ನೌಕಾಪಡೆಗೆ ಹೊಸ ಧ್ವಜ: ಶಿವಾಜಿ ಮಹಾರಾಜರ ಸ್ಫೂರ್ತಿಯಿಂದ ವಿನ್ಯಾಸಗೊಂಡ ನೂತನ ಲಾಂಛನ


Team Udayavani, Sep 3, 2022, 7:45 AM IST

24-indian-navy

ಕೊಚ್ಚಿಯಲ್ಲಿ ಪ್ರಧಾನಿ ಮೋದಿ ಅವರು ಶುಕ್ರವಾರ ದೇಶದ ಗೌರವವನ್ನು ಎತ್ತಿ ಹಿಡಿಯುವ ಭಾರತೀಯ ನೌಕಾ ಪಡೆಯ ನೂತನ ಧ್ವಜವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಬ್ರಿಟಿಷರು ಹಾಗೂ ಮೊಘಲರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ನೂತನ ಲಾಂಛನ ವಿನ್ಯಾಸ ಮಾಡಲಾಗಿದೆ.

ಹೇಗಿದೆ ಹೊಸ ಧ್ವಜ?

ಭಾರತೀಯ ನೌಕಾ ಪಡೆಯ ನೂತನ ಧ್ವಜದ ಎಡ ಮೇಲ್ಭಾಗದಲ್ಲಿ ಭಾರತದ ತ್ರಿವರ್ಣ ಧ್ವಜವಿದೆ. ಬಲಭಾಗದಲ್ಲಿ ಭಾರತೀಯ ರಾಷ್ಟ್ರೀಯ ಚಿಹ್ನೆಯಿದೆ. ಅದರಲ್ಲಿ ದೇವನಾಗರಿ ಲಿಪಿಯಲ್ಲಿ ರಾಷ್ಟ್ರೀಯ ಧ್ಯೇಯವಾಕ್ಯ “ಸತ್ಯ ಮೇವ ಜಯತೇ’ ಎಂದು ಬರೆಯಲಾಗಿದೆ. ಜತೆಗೆ ನೌಕಾ ಪಡೆಯ ಧ್ಯೇಯವಾಕ್ಯ “ಶಂ ನೋ ವರುಣಃ’ ಎಂದು ಬರೆಯಲಾಗಿದೆ.

ಅಷ್ಟಭುಜಾಕಾರವು ಅಷ್ಟ ದಿಕ್ಕುಗಳ ಸೂಚಕ: ಎರಡು ಚಿನ್ನದ ಬಣ್ಣದ ಬಾರ್ಡರ್‌ ಇರುವ ಅಷ್ಟಭುಜಾಕಾರವು ಛತ್ರಪತಿ ಶಿವಾಜಿ ಮಹಾರಾಜರಿಂದ ಸ್ಫೂರ್ತಿ ಪಡೆದು ವಿನ್ಯಾಸಗೊಳಿಸಲಾಗಿದೆ. ಸಮುದ್ರದ ರಕ್ಷಣೆ ಬಗ್ಗೆ ಆ ಕಾಲದಲ್ಲೇ ದೂರದೃಷ್ಟಿ ಹೊಂದಿದ್ದ ಶಿವಾಜಿ ಮಹಾರಾಜರು ಪ್ರತ್ಯೇಕ ನೌಕಾಪಡೆಯನ್ನೇ ಹೊಂದಿದ್ದರು. ಅವರ ನೌಕಾಪಡೆಯಲ್ಲಿ 60 ಯುದ್ಧ ನೌಕೆಗಳು ಮತ್ತು ಸುಮಾರು ಐದು ಸಾವಿರ ಯೋಧರು ಇದ್ದರು.

ನೌಕಾ ಪಡೆಯ ಸಾಮರ್ಥಯದ ಸಂಕೇತ: ನೀಲಿ ಬಣ್ಣದ ಅಷ್ಟಭುಜಾಕೃತಿಯು ನೌಕಾ ಪಡೆಯ ಅಷ್ಟ ದಿಕ್ಕುಗಳನ್ನು ತಲುಪುವ ಶಕ್ತಿ ಮತ್ತು ಬಹು ಆಯಾಮದ ಕಾರ್ಯಾಚರಣೆ ಸಾಮರ್ಥಯವನ್ನು ಸಂಕೇತಿಸುತ್ತದೆ.

ಹಳೆಯ ಲಾಂಛನ ಬದಲು: ನೌಕಾಪಡೆಯ ಹಳೆಯ ಲಾಂಛನವು ಸೇಂಟ್‌ ಜಾರ್ಜ್‌ ಕ್ರಾಸ್‌ ಹೊಂದಿತ್ತು. ಇದು ಭಾರತದ ವಸಾಹತುಶಾಹಿ ಆಡಳಿತದ ಸಂಕೇತವಾಗಿತ್ತು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

1-bjp

Water pollution; ಮಲಿನ ಯಮುನೆಯಲ್ಲಿ ಮಿಂದು ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ ಪ್ರತಿಭಟನೆ

1-prr

Piracy;ಕಳೆದ ವರ್ಷ 22,400 ಕೋಟಿ ರೂ. ನಷ್ಟ!

1-kashmir

Kashmir; ರಾಜ್ಯ ಸ್ಥಾನಮಾನ ವಾಪಸ್‌ ಮಾಡಿ: ಪ್ರಧಾನಿಗೆ ಒಮರ್‌ ಮನವಿ

Kaup: ಮಾರಿಯಮ್ಮ ದೇವಿಯ ಸ್ವರ್ಣ ಗದ್ದುಗೆ: ಸ್ವರ್ಣ ಸಮರ್ಪಣೆಗೆ ಅಮಿತೋತ್ಸಾಹ

Kaup: ಮಾರಿಯಮ್ಮ ದೇವಿಯ ಸ್ವರ್ಣ ಗದ್ದುಗೆ: ಸ್ವರ್ಣ ಸಮರ್ಪಣೆಗೆ ಅಮಿತೋತ್ಸಾಹ

gold

Kerala; ಆಭರಣ ಘಟಕಕ್ಕೆ ದಾಳಿ: ದಾಖಲೆ ಇಲ್ಲದ 104 ಕೆ.ಜಿ. ಚಿನ್ನ ವಶ!

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಗಪುರದ ಬಾಂಬ್‌ ಬಜಾರ್‌; ಮೂರೇ ತಿಂಗಳಲ್ಲಿ 900 ಕೋಟಿ ರೂ. ಮೌಲ್ಯದ ಸ್ಫೋಟಕ ಮಾರಾಟ

ನಾಗಪುರದ ಬಾಂಬ್‌ ಬಜಾರ್‌; ಮೂರೇ ತಿಂಗಳಲ್ಲಿ 900 ಕೋಟಿ ರೂ. ಮೌಲ್ಯದ ಸ್ಫೋಟಕ ಮಾರಾಟ

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

ಹೆಜ್ಬುಲ್ಲಾ ಮುಖ್ಯಸ್ಥ ಅಡಗಿದ್ದ ಬಂಕರ್‌ನೊಳಗೆ 500 ಮಿ. ಡಾಲರ್‌ ನಗದು, ಅಪಾರ ಚಿನ್ನ ಪತ್ತೆ! ಇಸ್ರೇಲ್

Hezbollah ಮುಖ್ಯಸ್ಥ ಅಡಗಿದ್ದ ಬಂಕರ್‌ನೊಳಗೆ 500 ಮಿ. ಡಾಲರ್‌ ನಗದು,ಚಿನ್ನ ಪತ್ತೆ! ಇಸ್ರೇಲ್

1-kittut

23 October 1824; ಕಿತ್ತೂರಿನ ಮೊದಲ ವಿಜಯೋತ್ಸವಕ್ಕೆ 200 ವರ್ಷ

Heavy Rain: ಅನ್ನದಾತರಿಗೆ ಚಿತ್ರಾ ಮಳೆ ತಂದ ಚಿಂತೆ! ಹಿಂಗಾರು ಬಿತ್ತನೆಗೂ ಅಡ್ಡಿ

Heavy Rain: ಅನ್ನದಾತರಿಗೆ ಚಿತ್ರಾ ಮಳೆ ತಂದ ಚಿಂತೆ! ಹಿಂಗಾರು ಬಿತ್ತನೆಗೂ ಅಡ್ಡಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

1-bjp

Water pollution; ಮಲಿನ ಯಮುನೆಯಲ್ಲಿ ಮಿಂದು ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ ಪ್ರತಿಭಟನೆ

death

Pimpri Chinchwad; ನೀರಿನ ಟ್ಯಾಂಕ್‌ ಕುಸಿತ: 5 ಕಾರ್ಮಿಕರು ಸಾ*ವು

Terror 2

Pakistan; ಖೈಬರ್‌ ಪ್ರಾಂತದಲ್ಲಿ 9 ಭಯೋತ್ಪಾದಕರ ಹ*ತ್ಯೆ

suicide

Ayodhya: ಹೆಚ್ಚುವರಿ ಡೀಸಿ ಅನುಮಾನಾಸ್ಪದ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.