ಪರ್ವತ ಪ್ರದೇಶವೇ ಪ್ರತಿಕೂಲ
Team Udayavani, Jan 16, 2023, 6:10 AM IST
ನೇಪಾಳಕ್ಕೆ ಭೀಕರ ವಿಮಾನ ದುರಂತಗಳು ಹೊಸತೇನಲ್ಲ. ಈ ಹಿಂದೆಯೂ ಹಲವು ಬಾರಿ ವಿಮಾನಗಳು ಪತನಗೊಂಡು ನೂರಾರು ಜೀವಗಳನ್ನು ಆಪೋಶನ ಪಡೆದುಕೊಂಡ ಉದಾಹರಣೆಗಳಿವೆ. ಹಿಮಾಚ್ಛಾದಿತ ರಾಷ್ಟ್ರದಲ್ಲಿ ಇಂತಹ ಅಪಘಾತಗಳೇಕೆ ಸಂಭವಿಸುತ್ತವೆ ಎಂಬುದರತ್ತ ಒಂದು ನೋಟ ಇಲ್ಲಿದೆ.
ನೇಪಾಳವು 30 ವರ್ಷಗಳಲ್ಲಿ ಕಂಡ ವಿಮಾನ ಅಪಘಾತಗಳು – 27
ಕಳೆದೊಂದು ದಶಕದಲ್ಲಿ ನಡೆದಿದ್ದ ದುರಂತಗಳು- 11
ಕಳೆದ 12 ವರ್ಷಗಳಲ್ಲಿ ವಿಮಾನ, ಕಾಪ್ಟರ್ ದುರಂತದಲ್ಲಿ ಸಾವು- 350
ನೇಪಾಳದಲ್ಲೇ ಏಕೆ ಹೆಚ್ಚಿನ ಅವಘಡ?
– ದೇಶದ ಹೆಚ್ಚಿನ ಭಾಗ ಪರ್ವತ ಪ್ರದೇಶಗಳಿಂದ ಕೂಡಿದೆ. ಜಗತ್ತಿನಲ್ಲಿರುವ ಅತಿ ಎತ್ತರದ 14 ಶಿಖರಗಳ ಪೈಕಿ 8 ನೇಪಾಳದಲ್ಲೇ ಇವೆ.
– ವಿಮಾನ ನಿಲ್ದಾಣಗಳು ಅಥವಾ ವಿಮಾನ ಇಳಿದಾಣಗಳು ಪರ್ವತ ಪ್ರದೇಶಗಳಲ್ಲಿಯೇ ನಿರ್ಮಾಣವಾಗಿರುವುದು.
– ಹೊಸ ವಿಮಾನ ನಿಲ್ದಾಣ ನಿರ್ಮಾಣ, ವಿಮಾನಯಾನ ಕ್ಷೇತ್ರವನ್ನು ನಿಯಂತ್ರಿಸಲು ಸಮರ್ಪಕ ಕಾನೂನು, ನಿಯಮಗಳ ಕೊರತೆ
– ಪ್ರತಿಕೂಲ ಹವಾಮಾನವೂ ವಿಮಾನಗಳ ಪತನಕ್ಕೆ ಕಾರಣ.
– ವಿಮಾನ ನಿಲ್ದಾಣಗಳು ಮೊಟ್ಟೆಯ ಆಕಾರದಲ್ಲಿ ಇದೆ. ಹೀಗಾಗಿ, ವಿಮಾನಗಳಿಗೆ ಸರಾಗವಾಗಿ ಸಂಚರಿಸಲು ಕಷ್ಟ
– 2013ರಲ್ಲಿ ಐರೋಪ್ಯ ಒಕ್ಕೂಟ ಸುರಕ್ಷತಾ ನಿಯಮಗಳನ್ನು ಉಲ್ಲೇಖೀಸಿ ನೇಪಾಳದ ವಿಮಾನಗಳಿಗೆ ನಿಷೇಧ ಹೇರಿತ್ತು.
ಪ್ರಧಾನ ದುರಂತಗಳು
1. 1962 ಆ.1ರಂದು ರಾಯಲ್ ನೇಪಾಳ ಏರ್‌ಲೈನ್ಸ್‌ನ ವಿಮಾನ ಪತನ. ಇದು ಆ ದೇಶದ ಮೊದಲ ವಿಮಾನ ಅಪಘಾತ. 14 ಮಂದಿ ಸಾವು.
2. ಬೀಜಿಂಗ್‌ನಿಂದ ಧಂಗದಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ವಿಮಾನ ಪತನ. 25 ಮಂದಿ ದುರ್ಮರಣ.
3. 2008 ಅ.8ರಂದು ಪೂರ್ವ ನೇಪಾಳದಲ್ಲಿ ಯೆಟಿ ಏರ್‌ಲೈನ್ಸ್‌ನ ವಿಮಾನ ಪತನ. 14 ಮಂದಿ ಸಾವು
4. 2019ರಲ್ಲಿ ಅಮೆರಿಕ-ಬಾಂಗ್ಲಾ ಏರ್‌ಲೈನ್ಸ್ ವಿಮಾನ ಪತನಗೊಂಡು 51 ಮಂದಿ ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.