾಯನಿಕ ಗೊಬ್ಬರಗಳನ್ನು, ಕೀಟನಾಶಕಗಳನ್ನು ರೈತರಿಗೆ ಪರಿಚಯಿಸಲಾಯಿತು. ಆರಂಭದಲ್ಲಿ ಇವು ಗಳನ್ನು ರೈತ ಒಪ್ಪಿಕೊಳ್ಳದಿದ್ದರೂ ಹಂತಹಂತವಾಗಿ ರಾಸಾಯನಿಕಗಳನ್ನು ನೆಚ್ಚಿಕೊಂಡು ಒಂದಷ್ಟು ಇಳುವರಿ ಯನ್ನು ಜಾಸ್ತಿ ಮಾಡಿಕೊಂಡ. ಇದಕ್ಕೆ ಪೂರಕವಾಗಿ ನೀರಾವರಿ ಅನುಕೂಲಗಳು ಸಾಕಷ್ಟು ದೊರೆಯಿತು. ಆದಾಯವೇನೋ ಹೆಚ್ಚಿದಂತೆ ಖರ್ಚು-ವೆಚ್ಚಗಳು ಜಾಸ್ತಿಯಾಗತೊಡಗಿದವು. ರಾಸಾಯನಿಕಗಳ ದುಷ್ಪರಿ ಣಾಮಗಳ ಬಗ್ಗೆ ಇಲ್ಲಿ ಉಲ್ಲೇಖೀಸದೆ ಇರುವುದೇ ಲೇಸು. ಅದೇ ವೇಳೆ ಪೇಟೆಗಳಲ್ಲಿ ಧಾರಾಳವಾಗಿ ಉದ್ಯೋಗಗಳು ಸೃಷ್ಟಿಯಾದವು. ಪೇಟೆಗಳು ಬೆಳೆ ದಂತೆ ಹಳ್ಳಿಯ ಕಾರ್ಮಿಕರು ಪೇಟೆಯ ಕಡೆಗೆ ವಲಸೆ ಹೋದರು. ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ರೈತ ಮಾತ್ರ ಹಳ್ಳಿಯಲ್ಲಿ ಉಳಿದ. ಯಾಂತ್ರೀಕರಣಗೊಂಡು ಕೆಲಸ ಕಾರ್ಯಗಳು ಸುಲಭ ಎಂದು ಒಮ್ಮೆ ಅನಿಸಿದರೂ ಯಾಂತ್ರೀಕರಣದ ಖರ್ಚುವೆಚ್ಚಗಳು ಮಾತ್ರ ತುಂಬಾ ದುಬಾರಿ. ವಿದ್ಯುತ್‌ ಸಮಸ್ಯೆಯಂತೂ ಊಹನಾತೀತ. ಬೆಳೆ ಸಾಲ, ಕಡಿಮೆ ಬಡ್ಡಿಯ ಸಾಲ, ದೀರ್ಘಾವಧಿ ಸಾಲ ಮುಂತಾದವುಗಳ ಪರಿಣಾಮವಾಗಿ ಇಂದು ರೈತ ಮೇಲುನೋಟಕ್ಕೆ ಸುಭಿಕ್ಷನಂತೆ ಕಂಡರೂ ರೈತ ಅಂದಿಗಿಂತಲೂ ಇಂದು ಹೆಚ್ಚು ಸಾಲಗಾರನಾಗಿ¨ªಾನೆ. ಪೇಟೆಗಳಲ್ಲಿ ಎಲ್ಲ ವಸ್ತು ಗಳ ಬೆಲೆ ಏರಿಕೆಯಾಗಿದ್ದರೂ ರೈತನ ಬೆಳೆಗಳಿಗೆ ಯಾವಾ ಗಲೂ ಬೆಲೆ ಕಡಿಮೆಯೇ. ಸಹಜವಾಗಿ ಇದು ರೈತನ ಆದಾಯಕ್ಕೆ ಭಾರೀ ಹೊಡೆತವನ್ನು ನೀಡುತ್ತ ಬಂದಿದೆ.

40 ವರ್ಷಗಳ ಹಿಂದೆ ದಿನಗೂಲಿ ಗಂಡಾಳು ಮಜೂರಿ ಆರು ರೂ. ಗಳಾಗಿದ್ದರೆ ಇಂದು 500-600 ರೂ. ( 80ರಿಂದ 100 ಪಟ್ಟು ಜಾಸ್ತಿ). ಇನ್ನು ಹೆಣ್ಣಾಳಿನ ಮಜೂರಿ ಈ ಹಿಂದೆ 2 ರೂ.ಗಳಾಗಿದ್ದರೆ ಇಂದು 350-400 ರೂ. ( 170 ರಿಂದ 200 ಪಟ್ಟು ಜಾಸ್ತಿ). ಅದೇ 4 ದಶಕಗಳ ಹಿಂದೆ ಅಡಿಕೆ ಧಾರಣೆ ಕೆ.ಜಿ.ಗೆ 18 ರೂ. ಇದ್ದುದು ಇಂದು 500 ರೂ. (ಸುಮಾರು 80 ಪಟ್ಟು) ತೆಂಗಿನಕಾಯಿ ಬೆಲೆ 4-5ರೂ. ಇದ್ದುದು ಒಂದು ರೂ. ಮಟ್ಟಕ್ಕೆ ಕುಸಿದು ಇಂದು 13-14 ರೂ. ಸಿಗುತ್ತಿದೆ ( 3 ಪಟ್ಟು ಏರಿಕೆ).

ಹಿಂದೆ ಅಕ್ಕಿಯ ಕ್ರಯ 3 ರೂ. ಆಗಿದ್ದರೆ ಇಂದು ಅಂಗಡಿಯಲ್ಲಿ 50 ರೂ. ಆಸುಪಾಸು ಇದೆ. ರೈತನಿಗೆ ದೊರೆಯುವುದು ಅಬ್ಬಬ್ಟಾ ಅಂದರೆ 40 ರೂ. (ಕೇವಲ 13 ಪಟ್ಟು ಜಾಸ್ತಿ). ತರಕಾರಿಗಳ ಬೆಲೆಯೂ ಇದಕ್ಕೆ ಹೊರತಲ್ಲ. 1-2 ರೂ. ಗೆ ದೊರೆಯುತ್ತಿದ್ದುದು ಇಂದು 30-40 ರೂ. ಒಳಗೆ ದೊರೆಯುತ್ತದೆ. ಹಾಲು 2 ರೂ. ಇದ್ದುದು ಇಂದು 35 ರೂ.ಗಳು (17 ಪಟ್ಟು ಅಧಿಕ). ಇದು ನಮ್ಮ ಕರಾವಳಿ ಜಿಲ್ಲೆಗಳ ಪ್ರಮುಖ ಕೃಷಿ ಆದಾಯಗಳ ಒಂದು ಅಂದಾಜು ಧಾರಣೆ. ರಾಜ್ಯದ ಹೆಚ್ಚಿನೆಡೆಯಲ್ಲೂ ಆಹಾರ ಬೆಳೆಗಳೇ ಕೃಷಿ ಬೆಳೆಗಳೂ ಆದ ಕಾರಣ ಎಲ್ಲ ಕಡೆಯ ಪರಿಸ್ಥಿತಿಯೂ ಹೀಗೆಯೇ ಇದೆ. ಸದ್ಯದ ಮಟ್ಟಿಗೆ ಹೇಳುವುದಾದರೆ ಅಲ್ಪಸ್ವಲ್ಪವಾದರೂ ಜೀವ ಉಳಿಸಿಕೊಂಡಿರುವ ಬೆಳೆ ಎಂದರೆ ಅಡಿಕೆ ಮಾತ್ರ.

ಅನೇಕ ಕ್ಷೇತ್ರಗಳಲ್ಲಿ ಇಂದು ಆರ್ಥಿಕ ಮಟ್ಟ ಸುಭಿಕ್ಷವಾಗಿ ಇರುವ ಕಾರಣ, ರೈತರು ಇನ್ನು ಕೂಡ 40 ವರ್ಷಗಳ ಹಿಂದಿನ ಸ್ಥಿತಿಗಿಂತ ಮೇಲೆ ಏರದ ಕಾರಣ ಕೃಷಿಯಿಂದ ವಿಮುಖರಾಗುವವರ ಸಂಖ್ಯೆ ಹೆಚ್ಚತೊಡಗಿದೆ. ಅಧಿಕಾರಕ್ಕೆ ಬಂದ ಎಲ್ಲ ಸರಕಾರಗಳು ರೈತನನ್ನು ಸಾಲಗಾರನಾಗಿ ಮಾಡಿದ್ದು ವಿನಾ ಸಾಲಮುಕ್ತರಾಗಿಸುವತ್ತ ಯೋಚಿಸಿಯೇ ಇಲ್ಲ ಎಂಬುದು ಖೇದಕರ. “ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎಂಬುದು ಗಾದೆ ಮಾತು.
ತುಪ್ಪ ತಿನ್ನುವ ಆಸೆಯಿಂದ ಸಾಲ ಮಾಡಿದ ರೈತ, ಸಾಲದ ಶೂಲದಿಂದ ಹೊರ ಬರಲು ಸಾಧ್ಯವಾಗದೆ ರೈತರು ಆತ್ಮಹತ್ಯೆಗೆ ಶರಣಾಗತೊಡಗಿದರು. ಕಳೆದ ಒಂದೆರಡು ದಶಕದ ಅವಧಿಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಅಂಕಿಅಂಶಗಳತ್ತ ಒಮ್ಮೆ ದೃಷ್ಟಿ ಹಾಯಿಸಿದಲ್ಲಿ ರೈತಾಪಿ ವರ್ಗ ಎಷ್ಟೊಂದು ಹತಾಶವಾಗಿದೆ ಎಂಬುದು ತಿಳಿಯುತ್ತದೆ.

ಇತ್ತೀಚಿನ ದಿನಗಳಲ್ಲಿ ಮಣ್ಣಿನೆಡೆಗೆ ಬರುವವರಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿಯೇ ಆದರೂ ಇನ್ನಿತರ ಆದಾಯದ ಮೂಲಗಳಿಂದ ಜಾಗ ವನ್ನು ಖರೀದಿಸಿ ಕೃಷಿ ಆರಂಭಿಸಿರುತ್ತಾರೆ. ಅಂಥವರ ಆರ್ಥಿಕ ಸಾಮರ್ಥ್ಯದ ಮುಂದೆ ಸಾಂಪ್ರದಾಯಿಕ ಕೃಷಿಕನಿಗೆ ಖರ್ಚುವೆಚ್ಚಗಳನ್ನು ನಿಭಾಯಿಸಿಕೊಂಡು ಅಸ್ತಿತ್ವವನ್ನು ಉಳಿಸಿಕೊಳ್ಳುವುದೇ ಒಂದು ಸವಾಲು. ಈ ಕಾರಣದಿಂದ ಇಂದು ಸಾಂಪ್ರದಾಯಿಕ ರೈತನಿಗೆ ಕೃಷಿ ಜಾಗವೇನಾದರೂ ಬೇಕಿದ್ದರೆ ಖರೀದಿಸುವುದು ಅಸಾಧ್ಯವಾಗಿದೆ. ಇನ್ನು ಕೃಷಿಯಲ್ಲಿ ಅಲ್ಪಸ್ವಲ್ಪ ಲೆಕ್ಕಾಚಾರ ತಪ್ಪಿದರೂ ಜಾಗ ಮಾರಾಟ ಮಾಡಿ ಪೇಟೆ ಸೇರುವವರ ಸಂಖ್ಯೆಯೂ ದೊಡ್ಡಮಟ್ಟದಲ್ಲಿ ಇದೆ.
ಪರಿಹಾರೋಪಾಯಗಳು

ಆರ್ಥಿಕವಾಗಿ ರೈತ ಒಂದಷ್ಟು ಸದೃಢತೆ
ಸಾಧಿಸಲು ಆಗದಿದ್ದರೆ ಮುಂದೆ ಎಲ್ಲರೂ ಕೃಷಿಯಿಂದ ವಿಮುಖರಾಗಬಹುದು. ಅದರಲ್ಲಿಯೂ ಆಹಾರ ಬೆಳೆಗಳಿಂದ ಈಗಾಗಲೇ ವಿಮುಖರಾಗುವವರ ಸಂಖ್ಯೆ ಜಾಸ್ತಿ ಇದೆ.

ಕೃಷಿ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಆಗ ದಿರುವುದೇ ರೈತರ ಈ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಹವಾಮಾನ ಮತ್ತು ಮಣ್ಣಿನ ಗುಣದಿಂದಾಗಿ ಇಳುವರಿಯಲ್ಲಿ ಊರಿನಿಂದ ಊರಿಗೆ ವ್ಯತ್ಯಾಸವಿರುತ್ತದೆ. ಪರಿಸರವನ್ನು ಹೊಂದಿಕೊಂಡು ಬೆಲೆಯನ್ನು ನಿರ್ಧರಿಸಬಹುದು. ಯಾವುದೇ ಕಾರಣಕ್ಕೂ ಉತ್ಪಾದನ ಖರ್ಚಿಗಿಂತ ಕಡಿಮೆ ಬೆಲೆಗೆ ಉತ್ಪನ್ನಗಳ ವ್ಯವಹಾರ ನಡೆಯುವಂತಿದ್ದರೆ ಅಂತಹ ಸಂದರ್ಭದಲ್ಲಿ ಸರಕಾರಗಳು ಮಧ್ಯಪ್ರವೇಶಿಸಿ ರೈತರನ್ನು ಕಾಪಾಡಬಹುದು. ಈ ವ್ಯವಸ್ಥೆ ಎಲ್ಲ ರೈತರಿಗೂ ಸಮಾನವಾಗಿ ಸಿಗುವುದರಿಂದ ಒಂದಷ್ಟು ನ್ಯಾಯ ದೊರೆಯ ಬಹುದು. ಬೇಕಾಬಿಟ್ಟಿ ಯೋಜನೆಗಳ ಬದಲಾಗಿ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿರ್ಧರಿಸಿ ಖರೀದಿಸುವ ವ್ಯವಸ್ಥೆಯನ್ನು ಸರಕಾರಗಳು ಮಾಡಿದರೆ ಕೃಷಿಕರ ಸಮಸ್ಯೆಗಳಿಗೆ ಭಾಗಶಃ ಪರಿಹಾರ ಸಿಗಬಹುದು. ಇನ್ನು ಆಹಾರ ಬೆಳೆ ಬೆಳೆಯುವ ಗ¨ªೆಗಳನ್ನು ತೋಟ ಗಳಾಗಿ, ನಿವೇಶನಗಳಾಗಿ ಪರಿವರ್ತಿಸದಂತೆ ಕಾನೂನಾ ತ್ಮಕ ಕ್ರಮಗಳನ್ನು ತೆಗೆದು ಕೊಳ್ಳದೇ ಇದ್ದಲ್ಲಿ ಮುಂದೆ ಗ¨ªೆಗಳನ್ನು ಫೋಟೋಗಳಲ್ಲಿ ಮಾತ್ರವೇ ಕಾಣಬೇಕಾದ ಪರಿಸ್ಥಿತಿ ಎದುರಾದರೆ ಅದರಲ್ಲಿ ಅಚ್ಚರಿಯೇನಿಲ್ಲ.

ಈ ವರ್ಷದ ರೈತ ದಿನವಾದರೂ ಕೃಷಿಕನ ನೆಮ್ಮದಿಯ ದಿನಗಳಿಗೆ ಆರಂಭದ ಮುಹೂರ್ತವಾಗಲಿ ಎಂಬ ಹಾರೈಕೆ ನಮ್ಮೆಲ್ಲರದು.ಕೃಷಿತೋನಾಸ್ತಿ ದುರ್ಭಿಕ್ಷಂ ಮಾತು ಸತ್ಯವಾಗಲಿ.

-ಎ.ಪಿ.ಸದಾಶಿವ ಮರಿಕೆ

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.