ವರುಷಕೊಂದು ಹೊಸ ಜನ್ಮ, ಹರುಷಕೊಂದು ಹೊಸ ನೆಲೆ..

ಕನ್ನಡದ ಕವಿಗಳು ಕಂಡ ವಸಂತೋತ್ಸವ

Team Udayavani, Apr 3, 2022, 12:33 PM IST

6

ವಸಂತ ಬಂದ, ಋತುಗಳ ರಾಜ ತಾ ಬಂದ ಚಿಗುರನು ತಂದ, ಪೆಣ್ಗಳ ಕುಣಿಸುತ ನಿಂದ ಚಳಿಯನು ಕೊಂದ, ಹಕ್ಕಿಗಳುಲಿಗಳ ಚಂದ, ಕೂವು ಜಗ್‌ ಜಗ್‌ ಪುವ್ವೀ ಟೂವಿಟ್ಟುವೂ | ಮಾವಿನ ಸೊಂಪು, ಮಲ್ಲಿಗೆ ಬಯಲೆಲ್ಲ ಕಂಪು, ಗಾಳಿಯ ತಂಪು, ಜನಗಲ ಜಾತ್ರೆಯ ಕಂಪು ಕಿವಿಗಳಿಗಿಂಪು, ಹಕ್ಕಿಗಳುಲುಹಿನ ಪೆಂಪು, ಕೂವು ಜಗ್‌ ಜಗ್‌ ಪುವ್ವೀ ಟೂವಿಟ್ಟುವೂ |

ಶಾಲಾ ಪಠ್ಯದ ಭಾಗವಾಗಿದ್ದ ಈ ಪದ್ಯ ಬಾಲ್ಯದ ದಿನಗಳನ್ನು ನೆನಪಿಸುತ್ತದೆ. ಗೆಳೆಯರು, ಅಕ್ಕ- ತಂಗಿ, ಅಣ್ಣ- ತಮ್ಮಂದಿರೊಂದಿಗೆ ಚೈತ್ರದ ತಿಳಿಗಾಳಿಯಲ್ಲಿ ಮಾವಿನ ಚಿಗುರಿನ ಸುವಾಸನೆಯನ್ನು ಸವಿಯುತ್ತ ಆಟದ ಮೈದಾನ, ಮನೆಯ ಅಂಗಳ, ಹಿತ್ತಲು, ತೋಟಗಳಲ್ಲಿ ಈ ಹಾಡು ಹಾಡಿಕೊಂಡು ಆಡಿದ ಆ ದಿನಗಳು ನೆನಪಿನಂಗಳದಲ್ಲಿ ಮತ್ತೆ ಚಿಗುರೊಡೆಯುತ್ತವೆ. ಚೈತ್ರ ತರುವ ಸಂಭ್ರಮವೇ ಹಾಗಿದೆ. ಕಣ್ಣ ಹಾಯಿಸಿದಲ್ಲೆಲ್ಲ ಹೊಸತನ ಕಂಡುಬರುತ್ತದೆ. ಆಂಗ್ಲ ಕವಿ ಥಾಮಸ್‌ ನಾಶ್‌ ಬರೆದಿರುವ “ಸ್ಪ್ರಿಂಗ್‌’ ಎಂಬ ಕವನವನ್ನು ಬಿ.ಎಂ. ಶ್ರೀಕಂಠಯ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದು ಹೀಗೆ. ಕೊನೆಯಲ್ಲಿ ಬಂದ ವಸಂತ – ನಮ್ಮ ರಾಜ ವಸಂತ! ಎನ್ನುತ್ತಾರೆ. ಪ್ರತಿವರ್ಷ ವಸಂತದಲ್ಲಿ ಮೊದಲಿಗೆ ನೆನಪಿನಲ್ಲಿ ಸುಳಿಯುವ ಪದ್ಯವಿದು.

ನ್ಯೂಜೆರ್ಸಿಯಲ್ಲಿ ನವೆಂಬರ್‌ನಿಂದ ಮಾರ್ಚ್‌ ತಿಂಗಳವರೆಗೆ ಸುದೀರ್ಘ‌ ಚಳಿಗಾಲ. ಪ್ರತಿಯೊಂದು ತಿಂಗಳಲ್ಲೂ ಬೇರೆ-ಬೇರೆ ತೆರನಾದ ಅನುಭವಗಳನ್ನು ನೀಡುತ್ತದೆ. ಮುಂಬರುವ ಚಳಿಗಾಲಕ್ಕೆ ಸೆಪ್ಟೆಂಬರ್‌- ಅಕ್ಟೋಬರ್‌ ತಿಂಗಳುಗಳಲ್ಲಿ ತಮ್ಮನ್ನು ಸಜ್ಜುಗೊಳ್ಳುವ ಮರ-ಗಿಡಗಳಂತೆ, ಚಳಿಗಾಲದ ವಿವಿಧ ಹಂತಗಳನ್ನು ಎದುರಿಸಲು ನಮ್ಮ ತಯಾರಿಯೂ ನಡೆದಿರುತ್ತದೆ. ಆದರೆ ಚಳಿಯ ವಾತಾವರಣ ಏರಿಳಿತಗಳನ್ನು, ವೈಪರೀತ್ಯಗಳನ್ನು ಎದುರಿಸುತ್ತ ಹೋಗುವಾಗ ಮೈಮನಗಳಲ್ಲಿ ಅದೇನೋ ಜಡತನ, ನಿರಾಸೆ ಮೂಡಿದಂತಾಗಿ ನಮಗೆ ನಾವೇ ಈ ಚಳಿಗಾಲ ಯಾವಾಗ ಮುಗಿಯುವುದೋ, ವಸಂತನ ಆಗಮನ ಯಾವಾಗ ಆಗುವುದೋ ಎಂದು ಪ್ರಶ್ನಿಸಿಕೊಳ್ಳುವಂತಾಗುತ್ತದೆ. ಪ್ರಕೃತಿಯಲ್ಲಿನ ಎಲ್ಲ ಜೀವರಾಶಿಗಳೂ ತಮ್ಮದಾಗಿಸಿಕೊಳ್ಳುವ ಚಳಿಗಾಲದ ಅನುಭವವನ್ನು ಮತ್ತು ಆ ಎಲ್ಲ ಜೀವರಾಶಿಗಳಲ್ಲಿ ವಸಂತಾಗಮನದಿಂದ ಕಂಡುಬರುವ ಬದಲಾವಣೆಯನ್ನು ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪ ಅವರು ತಮ್ಮ “ವಸಂತ ಮೂಡುವುದೆಂದಿಗೆ?’ ಎಂಬ ಕವನದಲ್ಲಿ ಅರ್ಥಪೂರ್ಣವಾಗಿ ಪ್ರಶ್ನಿಸುತ್ತಾರೆ.

ಬತ್ತಿದೆದೆಗೆ ಹೊಸ ಆಸೆಯ ಹೊತ್ತಿಸಿ, ಕೊಂಬೆ ಕೊಂಬೆಯಲಿ ನಂಬಿಕೆಯುಕ್ಕಿಸಿ ಜಡತನದಲಿ ಚೈತನ್ಯವ ಚಿಗುರಿಸಿ ವಸಂತಮೂಡುವುದೆಂದಿಗೆ? ದಿಕ್ಕು ತಪ್ಪಿಸುವ ಕತ್ತಲೆಗಳಲಿ ನಂದಿದಾಸೆಗಳ ಕೋಟಿ ಕಣ್ಗಳಲಿ, ಬೆಳಗಿನ, ನಲವಿನ, ಗೆಲುವಿನ ಭಾವದ ವಸಂತ ಮೂಡುವುದೆಂದಿಗೆ?

ಜಿ.ಎಸ್‌.ಎಸ್‌. ಅವರು “ವಸಂತ ಋತು’ವಿನ ಬಗ್ಗೆ ಹಲವಾರು ಕವನಗಳನ್ನು ಬರೆದಿದ್ದಾರೆ. “ಚೈತ್ರದ ಚುಟುಕು’ ಕವನದ ಸಾಲುಗಳಂತೂ ಬಹಳ ಸುಂದರ.

ಖಳದುಶ್ಯಾಸನ ಹೇಮಂತ ಮರ- ಮರಗಳ ಹಸುರುಡೆಯ ಸೆಳೆದು ಹಾಕಿ ನಗ್ನಗೊಳಿಸಿ ಅವಮಾನ ಮಾಡಿದ, ಇಗೋ ಬಂದ ಋತು ವಸಂತ ಕೊಳಲೂದುತ ಎಲ್ಲೋ ನಿಂತು ಮರ ಮರಗಳ ಮೈಯ ತುಂಬ ಹೊಸ ಚಿಗುರನು ಉಡಿಸಿದ.. ಕವಿ “ವಸಂತ ಋತು’ವಿನ ಬಗ್ಗೆ ಪ್ರತಿಯೊಂದು ಕವನದಲ್ಲಿ ವೈವಿಧ್ಯಮಯವಾಗಿ ವರ್ಣಿಸಿದ್ದಾರೆ.

ಋತು ವಸಂತ ಬಂದನಿದೋ ಉಲ್ಲಾಸವ ತಂದನಿದೋ, ಮಬ್ಬು ಕವಿದ ಮೌನಗಳಲಿ ಹೊಸದನಿಗಳ ಹೊಮ್ಮಿಸಿ ಉದುರಿದೆಲೆಯ ಕೊಂಬೆಗಳಲಿ, ಬಣ್ಣದ ಹೊಳೆ ಹರಿಯಿಸಿ, ಬತ್ತಿದೆದೆಗೆ ಭರವಸೆಗಳ ಹೊಸಬಾವುಟವೇರಿಸಿ, ಹಳೆಗಾಡಿಗೆ ಹೊಸಕುದುರೆಯ ಹೊಸಗಾಲಿಯ ಜೋಡಿಸಿ..

ಹೀಗೆ ನವೋಲ್ಲಾಸ ತರುವ ವಸಂತ ಋತುವಿನ ಬಗ್ಗೆ ಬರೆಯುವ ಕವಿ, ಚೈತ್ರ ಅನ್ನುವುದು ಕೇವಲ ಋತುವಲ್ಲ, ಅದು ಸೃಜನಶೀಲತೆಯ ಸಂಕೇತ. ಬದುಕಿಗೆ ಅಗತ್ಯವಾದ ಚಲನಶೀಲತೆಯನ್ನು ಪ್ರಕೃತಿ ಕಾಯ್ದುಕೊಂಡು ಬರುತ್ತಿದೆ. ಇದುವೇ ನಿಜವಾದ ಸೃಜನಶೀಲತೆಯ ಲಕ್ಷಣ ಎನ್ನುತ್ತಾರೆ.

ಚೈತ್ರ ಮಾಸದ ಮೊದಲ ದಿನದಂದು ಆಚರಿಸಲ್ಪಡುವ “ಯುಗಾದಿ’ ಹಬ್ಬವೂ ಹೊಸ ಆರಂಭವೆನ್ನುವ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಪ್ರೊ| ಎಂ.ವಿ. ಸೀತಾರಮಯ್ಯ ಅವರು ತಮ್ಮ “ಚೈತ್ರಾರಂಭದ ಈ ದಿನ’ ಎನ್ನುವ ಕವನದಲ್ಲಿ..

ನೋವೋ ನಲಿವೋ ಸೋಲೋ ಗೆಲುವೋ ಎರಡಕು ಸಮಬೆಲೆ ಎನುವ ದಿನ; ಬೇವು ಬೆಲ್ಲ ಬೆಳದಿಂಗಳು ಬಿಸಿಲು ಎರಡು ಸಮ ಸೇವಿಸುವ ದಿನ.. ಜೀವನದ ನೋವು-ನಲಿವುಗಳನ್ನು ಸಮನಾಗಿ ತೂಗಿ ನೋಡಿ, ಎರಡಕ್ಕೂ ಸಮನಾದ ಬೆಲೆ ಕೊಡಬೇಕೆಂಬ ಮಾತನ್ನು ಸರಳವಾಗಿ, ಸುಂದರವಾಗಿ ಇಲ್ಲಿ ಹೇಳುತ್ತಾರೆ ಕವಿ. ಡಾ| ಎನ್‌.ಎಸ್‌. ಲಕ್ಷ್ಮೀ ನಾರಾಯಣ ಭಟ್ಟರು ತಮ್ಮ ಕವನದಲ್ಲಿ “ಹೊಸ ವರ್ಷ ಬಂದಂತೆ ಯಾರು ಬಂದಾರು?’ ಕವನದಲ್ಲಿ ಗಿಡ ಮರಕೆ ಹೊಸ ವಸ್ತ್ರ ಯಾರು ತಂದಾರು? ಹಾಡೆಂದು ಕೋಗಿಲೆಯ ಕೂಗಿ ಕರೆದಾರು? ಮಾವಿನಾ ಚಿಗುರನ್ನು ತಿನಲು ಕೊಟ್ಟಾರು? ಎಂದು ಪ್ರಶ್ನಿಸುತ್ತಾ ಕವನವನ್ನು ಮುಂದುವರೆಸುತ್ತಾರೆ.

ಹೊಸ ವರ್ಷ ಬಂದಂತೆ ಯಾರು ಬಂದಾರು ಏನೋ ನಿರೀಕ್ಷೆ ಸೃಷ್ಟಿಯಲೆಲ್ಲ ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ ಬಂದನೊ ವಸಂತ ಬಂದಿಗಳೆ ಎಲ್ಲ! ಹೊಸ ಬಯಕೆ, ಹೊಸ ಆಲೆ ರುಚಿರುಚಿಯ ಬೆಲ್ಲ… ಮನುಷ್ಯನೆಂದರೆ ಹಿಡಿ-ಹಿಡಿ ನೆನಪುಗಳು ಎನ್ನುವಂತೆ ನೆನಪುಗಳಿಂದಲೇ ರೂಪುಗೊಳ್ಳುವ ಜೀವನ ಕಾಣುವ ಕನಸುಗಳನ್ನು, ಅವುಗಳ ಮಹತ್ವವನ್ನು ಅರ್ಥಪೂರ್ಣವಾಗಿ ಕವನದ ಸಾಲುಗಳನ್ನಾಗಿಸಿದ್ದಾರೆ.

ನೆನಪುಗಳ ಜೋಲಿಯಲಿ ತೂಗುವುದು ಮನಸು ಕಟ್ಟುವುದು ಮಾಲೆಯಲಿ ಹೊಸ ಹೊಸ ಕನಸು ನನಸಾಗದಿದ್ದರೂ ಕನಸಿಗಿದೆ ಘನತೆ ತೈಲ ಯಾವುದೆ ಇರಲಿ ಉರಿಯುವುದು ಹಣತೆ ಕವಿ ಸುಮತೀಂದ್ರ ನಾಡಿಗ್‌ ಅವರು ತಮ್ಮ “ಯುಗಾದಿ’ ಕವನದಲ್ಲಿ ಹೇಗೊ ಏನೊ ಕಳೆಯಿತು ಹಿಂದಿನೊಂದು ಯುಗ! ಹಳೆಯದೆಲ್ಲ ಸುಟ್ಟುರಿಯಲಿ ಬೆಂಕಿಹಚ್ಚಿ ಧಗಧಗ ಎಂದು ಪ್ರಾರಂಭಿಸಿ ಅನಂತರದ ಸಾಲುಗಳಲ್ಲಿ ಹಬ್ಬದ ತಯಾರಿಯ ಕುರಿತು ಬರೆಯುತ್ತಾರೆ. ಡಾ| ಸಿದ್ಧಲಿಂಗಯ್ಯ ಅವರು ಯುಗಾದಿಯ ಶೀರ್ಷಿಕೆಯಡಿಯಲ್ಲಿ ಐದು ಕವನಗಳನ್ನು ಬರೆದಿದ್ದಾರೆ. ಎಲ್ಲ ಕವನಗಳ ವಿಷಯ ಯುಗಾದಿಯಾದರೂ, ಪ್ರತಿ ಕವನಗಳಲ್ಲಿನ ಭಾವ ಬೇರೆ, ಬೇರೆಯಾಗಿದೆ. ಯುಗಾದಿ-1 ಕವನದ ಸಾಲುಗಳು ಹೀಗಿವೆ.

ಬೇವು ಬೆಲ್ಲದ ಅದೇ ಹಳೆಯ ಪಾಠ ಸ್ವಂತದ್ದೋ ಸಾಲದ್ದೋ ಒಬ್ಬಟ್ಟಿನೂಟ ಬದುಕೇ ಇಲ್ಲದ ಅನಾದಿಯ ಲೆಕ್ಕಕ್ಕೆ ನೀನೊಂದು ಶಬ್ದ ಮಾತ್ರ.

ಹಗಲಿರುಳು ಉರುಳಿ ಹೋಗಿ ವರ್ಷ, ವರ್ಷವೂ ಬರುವ ಯುಗಾದಿ ಬರೀ ಶಬ್ದವೇ? ಆಲೋಚಿಸುವಂತೆ ಮಾಡುತ್ತದೆ ಕವನದ ಈ ಸಾಲು. ಯುಗಾದಿ-2 ಕವನದಲ್ಲಿ ಯುಗಾದಿ ಎನ್ನುವುದು ಹಲವರಿಗೆ ಬರೀ ಶಬ್ದ ಮಾತ್ರ ಎನ್ನುವ ಕವಿಯ ಮಾತನ್ನು ಮನಸ್ಸು ಒಪ್ಪಿಕೊಳ್ಳುವಂತೆ ಮಾಡುತ್ತದೆ.

ಉಳ್ಳವರಿಗೆ ಹಬ್ಬವಾಯ್ತು ಕವಿಕುಲಕ್ಕೆ ಕಬ್ಬವಾಯ್ತು ಇಲ್ಲದವರಿಗೇನಾಯಿತು ಹೇಳೆ ಯುಗಾದಿ.. ಕವಿ ಚೆನ್ನವೀರ ಕಣವಿ ತಮ್ಮ “ಯುಗಾದಿ’ ಕವನದಲ್ಲಿ ಯುಗಾದಿಯನ್ನು “ಹಿರಿಯ’ನೆಂದು ಕರೆದು ಅವನೊಂದಿಗೆ ಮಾತುಕತೆ ನಡೆಸುವ ರೀತಿಯಂತೂ ವಿಶಿಷ್ಟವಾಗಿದೆ.

ಕರೆಯದಿದ್ದರೂ ನಾವು, ನೀನು ಬಂದೇ ಬರುವಿ ಅಲ್ಲವೆ? ಬಾ ಮತ್ತೆ, ಬಾ ಯುಗಾದಿ; ಎಂಥ ಬಿಸಿಲೊಳು ಬಂದೆ! ಬೇಕೆ ಬಾಯಾರಿಕೆಗೆ ಬೇವು ಬೆಲ್ಲ? ಹೀಗೆ ಯುಗಾದಿ ಎಂಬ “ಹಿರಿಯ’ನನ್ನು ಮಾತಿಗೆಳೆಯುತ್ತಾರೆ ಕವಿ. ಕವನವನ್ನು ಮುಂದುವರೆಸುತ್ತ ತಮ್ಮ ಮಾತುಕತೆಯನ್ನೂ ಮುಂದುವರಿಸುತ್ತ ಹೋಗುವ ಕವಿ, ಜಗದ ನಿಜಸ್ಥಿತಿಯ ಬಗ್ಗೆ ಆ ಹಿರಿಯನಲ್ಲಿ ಹೇಳಿಕೊಳ್ಳುತ್ತಾರೆ. ನಶ್ವರ ಬದುಕಿನ ಚಿಂತನೆಯನ್ನು ಆತನಲ್ಲಿ ಮಾತನಾಡುತ್ತಾರೆ.

ವರುಷಗಟ್ಟಲೆ ಎತ್ತಲೋ ಕಣ್ಮರೆಯಾಗಿ ಹೋಗುವ ನಿನಗೆ ಹೇಗೆ ಗೊತ್ತು- ಇಲ್ಲಿ, ಒಳಗೊಳಗೆ ನಡೆಯುತ್ತಿರುವ ಮಸಲತ್ತು, ನಿಮಿಷ ನಿಮಿಷಕ್ಕೆ ಹೊಸ ಹೊಸ ವೇಷಧರಿಸಿ ಓಡುವ ಜಗತ್ತು. ಹಾಗೆ ನೋಡಿದರೆ, ನಮಗಿಲ್ಲಿ ಏನಿದೆ ಹೇಳು ವಿಶೇಷ ಸವಲತ್ತು? ಇಂದೊ ನಾಳೆಯೊ ವಲಸೆ ಹೋಗುವರು ನಮ್ಮ ಜನ ಚಂದ್ರ ತಾರಾಲೋಕ ಹುಡುಕಿಕೊಂಡು ಬಹುಶಃ ಕವಿಗಳನ್ನೂ ಜತೆಗೆ ಕರೆದುಕೊಂಡು.

ಈ ಕವನದ ಸಾಲುಗಳಲ್ಲಿ ಯುಗಾದಿಯನ್ನು ಕವಿ ನೋಡುವ ನೋಟ ಅದೆಷ್ಟು ವಿಭಿನ್ನ ಎನಿಸುತ್ತದೆ. ಯುಗಾದಿಯ ಬಗ್ಗೆ ಹತ್ತಾರು ಕವನಗಳನ್ನು ಓದಿ, ನೂರಾರು ಭಾವಗಳನ್ನು ತಿಳಿದುಕೊಳ್ಳುವಂತಾದಾಗ, ನಾವೆಲ್ಲ ಬಾಲ್ಯದಿಂದ ಹಾಡಿಕೊಂಡು ಬಂದಿರುವ ವರಕವಿ ದ.ರಾ. ಬೇಂದ್ರೆ ಅವರ “ಯುಗಾದಿ’ ಕವನದ ಸಾಲುಗಳು ಕವಿ ಕೇಳುವ ಪ್ರಶ್ನೆಯನ್ನು ನಮ್ಮ ಮನಸ್ಸಿನಲ್ಲೂ ಮೂಡಿಸುತ್ತವೆ.

ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖೀಲ ಜೀವಜಾತಕೆ! ಒಂದೆ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಒಂದೇ ಹರೆಯ ನಮಗದಷ್ಟೆ ಏತಕೆ? .. ಈ ಕವನಗಳನ್ನು ಮೆಲುಕು ಹಾಕುವಂತೆ ಮಾಡುತ್ತದೆ.

-ಅಹೀಶ್‌ ಭಾರದ್ವಾಜ, ನ್ಯೂಜೆರ್ಸಿ

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.