NEP vs SEP ಎಲ್ಲ ಮಕ್ಕಳ ಸಮಾನ ಕಲಿಕಾ ಗುಣಮಟ್ಟಕ್ಕೆ ಎನ್‌ಇಪಿ ಪೂರಕ


Team Udayavani, Aug 29, 2023, 6:15 AM IST

NEP vs SEP ಎಲ್ಲ ಮಕ್ಕಳ ಸಮಾನ ಕಲಿಕಾ ಗುಣಮಟ್ಟಕ್ಕೆ ಎನ್‌ಇಪಿ ಪೂರಕ

“ಸರ್ವರಿಗೂ ಸಮಾನವಾದ ಗುಣಮಟ್ಟದ ಶಿಕ್ಷಣ, ಸಮಾನ ಅವಕಾಶಗಳ ಸಮಾಜ ನಿರ್ಮಿಸುವ ಮೂಲಕ ದೇಶದ ಸಮಗ್ರ ಏಳಿಗೆಯೇ ಶಿಕ್ಷಣದ ಮೂಲ ಉದ್ದೇಶ. ಸ್ವಸಾಮರ್ಥ್ಯದ ಮೇಲೆ ನಂಬಿಕೆ ಇರುವ ಪರಿಪೂರ್ಣ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುವಂತಾಗಬೇಕು’ ಎನ್ನುವ ಪೀಠಿಕೆಯಿಂದ ರಾಷ್ಟ್ರೀಯ ಶಿಕ್ಷಣ ನೀತಿ-2020′ ಪ್ರಾರಂಭವಾಗುತ್ತದೆ.

ಬುನಾದಿ ಹಂತದ ಶಿಕ್ಷಣ, ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣ ಎಂಬ ನಾಲ್ಕು ಹಂತಗಳನ್ನು ಎನ್‌ಇಪಿ ಒಳಗೊಂಡಿದೆ. ಪ್ರಯೋಗ, ಚಟುವಟಿಕೆ ಆಧಾರಿತ ಕಲಿಕೆಗೆ ಎನ್‌ಇಪಿ ಒತ್ತು ನೀಡಿದೆ. ಇದರಿಂದ ಮಕ್ಕಳಿಗೆ ಕಲಿಕೆ ಸರಳವಾಗಿರುತ್ತದೆ, ಪರಿಣಾ ಮಕಾರಿಯಾಗುತ್ತದೆ. ಕಲಿಕೆಯ ಹಂತದಲ್ಲೇ ಕೌಶಲವನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ.

ಸ್ವಾತಂತ್ರ್ಯ ಅನಂತರದಲ್ಲಿ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಅವರ ಅವಧಿಯಲ್ಲಿ ನೂತನ ಶಿಕ್ಷಣ ನೀತಿಯನ್ನು ತರಲಾಯಿತು. ಆದರೂ ಭಾರತದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅನಕ್ಷರತೆ ದೊಡ್ಡ ಪ್ರಮಾಣದಲ್ಲಿತ್ತು. ಈ ಹಿನ್ನೆಲೆಯಲ್ಲಿ 2000 ಇಸವಿ ಯಲ್ಲಿ ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರು “ಸರ್ವ ಶಿಕ್ಷಣ ಅಭಿ ಯಾನ’ ಜಾರಿಗೆ ತಂದರು. ದೇಶದ ಮೂಲೆ ಮೂಲೆ ಯಲ್ಲಿ ಶಾಲೆಗಳನ್ನು ಆರಂಭಿ ಸಿದರು. ಪ್ರತೀ ಮಗುವಿಗೆ ಶಿಕ್ಷಣ ಸಿಗಬೇಕು ಎಂಬ ಅವರ ಆಶಯ ಕೈಗೂಡಿತು.

ಆದರೆ ಕಾಲ ಬದಲಾದಂತೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದುವರೆಯಲು ಶಿಕ್ಷಣದಲ್ಲೂ ಅಗತ್ಯ ಬದಲಾವ ಣೆಗಳನ್ನು ಮಾಡಿಕೊಳ್ಳಬೇಕು. ಅಭಿವೃದ್ಧಿಗೆ ಪೂರಕವಾಗಿ ನಮ್ಮ ದೇಶಕ್ಕೆ ಅಗತ್ಯವಾದ ಚಟುವಟಿಕೆ, ಪ್ರಯೋಗ, ಕೌಶಲಾಧಾರಿತ ಶಿಕ್ಷಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರಕಾರ, ವಿಜ್ಞಾನಿ ಕೆ. ಕಸ್ತೂರಿ ರಂಗನ್‌ ನೇತೃತ್ವದಲ್ಲಿ ತಜ್ಞರ ತಂಡದೊಂದಿಗೆ ಸುಧೀರ್ಘ‌ ಅವಧಿಗೆ ಅಧ್ಯಯನ ನಡೆಸಿ ಎನ್‌ಇಪಿ-2020′ ರೂಪಿಸಿದೆ. ಕಲಿಕೆ ಪರಿಣಾಮಕಾರಿಯಾಗಿರಲು ಮಾತೃ ಭಾಷೆ ಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಖಾಸಗಿ, ಸರಕಾರಿ ಶಾಲೆಗಳ ನಡುವೆ ತಾರತಮ್ಯ ಇಲ್ಲದೆ ಸಮಾನ ಗುಣಮಟ್ಟದ ಶಿಕ್ಷಣಕ್ಕೆ ಎನ್‌ಇಪಿಯಲ್ಲಿ ಒತ್ತು ನೀಡಲಾಗಿದೆ. ಬುನಾದಿ ಹಂತದಲ್ಲೇ ಓದು-ಬರಹ ಮತ್ತು ನಿತ್ಯ ಜೀವನಕ್ಕೆ ಅಗತ್ಯವಾದ ಸಂಖ್ಯಾ ಜ್ಞಾನವನ್ನು ನೀಡುತ್ತದೆ. ಮಕ್ಕಳು ಒತ್ತಡಕ್ಕೆ ಒಳಗಾಗಿ ಶಾಲೆ ಬಿಡದೇ, ಶಿಕ್ಷಣ ಮುಂದುವರೆಸಲು ಪೂರಕ ವಾದ ಅಂಶಗಳಿವೆ. ಕೌಶಲ ನೀಡುವು ದ ರಿಂದ ಮಕ್ಕಳು ಜೀವನದಲ್ಲಿ ವಿಶ್ವಾಸ ದಿಂದ ಬದುಕಲು ಸಾಧ್ಯವಾಗಲಿದೆ. ಮಕ್ಕಳಲ್ಲಿನ ಪ್ರತಿಭೆಗೆ ತಕ್ಕಂತೆ ಅವರು ಜೀವನ ರೂಪಿಸಿಕೊಳ್ಳಲು ಅವಕಾಶವನ್ನು ಎನ್‌ಇಪಿ ಕಲ್ಪಿಸುತ್ತದೆ.ಶಿಕ್ಷಣ ಎನ್ನುವುದು ವ್ಯಾಪಾರವಾಗಿರುವ ಇಂದಿನ ದಿನದಲ್ಲಿ, ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಸಮಾನ ಶಿಕ್ಷಣ ನೀಡುವುದಕ್ಕೆ ವಿರೋಧಿಸಲು ಕಾರಣ ಏನಿರಬಹುದು ಎಂಬುದನ್ನು ಜನ ಸಾಮಾನ್ಯರು ಸುಲಭವಾಗಿ ಅಥೆìçಸಿಕೊಳ್ಳಲು ಸಾಧ್ಯ.

ಎನ್‌ಇಪಿ ಅನೂಕೂಲಗಳು
ನೀಟ್‌, ಜೆಇಇ, ಸಿಇಟಿ, ಕೇಂದ್ರ ಮತ್ತು ರಾಜ್ಯ ಸರಕಾರದ ಸರಕಾರಿ ಹುದ್ದೆಗಳು, ಬ್ಯಾಂಕಿಂಗ್‌, ಸೇನೆ, ವಿದೇಶಗಳಲ್ಲಿ ವ್ಯಾಸಂಗ ಮಾಡಲು ಅಗತ್ಯವಾದ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಗಣನೀಯವಾಗಿ ಯಶಸ್ಸು ಸಾಧಿಸಲು ಎನ್‌ಇಪಿ ಸಹಿತ ರಾಜ್ಯ ಪಠ್ಯಕ್ರಮದ ಶಾಲಾ ಮಕ್ಕಳಿಗೆ ಅನುಕೂಲವಾಗುತ್ತದೆ. ವಿಜ್ಞಾನ, ಗಣಿತ, ಚಟುವಟಿಕೆ, ಪ್ರಯೋಗ, ಕೌಶಲ ವಿಷಯಗಳಲ್ಲಿ ಸಿಬಿಎಸ್ಸಿ ಮತ್ತು ರಾಜ್ಯ ಪಠ್ಯಕ್ರಮವು ಬಹುತೇಕ ಒಂದೇ ಆಗಿರುತ್ತದೆ. ಎನ್‌ಇಪಿ ಪಠ್ಯಕ್ರಮವು ಮಗುವಿನ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಜ್ಞಾನಾಧಾರಿತ ಜಾಗತಿಕ ಸ್ಪರ್ಧೆಗೆ ಮಕ್ಕಳನ್ನು ಸಜ್ಜುಗೊಳಿಸುವುದು ಎನ್‌ಇಪಿ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.

ಅನ್ಯಾಯವಾಗುವುದು ಯಾರಿಗೆ?
ರಾಜ್ಯದ ಸರಕಾರಿ ಶಾಲೆಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸರಕಾರಿ ಶಾಲೆಗಳಲ್ಲಿ ಬಹುತೇಕ ಬಡವರು, ಬಡ ರೈತರ ಮಕ್ಕಳು ವ್ಯಾಸಂಗ ಮಾಡು ತ್ತಿದ್ದಾರೆ. ಅದರಲ್ಲೂ ದಲಿತ ಮತ್ತು ತಳ ಸಮುದಾಯದ ಮಕ್ಕಳು ಹೆಚ್ಚಿನ ಸಂಖ್ಯೆ ಯಲ್ಲಿದ್ದಾರೆ. ಈ ಮಕ್ಕಳಿಗೆ ಆಧುನಿಕ ಕಾಲದ ಅಗತ್ಯಕ್ಕೆ ತಕ್ಕಂತೆ ಕೌಶಲ ಆಧಾರಿತ ವಿಜ್ಞಾನ, ಗಣಿತ, ಇಂಗ್ಲಿಷ್‌ ಶಿಕ್ಷಣದ ಬದಲು ಅದೇ ಹಳಸಲು ಕಾಂಗ್ರೆಸ್‌ ಮತ್ತು ಎಡ ಸಿದ್ಧಾಂತದ ಪಾಠಗಳನ್ನು ಬೋಧಿಸುವ ಮೂಲಕ ಬಡವರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾಂಗ್ರೆಸ್‌ ಪಕ್ಷ ಅಡ್ಡಗಾಲು ಹಾಕುತ್ತಿದೆ. ವೈಜ್ಞಾನಿಕ ಶಿಕ್ಷಣದ ಬದಲು ಬಾಲ್ಯದಿಂ ದಲೇ ಮಕ್ಕಳು ಪರಸ್ಪರ ದ್ವೇಷಿಸುವ, ದೂಷಿಸುವ ಪಾಠವನ್ನು ಕಲಿಸಲು ಕಾಂಗ್ರೆಸ್‌ ಮುಂದಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಇಂತಹ ಪಾಠಗಳನ್ನು ಪಠ್ಯದ ಮೂಲಕ ಮಕ್ಕಳಿಗೆ ಕಲಿಸಿರುವ ಕಾಂಗ್ರೆಸ್‌ ಪಕ್ಷ, ತನ್ನ ಹಿಮ್ಮುಖ ಚಲನೆಯ ಸಿದ್ಧಾಂತವನ್ನು ಮುಂದುವರಿಸಿದೆ. ಹೀಗಾಗಿಯೇ ಪ್ರಗತಿಯ ದೃಷ್ಟಿಕೋನದ ಎನ್‌ಇಪಿ ತಿರಸ್ಕರಿಸುವುದಾಗಿ ಘೋಷಿಸಿದೆ. ಉತ್ತಮ ಭವಿಷ್ಯಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಮಕ್ಕಳನ್ನು ಸಜ್ಜುಗೊಳಿಸಲು ಇಚ್ಛಿಸುವ ಪಾಲಕರು, ತಮ್ಮ ಮಕ್ಕಳನ್ನು ಟ್ಯೂಶನ್‌, ಕೋಚಿಂಗ್‌ಗೆ ಸೇರಿಸುವ ಅನಿವಾರ್ಯತೆಯನ್ನು ಸೃಷ್ಟಿಸಲಾಗುತ್ತದೆ. ಇದರಿಂದ ಕೋಚಿಂಗ್‌ ಮತ್ತು ಟ್ಯೂಶ‌ನ್‌ ಬಲಗೊಳ್ಳುತ್ತದೆ. ಆಧುನಿಕ ಕಾಲದಲ್ಲಿ ಪ್ರಯೋಜನಕ್ಕೆ ಬಾರದ ಕಾಂಗ್ರೆಸ್‌ ಮತ್ತು ಎಡ ಸಿದ್ಧಾಂತದ ಶಿಕ್ಷಣ ನೀತಿಯಿಂದ ಬಡ ಮಕ್ಕಳಿಗೆ ಸಿಗಬೇಕಾದ ಕೌಶಲ, ವೈಜ್ಞಾನಿಕ, ವೃತ್ತಿ ಆಧಾರಿತ ಜೀವನ ರೂಪಿಸಿಕೊಳ್ಳುವ ಶಿಕ್ಷಣ ಮರೀಚಿಕೆಯಾಗುತ್ತದೆ.

-ಬಿ.ಸಿ.ನಾಗೇಶ್‌, ಮಾಜಿ ಶಿಕ್ಷಣ ಸಚಿವ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.