ಶಿಕ್ಷಣದಲ್ಲಿ ಮಹತ್ತರ ಬದಲಾವಣೆಗೆ ಮುನ್ನುಡಿ 


Team Udayavani, Oct 1, 2021, 6:10 AM IST

Untitled-1

ಪ್ರಸಕ್ತ ಸಾಲಿನಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಕ್ಕೆ ಸರಕಾರ ನಿರ್ಧ ರಿ ಸಿದೆ. ಸಂಬಂಧ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳು ಮಾಡಿ ಕೊಂಡಿ ರುವ ಸಿದ್ಧತೆ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲಿರುವ ಗೊಂದಲ ನಿವಾರಣೆಗೆ ತೆಗೆದುಕೊಂಡ ಕ್ರಮಗಳು, ಪಠ್ಯ ಕ್ರ ಮ ದ ಲ್ಲಿನ ಹೊಸ ವಿಷಯಗಳ ಕುರಿ ತು “ಉದಯವಾಣಿ’ ಮುಂದಿಟ್ಟಿರುವ ಪಂಚಪ್ರಶ್ನೆಗಳಿಗೆ ಕುಲಪತಿಗಳ ಉತ್ತರ ಇಲ್ಲಿದೆ..

ಯಾವುದೇ ರೀತಿಯ ಗೊಂದಲ ಇಲ್ಲ:

ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವ್ಯಾಪ್ತಿಯ ಎಲ್ಲ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಎನ್‌ಇಪಿ ಜಾರಿಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿಇಟಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಹೊಸ ಶಿಕ್ಷಣ ನೀತಿಯ ಪಠ್ಯಕ್ರಮ ಬೋಧಿಸಲಾಗುತ್ತದೆ.

ವಿಟಿಯು ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಎಲ್ಲ ಕಾಲೇಜುಗಳಲ್ಲಿ ಸ್ವಾಗತ ಸಮಾರಂಭ ಮಾಡುತ್ತಾರೆ. ಈ ಕಾರ್ಯಕ್ರಮದಲ್ಲಿ ಎನ್‌ಇಪಿ ಕುರಿತು ಮಾಹಿತಿ ನೀಡಲಾಗುವುದಲ್ಲದೆ ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿ ಸಹ ದೊರೆಯಲಿದೆ. ಇನ್ನು ಉಪನ್ಯಾಸಕರು ಈಗಾಗಲೇ ಕಾರ್ಯಾಗಾರ, ವಿಚಾರ ಸಂಕಿರಣ, ಚರ್ಚಾಗೋಷ್ಠಿ, ಸಂವಾದಗಳ ಮೂಲಕ ತರಬೇತಿ ಪಡೆದಿದ್ದಾರೆ.

ಖಂಡಿತಾ ಮಹತ್ತರ ಬದಲಾವಣೆ ಮಾಡುತ್ತಿದ್ದೇವೆ. ಜ್ಞಾನ, ಕೌಶಲ, ಸ್ಪರ್ಧಾತ್ಮಕ ಮನೋಭಾವ ಈ ಮೂರೂ ಅಂಶಗಳನ್ನೊಳಗೊಂಡಂತೆ ಎನ್‌ಇಪಿ ಪಠ್ಯಕ್ರಮ ಅಳವಡಿಸಲಾಗುತ್ತದೆ. ಎಂಜಿನಿಯರಿಂಗ್‌ ಕಾಲೇಜುಗಳು ಮತ್ತು ಕೈಗಾರಿಕೆಗಳ ನಡುವೆ ಇರುವ  ಸಂಪರ್ಕದ ಅಂತರ ಕಡಿಮೆಯಾಗಲಿದೆ.

ಎನ್‌ಇಪಿಯಿಂದ ಉನ್ನತ ಶಿಕ್ಷಣದ ಗುಣಮಟ್ಟದಲ್ಲಿ ಖಂಡಿತಾ ಸುಧಾರಣೆ ಯಾಗಲಿದೆ. ಮುಖ್ಯವಾಗಿ ಬಹು ಕೌಶಲದ ಅಭಿವೃದ್ಧಿಯಾಗಲಿದೆ. ಎಲ್ಲ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಲು ಅನುಕೂಲ ವಾಗುವಂತೆ ಪ್ರತ್ಯೇಕ ಆಂತರಿಕ ಸೆಲ್‌ ತೆರೆಯಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ, ಉಪನ್ಯಾಸಕರ ಶಿಕ್ಷಣ ಗುಣಮಟ್ಟ ಗಣನೀಯವಾಗಿ ಸುಧಾರಣೆ ಕಾಣಲಿದೆ. ಎಂಜಿನಿಯರಿಂಗ್‌ ಕಾಲೇಜ್‌ಗಳಲ್ಲಿ ಉಪನ್ಯಾಸಕರ ಕೊರತೆ ಇಲ್ಲ.

ಎಂಜಿನಿಯರಿಂಗ್‌ದಲ್ಲಿ ಡ್ರಾಪ್‌ಔಟ್‌ ಆಗುವ ಸಾಧ್ಯತೆ ಬಹಳ ಕಡಿಮೆ. ಎನ್‌ಇಪಿದಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ವಿವಿಧ ಕಾರಣಗಳಿಂದ ಅರ್ಧಕ್ಕೆ ಬಿಟ್ಟಿರುವವರು ಮತ್ತೆ ತಮ್ಮ ಅಧ್ಯಯನ ಮುಂದುವರಿಸಬಹುದು. ಡ್ರಾಪ್‌ಔಟ್‌ ಕಡಿಮೆ ಮಾಡುವ ಉದ್ದೇಶದಿಂದಲೇ ಹೊಸ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ.-ಪ್ರೊ| ಕರಿಸಿದ್ದಪ್ಪ ವಿಶ್ವೇಶ್ವರಯ್ಯ  ತಾಂತ್ರಿಕ ವಿವಿ ಕುಲಪತಿ, ಬೆಳಗಾವಿ

ಪ್ರತೀ ವರ್ಷವೂ ಕೌಶಲಾಧಾರಿತ ಪಠ್ಯಕ್ರಮ:

ಮೈಸೂರು ವಿವಿ ವ್ಯಾಪ್ತಿಯ ಎಲ್ಲ ಪದವಿ ಕಾಲೇಜುಗಳಲ್ಲೂ ಅಧ್ಯಾಪಕರು ಮತ್ತು ಪ್ರಾಂಶುಪಾಲರಿಗೆ ಎನ್‌ಇಪಿ ಬಗ್ಗೆ ಕಾರ್ಯಾಗಾರ ನಡೆಸ­ಲಾಗಿದೆ. ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಎನ್‌ಇಪಿ ಅನ್ವಯ ಆಗುವುದರಿಂದ ನೂತನ ಶಿಕ್ಷಣ ನೀತಿಯನ್ನು ಬೋಧಿಸಲು ಬೋಧಕ­ವರ್ಗವನ್ನು ಅಣಿಗೊಳಿಸಲಾಗಿದೆ.

ನೂತನ ಶಿಕ್ಷಣ ನೀತಿಯ ಬಗ್ಗೆ ವಿದ್ಯಾರ್ಥಿಗಳಿಗಾಗಲಿ ಅಥವಾ ಉಪನ್ಯಾಸಕ ರಿಗೆ ಗೊಂದಲ ಉಂಟಾದರೆ ಅದನ್ನು ಬಗೆಹರಿಸಲು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ನುರಿತ ಸಿಬಂದಿ ಯಿರುವ ಹೆಲ್ಪ್ಲೈನ್‌ ಆರಂಭಿಸಲಾಗಿದೆ. ಜತೆಗೆ ಎಲ್ಲ ಪದವಿ ಕಾಲೇಜುಗಳಲ್ಲೂ ಈ ಹೆಲ್ಪ್ ಲೈನ್‌ ಆರಂಭಿಸಲು ನಿರ್ಧರಿಸಲಾಗಿದೆ.

ನೂತನ ಶಿಕ್ಷಣ ನೀತಿಯಲ್ಲಿ ಬಿಎ, ಬಿಎಸ್ಸಿಯಲ್ಲಿ ಎರಡು ಪಠ್ಯಗಳು ಮೇಜರ್‌ ವಿಷಯ­ವಾಗಿರುತ್ತವೆ. ಬಿಕಾಂ ಮತ್ತು ಬಿಸಿಎನಲ್ಲಿ ಎಂದಿನಂತೆ ಪಠ್ಯ ವಿಷಯಗಳಿರುತ್ತವೆ.  ಜತೆಗೆ ಶೈಕ್ಷಣಿಕ ವರ್ಷ ದಲ್ಲಿ ವಿದ್ಯಾರ್ಥಿಗಳಿಗೆ ಕ್ರೆಡಿಟ್‌ ದೊರೆಯಲಿದ್ದು, ಇದು ಅವರ ಶೈಕ್ಷಣಿಕ ಪ್ರಗತಿಗೆ ಅನುಕೂಲ­ವಾಗಲಿದೆ. ಪ್ರತೀ ವರ್ಷವೂ ಕೌಶಲಾ­ಧಾರಿತ ಪಠ್ಯಕ್ರಮ ಇರಲಿದೆ.

ಸದ್ಯಕ್ಕೆ ಮೈಸೂರು ವಿವಿ­ಯಲ್ಲಿ 30 ವಿದ್ಯಾರ್ಥಿ­ಗಳಿಗೆ ಒಬ್ಬ ಶಿಕ್ಷಕರಿದ್ದಾರೆ. ಆದರೆ ಎನ್‌ಇಪಿಯಲ್ಲಿ 10 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಇರಬೇಕು ಎಂದು ಹೇಳಲಾಗಿದೆ. ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗಷ್ಟೇ ಎನ್‌ಇಪಿ ಅನ್ವಯ ಆಗುವುದರಿಂದ ಶಿಕ್ಷಕರ ಕೊರತೆ ಸದ್ಯಕ್ಕೆ ಸಮಸ್ಯೆ ಆಗದಿದ್ದರೂ ಮುಂದಿನ ದಿನಗಳಲ್ಲಿ

ಎನ್‌ಇಪಿ ಅನುಷ್ಠಾನಕ್ಕೆ ಬಹುದೊಡ್ಡ ಸಮಸ್ಯೆ ಆಗುವುದರಲ್ಲಿ ಸಂದೇಹವಿಲ್ಲ.

ಕೌಟುಂಬಿಕ ಸಮಸ್ಯೆ, ವಿವಾಹ ಸೇರಿದಂತೆ ಇತರ ಕಾರಣಗಳಿಂದ ಡ್ರಾಪ್‌ಔಟ್‌ ಆಗಲಿದೆ. ಇದು ಶೇ.05ರಷ್ಟು ಮಾತ್ರ. ಪದವಿ ಹಂತದಲ್ಲಿ ಡ್ರಾಪ್‌ಔಟ್‌ಗೆ ಅವಕಾಶವಿದ್ದು, ಕಾಲೇಜು ಬಿಟ್ಟು ಕೆಲಸಕ್ಕೆ ಸೇರಿದವರು ಮತ್ತೆ ಕಾಲೇಜಿಗೆ ಸೇರಿಕೊಳ್ಳುವ ಅವಕಾಶ ನೀಡಲಾಗಿದೆ. ಆದ್ದರಿಂದ  ಉನ್ನತ ಶಿಕ್ಷಣ ದಲ್ಲಿ ಡ್ರಾಪ್‌ಔಟ್‌ ಹೆಚ್ಚಾಗುವ ಆಂತಕ ಇಲ್ಲ.ಪ್ರೊ| ಜಿ. ಹೇಮಂತ ಕುಮಾರ್‌ ಕುಲಪತಿ, ಮೈಸೂರು ವಿವಿ

ಪಠ್ಯಕ್ರಮದಲ್ಲಿ ರಾಷ್ಟ್ರೀಯ ಗುಣಮಟ್ಟ  :

ಎನ್‌ಇಪಿ ಅನುಷ್ಠಾನಕ್ಕೆ ಸರಕಾರದ ಆದೇಶ ಬರುವ ಮೊದಲೇ ಸಿದ್ಧತೆ ಆರಂಭಿಸಲು ಪ್ರಾಂಶುಪಾಲರು, ಅಧ್ಯಾಪಕರ ಜತೆ ಚರ್ಚೆ ನಡೆಸಿದ್ದೇವೆ. ಆನ್‌ಲೈನ್‌ ಕಾರ್ಯಾಗಾರ, ಕುಲಪತಿಗಳ ಜತೆ ಸಮಾಲೋಚನೆ ಮಾಡಿದ್ದೇವೆ. ಸಂಯೋ­ಜಿತ ಕಾಲೇಜು, ಬೆಂಗ­ಳೂರು ನಗರ ವಿವಿ ಕ್ಯಾಂಪಸ್‌ ನಲ್ಲಿ ವಿಷಯವಾರು ಚರ್ಚೆ  ನಡೆಸಿ, ಮಾಡೆಲ್‌ ಪಠ್ಯಕ್ರಮವನ್ನು ರಚನೆ  ಮಾಡಿದ್ದೇವೆ.

ಎನ್‌ಇಪಿಯಿಂದ ಪಠ್ಯಕ್ರಮ, ಬೋಧನಾ ಕ್ರಮ, ಮೌಲ್ಯಮಾಪನ, ಕಾಂಬಿನೇಶನ್‌ ಬದಲಾವಣೆ ಬಗ್ಗೆ ಉಪನ್ಯಾಸಕರಿಗೆ ಸರಣಿ ಕಾರ್ಯ­ಕ್ರಮ ಮಾಡಿದ್ದೇವೆ. ಆರಂಭದಲ್ಲಿ ಉಪನ್ಯಾಸರಿಗೆ ಸ್ಪಷ್ಟ ಚಿತ್ರಣ ನೀಡುವ ಕಾರ್ಯ ಮಾಡಿದ್ದೇವೆ. ವಿದ್ಯಾರ್ಥಿಗಳಿಗಿರುವ ಅನುಕೂಲಗಳ ಬಗ್ಗೆ ತಿಳಿಸಿದ್ದೇವೆ.

ಎನ್‌ಇಪಿಯ ಮೂಲ ಆಶಯ ಏನು, ಶೈಕ್ಷಣಿಕ ಬದಲಾವಣೆ ಎಂಬುದರ ಬಗ್ಗೆ ಅರಿವು ಮೂಡಿಸಬೇಕು. ಪಠ್ಯಕ್ರಮ­ದಲ್ಲಿ ಕ್ರೆಡಿಟ್‌ ವ್ಯವಸ್ಥೆ ಬರಲಿದೆ. ಕೌಶಲ, ಪ್ರಾಜೆಕ್ಟ್ ವರ್ಕ್‌ ಮೊದಲಾ­ದವುಗಳು ಪಠ್ಯದ ಭಾಗವಾಗ­ಲಿದೆ. ಮೂಲ ವಿಷಯದ ಜತೆಗೆ ಬೇರೆ ವಿಷಯಗಳನ್ನು ಓದಲು ಅವಕಾಶ ವಿದೆ. ಕೌಶಲಾಂಶಗಳು ಪ್ರತೀ ಸೆಮಿಸ್ಟರ್‌ನಲ್ಲಿ ಇರಲಿದೆ. ಇದರ ಜತೆ ಮೌಲ್ಯವನ್ನು ತುಂಬ­ಲಾಗು ತ್ತದೆ. ರಾಷ್ಟ್ರೀಯ ಗುಣಮಟ್ಟ ಪಠ್ಯ ಕ್ರಮದಲ್ಲಿ ಬರಲಿದೆ.

ಶಿಕ್ಷಣದಲ್ಲಿ ಉಪನ್ಯಾಸಕರ ಕೊರತೆ ರಾಷ್ಟ್ರೀಯ ಸಮಸ್ಯೆ. ಇದು ನಿರ್ವಹಣೆ­ಯಾಗಲೇಬೇಕು. ಪಠ್ಯಕ್ರಮದಲ್ಲಿ ಆಗಬೇಕಾದ ಬದಲಾವಣೆ ಎನ್‌ಇಪಿಯಿಂದ ಆಗಲಿದೆ. ಅನು­ದಾನ ಪ್ರಮಾಣವನ್ನು ಸರಕಾರ ಹೆಚ್ಚಿಸಬೇಕು.

ಪ್ರತೀ ವರ್ಷ ಎಕ್ಸಿಟ್‌, ಎಂಟ್ರಿ ಇರುವುದೇ ಡ್ರಾಪ್‌ಔಟ್‌ ತಪ್ಪಿಸಲು. ಉದ್ಯೋಗ ಸೇರಿದಂತೆ ಯಾವುದೋ ಕಾರಣಕ್ಕೆ ಮಧ್ಯದಲ್ಲಿ ಪದವಿ ತೊರೆದ ಅಭ್ಯರ್ಥಿ ಪುನಃ ಸೇರಲು ಅವಕಾಶವಿದೆ. ಈ ಮೊದಲು ಕಲಿತ ಕ್ರೆಡಿಟ್‌ ಹಾಗೆ ಇರಲಿದೆ. ಹೀಗಾಗಿ ಡ್ರಾಪ್‌ಔಟ್‌ ಇರುವುದಿಲ್ಲ. -ಡಾ|ಲಿಂಗರಾಜ ಗಾಂಧಿ,  ಕುಲಪತಿ, ಬೆಂಗಳೂರು ನಗರ ವಿವಿ

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.