ಏನಿದು ಬೋಟ್ಸ್ ವಾನಾ ರೂಪಾಂತರಿ?
Team Udayavani, Nov 27, 2021, 6:40 AM IST
ದಕ್ಷಿಣ ಆಫ್ರಿಕಾದ ಅತೀ ಜನನಿಬಿಡ ಪ್ರಾಂತ್ಯವಾದ ಗುಟೆಂಗ್ನಲ್ಲಿ ಈ ವೈರಾಣುವಿರುವ ಹೊಸ ಪ್ರಕರಣಗಳು ಪತ್ತೆಯಾಗಿವೆ. ಅತ್ತ ಹಾಂಕಾಂಗ್, ಬೋಟ್ಸ್ವಾನಾದಲ್ಲಿ ದಾಖಲಾಗಿರುವ ಕೆಲವು ಪ್ರಕರಣಗಳಲ್ಲಿ ಇದೇ ಮಾದರಿಯ ವೈರಾಣು ಪತ್ತೆಯಾಗಿದೆ. ಇದರ ಹೊರತಾಗಿಯೂ ಬೋಟ್ಸ್ವಾನಾ ರೂಪಾಂತರಿ ಎಂದು ವಿಜ್ಞಾನಿಗಳು ಹೆಸರಿಸಿದ್ದಾರೆ.
ಹೆಚ್ಚು ಶಕ್ತಿಶಾಲಿ
ಸಾಮಾನ್ಯವಾಗಿ ಕೊರೊನಾ ವೈರಾಣುವಿನ ಮೇಲೆ ಪ್ರೊಟೀನ್ನಿಂದ ಕೂಡಿದ ಮುಳ್ಳಿನಂಥ ಆಕಾರವಿರುತ್ತದೆ. ಬಿ.1.1.529 ರೂಪಾಂತರಿ ವೈರಾಣುವಿನಲ್ಲಿ ಈ ಪ್ರೊಟೀನ್, ಕನಿಷ್ಟ 30 ಬಾರಿಯಾದರೂ ರೂಪಾಂತರ ಹೊಂದಿದೆ. ಹಾಗಾಗಿ, ಇದು ಈವರೆಗಿನ ಎಲ್ಲ ರೂಪಾಂತರಿಗಳಿಗಿಂತ ಹೆಚ್ಚು ವೇಗವಾಗಿ, ಹೆಚ್ಚು ಪರಿಣಾಮಕಾರಿಯಾಗಿ ಹರಡಬಲ್ಲದು ಎನ್ನಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಬುಧವಾರ- ಗುರುವಾರಗಳಂದು ದಾಖಲಾಗಿರುವ 1,100 ಹೊಸ ಕೊರೊನಾ ಪ್ರಕರಣಗಳಲ್ಲಿ ಶೇ. 90ರಷ್ಟು ಹೊಸ ರೂಪಾಂತರಿ ಪತ್ತೆಯಾಗಿರುವುದು ಇದರ ತ್ವರಿತ ಹರಡುವಿಕೆಗೆ ಸಾಕ್ಷಿಯಾಗಿದೆ.
ಇದನ್ನೂ ಓದಿ:ಪೆನ್ಸಿಲ್ಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಪುಟಾಣಿಗಳು-ವಿಡಿಯೋ ವೈರಲ್
ಸಮಾಧಾನಕರ ಸಂಗತಿ!
ಕೊರೊನಾಕ್ಕೆ ಈವರೆಗೆ ಅಭಿವೃದ್ಧಿಪಡಿಸಲಾಗಿರುವ ಎಲ್ಲ ಲಸಿಕೆಗಳು ಈ ಹೊಸ ರೂಪಾಂತರಿ ವೈರಾಣುವನ್ನು ಹತ್ತಿಕ್ಕುವಲ್ಲಿ ಶಕ್ತವಾಗಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇನ್ನು, ಈ ವೈರಾಣುವಿನಿಂದ ಈವರೆಗೆ ಕಂಡಿರದ ಅತಿಭೀಕರ ಕೊರೊನಾ ರೋಗ ಉಂಟಾ ಗುತ್ತದೆ ಎಂಬುದಂತೂ ಸುಳ್ಳು ಎಂದೂ ವಿಜ್ಞಾನಿಗಳು ತಿಳಿಸಿದ್ದಾರೆ. ಇವೆರಡೂ ವಿಚಾರಗಳು ಹೊಸ ರೂಪಾಂ ತರಿಯ ಭೀತಿಯ ನಡು ವೆಯೂ ಸಮಾಧಾನ ಹಾಗೂ ಆತ್ಮವಿಶ್ವಾಸ ತರುವಂಥದ್ದಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.